*ಇಂದು ಮೂರ್ಖರ ದಿನಾಚರಣೆ*

*ಇಂದು ಮೂರ್ಖರ ದಿನಾಚರಣೆ*

ಏನಿದೆಯೋ ಅದನ್ನು ಬಿಟ್ಟು ಇನ್ನೇನೋ ತಿಳಿದುಕೊಳ್ಳುವದು  ಮೂರ್ಖರ ಮೊದಲ ಲಕ್ಷಣ..

ಮೂರ್ಖರು ಯಾರು... ??? 

ಯಾರಿದ್ದಾರೆಯೋ ಇಲ್ಲೋ ತಿಳಿಯದು, ನಾನಂತೂ ಮಹಾ ಮೂರ್ಖನೆ ಸರಿ.  ಇದರಲ್ಲಿ ನನಗಂತೂ ಸಂಶಯವೇ ಇಲ್ಲ.

ನಾನು ಯಾಕೆ ಮೂರ್ಖ.... ??

೧)ಮಾಡಿದ್ದು ದೇವರು. ಆದರೂ  ನಾನು ಮಾಡಿದೆ ಎಂದು ಹೆಳಿಕೊಳ್ಳುತ್ತೇನೆ.  ಹೀಗೆ ಹೇಳುವದೇ ಮೂರ್ಖರ ಎರಡನೇ ಲಕ್ಷಣ, ೨) ಏನೆಲ್ಲ ಆಗಿದೆ ಅದೆಲ್ಲವೂ ದೇವರೇ ಮಾಡಿ ಮಾಡಿಸಿದ್ದಾನೆ, ಹಾಗಿದ್ದರೂ ನಾನೇ ಮಾಡಿದ್ದೇನೆ  ಎಂದೇ ಬೊಗುಳುತ್ತೇನೆ ಆದ್ದರಿಂದಲೇ ನಾನು ಶತ ಮೂರ್ಖ. 

"ವಿವೇಕಭರಿತ  ಕಾರ್ಯಗಳನ್ನು ಬಿಟ್ಟು, ಯೋಚನಾಪೂರ್ಣ ವಿಚಾರ ಹವ್ಯಾಸಗಳನ್ನು ಜರಿದು, ಕ್ಷುಲ್ಲಕ ಕ್ಷುದ್ರ ವಿಚಾರಗಳನ್ನು ಕಾರ್ಯಗಳನ್ನು ಅಪ್ಪಿಕೊಳ್ಳುವ ನನಗೆ ಈ ಸಮಾಜ ಮೂರ್ಖ ಅನ್ನದೆ ಇನ್ನೇನು ಅನ್ನಬೇಕು....."

*ನಾನು ಮೂರ್ಖನಲ್ಲ ಎಂದೇ ಗುರುತಿಸಬೇಕಾದರೆ ಏನು ಮಾಡುವದು.... ????*

ನಾನು ಎನ್ನುವದನ್ನು ಕಳೆದುಕೊಂಡಾಗ ಅಥವಾ ಬಿಟ್ಟಾಗ ನಾನು ಬುದ್ಧಿವಂತನು ಎಂದಾಗುವೆ. ಅಂತೆಯೇ "ನಾನು ಹೋದರೆ ಹೋದೇನು" ಎಂದು ಉದ್ಗಾರ ತೆಗೆದರು ಕನಕದಾಸರು. ಯೋಚನಾಭರಿತ ಉಚ್ಚವಿಚಾರಗಳನ್ನು ಸುದೀರ್ಘಕಾಲದಲ್ಲಿಯೂ ಹಿತವೇ. ಈಗ ಕಷ್ಟ ಅನಿಸಬಹುದು ಮುಂದೆ ಒಳಿತೇ  ಆಗುವ ಕಾರ್ಯಗಳನ್ನು ಅರಿಸುವವ ಬುದ್ಧಿವಂತ. 

ನಾನು ನಾನೇ ಆಗಿದ್ದೇನೆಯೇ ಹೊರತು ನಾನು ಮತ್ತೇನೂ ಆಗಿಲ್ಲ. ಮತ್ತೇನೂ ಆಗದ ನಾನು, ಎಲ್ಲವೂ ನಾನೇ ಎಂದು ಹೇಳಿಕೊಂಡರೆ ನಾನು ಮೂರ್ಖನಾಗದೆ ಇನ್ನೇನು ಆಗಿಯೇನು.....  ನಾನು ಏನು ಮಾಡಿದ್ದೇನೆ ಎಲ್ಲವೂ ಎನ್ನಲಿ ನಿಂತ ದೇವರೇ ಮಾಡಿಸಿದ್ದಾನೆ. ಎಲ್ಲವನ್ನೂ ಮಾಡಿಸಿರುವದು ದೇವರು. ನಾನು ತಿಳಿದು ಕೊಂಡಿದ್ದು "ನಾನು ಮಾಡಿದೆ" ಎಂದು. ಇನ್ನೊಬ್ಬರು ಮಾಡಿದ್ದನ್ನು ನಾನು ಕ್ರೆಡಿಟ್ ತೆಗೆದುಕೊಳ್ಳಲು ಹೋದರೆ ಆಗ ನಾನಾಗುವದು ಮೂರ್ಖನಲ್ಲದೆ ಇನ್ನೇನು...

ನನ್ನ ಸುಖ ಎನ್ನಲ್ಲಿಯೆ ಅಡಗಿದೆ. ಎನ್ನ ಸ್ವಾಮಿ ಎಂದೂ ಬತ್ತದ  ಆನಂದದ ಸಮುದ್ರವನ್ನೇ  ಎನ್ನಲ್ಲಿ ಅಡಗಿಸಿಟ್ಟಿದ್ದಾನೆ. ಇದೆ ಶಾಸ್ತ್ರ ಬೋಧೊಸುತ್ತದೆ. ಆದರೆ..

ಆ ಸುಖವನ್ನು ಎನ್ನಲ್ಲಿ  ಹುಡುಕಿಕೊಳ್ಳದೇ, ಹೊರಗಿನ ಬೇರೆಯದೇ ಆದ  ಕ್ಷುದ್ರ ವಸ್ತುಗಳಿಂದ ಸಿಗುತ್ತದೆ ಎಂದು ಹಂಬಲಿಸುತ್ತೇನೆ, ಅವನ್ನು ಪಡೆಯುವದಕ್ಕಾಗಿ  ಪರಿಶ್ರಮಿಸುತ್ತೇನೆ, ಸಿಗದಾದಾಗ ಹತಾಶನಾಗುತ್ತೇನೆ,  ಕಳೆದುಕೊಂಡಾಗ ಕೊರಗುತ್ತೆನೆ ಎದುವೇ ತಾನೇ ಮೂರ್ಖರ ಲಕ್ಷಣ..... 

ಸುಖದ ಹಾಗೆಯೇ "ಜ್ಙಾನ, ಬಲ, ಶಕ್ತಿ, ಆರೋಗ್ಯ, ಆಯುಷ್ಯ, ಸೌಭಾಗ್ಯ, ಶಾಂತಿ, ಸಮೃದ್ಧಿ, ತೃಪ್ತಿ, ಐಶ್ವರ್ಯ ಹೀಗೆ ಪ್ರತಿಯೊಂದೂ ಎನ್ನಲ್ಕೇ ಇವೆ. ಆದರೆ ನಾ ಅಪೆಕ್ಷೆಪಡುವದು ಮಾತ್ರ ಹೊರಗಿಂದ. *ಇರುವದು ಒಳಗೆ, ಅಪೇಕ್ಷಿಸಿ ಪಡೆದದ್ದು ಹೊರಗಿನಿಂದ. ಸಿಕ್ಕೀತು ಆದರೂ ಹೇಗೆ...??* ಇದುವೇ ಅಲ್ಲವೇ ಮೂರ್ಖತನ... ಕೊಡುವವ ದೆವ, ಪಡೆಯಲು ಹಂಬಲಿಸಿದ್ದು ಬೇರೆಯವರಿಂದ. ಬೆಳಕು ಇದ್ದಲ್ಲಿ ಚಲಿಸದೆ, ಕತ್ತಲಿರುವಲ್ಲಿಗೆ ಹೋದರೆ ಮೂರ್ಖರಂತೆ ಬೀಳುವದು ನಿಶ್ಚಿತ.

ನಮ್ಮ ಮೂರ್ಖತನವನ್ನು ಹೋಗಲಾಡಿಸಲೇ " ವೇದವ್ಯಾಸದೇವರು, ಶ್ರೀಮದಾಚಾರ್ಯರು, ಟೀಕಾಕೃತ್ಪಾದರು, ರಘೂತ್ತಮರು, ರಾಯರು, ಯಾದವಾರ್ಯರು ಇಂದಿನ ಕಥಾನಾಯಕರಾದ ಶ್ರೀ ಶ್ರೀಸತ್ಯಧ್ಯಾನರು ನಮ್ಮ ಗುರುಗಳು ಇವರೇ ಮೊದಲಾದ ಜ್ಙಾನಿಗಳು ಭುವಿಗಿಳಿದು ಶಾಸ್ತ್ರರಚಿಸಿ, ಪಾಠಹೇಳಿ ತಿಳಿಸಿ ಅನುಗ್ರಹಿಸಿದ್ದಾರೆ, ಅದನ್ನು ಅನಾಯಾಸೇನೆ ತ್ಯಜಿಸಿದ ಗಾಳಿಗೆ ತೂರಿದ  ನಾನೇ ಮೂರ್ಖನಲ್ಲವೇ... 

ಎಲ್ಲ ಪಾಪ ಕಳೆಯುವ ಏಕಾದಶಿ ಉಪವಾಸ ಮಾಡುವದು ಎಂದರೆ ಕೃತಯುಗದಲ್ಲಿ ಹತ್ತು ವರ್ಷದ ಸುದೀರ್ಘ ತಪಸ್ಸಿಗೆ ಸಮ. ಅದು ಬಿಟ್ಟು ಇಂದು ವೈಭವದಿಂದ ಮೂರುಹೊತ್ತು ಏಕಾದಶಿ ದಿನ ತಿಂತೇವೆ ಎಂದರೆ ಮೂರ್ಖರನ್ನಲ್ಲದೆ ಇನ್ನೇನು ಮಾಡಿಯಾರು.. ??

ನನಗೆ ನನ್ನದೂ ಆದ ಸುಖ ಸಮೃದ್ಧಿ ವೈಭವ ಸಿಗಲು ಬೇಕು ಧರ್ಮ. ಆ ಧರ್ಮವನ್ನು *ಧರ್ಮವೆಂಬ ಒಂದು ಪದಾರ್ಥವೂ ಭುವಿಯಲ್ಲಿ ಇಲ್ಲವೇನೋ.....* ಎನ್ನುವಷ್ಟು ಕಡೆಗಾಣಿಸಿದ, ಗಾಳಿಗೆ ತೂರಿದ ನಾನೇ ಮೂರ್ಖನಲ್ಲದೇ ಮತ್ತಿನ್ನೇನು....  

ಈಗ ಒಂದು ಲೇಖನೆ ಓದಿದೆ‌ *ನಮ್ಮಲ್ಲಿ ಮೂರ್ಖರು ಯಾರಿಲ್ಲ* ಎಂದು. ಕ್ಷಣ ಖುಶಿ ಆಯ್ತು. ಆ ಸುಖ ಕ್ಷಣವೇ ಅನಿಸುತು. ಮೂರ್ಖರು  ಯಾರಿಲ್ಲದಿರಬಹುದು *ನಾನು* ಅಂತೂ ಮಹಾ ಮೂರ್ಖನೇ ಎಂದು. ಹೀಗೆ ತಿಳಿದಾಗ ಸಮಾಧಾನ ಅನಿಸಿತು......

*ಭಕ್ತರ ಸಂಗಕೊಟ್ಟು, ಸಾಧನೆ ಮಾಡಿಸಿ, ಧರ್ಮದಲ್ಲಿರಿಸಿ, ಪಾಪ ಮಾಡಿಸದೆ,...  ನಮ್ಮ ಕಾಳಜಿ ವಹಿಸುವವರ, ನಿಸ್ವಾರ್ಥಿಗಳ ಸಹವಾಸದಲ್ಲಿರಿಸಿ.....   ಧರ್ಮಾಡದ, ಜ್ಙಾನ ಬೆಳಿಸಿಕೊಳ್ಳದ, ಭಕ್ತಿ ಮಾಡದ  ಮೂರ್ಖತನದ ದುರವಸ್ಥೆಯನ್ನು  ಕಳೆದು ರಕ್ಷಿಸು ಸಂರಕ್ಷಿಸು ಎಂದು ಅನೇಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ.*

ಈ ತರಹದ ಮೂರ್ಖರ ದಿನಾಚರಣೆಯ ಶುಭ ಅವಸರದಲ್ಲಿ ನನ್ನಂತಹ ಶತಮೂರ್ಖನನ್ನು ನಿಮ್ಮಲ್ಲಿ  ಸೇರಿಸಿಕೊಳ್ಳಿ.... 

ಈ ಮೂರ್ಖರ ದಿನಾಚರಣೆಗೆ ಯಾರೆಲ್ಲ ಮೂರ್ಖರು ಬರುತ್ತೀರೋ ಬನ್ನಿ, ಮೂರ್ಖರೆಲ್ಲರೂ ಸೇರಿ ಮೂರ್ಖರದಿನಾಚರಣೆಯನ್ನು ಮಾಡೋಣ.... 😅😅😅*

*✍✍✍ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
ಎಲ್ಲರನ್ನೂ ಮೂರ್ಖರನ್ನಾಗಿ ಮಾಡಿಬಿಟ್ರೀ ನ್ಯಾಸರೆ.... 😂😂😂😂😂
Anonymous said…
Eee varshavooo yellarnnoo murkharannagisidriii....😅😍😍😍
Anonymous said…
मैनें सोचा

,

,

, कुछ कहूँ

,

,

हर रोज की तरह

,

,

,

,

,

फिर सोचा

,

,

चलो आज के लिए

,

,

,

*April Fool ही काफी है*

Ha ha ha.....

🌹🌹🌹💐💐💐💐friends. ..
Nyasa said…
Superb, 👍
Nyasa said…
Superb, 👍
NYASADAS said…
ಎಲ್ಧಲರಿಗೂ ನ್ಯವಾದಗಳು
NYASADAS said…
Nyasa ಯಾರಣ್ಣ ಇದು ????

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*