ನಿನ್ಹೊರೆತು ಪೊರವರನು ನಾನರಿಯೇ ಹರಿಯೇ......*
*ನಿನ್ಹೊರೆತು ಪೊರವರನು ನಾನರಿಯೇ ಹರಿಯೇ......*
"ನಿನ್ಹೊರೆತು ಪೊರವರನು ನಾನರಿಯೇ ಹರಿಯೇ" ಎಂದು ದಾಸರ ಪೂರ್ಣವಿಶ್ವಾಸದ ಮಾತು. ನಮಗೆ ಬಂದ ಬರುವ ಸಕಲ ಆಪತ್ತುಗಳಿಗೂ ದೇವರೇ ಬಂದು ರಕ್ಷಿಸಬೇಕು. ದೇವರಿಲ್ಲದ ಗತಿ ಮತ್ತೊಬ್ಬರಿಲ್ಲ. ಅವನೇ ಸ್ವತಂತ್ರ ಕರ್ತಾ. ಈರೀತಿಯಾಗಿ ನಂಬಿದವರೂ ನಾವೆಲ್ಲರು. ರಕ್ಷಿಸುವ ಹೊಣೆ ದೇವರಿಗೇ ಇದೆ.
*ರಕ್ಷಿಸುವ ದೇವರು ಯಾರು....???*
ಅನಂತರೂಪಿ ದೇವರು ನಿಜ. ಆದರೆ ಭೂಮಿಗೆ ಬಂದ ಆಪತ್ತುಗಳನ್ನು ಪರಿಹರಿಸಲು ನಮ್ಮನ್ನು ರಕ್ಷಿಸಲು ಎಲ್ಲ ರೂಪಗಳೂ ಬರುವದಿಲ್ಲ. ರಕ್ಷಿಸುವ ಸಾಮರ್ಥ್ಯ ಎಲ್ಲ ಭಗವದ್ರೂಪಗಳಿಗಿದ್ದರೂ ವಿಶಿಷ್ಟವಾದ ಒಂದು ರೂಪ. ಆ ರೂಪದ ಪ್ರಾರ್ಥನೆಯಿಂದ ಆ ರೂಪವೇ ಭೂಮಿಗೆ ಬಂದು ರಕ್ಷಿಸುತ್ತಾನೆ. ಆ ಭಗವದ್ರೂಪ *ಶ್ವೇತದ್ವೀಪಪತಿ ವಾಸುದೇವ ರೂಪ.*
ದೇವರು ತಾನು ವಾಸಿಸಲು ತಾನಾರಿಸಿಕೊಂಡ ಸ್ಥಾನಗಳು ವೈಕುಂಠ ಅನಂತಾಸನ ಶ್ವೇತದ್ವೀಪ ಎಂದು ಮೂರು ಸ್ಥಾನಗಳು. ಆ ಮೂರು ಸ್ಥಾನಗಳಲ್ಲಿ ಭೂಮಿಗೆ ಸಂಬಂಧ ಪಟ್ಟ ಎಲ್ಲ ದೂರು (complaint) ಗಳನ್ನು ಸಲ್ಲಿಸಲು ಇರುವ ಠಾಣೆ ಎಂದರೆ ಅದು ಕ್ಷೀರಸಾಗರದ ತಟದಲ್ಲಿ ಇರುವ *ಶ್ಚೇತದ್ವೀಪ.* ದೂರು ಅಲಿಸಿ ರಕ್ಷಿಸುವ ರೂಪ, ರಕ್ಷಿಸಲು ಧಾವಿಸಿ ಬರುವ ರೂಪ *ಶ್ವೇತದ್ವೀಪ ಪತಿ ವಾಸುದೇವ.* ಆದ್ದರಿಂದ ಶ್ವೇತದ್ವೀಪ ಪತಿ ವಾಸುದೇವನನ್ನೇ ಅನನ್ಯಗತಿಕವಾಗಿ ಪ್ರಾರ್ಥಿಸೋಣ.
*ಯಾವ ಸ್ತುತಿಯಿಂದ ಪ್ರಾರ್ಥಿಸುವದು...??*
ಹಿರಣ್ಯಕಶಿಪು, ರಾವಣ, ಬಲಿ, ಕಂಸ ಜರಾಸಂಧಾದಿ, ದೈತ್ಯರು ಭೂಮಿಗೆ ಪೀಡಿಸಲು ಆರಂಭಿಸಿದಾಗ ಅವರನ್ನು ಸೆದೆಬಡೆಯಗೋಸುಗ ದೇವತೆಗಳನ್ನು ಮೊರೆಹೋದಳು ಭೂದೇವಿ. ಭೂದೇವಿಯ ಮಾತನ್ನು ಆಲಿಸಿದ ದೇವತೆಗಳು ಬ್ರಹ್ಮದೇವರನ್ನು ಮುಂದು ಮಾಡಿ ಕ್ಷೀರಸಾಗರಕ್ಕೆ ಬಂದು *ಪುರುಷಸೂಕ್ತ* ದಿಂದ ಪ್ರಾರ್ಥಿಸುತ್ತಾರೆ. ಪ್ರಾರ್ಥನೆಗೆ ಓಗೊಟ್ಟ ದೇವ, ರಾಮ ಕೃಷ್ಣ ನರಸಿಂಹ ವಾಮನ ಮುಂತಾದ ರೂಪಗಳನ್ನು ಹೊತ್ತು ಭೂಮಿಗೆ ಬಂದು ಆಪತ್ತುಗಳನ್ನು ಪರಿಹರಿಸಿ ನಮ್ಮನ್ನು ರಕ್ಷಿಸುತ್ತಾನೆ.
*ಇಂದಿನ ನಮ್ಮ ಅತೀ ಘೋರ ಆಪತ್ತು.....*
ಬ್ರಹ್ಮಾದಿಗಳ ವರದಿಂದ ದೃಪ್ತರಾದ ಹಿರಣ್ಯಾದಿಗಳಿಂದ ಬಂದಂತಹ ಆಪತ್ತು ಇಂದು ನಮಗೆ ಬಂದಿಲ್ಲ ನಿಜ. *ಈ ಕ್ಷುದ್ರ ಕೋರೋನಾ* ಎಂಬ ಆಪತ್ತೇ ಇಂದು ಮಹಾಮಾರಿಯಾಗಿ ಇಡೀ ವಿಶ್ವವನ್ನೇ ಕಾಡುತ್ತಿದೆ. ಅದುವೂ ಅಷ್ಟೇ ನಿಜ. ಆಪತ್ತು ಪರಿಹಾರ ಮಾಡಲು ದೇವರೇ ಸಮರ್ಥ, ದೇವರೇ ಯಾವದಾದರೂ ಒಂದು ರೂಪದಿಂದ ಬರಲೇ ಬೇಕು ಅದುವೂ ಅಷ್ಟೇ ನಿಜ. ದೇವ ತಾ ಬರಲು *ನಮ್ಮ ನಿಮ್ಮೆಲ್ಲರ ಒಕ್ಕೋರಲ ಪ್ರಾರ್ಥನೆ ಅವಷ್ಯವಾಗಿ ಬೇಕು.*
*ಕೋಟಿ ಬಾರಿ "ಪುರುಷಸೂಕ್ತ" ಪಾರಾಯಣದಿಂದ ಪ್ರಾರ್ಥನೆ...*
ಜಗತ್ತಿಗೆ ಬಂದ ಅತೀ ಘೋರವಾದ *ಕೊರೋನಾ* ಎಂಬ ಆಪತ್ತಿನ ಪರಿಹಾರಕ್ಕಾಗಿ ಬ್ರಾಹ್ಮಣರಾದ, ಪುರುಸೂಕ್ತ ಕಲಿತ, ಲಕ್ಷ ಲಕ್ಷ ಪುರುಷರು ಇದ್ದೇ ಇದ್ದಾರೆ. *ಪುರುಷಸೂಕ್ತ ಬರುವ ನಾವೆಲ್ಲ ಪುರುಷರು ಸೇರಿ "ಕೋಟಿಸಲ ಪುರುಷಸೂಕ್ತ ಪಾರಾಯಣ"ವನ್ನು ಏಕೆ ಮಾಡಬಾರದು...????* ಪ್ರತಿಯೊಬ್ಬ ಪುರುಷ ದಿನಕ್ಕೆ ಹದಿನಾಲ್ಕು ಬಾರಿ ಪಾರಾಯಣ ಮಾಡಿದರೆ ಸಾಕು. ಹದಿನಾಲ್ಕು ಬಾರಿ ಪಾರಾಯಣ ಮಾಡುವ ಪುರುಷರು ಲಕ್ಷ ಜನ ತಯಾರು ಆದರೆ ಸಾಕು ದಿನಕ್ಕೆ ಹದಿನಾಲ್ಕು ಲಕ್ಷ ಸಲ ಪಾರಾಯಣ ಮಾಡಿದ ಹಾಗೆ ಆಗುತ್ತದೆ. ಎಂಟೇ ದಿನಕ್ಕೇ ಕೋಟಿ ಪುರುಷಸೂಕ್ತದ ಪಾರಾಯಣ ಪ್ರಾರ್ಥನೆಯಾದಾಗ ಶ್ವೇತದ್ವೀಪದಿಂದಲೇ ದೇವ ಯಾವುದೋ ಒಂದು ರೂಪದಿಂದ ಬಂದು ನಮ್ಮನ್ನು ರಕ್ಷಿಸಿಯೇ ತೀರುತ್ತಾನೆ. ಇದರಲ್ಲಿ ಯಾವ ಸಂಶಯ ನನಗೂ ಇಲ್ಲ. ಈ ಲೇಖನ ಓದಿದ ತಮಗೂ ಇಲ್ಲ. ಇವತ್ತಿನಿಂದಲೇ ಕಾರ್ಯಪ್ರವೃತ್ತರು ಆಗೋಣ. ಇಂತಹ ಲಕ್ಷ ಲಕ್ಷ ಆಪತ್ತುಗಳನ್ನು ಪರಿಹರಿಸುವ ದೇವರನ್ಬೇ ಒಲಿಸಿಕೊಳ್ಳೋಣ....
*ಪುರುಷ ಸೂಕ್ತ ಬಾರದ ಪುರುಷರು ಹಾಗೂ ಮಹಿಳೆಯರು ಏನನ್ನು ಮಾಡಬಹುದು..*
"ಸರ್ವಾಪತ್ಪರಿಹಾರ ನಾನು ಮಾಡುತ್ತೇನೆ, ಆದ್ದರಿಂದ ಪ್ರತೀ ಸ್ಥಾನದಲ್ಲೂ ನನ್ನನ್ನು ಸ್ಮರಿಸಿ. ನನ್ನನ್ನು ಸ್ಮರಿಸಿದ ಕ್ಷಣದಲ್ಲಿಯೇ ಸಕಲವಿಧ ಆಪತ್ತುಗಳ ಅಭಿಮಾನಿ ದೈತ್ಯರು ದಿಕ್ಕಪಾಲಾಗಿ ಓಡಿಹೋಗುತ್ತಾರೆ. ಓಡಿಹೋಗದ ದೈತ್ಯರನ್ನಿ ನಾನು ಸಂಹರಿಸುವೆ . ಎಲ್ಲ ದೇವತೆಗೆಳು ನನ್ನ ಕಾಲಿಗೆ ನಿರಂತರ ಎರುತ್ತಾರೆ ಅಂತಹ ಸರ್ವ ಸಮರ್ಥನು ನಾನು" ಎಂದು ಸ್ವಯಂ ಶ್ರೀಕೃಷ್ಣನೇ ಒಂದು ಮಾತನ್ನು ಗೀತೆಯಲ್ಲಿ ಹೇಳುತ್ತಾನೆ....
*ಸ್ಥಾನೇ ಹೃಶೀಕೇಶ ತವ ಪ್ರಕೀರ್ತ್ಯಾ
ಜಗತ್ಪ್ರಹೃಷ್ಯತ್ಯನು ರಜ್ಯತೇ ಚ |
ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ
ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ ||*
ಈ ಶ್ಲೋಕವನ್ನು ಎಷ್ಟು ಹೆಚ್ಚು ಸಾಧ್ಯವಿದೆ ಅಷ್ಟು ಸಲ ಜಪಿಸೋಣ. ಕನಿಷ್ಠ ನೂರೆಂಟು ಸಲವಾದರೂ ಜಪಿಸೋಣ. ಜಗತ್ತಿಗೇ ಬಂದ ಆಪತ್ತುಗಳಿಂದ ಗೆದ್ದು ಬರೋಣ...
*✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments
Dhanyavadagalu... :)