*ಸಹನೆ ಮತ್ತು ಸರಳತೆ*

*ಸಹನೆ ಮತ್ತು ಸರಳತೆ*

ಸಹನೆ ಸರಳತೆ ಈ ಎರಡು ಗುಣಗಳು ತುಂಬ ಮೌಲ್ಯಯುತವಾದ ಗುಣಗಳು. ಗುಣಗಳು ಎಂದಮೇಲೆ ಮೌಲ್ಯ ಭರಿತವಾದುವುಗಳೇ ಆಗಿರುತ್ತವೆ. ಆ ಗುಣಗಳಲ್ಲಿ ಇವೂ ಒಂದು. 

ಸರಳತೆ ಸ್ಥಿರವಾಗಿ ನಿಲ್ಲಿಸಿದರೆ, ಸಹನೆ ಎತ್ತರಮಟ್ಟಕ್ಕೆ ಒಯ್ಯುತ್ತದೆ. ಸಹನೆ ಸರಳತೆ ಶಕ್ತಿ ಹೀನ ಮಾನವನಲ್ಲಿ ದುರ್ಬಲನಲ್ಲಿ ಇರುತ್ತದೆ. ಕೆಲವರ ವಾದ. ಪರಿಪೂರ್ಣ ತಪ್ಪು ಎಂದಲ್ಲ. ಆದರೆ ಪರಿಸ್ಥಿತಿ ಹಾಗೆ ನಿರ್ಮಿಸಿಬಿಡುತ್ತದೆ. ಆದರೆ ಸರಳತೆಯ ಸಹನೆಯ ಪರಿಪಾಕವೇ ಬೇರೆ.... 

"ಇನ್ನೊಂದರ ಲಾಭಕ್ಕೆ ಕಾರಣವಾಗದದ್ದು ಗುಣವೆಂದಾದರೆ, ಮಹಾ ಹಾನಿಗೆ ಕಾರಣವಾದದ್ದು ದೋಷ" ಪ್ರಕೃತ ಸಹನೆ ಹಾಗೂ ಸರಳತೆ ಇವುಗಳಲ್ಲಿ "ಸರಳತೆ ವಿಯವಂತಿಕೆಯನ್ನು ತೋರಿಸಿಕೊಟ್ಟರೆ, ಸಹನೆ ಕ್ಷಮೆಯನ್ನು ಪ್ರಕಾಶಿಸುತ್ತದೆ" ಅಂತೆಯೇ ಇವೆರಡೂ ಮಹಾನ್ ಗುಣಗಳೆ... 

*ಸರಳತೆ...*

ಭಗವಂತನನ್ನು ಒಲಿಸಿಕೊಳ್ಳುವ ಹಂಬಲ ಇರುವ,  ಸಿದ್ಧಿಯನ್ನು ಪಡೆದೇ ತೀರುವ ಬಯಕೆ ಹೊತ್ತ ಒಬ್ಬ ದಾಸ. ಅವನು ಮಹಾ ಜ್ಙಾನಿ. ಧಾರ್ಮಿಕ. ಉತ್ತಮ ಕುಲಪ್ರಸೂತ. ಧನಿಕನೂ ಹೌದು. ರಾಜ ಮಾರ್ಗದಲ್ಲಿ ತೆರಳುವಾಗ ಅವನಿಗೆ ಉತ್ತಮ ಗೌರವವೂ ಒಲಿದು ಬರುತ್ತಿತ್ತು. 

ಒಂದು ದಿನ ಒಬ್ಬ‌ ಅಲೆಮಾರಿ ಸಣ್ಣ ವ್ಯಕ್ತಿ ನಮಸ್ಕರಿಸಿದ. ಈ ದಾಸನೂ ತಿರುಗಿ ನಮಸ್ಕರಿಸಿದ. ಆಗ ದಾಸನಿಗೆ ಶಿಷ್ಯರು ಕೇಳುತ್ತಾರೆ "ನೀವೇಕೆ ಪ್ರತಿ ನಮಸ್ಕಾರ ಏಕೆ ಮಾಡಿದಿರಿ... ??" ಎಂದು. 

ದಾಸರಿಂದ ಸೊಗಸಾದ ಉತ್ತರ *ಬೇರಾರೂ ನನಗಿಂತ ಹೆಚ್ಚು ವಿನಯವಂತರಾಗಿ ಇರುವದು ನನ್ನನ್ನು ಕುಗ್ಗಿಸುತ್ತದೆ, ಅದು ನನಗೆ ಒಪ್ಪಿಗೆಯೂ ಆಗುವದಿಲ್ಲ* ಎಂದು. 

ಸಣ್ಣ ಸರಳತೆ ಪ್ರತಿ "ವ್ಯಕ್ತಿಯಲ್ಲೂ ದೇವರಿರುವ" ಎಂದು ತೊರಿಸಿಕೊಡುತ್ತದೆ. ಕಂಡ ಪ್ರತಿಯೊಂದರಲ್ಲಿಯೂ ಸ್ವಾಮಿಯನ್ನು ಕಂಡವನೇ ನಿಜ ದಾಸ. ಸರಳತೆಯೇ ಗುಣಗಳ ಗಣಿಗೆ ದ್ವಾರ. ಅಂತೆಯೇ ಹಿಂದಿನ ಅನೇಕ ವೃದ್ಧರನ್ನು ಹಿರಿಯರನ್ನು ನೋಡಿದ ನೆನಪು ಇದ್ದರೆ ನೋಡೋಣ  "ಅವರುಗಳಲ್ಲಿ ಸರಳತೆಯೇ ಮುಂಬಾಗದಲ್ಲಿ ಇರುತ್ತಿತ್ತು" ನಂತರ ಬಗೆದರೆ ಬೇರೆ ಬೇರೆ ಗುಣಗಳೇ ಸಿಗುತ್ತಿದ್ದವು. ಗುಣಗಳ ಮಾರ್ಗದಲ್ಲಿ ಸ್ಥಿರತೆಯನ್ನು ಒದಗಿಸುವದು ಸರಳತೆ... 

*ಸಹನೆ..*

ದುರಾಸೆ ಅಸಹನೆ ಅಹಂಕಾರ ಮೊದಲಾದ ದುರ್ಗುಣಗಳನ್ನು ಕೊಂದು ಹಾಕುವದು ಸಹನೆ. ಜ್ಙಾನ ಧರ್ಮ ಭಕ್ತಿ ಪ್ರೀತಿ ಇವುಗಳನ್ನು ಬೆಳಿಸುವದೂ ಸಹನೆಯೇ. 

ಇದೇ ದಾಸ ತನ್ನ ಸಹನೆಯ ಪರೀಕ್ಷೆ ಮಾಡಿಕೊಳ್ಳಲು ಸಿದ್ಧನಾದ. ಶಿಷ್ಯನಿಗೆ ಕರೆದು ಹೇಳಿದ. ನಾನು ಗಂಗೆಯಲ್ಲಿ ಮಿಂದು ಬರುವೆ. ನನ್ನನ್ನು ನೀನು ಮೈಲಿಗೆ ಮಾಡು ಎಂದು. 

ಶಿಷ್ಯ ಹಾಗೆಯೇ ಮಾಡಿದ. ಮತ್ತೆ ಸ್ನಾನ ಮಾಡಿ ಬಂದರು. ಮೈಲಿಗೆ ಮಾಡಿದ, ಮತ್ತೆ ಸ್ನಾನ ಮಾಡಿ ಬಂದರು, ಪುನಃ ಮೈಲಿಗೆ. ಹೀಗೆ ನೂರೆಂಟು ಬಾರಿ ಮಾಡಿದ. ಅವರೂ ನೂರೆಂಟು ಬಾರಿ ಸ್ನಾನ ಮಾಡಿದರು. ಕೊನೆಗೆ ಕಾಲಿಗೆ ಬಿದ್ದು ಕ್ಷಮೆ ಕೇಳಿದ.... 

ಅವರು ಹೇಳಿದರು ಕ್ಷಮೆ ಕೇಳುವ ಅಗತ್ಯ ಇಲ್ಲ. ಕ್ಷಮೆ ಅಪಾರವಾಗಿ ಇರುವದಕ್ಕೆ ಸಹಿಸಿದೆ. ಜೊತೆಗೆ ಈ ಸಣ್ಣ ಸಹನೆ ನನಗೆ ಗಂಗೆಯಲಿ ನೂರೆಂಟು ಬಾರಿ ಮುಣುಗುವಂತೆ ಮಾಡಿತು. "ಎಷ್ಟು ಪಾಪ ಹೋಯಿತು, ಎಷ್ಟು ಪುಣ್ಯ ಬಂತು, ವಿಘ್ನಗಳೆಷ್ಟು ಕಳೆದವು,  ಇನ್ನುಮುಂದೆ ಎಷ್ಟು ಜ್ಙಾನ ಸಂಪಾದನೆ ಮಾಡಿಯೇನು....." ಹೀಗೆ ಉತ್ತರ ಕೊಡುತ್ತಾ ಸಾಗಿದರು...... 

ಸಹನೆ ಸರಳತೆ ಇರುವಲ್ಲಿ ಸಮೃದ್ಧಿ, ಶಾಂತಿ, ಸೌಖ್ಯ, ಧರ್ಮ, ಜ್ಙಾನ, ಭಕ್ತಿ, ಪರೋಪಕಾರ, ಮೊದಲಾದ ನೂರಾರು ಗುಣಗಳು ಒಲಿದು ಬರುತ್ತವೆ. 

ಈ ಕ್ರಮದಲ್ಲಿ ಪ್ರತಿಯೊಂದು ಗುಣವೂ ಹತ್ತಾರು ಲಾಭಗಳನ್ನು ಉಚಿತವಾಗಿ ತಂದು ಕೊಡುತ್ತವೆ. ಕೆಲ ದಿನಗಳ ತರುವಾಯ ಆ ದಾಸ ದೇವರನ್ನೇ ಒಲಿಸಿಕೊಂಡು ಬಂದವನಾಗಿದ್ದ.  ಅಂತೆಯೇ ಎಲ್ಲ ಜ್ಙಾನಿಗಳೂ ಗುಣವನ್ನು ರೂಢಿಸಿಕೊಳ್ಳಲೇ ಜೀವನ ಸವೆಸಿದರು. ಗುಣವಂತರೂ ಆದರು. ಗುಣವಂತನಾದ ದೇವರು ದೇವತೆಗಳೂ ಸಹ ಅವನ ಮನೆಯಲ್ಲಿ ಉಳಿದರು.... ಇದು ಗುಣವಂತಿಕೆಯ ಲಾಭ.

*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

basavarajmath said…
ಹೊನ್ನುಡಿಗಳು.

NYASADAS said…
ಧನ್ಯವಾದ

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*