*ಬೇಡಿಕೆ ಅವಷ್ಯವಾಗಿರಲಿ, ಸಿಗಾದಾದಾಗ ಕೊರಗು ಸರ್ವಥಾ ಬೇಡ*
*ಬೇಡಿಕೆ ಅವಷ್ಯವಾಗಿರಲಿ, ಸಿಗಾದಾದಾಗ ಕೊರಗು ಸರ್ವಥಾ ಬೇಡ*
"ಇದು ಬೇಕು" ಎಂಬ ಬೇಡಿಕೆ ಎಂದಿಗೂ ಸೂಕ್ತ, ಆದರೆ "ಇದು ಇಲ್ಲ" "ಇದು ಸಿಕ್ಕಿಲ್ಲ ಎಂಬ ಚಿಂತೆ ಕೊರಗು ಮಾತ್ರ ಸರ್ವಥಾ ಬೇಡ. ಬೇಡುವದರಲ್ಲಿ ನನ್ನ ಅಲ್ಪ, ಅತ್ಯಲ್ಪ ಮಹಾ ಪರಿಶ್ರಮಮ ಅಡಗಿದೆ, ಅಷ್ಟು ಕೆಲಸ ಮಾಡಿದ್ದೇನೆ ಹಾಗಾಗಿ ಬೇಡಲು ಹಕ್ಕು ಇದೆ, ಅಧಿಕಾರದಿಂದ ಬೇಡುತ್ತೇನೆ. ಪಡೆಯುವದಕ್ಕೇನಿದೆ ಆ ಶ್ರಮ ಆಕೆಲಸ ಆ ಸೇವೆ ಸರಿಯಾದ ತೂಕದ್ದು ಇದ್ದರೆ ಮಾತ್ರ ಸಿಗುವದು.
"ಬೇಡಿಕೆಯ ಅನುಗುಣ ಕೆಲಸ ಮಾಡಿದ್ದೀಯೇನು.. ?? ಹೀಗೆ ಪ್ರಶ್ನೆ ಕೇಳಲೇ ಬೇಡಿ. ಮಾಡಿದ್ದೆನೆಯೋ ಇಲ್ಲವೋ.. ? ಮಾಡಿದ್ದೇನೆ. ಬೇಡುತ್ತೇನೆ. ಏನುದ್ದೇಶ್ಯವಿಟ್ಟುಕೊಂಡು ಮಾಡಿದ್ದೇನೆ ಅದನು ಬೇಡುತ್ತೇನೆ. ಇದು ನನ್ನ ಮಾತು. ಈಗಿನ ಯುವ ಜನಾಂಗದ ವಾದ. ಇದು ಸೂಕ್ತವಾದದ್ದೇ....
ಕೊಡುವವನದೂ ಒಂದು ವಾದವಿದೆ.
ಬೇಡಿದ್ದು ಕೊಡುವೆ ಇದು ನಿಶ್ಚಿತ. ಬೇಡದೇ ಇರುವದನ್ನು ಕೊಡುತ್ತೇನೆ, ಕೊಡುತಾ ಇದ್ದೇನೆ, ಬೇಡದೇ ಇರುವದಕ್ಕೂ ನೂರುಪಟ್ಟು ಹೆಚ್ಚು ಕೊಟ್ಟಿದ್ದೇನೆ ಅದುವೂ ಅಷ್ಟೇ ನಿಶ್ಚಿತ. ಆದರೆ "ಬೇಡಿಕೆ ಕೆಲಸಕ್ಕೆ ಅನುಗುಣವಾಗಿದ್ದರೆ ಮಾತ್ರ ಕೊಡುವೆ" ಇಲ್ಲವೇ ಇಲ್ಲ.
" ಅಪೇಕ್ಷಿತ ಪದಾರ್ಥಕ್ಕೆ ತಕ್ಕುದಾದ ಕರ್ಮವನ್ನು ಸೇವೆಯನ್ನು ಅನುಗುಣವಾಗಿ ಎಂದು ಮಾಡುವೆಯೋ ಅಂದೆ ಸುರಿಯುವೆ ಕೊಡುವೆ" ಇದು ಭಗವಂತನ ವಾದ.
ಬೇಡಿಕೆ- ಕೊಡುವಿಕೆಯ ಮಧ್ಯದಿಲ್ಲಿ "ಇಲ್ಲ" "ಕೊಟ್ಟಿಲ್ಲ" "ಪಡೆದಿಲ್ಲ" ಎಂಬ ಕೊರಗು ಮಾತ್ರ ಬೇಡ. ಚಿಂತೆ ಕೊರಗು ಇದು ಕಟ್ಟಿಗೆಯ ಹುಳು ಇದ್ದ ಹಾಗೆ. ಕಟ್ಟಿಗೆ ಇದ್ದ ಹಾಗೆ ಇರುತ್ತದೆ. ದೃಢವಾದ ಶಕ್ತಿಯುತವಾದ ಕಟ್ಟಿಗೆಯ ಮಹಾ ಸಾಮರ್ಥ್ಯವನ್ಬೆಲ್ಲ ಹಾಳು ಮಾಡಿಬಿಟ್ಟಿರುತ್ತದೆ ಹುಳ. ಯಾವ ಕೆಲಸಕ್ಕೂ ಬಾರದ ಹಾಗೆ ಒಳಗೆ ಟೊಳ್ಳು ಆಗಿ ಹೋಗಿರುತ್ತದೆ. "ಚಿತಾ ನಿರ್ಜೀವ ಹೆಣವನ್ನು ಸುಟ್ಟರೆ, ಚಿಂತಾ ದೇಹವನ್ನು ಸುಡದೇ ನಿರ್ಜೀವ ಜೀವಚ್ಛವದಂತೆ ಮಾಡುತ್ತದೆ"
ಬೇಡುವ ಹಕ್ಕು ಇದೆ ಬೇಡೋಣ. ಕೊಡುವದಕ್ಕೆ ಸಮರ್ಥ ಕೊಟ್ಟೇ ಕೊಡುತ್ತಾನೆ. ಕೊಡುವದು ಅವನ ಕರ್ತವ್ಯವೂ ಆಗಿದೆ. ಆದರೆ ಕೆಲ ತನ್ನದೇ ನಿಯಮ ಇಟ್ಟುಕೊಂಡಿದ್ದಾನೆ ಅದರ ಪಾಲನೆ ಅವನಿಗೂ ಅನಿವಾರ್ಯ. ಪಾಲಿಸುವದು ನಮ್ಮ ಕರ್ತವ್ಯವೂ ಸಹ.
ಬೇಡಿದ ಬೇಡಿಕೆಗೆ ಅನುಗುಣವಾಗಿ ಮಾಡುಲು ನಾವೂ ಅಸಮರ್ಥರು. ಯಾಕೇಂದರೆ ನಮ್ಮ ಸಾಮರ್ಥ್ಯ ಯೋಗ್ಯತೆ ಮೀರಿದ ಬೇಡಿಕೆ ನಮ್ಮದು ಆಗಿರುತ್ತದೆ. "ಮಾಡ್ತಾ ಇರೋಣ, ಬೇಡುತ್ತಾ ಇರೋಣ" ಪೂರ್ಣವಾದ ದಿನದಂದು ಕೊಟ್ಟೇ ಕೊಡುತ್ತಾನೆ ಎಂಬ ಭರವಸೆಯಲ್ಲಿ ಇರೋಣ.
ಅಂತೆಯೇ ಜ್ಙಾನಿ ಶ್ರೇಷ್ಠರಾದ ವಿಜಯದಾಸರ ಸುಂದರ ಬುದ್ಧಿ ಮಾತು *....ಚಿಂತೆ ಇತರ ಬಿಡಲಿ, ಅಂತರಂಗದಲ್ಲಿ ಆನಂದಿರಲಿ ....* ಚಿಂತೆ ಒಳ ಸೆರಿದಾಗ ಅಂತರಂಗದಲ್ಲಿ ಆನಂದ ಸರ್ವಥಾ ಇರುವದಿಲ್ಲ.
ಅಂತರಂಗದಲ್ಲಿ ಅನಂದದಿಂದ ಇರುವ *ಸಂತತ ನಿನ್ನಪದ ಪಂಕಜಭಕ್ತರ ಪಂಥವನ್ನು ಪಾಲಿಸೊ ಪರಮಪುರುಷ ಹರೇ* ನಿನ್ನ ಭಕ್ತರಾದ ವಾಯುದೇವರ ಭಕ್ತರಾದ ಟೀಕಾರಾಯರ ಭಕ್ತರಾದ ನಮ್ಮ ನಮ್ಮ ಗುರುಗಳು ಸಿಕ್ಕಿದಾರೆ. ಅವರಿಂದ ನಿರಂತರ ಜ್ಙಾನ ಪಡೆಯೋಣ.
ಗಾಯತ್ರೀ ಮೊದಲಾದ ಜಪವನ್ನು ಪುರುಣರು, ನರಸಿಂಹ ಮೊದಲಾದ ಸುಳಾದಿಗಳನ್ನು ಸ್ತ್ರೀಯರು ಒಂದೂ ದಿನವೂ ಬಿಟ್ಟೂಬಿಡದೆ ಅನೇಕ ವರ್ಷಗಳವರೆಗೆ ಮಾಡೋಣ. ಕೊರಗುವದು ಬೇಡ. ಕೊಟ್ಟಿದ್ದರಲ್ಲಿ ಆನಂದದಿಂದ ಇರೋಣ.
*✍🏽✍🏽ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments