*ಸ್ವಾತಂತ್ರ್ಯ ಪಡೆಯುವ ಭರದಲ್ಲಿ ಕಳೆದುಕೊಂಡದ್ದು ಎಷ್ಟು......*
*ಸ್ವಾತಂತ್ರ್ಯ ಪಡೆಯುವ ಭರದಲ್ಲಿ ಕಳೆದುಕೊಂಡದ್ದು ಎಷ್ಟು......*
ಸ್ವತಂತ್ರ ಭಾರತದಲ್ಲಿ ಸ್ವತಂತ್ರವಾಗಿ ಯಾವ ಕಟ್ಟುಪಾಡುಗಳೂ ಇಲ್ಲದ ಬದುಕಿನ ಗೀಳು ಇಂದು ಸಾಮಾನ್ಯ ಹಾಗೂ ಜನಜನಿತ. ಯಾವ ದರ್ಮದ ಕಟ್ಟುಪಾಡುಗಳೂ ಯಾರಿಗೂ ಬೇಡವಾಗಿದೆ. ನಾನು ನನ್ನ ಮನಸ್ಸಿಗೆ ಬಂದ ಹಾಗೆ ಇರುವೆ ಎಂಬ ಧೋರಣೆ ಇಂದಿನ ಯುವಕರಲ್ಲಿ ತುಂಬ ಕಾಣುತ್ತದೆ. "ತಂದೆ ತಾಯಿ - ಗುರು ಹಿರಿಯ - ಧರ್ಮ ಶಾಸ್ತ್ರ - ದೇವರು ದೇವತೆ ಇವುಗಳನ್ನು ವಟ್ಟಾರೆಯಾಗಿ ಬಿಟ್ಟು ಇರುವದೇ ಸ್ವತಂತ್ರವಾಗಿ ಇರುವದು" ಎಂದು ಆಗಿದೆ. ಇದೊಂದು ಇಂದಿನ passion.
*ಧರ್ಮದ ಕಟ್ಟಳೆಗಳಿಂದ ಆಗುವ ಲಾಭ....*
ಸಂಧ್ಯಾವಂದನೆ ಮಾಡು, ಜಪ ಮಾಡು, ಪೂಜೆ ಮಾಡು, ಹೊರಗೆ ತಿನ್ನಬೇಡ, ಊಟಕ್ಕೆ ಕುಳಿತಾಗ ಯಜ್ಙ ಎಂದು ಭಾವಿಸು. ಪರಿಶೇಚನ ಆಪೋಶನಗಳನ್ನು ಒಳಗೊಂಡೇ ಊಟಮಾಡು, ವಿಹಿತ ಬಟ್ಟೆಗಳನ್ನೇ ತೊಡು, ಕಂಡ ಹಾಗೆ ಇರಬೇಡ, ನಿಷಿಧ್ಧ ಬೇಡವೇಬೇಡ. ನಿತ್ಯವೂ ಸ್ವಲ್ಪವಾದರೂ ಪಾಠ ಪ್ರವಚನಗಳಲ್ಲಿ ತೊಡಗು, ಇವುಗಳಿಂದ ಆಗುವ ಲಾಭಗಳು ತುಂಬ ಇವೆ.
ಮೊಟ್ಟಮೊದಲು ದೇವರು ಇರುತ್ತಾನೆ. ಧರ್ಮಿರುತ್ತದೆ. ಪುಣ್ಯದರಾಶಿ ಇರುತ್ತದೆ. ಅಧರ್ಮದ ಮಾರ್ಗ ದೂರಾಗುತ್ತದೆ. ಮನೋ ನೆಮ್ಮದಿ ಬಹಳವಾಗಿ ಇರುತ್ತದೆ. ಮುಖ್ಯವಾಗಿ ಪಾಪಮಾಡಲು ಸಮಯ ಕಡಿಮೆ ಸಿಗುತ್ತದೆ. ಹೀಗೆ ನೂರಾರು ಲಾಭಗಳು.
*ಕಟ್ಟು ಪಾಡುಗಳಿಂದ ಹೊರ ಬಂದು ಸ್ವತಂತ್ರವಾಗಿದ್ದರೆ ನಷ್ಟವೇನು...??*
ನಿಷಿದ್ಧವಾದದ್ದರಲ್ಲೇ ಅಭಿರುಚಿ ಹೆಚ್ಚಾಗಿ ಹೊಂದಿರುವ ಈಗಿನ ಜೀವನದಲ್ಲಿ ತಾತ್ಕಾಲಿಕವಾಗಿ ಸಂತೊಷವೆ. ಅದರಲ್ಲಿ ಸಂದೇಹವಿಲ್ಲ. ಆದರೆ ಶಾಶ್ವತದಲ್ಲಿ ಯೋಚಿಸಿದಾಗ ಕಳೆದುಕೊಳ್ಳುವದೇ ಹೆಚ್ಚು....
ಒಂದು ಸಣ್ಣ ಕಥೆ...
ಒಂದು ಆಮೆ ಇತ್ತು. ಒಂದು ಬಾರಿ ಆಮೆ ವಿಚಾರ ಮಾಡಿತು. ನನ್ನ ಮೇಲಿರುವ ಈ ಪೊರಟೆಯಲ್ಲಿ ನಾನು ಸಿಕ್ಕು ಬಿದ್ದದ್ದರಿಂದಲೇ ನನಗೆ ಇಷ್ಟು ತೊಂದರೆಗಳು ಆಗುತ್ತಿವೆ. ಸಾವಕಾಶ ನಡೀಬೇಕು. ಯಥೇಚ್ಛ ಓಡಾಡಲು ಕಷ್ಟ ಹಾಗೆ ಹೀಗೆ ಯೋಚಿಸಿ, ನನ್ನನ್ನು ಕಟ್ಟಿ ಹಾಕಿದೆ ಪೊರಟೆಯಿಂದ ಹೊರಗೆ ಬಂದು ಸ್ವತಂತ್ರವಾಗಿ ಇದ್ದರಾಯಿತು ಎಂದು ಯೋಚಿಸಿತು. *ತನ್ನನ್ನು ಎಲ್ಲ ತರಹದಿಂದ ಕಟ್ಟಿ ಹಾಕಿದ ಪೊರಟೆಯಿಂದ ಹೊರಬಂದು ಸ್ವತಂತ್ರವಾಯಿತು...* ಆದರೆ...
ಸ್ವತಂತ್ರವಾದ, ಪೊರಟೆ ಇಲ್ಲದ ಆಮೆಗೆ ಆಪತ್ತುಗಳು ಎಷ್ಟು ಬಂದವು... ಹಾನಿ ಎಷ್ಟಾಯಿತು... ಲಾಭವೇನಾಯ್ತು... ಕಳೆದುಕೊಂಡದ್ದು ಎಷ್ಟು... ???
ಸ್ವೆಚ್ಛವಾಗಿ ತಿರುಗುವ ಒಂದು ತಾತ್ಕಾಲಿಕ ಲಾಭ ಬಿಟ್ಟರೆ ಎಲ್ಲವೂ ನಷ್ಟವೇ ತಾನೆ.. ಕಳೆದುಕೊಂಡದ್ದೇ ಹೆಚ್ಚು ತಾನೆ. ತಾನು ತನ್ನತನವನ್ನೇ ಕಳೆದುಕೊಂಡಿತು.
ಆನೆ ತುಳಿದರೂ ಏನೂ ಸೇಫ್ ಆಗಿರುವ ಆಮೆಗೆ ಇರುವಿಗಳೂ ಕಚ್ಚಿಕಚ್ಚಿ ಕೊಲ್ಲಲು ಆರಂಭಿಸಿದವು. ಸಾವಿರ ಸಾವಿರ ವರ್ಷ ಬದುಕುವ ಆಮೆಗೆ, ಪೊರಟೆಯಿಂದ ಸ್ವತಂತ್ರವಾದ ಕ್ಷಣದಿಂದ ತನ್ನ ಕೊನೆಯುಸಿರಿನ ಕ್ಷಣಗಣನೆ ಆರಂಭಿಸಿತು. ಹಾಗೆಯೇ....
ಸ್ವತಂತ್ರ ಸ್ವೇಚ್ಛೆಯಾಗಿ ತಿರುಗುವ ವ್ಯಕ್ತಿಗೆ *ಧರ್ಮಬಿಟ್ಟೀವಿ* ಎಂಬ ಖುಶಿ ಮಾತ್ರ. ವೈಭವ, ಯಾಜಮಾನಿಕೆ, ಪುಣ್ಯ, ಜ್ಙಾನ, ವಿಷ್ಣುಭಕ್ತಿ, ಸಂತಸ, ನೆಮ್ಮದಿ, ಸಮೃದ್ಧಿ, ಆಯುಷ್ಯ, ಆರೋಗ್ಯ, ಎಲ್ಲವನ್ನೂ ಕಳೆದುಕೊಂಡದ್ದೇ ಆಗುತ್ತದೆ. ಕೊನೆಗೆ ದೇವರೂ ಇಲ್ಲವಾಗುತ್ತಾನೆ. "ನಮ್ಮನ್ನು ಕಟ್ಟಿಹಾಕಿದ ಧರ್ಮದಿಂದ ನಾವು ಹೊರಬಂದರೆ, ಜಗತ್ತಿನ ಎಲ್ಲ ಪಾಪಗಳೂ ನಮ್ಮಲ್ಲಿ ಆಕ್ರಮಿಸುತ್ತವೆ.
ಅನಾದಿಯಿಂದ ಇರುವ ಧರ್ಮದ ಶಾಸ್ತ್ರದ ದೇವರ ಚೌಕಟ್ಟಿನಲ್ಲಿ ಇರುವದು ಅತ್ಯಂತ ಸೂಕ್ತ. ಎಂದು ಮೇಲಿನ ಫೋಟೋ ನೋಡಿದಾಗ ಅನಿಸಿತು. ಲೇಖ ಬರೆಯುವ ಪ್ರಯತ್ನ ಮಾಡಿದೆ ಅಷ್ಟೆ.....
*✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments