*ನಿನ್ನೆಯ ನೆನಪುಗಳು.....*

*ನಿನ್ನೆಯ ನೆನಪುಗಳು.....*

ನೆನಪುಗಳು ಇರುವದೇ ನಿನ್ನೆಯವು. ನಾಳೆಯ ನೆನಪುಗಳು ಇರುವದಿಲ್ಲ. ನಾಳೆಯ ಕನುಸುಗಳೇ ಇರುವವು. ನಿನ್ನೆಯ ದಿನದ ಅಂದರೆ ಕಳೆದ ದಿನಗಳಲ್ಲಿ ಅನುಭವಿಸಿದ  ನೆನಪು ಕೆಲವೊಂದು ಸಲ ತುಂಬಾ ಕಾಡುತ್ತವೆ. ಅದು ಒಳ್ಳೆಯದೋ ಕೆಟ್ಟದ್ದೋ ಉದಾಸೀನವೋ ಅಥವಾ ಇನ್ಯಾವುದೋ ಇರಬಹುದು. ಕೆಲ ನೆನಪುಗಳು ಇಟ್ಟುಕೊಳ್ಳುವದು ಉತ್ತಮ. ಮತ್ತೆ ಹಲವು ನೆನಪುಗಳನ್ನು  ಮರೆತುಬಿಡುವದೂ  ಅಷ್ಟೇ ಉತ್ತಮ. "ಕಳೆದ ದಿನಗಳ ನೆನಪು ಆದಾಗ ತುಟಿಯಂಚಿನಲ್ಲಿ ನಗು ಬಂದು ಕ್ಷಣದಲ್ಲಿ ಮಾಯವಾಗುತ್ತದೆ ಅಲಾ ಅದೊಂದು ಸುಂದರ ಅನುಭವ" ಆ ಅನುಭವಕ್ಕಾಗಿ ನಿನ್ನಯ ನೆನಪು ಬೇಕು.

*ನಿನ್ನೆಯ (ಕಳೆದ) ದಿನಗಳ ನೆನಪು ಯಾಕೆ...??*

೧) ನಿನ್ನೆಯ ದಿನದಂದು ಆದ ತಪ್ಪುಗಳು ಇಂದು ಪುನಃ ಆಗಬಾರದು.  ೨) ನಿನ್ನೆಯ ದಿನದ ಒಳಿತು,  ಇಂದೂ ಆಗಬೇಕು. ೩) ನಿನ್ನೆಯ ದಿನ, ಇಂದು ನನಗೆ ಪಾಠ ವಾಗಬೇಕು. ೪) ನಿನ್ನೆಯ ಸ್ಫೂರ್ತಿ ಇಂದು ಉಜ್ವಲಿಸಬೇಕು. ೫ ) ನಿನ್ನೆ ನಾ ಒಳ್ಳೆಯ ಮಾರ್ಗದಲ್ಲಿ ಎಲ್ಲಿಗೆ ಇದ್ದೆ,  ಅಲ್ಲಿಂದ ಒಂದು ಹೆಜ್ಜೆಯಾದರೂ ಮುಂದೆ ಹೋಗಿರಬೇಕು. ೬) ನಿನ್ನೆ ನಾ ಯಾವ ಕೆಟ್ಟ ಮಾರ್ಗದಲ್ಲಿ ಇದ್ದೇ ಅಲ್ಲಿಂದ ಒಂದು ಹೆಜ್ಜೆಯಾದರೂ ಹಿಂದೆ ಸರಿದಿರಬೇಕು. ೭) ನಿನ್ನೆ ಮಾಡದ ಸಾಧನೆ ಒಂದಾದರೂ  ಇಂದಾಗಬೇಕು. ನಿನ್ನೆ ಮಾಡಿದ ಸಾಧನೆ ಹೆಚ್ಚಾಗಬೇಕು. ೮) ನಿನ್ನೆ ಘಳಿಸಿದ ಪ್ರೀತಿ ವಿಶ್ವಾಸ ಆನಂದ ಅಂತಃಕರಣ ಭರವಸೆ ನೆಮ್ಮದಿ ಎಲ್ಲವೂ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಹೀಗೆ ನಾನಾ ಕಾರಣಗಳಿಂದ ನಿನ್ನೆಯಿಂದ ಮುಂದೆ ಬರಬಹುದಾಗಿದೆ. ಆದ್ದರಿಂದ ನಿನ್ನೆಯ ನೆನಪು ಆಗಾಗ ಆಗ್ತಾನೇ ಇರಬೇಕು.

*ನಿನ್ನೆಯ ಸಫಲತೆಯ ಸ್ಫೂರ್ತಿ , ಮುಂಬರುವ ಅಸಫಲತೆಗಳನ್ನು ಮೆಟ್ಟಿ ನಿಲ್ಲುವ ಛಲ ಬರುವದು ನಿನ್ನೆಯ ನೆನಪು ಇದ್ದರೆ ಮಾತ್ರ.*

ಭೋಜನ, ಕೆಲಸ, ಪೂಜೆ, ಯಾಗ, ಸ್ನೇಹಿತರೊಟ್ಟಿಗೆ "ಸ್ನೇಹ" ಸಂಭಾಷಣೆ, ಪ್ರಾರ್ಥನೆ, ಜ್ಙಾನಾರ್ಜನೆ, ಹಣ ಸಂಪಾದನೆ ಇತ್ಯಾದಿಗಳನ್ನು ಮಾಡುವಾಗ ಮಾಡಿಬಿಡುತ್ತಾನೆ. ಆನಂದ ಅನುಭವಿಸಲು ಆಗುವದಿಲ್ಲ. ಅವುಗಳನ್ನು ಮೆಲಕು ಹಾಕಿದಾಗ ಒಂದಾಗುವ ಆನಂದ ಅದ್ಭುತವಾದ ಆನಂದ. ಆ ಕಾರಣದಿಂದಲೂ ನಿನ್ನೆಯ ದಿನದ ನೆನಪು ಅನಿವಾರ್ಯ.

*ನಿನ್ನೆಯದನ್ನು (ಕಳೆದದಿನಗಳನ್ನು) ಮರಿಯುವದೂ ಅನಿವಾರ್ಯ*

"ಘಟಿಸಿ ಹೋದ ಕಹಿ ನೆನಪುಗಳು, ಎಂದಿಗೂ ಸಿಹಿ ದಿನವನ್ನು ತಂದು ಕೊಡುವದಿಲ್ಲ" ಹಾಗಾಗಿ ದುಃಖ ದುಮ್ಮಾನ ಕಷ್ಟ ಅವಮಾನ ಹಗೆ ದ್ವೇಶ ಮೋಸ  ಇತ್ಯಾದಿಗಳನ್ನು ಮರೆಯುವದೂ ಅನಿವಾರ್ಯ. ಕಹಿ ಘಟನೆ ಘಟಿಸಿ ನೂರು ವರ್ಷ ಕಳೆದಿರಲಿ, ಇಂದು ನೆನಪಿಸಿಕೊಂಡರೂ ಆ ಕ್ಷಣಕ್ಜೆ ದುಃಖ ಆಕ್ರಮಿಸಿಬಿಡುತ್ತದೆ.  ಹಾಗಾಗಿ ನಿನ್ನೆಯ (ಕಳೆದ ದಿನಗಳ) ಕಹಿಯನ್ನು ಮರೆಯುವದೂ ಅನಿವಾರ್ಯ.

*ನಿನ್ನೆಯ ದಿನ ಬಲಿಷ್ಠನನ್ನಾಗಿಸುತ್ತದೆ..*

ಕೆಲವೊಂದು ಸಮಯ ವಿಚಿತ್ರವಾಗಿ ಬರುತ್ತವೆ. ಕ್ಷ್ಷಣವೂ ಬಿಟ್ಟಿರಲಾಗದ ಅವಸ್ಥೆಯಲ್ಲಿ ಬಂಧಿತ ನಾಗಿರುತ್ತಾನೆ. ಆ ಮಟ್ಟದಲ್ಲಿ ದುರ್ಬಲನಾಗಿರುತ್ತಾನೆ. ಅತೀ ಸಣ್ಣ ಘಟನೆಯ ಪ್ರಭಾವದಿಂದ ಆ ಪಾಶದಿಂಸ ಹೊರಬಂದು ಇನ್ನೊಮ್ನೆ ಆ ತರಹದ ಬಂಧನದಲ್ಲಿ ಸಿಲುಕದಷ್ಟು ಘಟ್ಟಿಗನನ್ನಾಗಿ ಮಾಡಿಸಿ ಬಿಡುತ್ತದೆ ನಿನ್ನೆಯ ದಿನ. ಅಂತೆಯೇ ಕವಿ *ನಿನ್ನೆಯ ನಿನ್ನ ಮಹಿಮೆ ಏನೆಂತು ಬಣ್ಣಿಸಲಿ* ಎಂದು ಉಸರಿಸುತ್ತಾನೆ..... ಹೀಗೆ *ನಿನ್ನೆಯ ನೆನಪುಗಳು...* ಇದೊಂದು‌ ಜೀವನದ ದೊಡ್ಡ ಪಾಠಶಾಲೆ. ಇಲ್ಲಿ‌ ಕಲೆತು ವಿದ್ವಾಂಸನಾದವನಿಗೆ ಬಂದ ಪಕ್ವತೆ, ಮತ್ತೆಲ್ಲಿಯೂ ಸಿಗದು. ಒಂದರ್ಥದಲ್ಲಿ ಪರಿಪೂರ್ಣ ಪಕ್ವನೇ... ....


*✍🏼✍🏼 ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

NYASADAS said…
ಧನ್ಯವಾದ

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*