ಧರ್ಮವನ್ನು ನಂಬುತ್ತೇವೆ, ಧರ್ಮಗಳನ್ನು ಘಾಳಿಗೆ ತೂರುತ್ತೇವೆ*
*ಧರ್ಮವನ್ನು ನಂಬುತ್ತೇವೆ, ಧರ್ಮಗಳನ್ನು ಘಾಳಿಗೆ ತೂರುತ್ತೇವೆ*
ಧರ್ಮಶಾಸ್ತ್ರಗಳಿಗಿಂತಲೂ ಹೆಚ್ಚಿನ ಧರ್ಮಗಳು ಇಂದಿನ ಜನರಿಗೆ ಗೊತ್ತಿರುವಂತೆ ನೋಡಿಕೊಳ್ಳುತ್ತಾರೆ. ಆದರೆ "ಧರ್ಮವನ್ನು ಮಾಡು" ಎಂದರೆ ಕುತ್ತಿಗೆಗೆ ಬರುತ್ತದೆ.
ಧರ್ಮವನ್ನು ತುಂಬ ನಂಬುತ್ತೆವೆ. ಏನಿದೆ ಏನಾಗುವದಿದೆ ಎಲ್ಲವೂ ಧರ್ಮದಿಂದಲೇ ಎಂಬುವದು ಚೆನ್ನಾಗಿ ಗೊತ್ತು. ಇಂದು ಅನುಭವಿಸುವ ನೂರಾರುತರಹದ ಕಷ್ಟಗಳು ಧರ್ಮ ಮಾಡದಿರುವದಕ್ಕೇ ಎಂಬ ನಂಬಿಕೆಯೂ ದೃಢವಾಗಿದೆ. ಇಂದಿನ ಎಲ್ಲ ಕಷ್ಟಗಳು ಪರಿಹಾರವಾಗುವದೂ ಧರ್ಮದಿಂದಲೇ ಎಂಬುವದೂ ಗೊತ್ತು. ಆದರೆ "ಧರ್ಮ ಮಾಡು" ಎಂದರೆ ಸಮಯವೇ ಇಲ್ಲ.
*ಇಂದಿನ ದಿನವೇ ಇಂದು ನಿದರ್ಶನ*
ಕಳೆದ ವಾರದಿಂದ "ನಮ್ಮ ಹೊಸ ವರ್ಷ ಯುಗಾದಿ, ಇಂದು ಅಲ್ಲ" ಎಂಬ ಒಂದು ಮೆಸೆಜ್ ನೋಡ್ತಾ ಇದ್ದೇವೆ. ತುಂಬ ಖುಶಿ ಆಗುವ ಮಾತೇ. ಆದರೆ ಆಚರಣೆಯಲ್ಲಿ ಇರುವ ಪ್ರತೀ ಹವ್ಯಾಸವೂ ಪಾಶ್ಚಾತ್ಯರದ್ದೇ. ಇದು ತುಂಬ ದುಃಖದ ಮಾತು.
"ಧರ್ಮ ಜ್ಙಾನ ಸುಲಭ, ಧರ್ಮಾಚರಣೆ ತುಂಬ ಕಷ್ಟ" ಎಂದು ಭೀಷ್ಮಾಚಾರ್ಯರು ಕಾಲಕಾಲಕ್ಕೆ ಪ್ರಸಂಗಬಂದಾಗಲೆಲ್ಲ ನೂರಾರು ಬಾರಿ ಹೇಳಿದ ಮಾತು.
*ಇದ್ದಾಗ ಇರುವದಿಲ್ಲ, ಇಲ್ಲದಿದ್ದಾಗ ಇರುತ್ತದೆ*
ಇದ್ದಾಗ ಇರದ, ಇಲ್ಲದಿದ್ದಾಗ ಇರುವ ವಸ್ತು ಎಂದರೆ ಅದು ಧರ್ಮವೇ. ಧರ್ಮದ ಜ್ಙಾನ ಇದ್ದಾಗ ಧರ್ಮ ಮಾಡಲು ಆಗುವದಿಲ್ಲ. ಧರ್ಮ ಮಾಡಲು ದೃಢ ಮನಸ್ಸು ಮಾಡಿದಾಗ ಧರ್ಮ ಮಾಡುವ ಶಕ್ತಿ ಇರುವದಿಲ್ಲ. ಎರಡೂ ಇದ್ದಾಗ ಸರಿಯಾದ ಧರ್ಮಜ್ಙಾನ ಇರುವದಿಲ್ಲ.
*ಧರ್ಮ ಕರ್ತವ್ಯವೇ ಹೊರತು, ವೇದಿಕೆ ಅಲ್ಲ*
ನನ್ನ ಪ್ರಸಿದ್ಧಿಗೋಸ್ಕರ ಬಳಿಸಿಕೊಳ್ಳುವ ಒಂದು ಅದ್ಭುತ ವೇದಿಕೆ ಎಂದರೆ ಅದು ಧರ್ಮವೇ ಸುಲಭ ವೇದಿಕೆ ಎಂದಾಗಿದೆ. ಧರ್ಮಾಚರಣೆಯೇ ನನ್ನ ಅಡ್ವರ್ಟೈಸ್ ಎಂಬ ಭಾವ ದೃಢವಾಗಿದೆ. ಅದಾಗದೆ, ಧರ್ಮ ಇದು ನನ್ನ ಕರ್ತವ್ಯ. ನಾನು ಮಾಡಲೇಬೇಕು ಎಂಬ ದೃಢವಾದ ಮನವರಿಕೆ ಇಂದಿನ ಯುವಕರಿಗೆ ಮಾಡುವ ಅಗತ್ಯತೆ ಇಂದಿನ ಹಿರಿಯ ಸಮಾಜಕ್ಕೆ ಇದೆ.
*Update ಆಗಲೇಬೇಕು*
Update ಆಗದ ಮೋಬೈಲ್ ನಾವು ಬಳಿಸುವದಿಲ್ಲ. ಎಲ್ಲ app ಗಳೂ ತಿಂಗಳೂ update ಆಗುತ್ತಿರಲೇಬೇಕು. ಹೀಗಿರುವಾಗ mobile ಬಳಿಸುವ ನಾವು ಯಾಕೆ ಧಾರ್ಮಿಕತೆಯ ವಿಷಯದಲ್ಲಿ update ಆಗಬಾರದು...?? ಪ್ರತಿ ತಿಂಗಳು update ಆಗದಿದ್ದರೂ ವರ್ಷಕ್ಕೊಮ್ಮೆ update ಆಗುವದು ಅತ್ಯಂತ ಅನಿವಾರ್ಯ. ಎಂಬ ಮನವರಿಕೆ, ನಾವು update ಆಗಿ ಇಂದಿನ ಯುವಕರಿಗೆ ಮಾಡಲೇಬೇಕು.
*ಪಾಶ್ಚಾತ್ಯರ ದಾಳಿಗೆ ತತ್ತರಿಸಿ ಆಗಿದೆ*
ಜಿಹಾದಿಗಳು ಮಾಡುವ ಬಾಂಬ್ ದಾಳಿ ಯೋಗ್ಯ. ಅಧರ್ಮ ಮಾಡಲು ಆಸ್ಪದವಿಲ್ಲದೇ ಸತ್ತೇ ಹೋಗಿಬಿಡುತ್ತೇವೆ. ಆದರೆ ಈ ಪಾಶ್ಚಾತ್ಯದ ದಾಳಿ ನಮ್ಮ ನಾಡಿ ನರಗಳಲ್ಲಿ ವ್ಯಾಪಿಸಿ ಆಗಿದೆ. ಮೀರಿ ಜೀವಿಸಲು ಸಾಧ್ಯವಿಲ್ಲ. ನಮ್ಮ ಸಂಸ್ಕೃತಿ ಬೆಳಿಸಿಕೊಳ್ಳುವದು ಸಾಧ್ಯವಿದೆ.
ಎದ್ದ ಕ್ಷಣದಿಂದ ಮಲಗುವ ಕ್ಷಣದ ವರೆಗೆ ಎಲ್ಲವೂ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ. ನಮ್ಮ ಸಂಸ್ಕೃತಿಯ ಮೇಲೆ ಹೇಸಿಗೆ ತರಿಸುವ ಕೆಲಸ ಮಾಡಿ ತಮ್ಮ ಸಂಸ್ಕೃತಿಯ ರುಚಿ ಹಚ್ಚಿದ್ದಾರೆ. ಉಡಿಗೆ , ತೊಡುಗೆ, ತಿನಿಸು - ತಿನ್ನುವ ಕ್ರಮ, ಅಧ್ಯಯನ, ಹಣ ಸಂಪಾದನೆ - ಸಂಪಾದನೆಯ ಪ್ರಕ್ರಿಯೆ, ವ್ಯವಹಾರ, ಮಾತು, ಸಂಬಂಧಗಳ ತಾಳಮೇಳ, ಎಲ್ಲವೂ ಪಾಶ್ಚಾತ್ಯರ ದಾಳಿಗೆ ಒಳಗಾದವುಗಳೇ....
*ಕೃತಜ್ಙತೆ - use & throw*
ಯಾವದೇ ವಸ್ತುಗಳು ಇರಬಹುದು ಆ ವಸ್ತುಗಳನ್ನು ಬಳಿಸಿ ಆದಮೇಲೆ ಪುನಹ ಬಳಿಸುವದು ನಮ್ಮ ಪದ್ಧತಿ. ಆ ವಸ್ತುವಿನ ವಸ್ತುವನ್ನು ದಯಪಾಲಿಸಿದ ವ್ಯಕ್ತಿಯನ್ನು ಕೃತಜ್ಙತೆಯಿಂದ ನೋಡುವದೂ ನಮ್ಮ ಸಂಸ್ಕೃತಿ. Use & throw ಬಳಿಸು - ಎಸೆ ಇದು ಇಂದಿನ ಸಂಸ್ಕೃತಿ. ಅದು ಏನೂ ಆಗಿರಬಹುದು. ಅದೆಲ್ಲವೂ ಇದೇ ನಿಯಮದ ಅಡಿಯಲ್ಲೇ ಬರುವದು.
ಉದಾಹರಣೆಗೆ... ನಮ್ಮ ಸಂಸ್ಕೃತಿಯಲ್ಲಿ ಬರುವ ವೇದ ವೇದಾಂತ ವಿದ್ಯೆ ನಮ್ಮ ಕೊನೆ ಉಸಿರು ಇರುವವರೆಗೂ ಬೇಕು. ಅಷ್ಟೇ ಅಲ್ಲ ಮುಕ್ತಿ ಆಗುವವರೆಗೂ ಬೇಕು. ಓದು ಕೊಟ್ಟ - ವಿದ್ಯೆ ಕಲಿಸಿದ ಗುರುವಿಗೆ ಆಜೀವನ ಕೃತಜ್ಙನೂ ಆಗಿರುವ. ದೇವರಿಗಂತೂ ಆ ಮುಕ್ತಿ ಪರ್ಯಂತ ಮುಕ್ತನಾದಮೆಲೂ ಕೃತಜ್ಙ. ಆದರೆ ಇಂದಿನ ಪಾಶ್ಚಾತ್ಯ ವಿದ್ಯೆ "ಓದು - ಮುಗಿಸು" ಅಷ್ಟೇ ಆಗಿದೆ. ವಿದ್ಯೆ ಕೊಟ್ಟ ಗುರುವಿನ ಜೊತೆಗೆ ಸಂಬಂಧವೇ ಇಲ್ಲ. ಕಾಲೇಜಿಗೆ ಹಣ ಕೊಡು. ಅವರು phd ಕೊಡುತ್ತಾರೆ. ಅಲ್ಲಿಗೆ ಸಂಬಂಧ ಮುಕ್ತಾಯ. ಇದು ಒಂದು ನಿದರ್ಶನ ಮಾತ್ರ. *ಹಣಕೊಟ್ಟು ಘಳಿಸಿದ ವಿದ್ಯೆ, ಹಣ ಸಂಪಾದನೆಯಲ್ಲಿಯೇ ಪರ್ಯವಸಿತವಾಗುತ್ತದೆ. ಉಚಿತವಾಗಿ, ಸೇವೆಯನ್ನೂ ಮಾಡಿ, ಅನುಗ್ರಹಪೂರ್ವಕ ಪಡೆದ ವಿದ್ಯೆ ಇಂದು ಸಕಲವಿಧ ವೈಭವವನ್ನೂ ತಂದು ಕೊಡುತ್ತದೆ. ಮುಂದೆ ಆನಂದಕ್ಕೂ ಕಾರಣವಾಗಿದೆ.*
ಒಂದು ಎಂಜಲು ಗೋಮ -- ಗೋಮಯ ಹಚ್ಚು ನಮ್ಮ ಸಂಸ್ಕೃತಿ. Ditergent ಬಳಿಸು ಅವರ ಸಂಸ್ಕೃತಿ. ಅವರಲ್ಲಿ ಶುದ್ಧತೆಗೆ ಮಾತ್ರ ಪ್ರಾಶಸ್ತ್ಯ. ನಮ್ಮ ಸಂಸ್ಕೃತಿ ಹಾಗಲ್ಕ ಶುದ್ಧತೆಯ ಜೊತೆಗೆ ಧಾರ್ಮಿಕ ಅನುಬಂಧವನ್ನೂ ತೋರಿಸುತ್ತದೆ. ಪುಣ್ಯವನ್ನೂ ಕೊಡುತ್ತದೆ. ಒಂದು ಗೋಮಯಕ್ಕಾಗಿ ಆಕಳು, ಆಕಳಮೇಲೆ ಪ್ರೀತಿ, ಆಕಳನ್ನು ಸಾಕುವಿಕೆ, ಆಕಳ ಪೂಜೆ ಹೀಗೆ ಒಂದರ ಹಿಂದ ಒಂದರಂತೆ ಧಾರ್ಮಿಕ ಸರಪಳಿಯೇ ಬೆಳಿಯುತ್ತಾ ಹೋಗುತ್ತದೆ.
*ಕೃತಿಯಲ್ಲಿ ಬರುವ ಧರ್ಮಗಳೇ ಮಾತಲ್ಲಿ ಬರಲಿ*
ನಂಬಿದ ಧರ್ಮವನ್ಮು ಗಾಳಿಗೆ ತೂರದೇ ಆಚರಣೆಯಲ್ಲಿ ತರುವ ಪ್ರಯತ್ನವನ್ನು ಮಾಡೋಣ. ಇಂದು new year ಬಗ್ಗೆ ಮಾತಾಡಿದ ಎಲ್ಲ ಧಾರ್ಮಿಕರೂ ಧರ್ಮದ ವಿಷಯದಲ್ಲಿ update ಆಗುತ್ತಾ ಹೋಗಲಿ. ಹತ್ತು ಗಾಯತ್ರೀಜಪ ಮಾಡುವವರು ಇದ್ದಾರೆ ನೂರು ಜಪ ಮಾಡುವವರು ಆಗಲಿ. ಒಂದು ಹೊತ್ತು ಮಾಡುವವರು ಇದ್ದರೆ ಎರಡೂ ಹೊತ್ತು ಸಂಧ್ಯೆ ಮಾಡುವವರು ಆಗಲಿ. ಕೆವಲ ಸಂಧ್ಯೆ ಮಾಡುವವರು ಇದ್ದರೆ ಪೂಜೆ ಮಾಡುವಂತಾಗಲಿ. ಪೂಜೆ ಮಾಡುವವರು ಇದ್ದರೆ ಉಪನ್ಯಾಸಗಳಿಗೆ ಹೋಗಲಿ. ಕೇವಲ ಉಪನ್ಯಾಸಕ್ಕೆ ಮಾತ್ರ ಹೋಗುವವರು ಆಗಿದ್ದರೆ ಪಾಠಕ್ಕೂ ಹೋಗುವಂತಾಗಲಿ. ಈ ತರಹದ update ಆಗಾಗ ಕಾಲಕಾಲಕ್ಕೆ ಆಗುತ್ತಾ, ನಮ್ಮ ಧರ್ಮಗಳು ಕೃತಿಯಲ್ಕಿ ಬಂತೂ ಎಂದಾದರೆ ಧರ್ಮದ ಮಾತುಗಳಿಗೆ ತುಂಬ ಮಹತ್ವ....
*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ,ಸಿರವಾರ
Comments