ಗೀತಾ ಜಯಂತಿ ಗೀತೆಯ ಸಂದೇಶ

ಗೀತಾ ಜಯಂತಿ ಗೀತೆಯ ಸಂದೇಶ*

ಗೀತೆ ಕೃಷ್ಣನ ಪ್ರತಿರೂಪ. ಗೀತೆ ಜೀವನ  ಕೈಗನ್ನಡಿ. ಕನ್ನಡಿ ಹೇಗೆ ಸುಳ್ಳಾದದ್ದನ್ನು ತೋರಿಸುವದಿಲ್ಲವೋ ಗೀತೆಯೂ ಹಾಗೆ ಸುಳ್ಳಾದದ್ದನ್ನು ಹೇಳುವದಿಲ್ಲ. ಗೀತೋಪದೇಶಕ ಕೃಷ್ಣ ನೆರಳು ಇದ್ದಹಾಗೆ. ನೆರಳು ನೆನಪಲ್ಲಿದ್ದರೂ,  ಮರೆತರೂ ಕ್ಷಣ ಬಿಡದೆ ನಮ್ಮ ಜೊತೆ ಇರುವಂತೆ ಕೃಷ್ಣನೂ ಕ್ಷಣ ಬಿಡದೆ ರಕ್ಷಕನಾಗಿ ಇರುತ್ತಾನೆ. 

*ಗೀತೆಯಲ್ಲಿ ತಪಸ್ಸು*

ಮುಕ್ತಿಗೆ ಬೇಕಾದ "ಯೋಗ" ಉಪಾಯಗಳನ್ನು ಸಾವಿರ ಸಾವಿರ ತಿಳುಹಿಸಿಕೊಟ್ಟದ್ದಾನೆ ಶ್ರೀಕೃಷ್ಣ. ಅದರಲ್ಲಿ ತಪಸ್ಸೂ ಒಂದು. 

*ತಪಸ್ಸಿನ ಮಹಿಮೆ*

"ಯದ್ದುರಾಪಂ ದುರಾರಾಧ್ಯಂ
ದುರಾಧರ್ಷಂ ದುರುಸ್ಸಹಮ್.
ತತ್ಸರ್ವಂ ತಪಸಾ ಶಕ್ಯಂ 
*ತಪೋ ಹಿ ದುರತಿಕ್ರಮಮ್*"

ಅಸಾಧ್ಯವಾದದ್ದನ್ನು, ಅಶಕ್ಯವಾದದ್ದನ್ನು  ಪಡೆಯುವ ಹಂಬಲ ಇದ್ದರೆ "ತಪಸ್ಸೇ ಮೂಲ. ತಪಸ್ಸಿನಿಂದ ಏನನ್ನಾದರೂ ಪಡೆಯಬಹುದು. ಋಷಿ ಮುನಿಗಳು ದೇವತೆಗಳು ಏನನ್ನು ಪಡೆದಿದ್ದಾರೆ ಅದು ತಪಸ್ಸಿನಿಂದಲೇ... ಆದರೆ ಇಂದಿನ ಕಲಿಯುಗದಲ್ಲಿ ಅತ್ಯಂತ ಅಸಾಧ್ಯವಾದದ್ದು "ತಪಸ್ಸೇ" ಎಂದರೆ ತಪ್ಪಾಗದು.

*ಗೀತೆಯಲ್ಲಿ ತಿಳಿಸಿದ ತಪಸ್ಸು*

ದೇವ ಗುರು ಬ್ರಾಹ್ಮಣ ಪೂಜೆ, ಶೌಚಾಚಾರ, ಬ್ರಹ್ಮಚರ್ಯ, ಅಹಿಮನಸಾ ಇವುಗಳು ಶಾರೀರಿಕ ತಪಸ್ಸು. ಪರಪೀಡೆ ಕೊಡದ, ಸತ್ಯವಾದ, ಪ್ರಿಯಕರವಾದ, ನಿರಂತರ ಅಧ್ಯಯನ- ಅಧ್ಯಾಪನ ರೂಪವಾದದ್ದು  ವಾಚನಿಕ ತಪಸ್ಸು. ಶಾಂತ ಸಮಾಧಾನ ಮನಸ್ಸು, ಮೌನ, ಮನೋ ಶುದ್ಧಿ ಇವುಗಳು ಮಾನಸಿಕ ತಪಸ್ಸು ಎಂದು  ಮೂರು ವಿಧ ತಪಸ್ಸನ್ನು ಕೃಷ್ಣ ಉಪದೇಶಿಸುತ್ತಾನೆ. ಈ ತಪಸ್ಸುಗಳು ಸಾತ್ವಿಕ ರಾಜಸ ತಾಮಸ ಎಂದು ಮೂರುವಿಧವಾಗಿವೆ. 

*ಅಪೇಕ್ಷೆಗಳಿಂದ ದೂರಾದ ತಪಸ್ಸು - ಸಾತ್ವಿಕ*

ತಪಸ್ಸಿನ ಉದ್ಯೇಶ್ಯ ಸಾಮಾನ್ಯವಾಗಿ ಅಪೇಕ್ಷೆಗಳ ಗೂಡು ಆಗಿರುತ್ತದೆ. ಪ್ರತಿಫಲಗಳಿಗೆ ಕೈಯೊಡ್ಡುವದು ಎಂದರೆ ನಮ್ಮನ್ನು ನಾವು ಗುಲಾಮರನ್ನಾಗಿಸಿಕೊಳ್ಳುವದು ಎಂದರ್ಥ. ಪ್ರತಿಫಲ ಹೇಳಿದಂತೆ ಕುಣಿಯುತ್ತೇವೆ. ಒಂದರ್ಥದಲ್ಲಿ ಪ್ರತಿಫಲದ ಕೈಗೊಂಬೆಯಾಗಿಯೇ ಉಳಿಯುತ್ತೇವೆ. 

ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುವ ಕರ್ಮ ಶ್ರೇಷ್ಠಫಲವನ್ನೇ ಕೊಡುತ್ತದೆ. ಅಸಾಧ್ಯವಾದದ್ದನ್ಬೇ ಒದಗಿಸುತ್ತದೆ. ಅಂತೆಯೇ ಪ್ರತಿಫಲದ ದಾಸನಲ್ಲ. ಪ್ರತಿಫಲಕ್ಕಾಗಿ ಮಾಡುವವನಲ್ಲ.  ಪ್ರತಿಫಲ ದೊರೆತರೆ ಅದಕ್ಕೆ ಕೈ ಚಾಚುವನಲ್ಲ. ಅದನ್ನು ದೇವರಿಗೇ ಅರ್ಪಿಸುವವನು ಆಗುತ್ತಾನೆ. ಈ ತರಹದ ತಪಸ್ಸೇನಿದೆ ಅದು ಸಾತ್ವಿಕ ತಪಸ್ಸು ಎಂದೆನಿಸಿಕೊಳ್ಳುತ್ತದೆ. ಈ ತಪಸ್ಸಿಗೆ ಫಲ ಕೃಷ್ಣನೇ ಆಗಿರುತ್ತಾನೆ. ಇದು ಕೃಷ್ಣನು ಗೀತೆಯಲ್ಲಿ ಉಪದೇಶಿಸಿದ ಒಂದು ಪುಟ್ಟ ಸಂದೇಶ.....

*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
ಕೃಷ್ಣನ ಪ್ರತೀ ಮಾತೂ ಮುಕ್ತಿಗೆ ದಾರಿಯೇ.....
Bhargav said…
It's awesome I am really energized by reading this thing
Thank you gurugale
NYASADAS said…
Dhanyvadagalu Bhargav :)

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*