*"ಬ್ರಹ್ಮಾತ್ಮ ದಾಸ" ಪರಮಪೂಜ್ಯ ಮಾಹುಲೀ ಆಚಾರ್ಯರು.....೧*

*"ಬ್ರಹ್ಮಾತ್ಮ ದಾಸ" ಪರಮಪೂಜ್ಯ ಮಾಹುಲೀ ಆಚಾರ್ಯರು.....೧*

ನನ್ನ ಸ್ವರೂಪೋದ್ಧಾರಕ ಗುರುಗಳಾದ , ಬ್ರಹ್ಮಾತ್ಮ ದಾಸರೂ ಆದ, ಪರಮಪೂಜ್ಯ ಮಾಹುಲೀ (ಪಂ. ವಿದ್ಯಾಸಿಂಹಾಚಾರ್ಯರ) ಆಚಾರ್ಯರ ಆರವತ್ತನೇಯ ಸಂಭ್ರಮದ ವಾತಾವರಣ. 

ಜೀವನವೆಂದ ಮೇಲೆ ಸವಾಲುಗಳು ಇರುವವೇ. ಸವಾಲುಗಳು ಎದುರಾದಾಗ ಪಲಾಯನ ಮಾಡುವವರು ಹಲವರು ಆದರೆ, ಸವಾಲುಗಳನ್ನು ಎದುರಿಸುವವರು ಕೆಲವರು ಆದರೆ, ಸವಾಲುಗಳೇ ಸೋಪನಾವಗುವವು ಒಬ್ಬಿಬ್ಬರಿಗೆ ಮಾತ್ರ. ಆ ಒಬ್ಬಿಬ್ಬರಲ್ಲಿ ನಮ್ಮ ಪೂಜ್ಯ ಗುರುಗಳೂ ಒಬ್ಬರು. 

೧೯೬೦ ನೇಯ ಇಸ್ವಿಯಲ್ಲಿ ಜನಿಸಿದ ಆಚಾರ್ಯರಿಗೆ, ೮೪ ನೇ ಈಸ್ವಿಗೆ, ಅಂದರೆ ಸರಿಸುಮಾರು ೨೩ - ೨೪ ನೇಯ ವಯಸ್ಸಿಗೇ ಅತ್ಯಂತ ಪ್ರಾಚೀನವಾದ, ಪ್ರಾಚೀನಪದ್ಧತಿಗಳನ್ನೇ ಒಳಗೊಂಡ ಭವ್ಯ ದಿವ್ಯವಾದ, ೧೫೦ ಕ್ಕೂ ಮಿಗಿಲಾದ ವಿದ್ಯಾರ್ಥಿಗಳಿಂದ ಕೂಡಿದ  *ಸತ್ಯಧ್ಯಾನ ವಿದ್ಯಾಪೀಠ* ವೆಂಬ ದೊಡ್ಡ ಗುರುಕುಲಕ್ಕೆ *ಕುಲಪತಿ* ಗಳು ಎಂದಾಗುವದೇ ಒಂದು ದೊಡ್ಡ ಸವಾಲು ಆಗಿತ್ತು. 

*ಧರ್ಮವಿಲ್ಲಿ ಕಂಡರೇ ಅದು ಇವರ ಶಕ್ತಿಯೇ* 

ಪಾಶ್ಚತ್ಯ ಸಂಪ್ರದಾಯದ ಪ್ರಭಾವ ಬೀರಲು  ಹೆಬ್ಬಾಗಿಲಿನಂತೆ ಇರುವದೇ ಮುಂಬಯಿ.  ಮೋಹಮಯೀ ಪಟ್ಟಣ. ಅತ್ಯಂತ ನಾಸ್ತಿಕ ಪಟ್ಟಣ ಮುಂಬಯಿ.

 ಪರಮೂಪಜ್ಯ ಪರಮಾಚಾರ್ಯರು ದೇಶದ ಆರ್ಥಿಕ / ನಾಸ್ತಿಕ ರಾಜಧಾನಿಯಾದ ಮುಂಬಯಿಯನ್ನು *ವಾಣೀ ವಿಹಾರ ವಿದ್ಯಾಲಯ ಹಾಗೂ ಸತ್ಯಧ್ಯಾನ ವಿದ್ಯಾಪೀಠ* ಗಳನ್ನು ಸಂಸ್ಥಾಪಿಸಿ, ತತ್ವಜ್ಙಾನವನ್ನು ಪಸರಿಸಿ  ಧರ್ಮದ ಗಿಡವನ್ನು ನೆಟ್ಟಿ  *ವಿದ್ಯಾವಿಹಾರ* ವನ್ನಾಗಿಸಿದ್ದರು. ಮುಂಬಯಿಯನ್ನೇ ಪರಿವರ್ತಿತವಾಗುವಂತೇ ಮಾಡಿದ,  ವಿದ್ಯಾಪೀಠದ ಕುಲಪತಿಗಳು ಪೂಜ್ಯ ಪರಮಾಚಾರ್ಯರು.  ಆ ಭವ್ಯ ದಿವ್ಯ ವಿದ್ಯಾಪೀಠದ ಕುಲಪತಿಗಳು *ಪೂಜ್ಯ ಮಾಹುಲೀ ಆಚಾರ್ಯರು*

*ಸವಾಲುಗಳು ನೂರು.... ಎಲ್ಲದಕ್ಕೂ ದಾರಿ ಪಾಠಪ್ರಚನ ಮಾತ್ರ*

ಪೂಜ್ಯ ಆಚಾರ್ಯರಿಗೆ ೨೪ ವರ್ಷ.  ಏಕ ವಚನದಿಂದ ಕರೆಯುತ್ತಾ ಸಣ್ಣವರನ್ನಾಗಿಸುವ ಪ್ರಯತ್ನ ಸುತ್ತಮುತ್ತಲಿನ ಅನೇಕರದ್ದು. ಬೆಂಬಲಿಸಿ ಪ್ರೋತ್ಸಾಹಿಸುವವರು ಕೆಲವರೇ. 
ಎದುರಿಗಿರುವ ಮಕ್ಕಳು ನೂರೈವತ್ತು ಜನ. ಈ ಎಲ್ಲ ಮಕ್ಕಳಿಗೂ ಮೋಕ್ಷ ಮಾರ್ಗ ತೋರಿಸುವ ಗುರಿ. ಅವರೆಲ್ಕರ ಜೀವನದ ಜವಾಬ್ದಾರಿ. ಪ್ರತಿಯೊಂದೂ ಸಮಸ್ಯೆಯೇ. *ಪ್ರತಿ ಸಮಸ್ಯೆಯನ್ನೂ ಸವಾಲನ್ನಾಗಿಯೇ  ಸ್ವೀಕರಿಸಿದರು.*

ದಿನಬೆಳಗಾದರೆ ಪ್ರತಿನಿತ್ಯ ೫೦ ಕೇಜಿ ಅಕ್ಕಿ ಬೇಕು. ೨೦ ಕೇಜಿ ತೊಗರೀ ಬೇಳಿ. ಇಪ್ಪತ್ತು ಕೇಜಿ ಪಲ್ಯಾಕಿಗಳು. ಇಪ್ಪತ್ತು ಕೇಜಿ ಉಪಹಾರಕ್ಕೆ ರವೆ. ಇಪ್ಪತ್ತೈದು ಲೀಟರ್ ಹಾಲು ಬೇಕು. ವಿದ್ಯಾರ್ಥಿಗಳ ಅರೋಗ್ಯ ಪೋಷಣ. ವಸ್ತ್ರ ಧನ ಮೊದಲಾದ ವ್ಯವಸ್ಥೆ  ಆಚಾರ್ಯರದ್ದೇ. ಯಾವುದಕ್ಕೂ ಕಡಿಮೆ ಆಗುವ ಹಾಗಿಲ್ಲ. ಇದೆಲ್ಲದರ ಮೇಲೆ ದಾರಿದ್ರ್ಯ. 

ವಿದ್ಯಾರ್ಥಿಗಳು ನಿಶ್ಚಿಂತವಾಗಿ ಅಧ್ಯಯನ ಮಾಡಲಿ ಎಂಬ ಉದ್ಯೇಶ್ಯದಿಂದ ಅನೇಕ ವಿದ್ಯಾರ್ಥಿಗಳ ಪಾಲಕರಿಗೆ ಹಣ ಕಳಿಸುವದೂ ಆಚಾರ್ಯರ ಕೆಲಸ. ಪ್ರತಿತಿಂಗಳು ಕಳೆದರೆ ಲಕ್ಷರೂಪಾಯಿ ಖರ್ಚು ತಪ್ಪದೆ ಎದುರಿಗೇ ಬರುವದೇ..... ಅಂತಹ ಪ್ರಸಂಗದಲ್ಲಿ ಸಮಸ್ಯೆಗಳ ಸುಳಿಯಲ್ಲಿ ಪೂಜ್ಯ ಆಚಾರ್ಯರು. ಎಂಥ ಘೋರ ಪ್ರಸಂಗ ಎದುರಾದರೂ  *ಪಾಠಪ್ರವಚನ ತಪ್ಪುವದು ಸರ್ವಥಾ ಇಲ್ಕ.*

ಒಂದು ದಿನ ತಿಂಗಳು ಬೇಕಾಗುವ ಕಿರಾಣಿ ಸಾಮಾನುಗಳನ್ಬು  ಕೊಡುವ ವ್ಯಕ್ತಿ ಹಣಕ್ಕಾಗಿ ಬಂದ. ಕೈಯಲ್ಲಿ ದುಡ್ಡಿಲ್ಲ. ಅವನು ಬರುವದನ್ನು ದೂರದಿಂದ ಗಮನಿಸಿದ ಆಚಾರ್ಯರು ಪಕ್ಕದ ರೂಮಿಗೆ ಹೋಗಿ ಬಚ್ಚಿಟ್ಟುಕೊಂಡು, "ಆಚಾರ್ಯರು ಇಲ್ಲ, ಮತ್ತೆ ಮುಂಸಿನ ವಾರ ಬಾ, ಆಚಾರ್ಯರು ದುಡ್ಡು ಕೊಡುತ್ತಾರೆ" ಎಂದು ಹೇಳಿ ಕಳುಹಿಸಿದರು. 

ಆ ಕ್ಷಣದಲ್ಲಿಯೇ ಒಬ್ಬ ಗ್ರಹಸ್ಥ "ಮೂರು ಜನ ಮಕ್ಕಳನ್ನು ಕರೆತಂದು ಆಚಾರ್ಯರ ಪಾದಕ್ಕೆ ಹಾಕಿ, ಇವರನ್ನು ಸ್ವೀಕರಿಸಿ, ಇವರ ಜೀವನವನ್ನು ಉದ್ಧರಿಸಬೇಕು, ಇಂದಿನಿಂದ ಇವರು ನಿಮ್ಮ ಜೋಳಿಗೆಗೆ" ಎಂದು ನಿವೇದಿಸಿ ಕೈ ಮುಗಿದು ನಿಂತ. 

ಕೈಲ್ಲಿ ದುಡ್ಡಿಲ್ಲ. ದುಡ್ಡಿವ ಬಂದಾಗ ಮುಚ್ಚಿಟ್ಟುಕೊಳ್ಳುವ ಸ್ಥಿತಿ. ಈಗಾಗಲೇ ನೂರೈವತ್ತು ಜನ ವಿದ್ಯಾರ್ಥಿಗಳು. ಇಂತಹ ಸ್ಥಿತಿ ಎದುರಾದಾಗ ಸಾಮಾನ್ಯ ವ್ಯಕ್ತಿ ಏನು ಮಾಡಬಹುದು.. ?? ಯೋಚಿಸುವ ವಿಷಯವೇ... 

ಆದರೆ ಪೂಜ್ಯ ಆಚಾರ್ಯರು ಮಾತ್ರ *ಆ ಮೂರೂ ವಿದ್ಯಾರ್ಥಿಗಳನ್ನೂ ಬಿಗದಪ್ಪಿಕೊಂಡು, ಏನೂ ಕಾಳಜೀ ಬೇಡ, ಇವರು ಉತ್ಕೃಷ್ಟ ಸಾಧಕರು ಆಗ್ತಾರೆ, ಉತ್ತಮ ವಿದ್ವಾಂಸರೂ ಆಗ್ತಾರೆ, ಏನೂ ಚಿಂತಿ ಬೇಡ, ಇಂದುನಿಂದ ಇವರು ನನ್ನ ಮಕ್ಕಳೇ* (ಆಮೂವರಲ್ಲಿ ನಾನೂ ಒಬ್ಬವನಾಗಿದ್ದೆ) ಎಂದು ಹೇಳಿ ಬಿಗಿದಪ್ಪಿಕೊಂಡು ಅವರನ್ನೂ ಸ್ವೀಕರಿಸುತ್ತಾರೆ. ಕೇವಲ ಒಂದು ಪ್ರಸಂಗ ಮಾತ್ರ. ಇಂತಹ ನೂರಾರು ಪ್ರಸಂಗಗಳಲ್ಲಿ ಸಮಸ್ಯೆಗಳು ಎದುರಾದಗಲೆಲ್ಲ, ಪಲಾಯನ ಮಾಡದೇ ಸವಾಲಾಗಿ ಸ್ವೀಕರಿಸಿ ಜಗತ್ತಿಗೆ ದೊಡ್ಡ  ಆದರ್ಶವನ್ನು ತಿಳಿಸಿಕೊಟ್ಟವರು ಪೂಜ್ಯ ಆಚಾರ್ಯರು. 

*ಈ ಧೈರ್ಯ ಹೇಗೆ ಬಂತು...?? ಎಂದು ಕೇಳಿದರೆ*

ಜಗವ ರಕ್ಷಿಸುವ ಹೊಣೆ ಜಗದೀಶ ತಾ ಹೊತ್ತವನು. ಅವನು *ಬ್ರಹ್ಮ* ಗುಣಪೂರ್ಣನು. ಅವನು  ನನ್ನ *ಆತ್ಮಾ*  ನನ್ನ ಸ್ವಾಮಿ. ನಾನು ಗೂಣಪೂರ್ಣ ಸ್ವಾಮಿಯ ದಾಸ. ಅವನಾಜ್ಙೆ ಪಾಲನೆಯೇ ನನ್ನ ಕಸುಬು. ಮುಂದಿನದು ಅವನದು ಎಂದು ಉತ್ತರಿಸಿದರು ಪೂಜ್ಯ ಆಚಾರ್ಯರು...

Comments

Anonymous said…
ತುಂಬ ಸುಂದರ ಲೇಖನ
ಅದ್ಭುತವಾದ ಲೇಖನ.. ಪೂಜ್ಯ ಆಚಾರ್ಯರ ಪರಮಾನುಗ್ರಹ ನಮ್ಮೆಲ್ಲರ ಮೇಲೆ ಸದಾ ಇರಲಿ.. 🙏🙏🙏
Nagashree Padaki said…
ಅದ್ಭುತವಾದ ಲೇಖನ.. ಪೂಜ್ಯ ಆಚಾರ್ಯರ ಪರಮಾನುಗ್ರಹ ನಮ್ಮೆಲ್ಲರ ಮೇಲೆ ಸದಾ ಇರಲಿ.. ನಿಮ್ಮ ಈ ಬರವಣಿಗೆಯ ಮಹಾಸೇವಾ ಇನ್ನು ಹೆಚ್ಚಾಗಲಿ.. 🙏🙏🙏👌👌

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*