*ರಕ್ಷಿಸೋ ಅನವರತ ರಕ್ಷಿಸೋ* ಇಂದು ದಾಸಶ್ರೇಷ್ಠ *ಕನಕದಾಸರ* ಜಯಂತಿ.
*ರಕ್ಷಿಸೋ ಅನವರತ ರಕ್ಷಿಸೋ*
ಇಂದು ದಾಸಶ್ರೇಷ್ಠ *ಕನಕದಾಸರ* ಜಯಂತಿ.
ಕನಕದಾಸರ ಪದ ಪದ್ಯಗಳನ್ನು ಗಮನಿಸಿದಾಗ ಒಂದು ಸಿದ್ಧವಾಗುತ್ತದೆ "ರಕ್ಷಕನಾದ ದೇವರು ಇದ್ದಾನೆ, ರಕ್ಷಣೆಗೆ ಒಳಪಡುವವ ಜೀವನೂ ಇದ್ದಾನೆ" ಎಂದು. ದೇವನು ದೊಡ್ಡವ ಜೀವನು ಅತ್ಯಲ್ಪ ಎಂದು ಪ್ರತೀ ಹಾಡು ಪದ ಪದ್ಯ ಉಗಾಭೋಗ ಹರಿಭಕ್ತಿಸಾರ ಮೊದಲಾದವುಗಳಲ್ಲಿ ಸ್ಥಾಪಿಸುತ್ತಾ ಹೋಗುತ್ತಾರೆ.
ಇಂದು ಕನಕದಾಸರ ಕೃತಿಗಳಿಗಿಂತಲೂ ಕನಕದಾಸರ ಹೆಸರನ್ನು ಬಳಿಸಿಕೊಳ್ಳುವದು ತುಂಬ ಆಗಿದೆ. ಜಗತ್ತು ಹೆಸರನ್ನು ಬಳಿಸಿಕೊಂಡರೆ, ಸಾಹಿತ್ಯವನ್ನು ಬಳಿಸಿಕೊಂಡವರು ಕೆಲವರೇ. "ಕನಕದಾಸರ ಹೆಸರನ್ನು ಬಳಿಸಿಕೊಂಡವರು ಹಣ ಮಾಡಿಕೊಂಡರೆ, ಕೃತಿಗಳನ್ನು ಬಳಿಸಿಕೊಂಡವರು *ಹಣವಂತನಾದ ದೇವರನ್ನೇ ಒಲಿಸಿಕೊಂಡರು.*
*ಹಣ ಬೇಕೋ ?? ಹಣವಂತ ಬೇಕೋ..??*
ಹಣ ಬೇಕಾದರೆ *ಕನಕ* ಬೇಕು. ಹೆಸರಿನಲ್ಲಿಯೇ ಹಣವಿದೆ. ಹಣವಂತನಾದ ದೇವನು ಬೇಕಾದರೆ *ಕನಕದಾಸ* ಬೇಕು. ಹೆಸರಿನಲ್ಲಿಯೇ ದಾಸ ಸಾಹಿತ್ಯವಿದೆ. ನಾನು ದಾಸ ನೀನು ಸ್ವಾಮಿ ಎಂಬ ಸ್ವಾಮಿ ಭೃತ್ಯಭಾವ ಸಂಬಂಧವಿದೆ. ಹಣವಂತನಾದ ದೇವರನ್ನೇ ಬೇಡಿ, ಆ ದೇವನೇ ಎಮ್ಮ ಸ್ವಾಮಿಯಾದಾಗಿ ಬಂದಾಗ ಬೇಡುವ ಸ್ಥಿತಿಯೇ ನಿರ್ಮಾಣವಾಗಲಾರದು. ಹಣ ಬೇಕಾದಾರೆ " ದೇವರಿಂದಾರಂಭಿಸಿ ಇಂದಿನ ಸರ್ಕಾರದವರೆಗೂ ಬೇಡುವ, ಕೈ ಚಾಚುವ ಪ್ರಂಗ ಬಂದೀತು. ಹಾಗಾಗಿ "ಹಣ ಬೇಕೋ ?? ಹಣವಂತನು ಬೇಕೋ..??" ನಮ್ಮ ವಿವೇಚನೆಗೆ ಬಿಟ್ಟಿದ್ದು. ಕನಕದಾಸರು ಎಂದಿಗೂ ಹಣವನ್ನಾಗಲಿ ಸವಲತ್ತುಗಳನ್ನಾಗಲಿ ಬೇಡಿ ಪಡೆದವರು ಅಲ್ಲ.
*ಕನಕದಾಸರು ಬೇಡಿಯೇ ಇಲ್ಲವೆ..??*
ಬೇಡದೇ ಇರಲು ದೇವರು ಅವರಲ್ಲ. ಅವರೂ ಒಬ್ಬರು ದಾಸರೇ. ಆದ್ದರಿಂದ ಬೇಡಲೇಬೇಕು. ಬೇಡಿದ್ದಾರೆ. ಏನನ್ನು.. ?? ಒಂದು ಸುಂದರ ಕಥೆ...
ಒಂದು ಬಾರಿ ವ್ಯಾಸರಾಜರು, ವಾದಿರಾಜರು, ವಿಜಯೀಂದ್ರರು ಈ ಮೂರುಜನ ಒಂದೆಡೆ ಕುಳಿತು ಶಾಸ್ತ್ರಾರ್ಥ ಚರ್ಚೆಯಲಿ ತೊಡಗಿರುತ್ತಾರೆ. ಆಗ ದೂರದಲ್ಲಿ "ಕನಕ" ನಿಂತು ಕೇಲ್ತಾ ಇರುತ್ತಾನೆ.. (ಇನ್ಮೂ ದಾಸನು ಆಗಿರುವದಿಲ್ಲ.)
ಕನಕನನ್ನು ಕೂಗಿ ಕರೆಯುತ್ತಾರೆ, ಪುರಂದರ ದಾಸರು ಇಲ್ಲಿ ಇಲ್ಲ. ಅವರನ್ನು ಕರೆದು ಬಾ .. ಎಂದು ಹೇಳುತ್ತಾರೆ. ಕನಕ ಹಿಗ್ಗಿನಿಂದ ಓಡಿ ಹೋಗಿ ಪರಂದರದಾಸರಿಗೆ ತಿಳಿಸುತ್ತಾನೆ ಸ್ವಾಮ್ಯಾರು ಕರಿತಿದಾರೆ ಎಂದು.
ಪುರಂದರ ದಾಸರು ಸಿದ್ಧಾರಾಗಿ ಹೊರಡುತ್ತಾರೆ. ಕನಕನೂ ಬೆನ್ನು ಹತ್ತಿ ಹೊರಡುತ್ತಾನೆ. ಆ ಚರ್ಚೆ ದೂರದಿಂದಲೇ ನೋಡಲು ಒಂದು ಖುಶಿ. ಹಾಗಾಗಿ ಹೊರಟ.
ಪು) ಹೇ ಕನಕ !! ಆ ಸ್ವಾಮಿಗಳ ಆಜ್ಙಾ ಪಾಲನೆ ಮಾಡಿದಿ.. ಅವರಿಂದ ಏನರೆ ಇನಾಮು ಭಕ್ಷೀಸು ಪಡೀಬೇಕೋ ಇಲ್ಲೋ.. ?? ಇಸ್ಗೋ ಹೋಗು. ಎಂದು ಹೇಳುತ್ತಾರೆ. "ಆ ದೊಡ್ಡ ಸ್ವಾಮ್ಯಾರ ಬಳಿ ನಾ ಏನರೀ ಕೇಳಲಿ... ಏನು ಕೇಲಬೇಕು ಗೊತ್ತಾಗವಲ್ತು. ನಾ ಬೇಡುವವನಲ್ಲ. ನೀವೇ ಏನರೆ ಹೇಳ್ರಿ ಬೇಡ್ತೀನಿ" ಎಂದು ಕನಕ ಹೇಳಿದ.
ಪು..) ಅವರೇನು ಮಾಡ್ತಾ ಇದ್ರು ಹೇಳು ..?? ಎಂದು ಕನಕನಿಗೆ ಕೇಳಿದರು. "ನಗತಿದ್ರು.. ಅಳತಿದ್ರು.. ಕಣ್ಣು ಮುಚ್ಚಿಕೂಡತಿದ್ರು.. ಏನೇನೋ ಮಾಡತಿದ್ರು..." ಎಂದು ಉಸರಿಸಿದ.
ಪು..) ಅವರಿಗೇ ಕೇಳು *ನಿಮ್ಮ ನಗುವಿನ ಸ್ವಲ್ಪ... ಅಳುವದರಲ್ಲಿಯ ಸ್ವಲ್ಪ... ಕಣ್ಣುಮುಚ್ಚಿ ಕೂಡ್ತೀರಲಾ ಅದೂ ಸ್ವಲ್ಪ ನನಗೆ ಕೊಡ್ರಿ* ಹೀಗೆ ಬೇಡು ಎಂದು ತಿಳಿಸಿ ಕಳುಹಿಸಿದರು.
ಆ ಮಹಾ ಗುರುಗಳಿಂದ *ನಗು - ಅಳು - ಕಣ್ಣುಮುಚ್ಚಿ ಕೂಡುವಿಕೆ* ಇವುಗಳನ್ನು ಬೇಡಿ ಪಡೆದ ಕನಕ ದೇವರ ಲೀಲೆ ಮಹಿಮೆ ಇವುಗಳನ್ನು ನೆನೆದು ನಕ್ಕ. ದೇವರ ಉಪಕಾರವನ್ನು ನೆನೆದು ಕಣ್ಣೀರಿಟ್ಟ. ದೇವರ ಧ್ಯಾನ ಮಾಡುಲು ಕಣ್ಣುಮುಚ್ಚಿ ಕುಳಿತ. ಅದನ್ನು ಗಮನಿಸಿ ವ್ಯಾಸರಾಯರು ಕನಕನಿಗೆ ಅಂಕಿತ ಕೊಟ್ಟರು *ಆದಿಕೇಶವ* ಎಂದು. ಅಂದಿನಿಂದ ದೇವರ ದಾಸನಾದ *ಕನಕದಾಸರು.*
ಹರಿಭಕ್ತಿಸಾರ - ಕೇಶವನಾಮ - ಅನೇಕ ಕೃತಿಗಳು - ಉಗಾಭೋಗ ಮೊದಲಾದ ಪ್ರತೀ ಕೃತಿಗಳಲ್ಲಿಯೂ *ರಕ್ಷಿಸು* ಪರಿಪರಿಯಾಗಿ ದೇವರನ್ನು ಪ್ರಾರ್ಥಿಸುವವರು ಕನಕದಾಸರು.
*ಕನಕದಾಸರ ಒಂದು ಸಂದೇಶ*
*ಹೇ ಈಶ !! ನಿನ್ನ ಚರಣ ಭಜನೆಆಸೆಯಿಂದ ಮಾಡುವೆನು... ಕರೆದು ಮುಕ್ತಿಕೊಡುವ ನೆಲೆಯಾದಿ ಕೇಶವ* ನಿನ್ನ ಪಾದಾರವಿಂದಗಳನ್ನು ಆಸೆಯಿಂದ ಪ್ರೀತಿಯಿಂದ ಸೇವಿಸುವೆ ನಾನು, ಕರೆದು ಮುಕ್ತಿ ಕುಡುವ ಆದಿಕೇಶವನು ನೀನು. ಎಂದು ಹಣವಂತನನ್ನೇ ಆಸೆಯಿಂದ ಪೂಜಿಸು ಪ್ರಾರ್ಥಿಸು ಎಂಬ ಸಂದೇಶವನ್ನೂ ಕೊಡುತ್ತಾರೆ..
*✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments
ಅಪಮೃತ್ಯುಂ ಸಂಕಟ ಹರಣಂ || ಪ
ಪರಲೋಕ ಸಾಧನ ಕರುಣಾಕರಂ
ಶರಣಾಗತ ಜನಾಧಾರಂ ಸರಸಿಜಭವ ಭವರೋಗ ಸಂಹಾರಂ
ಪುರುಷೋತ್ತಮ ಘೋರ ವಿಹಾರಂ ||1||
ಜ್ಙಾನಭಕ್ತಿ ವೈರಾಗ್ಯ ಸುಜಾತಂ
ಜನನ ಮರಣ ರಹಿತಂ
ಜಲನಿಧಿ ಪೋತಂ
ಘನ ದಾರಿದ್ರ್ಯ ರವಿ ತಾರಾನಾಥಂ
ಅನುಶ್ರುತ ವೈಭವ ಮಂಗಲಗೀತಂ ||2||
ಭೂರಿಭುವನ ಜೀವನಗುಣಂ - ಗಂಭೀರಸಾರ ಪಲ್ಲವ ನಿಕರಾಭರಣಂ ನಾರದ ವಾಲ್ಮೀಕ್ಯಂತಃಕರಣಂ ವರದಾದಿಕೇಶವಂ ನಿತ್ಯಸ್ಮರಣಂ3
ichur?