*ಶ್ರೀವೇದೇಶತೀರ್ಥರ ಆದೇಶ ಪತ್ರ*
*ಶ್ರೀವೇದೇಶತೀರ್ಥರ ಆದೇಶ ಪತ್ರ*
ಇಂದು ಪ್ರಾತಃಸ್ಮರಣೀಯ ಶ್ರೀಶ್ರೀ ಶ್ರೀವೇದಶತೀರ್ಥರ ಆರಾಧನಾ ಮಹೋತ್ಸವ.
ಶ್ರೀವೇದೇಶತೀರ್ಥರು ತಮ್ಮ ಕೊನೆ ಕಾಲದಲ್ಲಿ , ತಮ್ಮ ಪೂರ್ವಾಶ್ರಮ ತಮ್ಮಂದಿರಾದ ಶ್ರೀಯಾದವಾರ್ಯರಿಗೆ ಉಪದೇಶರೂಪದ ಪರಮ ಸುಂದರವಾದ, ಅವಶ್ಯಪಾಲನೆ ಮಾಡಲೇಬೇಕಾದ ಆದೇಶ ಪತ್ರವನ್ನು ಕಳುಹಿಸುತ್ತಾರೆ.
"ವೇದೇಶತೀರ್ಥಗುರುರಾಜ ಧುರಂಧರೋಸೌ
ಸ್ವಾತ್ಮಾವಸಾನಸಮಯೇ ಯದಶಿಕ್ಷಯನ್ಮಾಂ.
ಕಾಲೋಯಮೀರಸುತಶಾಸ್ತ್ರ ವಿಚಾರಹೀನಾಃ
ನೀಚೋಚ್ಛ್ರಯಗ್ರಸಿತಸಾಧು ಗುಣೋದಯಶ್ಚ
ತಸ್ಮಾತ್ ತ್ವಮದ್ಯಮರುದಾತ್ಮಜ ದಿವ್ಯಶಾಸ್ತ್ರ
ವ್ಯಾಖ್ಯಾನಮೇವ ಸತತಂ ಕುರು ಮಾ ತ್ಯಜೇತಿ."
ಹೇ ಯಾದವಾರ್ಯರೇ !! ಈ ಕಾಲವು ಶ್ರೀಮದಾಚಾರ್ಯರ ಶಾಸ್ತ್ರಾಧ್ಯನಗಳಿಂದ ವಿಹಿತವಾಗಿದೆ. ಅತ್ಯಂತ ದುಷ್ಟರಿಗರ ನೀಚರಿಗೇನೇ ಉಚ್ಛ್ರಾಯ ಸ್ಥಿತಿ ಇದೆ. ನೀಚರಿಗೇ ಬೇಳವಣಿಗೆ ಎಂಬುವದು ಇದೆ. ಕೇತುಗ್ರಸ್ತ ಸೂರ್ಯನಂತೆ ಗುಣಗಳೆಲ್ಲವೂ ದೋಷಗಳಿಂದ ಗ್ರಸಿತವಾಗಿ ಹೋಗಿವೆ. ಗುಣಗಳು ಪ್ರಕಾಶಕ್ಕೇ ಬರುವದಿಲ್ಲ. ಆದ್ದರಿಂದ....
ಇಂದಿನಿಂದ ಈ ಕ್ಷಣದಿಂದ ಶ್ರೀಮದಾಚಾರ್ಯರ ಶಾಸ್ತ್ರ ವ್ಯಾಖ್ಯಾನವು ನಿರಂತರ ಸಾಗಲಿ. ಯಾವ ಕ್ಷಣಕ್ಕೂ ಶ್ರೀಮಾದಾಚಾರ್ಯರ ಶ್ರೀಮಟ್ಟೀಕಾಕೃತ್ಪಾದರ ಶಾಸ್ತ್ರಗಳ ಅಧ್ಯಯನ ನಿಲ್ಲುವದು ಬೇಡ. ಯಾವ ಕ್ಷಣವೂ ಬಿಡುವ ಹಾಗಿಲ್ಲ. ಎಂದು ಆದೇಶ ಮಾಡುತ್ತಾರೆ.
"ಶ್ರವಣಾದಿ ವಿನಾ ನೈವ ಕ್ಷಣಂ ತಿಷ್ಠೇದಪಿ ಕ್ವಚಿತ್.
ಅತ್ಯಶಕ್ಯೇ ತು ನಿದ್ರಾದೌ ಪುನರೇವ ಸಮಭ್ಯಸೇತ್"
ದೇವರ ಭಕ್ತಿ ಬೆಳೆಯಲು ಜ್ಙಾನ ಬೇಕು. ಜ್ಙಾನದ ನಿರಂತರ ಪ್ರವಾಹ ಇದ್ದರೆ ಭಕ್ತಿ ಕ್ಷಣಕ್ಷಣ ಬೆಳೆಯುತ್ತದೆ. ಆದ್ದರಿಂದ ಶಾಸ್ತ್ರಾರ್ಥಗಳ ಶ್ರವಣ ಮನನ ನಿಧಿಧ್ಯಾಸನ ಇಲ್ಲದೆ ಕ್ಷಣಕಾಲವೂ ಇರುವ ಹಾಗಿಲ್ಲ.
ನಿದ್ರೆ ಬರುವ ಕ್ಷಣದ ವರೆಗೂ ಅಧ್ಯಯನ ಸಾಗಲಿ. ನಿದ್ರೆ ಮುಗಿದ ಕ್ಷಣದಿಂದ ಅಧ್ಯಯನ ಆರಂಭವಾಗಲಿ. ಎಂದು ಶ್ರೀಮದಾಚಾರ್ಯರ ಆದೇಶ.
ಅಧ್ಯಯನ ನಿಂತು ನೀರಾದರೆ ಹುಳಗಳು ಹತ್ತಿಯಾವು. ನಿರಂತರ ಹರಿಯುವ ನೀರು ಸಿಹಿಯಾಗಿ ತಿಳಿಯಾಗಿ ನೂರಾರು ಜನರಿಗೆ ಸಾರ್ಥಕವಾಗತ್ತೆ. ಹಾಗೆ ಜ್ಙಾನವೂ ಸಹ....
ಶ್ರೀಮದಾಚಾರ್ಯರ ಶಾಸ್ತ್ರಗಳೆಂಬ ಜ್ಙಾನಗಂಗೆಯಲ್ಲಿ ಆಮೆಯಂತೆ ಅನುದಿನ ಅನುಕ್ಷಣ ಜ್ಞಾನವನ್ನು ಪಡೆಯುವಂತೆ ಇಂದಿನ ಕಥಾನಾಯಕರಾದ ಶ್ರೀವೇದೇಶ ತೀರ್ಥರು ಅನುಗ್ರಹಿಸಲಿ ಕರುಣಿಸಲಿ. ಕ್ಷಣಕಾಲವೂ ವ್ಯರ್ಥವಾಗದಂತೆ ಪ್ರೇರಿಸಲಿ ಎಂದು ಪ್ರಾರ್ಥನೆ ಮಾಡುತ್ತಾ ಕೋಟಿ ಕೋಟಿ ನಮಸ್ಕಾರಗಳನ್ನು ಸಲ್ಲಿಸೋಣ.
*✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments