ಒಳ್ಳೆಯ ಸಂಭಾಷಣೆ ನಡೆಸಲು ಈ ವಿಶೇಷಣಗಳು ಗುಣಗಳು ಅತ್ಯವಶ್ಯಕ...

*ಒಳ್ಳೆಯ ಸಂಭಾಷಣೆ ನಡೆಸಲು ಈ ವಿಶೇಷಣಗಳು ಗುಣಗಳು ಅತ್ಯವಶ್ಯಕ...*

ಕೋರಿಕೆ ತೀರಿಸಿಕೊಳ್ಳಲು ವಿದ್ವತ್ತು ಬೇಕು. ವಿದ್ವತ್ತು ಇದು ಅನೇಕ ಗುಣಗಳ ಸಮುದಾಯ. ಕಲಿಕೆ ಕುಶಲತೆ ಪ್ರಾವೀಣ್ಯ ಉಪಾಯ ನಿಪುಣತೆ ಜ್ಙಾನ ವಿಜ್ಙಾನ ಚತುರತೆ ಇತ್ಯಾದಿಗಳಲ್ಲ ಸೇರಿದಾಗ ವಿದ್ವಾನ್ ಎಂದೆನಿಸಿಕೊಳ್ಳುವವ. ಈ ವಿದ್ವಾನ್ ತನ್ನ ಕೊರಿಕೆಗಳನ್ನು ಈಡೇರಿಸಿಕೊಳ್ಳಲು ಸಮರ್ಥ.

ಒಬ್ಬ ವ್ಯಕ್ತಿಯ ಕೋರಿಕೆ "ಮಾತಾಡುವದು" ಎಂದುಕೊಂಡಾಗ, ಒಳ್ಳೆಯ ಸಂಭಾಷಕ ಎಂದೆನೆಸಿಕೊಳ್ಳ ಬೇಕಾದರೆ ಅನೇಕ ಗುಣಗಳನ್ನು ರೂಢಿಸಿಕೊಂಡವನಾಗಿರಬೇಕು. 

೧) ಮುಖಾಮುಖಿ -- ಮಾತಾಡುವವರ ಕಡೆಗೆ ಮುಖವನ್ನಷ್ಟೇ ತಿರುಗಿಸದೆ, ಸಂಪೂರ್ಣ ಶರೀರವನ್ಬೇ ತಿರಿಗಿಸಿ ಮಾತಾಡಿದರೆ ಮಾತಾಡುವವನಿಗೆ ಸಂತೋಷ. ಮುಖವನ್ನೇ ಆಚೆ ತಿರುಗಿಸಿದರೆ ಅವಮಾನ. 

೨) ಕುತೂಹಲ -- ಮುಂದೆ ಕುಳಿತು ಆಲಿಸುವದು, ಕುತೂಹಲದಿಂದ ಅಲಿಸುವದು, ಶ್ರದ್ಧೆಯಿಂದ ಕೇಳುತ್ತಿದ್ದೇನೆ ಎಂಬ ಭಾವ ಹುಟ್ಟಿಸುವದು ಇವೆಲ್ಲ ನಿಮ್ಮ ಮಾತನ್ನು  ಅರ್ಥ ಮಾಡಿಕೊಳ್ಳುತ್ತಿದ್ದೇನೆ ಎಂದು ಅಭಿವ್ಯಕ್ತಪಡಿಸುವ ಕಲೆಯಾಗಿರುತ್ತದೆ.  

೩) ನಮ್ಮ ಕಣ್ಣುಗಳು -- ಮುಖ್ಯ ವಿಷಯಗಳನ್ನು ಅಭಿವ್ಯಕ್ತ ಮಾಡುತ್ತಿರುವಾಗ ಕಣ್ಣಲ್ಲಿ ಕಣ್ಣಿಟ್ಟು ನೋಡುವದು. ತಾನು ಹೇಳುವಾಗಲೂ ಸಹ ಹಾಗೆ ಮಾಡುವದು, ಇದೂ ಒಂದು ಸಂಭಾಷಣೆಯ ಕಲೆ. ವಿಷಯಗಳನ್ನು ಮಾಟಿಸುವ ಕಲೆ. 

೪) ಮುಖ -- ಹೇಳುವ ವಿಷಯವನ್ನು ಆಧರಿಸಿ ನಮ್ಮ ಮುಖವನ್ನು ಆಡಿಸುವದೂ ಒಂದು ಕಲೆ. ಮುಖ ಆಡಿಸದೇ ಏಕಪ್ರಕಾರ ಮುಖವಿಟ್ಟು ಕುಳಿತರೆ ಅವರೆದುರಿಗೆ ಮಾತಾಡುವದೇ ಒಂದು ಬೋರ್.

೫) ಮಾತಾಡಬೇಕಾದಾಗ ಮಾತಾಡದಿರುವದು, ಮಾತಾಡುದಕ್ಕಿಂತಲೂ ಹೆಚ್ಚು ಮಾತಾಡುವದು ಇದು ಸಂಭಾಷಣೆಯಲ್ಲಿ ಸೂಕ್ತವಲ್ಲ. ಅಗತ್ಯ ಬಿದ್ದಾಗ ಮಾತ್ರ ಮಾತಾಡುವದೂ ಅಷ್ಟು ಸೂಕ್ತವಲ್ಲ. ಮಾತಾಡುವವರ ಸ್ವಭಾವವನ್ನು ಹಾವ ಭಾವವನ್ನು ಆಧರಿಸಿ ನಾವೂ ಬದಲಾಗುವದು ನಿವಾರ್ಯ. 

೬) ತಲೆ -- ಅಗತ್ಯಬಿದ್ದಾಗಲೆಲ್ಲ ತಲೆಯಾಡಿಸುತ್ತಾ... ಹೌದು ಹೌದು ಹೇಳುತ್ತಾ... ನೀವು ಹೇಳಿದ್ದು ಸರಿ... ಯಾಕೋ ಈ ವಿಷಯ ತಿಳಿಯಲಿಲ್ಲ... ಈ ತರಹದ ಅಭಿವ್ಯಕ್ತಿ ಎದುರಿಗಿರುವವರ ಉತ್ಸಾಹವನ್ನು ಚಿಗುರಿಸುತ್ತದೆ.

೭) ಪ್ರತಿಸ್ಪಂದನೆ -- ಎಲ್ಲದಕ್ಕೂ ಮುಖ್ಯವಾದದ್ದು ಪ್ರತಿಸ್ಪಂದನೆ. ಪ್ರತಿಸ್ಪಂದನೆ ಇಲ್ಲದಲ್ಲಿ ಇರುವ ಮಾತು ಕಲ್ಲಿನೊಟ್ಟಿಗೆ ಆಡಿದ ಮಾತು ಎರಡೂ ಸಮ. ಅನಗತ್ಯ ವಿಷಯಗಳಿಗೆ ಸ್ಪಂದಿಸುವದೂ ವಾದಿಸುವದೂ ವ್ಯರ್ಥ. 

೮) ಆಂತರ್ಯ -- ಮಾತಾಡುವವರ ಮನಸದಸಿನ ಭಾವನೆ, ಪ್ರಕೃತ ವಿಷಯ ಇವುಗಳಕಡೆ ಗಮನ ಕೊಡುವದು ಅನಿವಾರ್ಯ. ಗಮನ ಹರಿಸದಿದ್ದರೆ ಸಂಭಾಷಣೆ ವಿಫಲವಾಗಿ ಬಿಡುತ್ತದೆ. 

೯) ಸಮಯ ಪ್ರಜ್ಙೆ -- ಎದುರಿರುವ ವ್ಯಕ್ಯಿಗೆ ಮಾತಾಡಲು ಸಮಯ ಕೊಡಬೇಕು. ನಮ್ಮ ಮಾತು ಅತಿ ಸುದೀರ್ಘವಾಗಬಾರದು. ಮಾತಾಡದೇ ಇರಬಾರದು. ಎಲ್ಲರೂ ಒಮ್ನೆಲೆ ಮಾತಾಡಬಾರದು. ತಲೆ ಕೊರಿತಾ ಕೂಡಬಾರದು. ಆಡಿದ ಮಾತುಗಳೇ ರಿಪೀಟ್ ಇರಬಾರದು. ಈ ಎಲ್ಲದರ ಕಡೆಯೂ ಗಮನ ಹರಿಸಿರಬೇಕು. ಯಾರ ಜೊತೆ ಎಷ್ಟೊತ್ತು ಮಾತಾಡುವದು ಮೊದಲೆ ನಿಶ್ಚಯಿಸಿಕೊಂಡಿರಬೇಕು. 

೧೦ ಭಾಷೆ-- ಎಲ್ಲದರ ಮೇಲೆ ಎಲ್ಲರಿಗೂ ಅರ್ಥವಾಗುವ ಭಾಷೆ ನಮ್ಮ ಆಯ್ಕೆ ಆಗಿರಬೇಕು. ನಮ್ಮ ಮೇಲೆ ಗೌರವ ಆದರ ಭರವಸೆ ವಿಶ್ವಾಸ ಮೂಡಿಸುವಂತಿರಬೇಕು. ನಮ್ಮ ಜೊತೆಗೆ ಮಾತಾಡಬೇಕು ಎಂಬ ಭಾವ ಮೂಡಿರಬೇಕು. ಅವರ ಭಾರವಾದ ಮನಸ್ಸು ನಮ್ಮೆದರು ಮಾಡುತ್ತಿರುವಾಗಲೇ ಹಗುರಾಗಿರಬೇಕು. ಜೀವನಕ್ಕೆ ಪ್ರೋತ್ಸಾಹ ಸಿಗುವ ಮಾತುಗಳೇ ಇರಬೇಕು. ಕುಗ್ಗಿಸುವ, ತೆಗಳುವ, ಅವಮಾನಿಸುವ, ಮಾತುಗಳೇ ಇರಬಾರದು. ಕಳಕಳಿಯ ಮಾತುಗಳು ಇರಲೇ ಬೇಕು. 

ಕನಿಷ್ಠ ಈ ಹತ್ತು ಗುಣಗಳನ್ನು ರೂಢಿಸಿಕೊಂಡವ, ಈ ವಿಷಯದಲ್ಲಿ "ವಿದ್ವಾನ್" ಎಂದೆನಿಸಿಕೊಳ್ಳುತ್ತಾನೆ. ಸಂಭಾಷಣೆಯಲ್ಲಿ ಯಶಸ್ವೀಯಾಗುತ್ತಾನೆ. ತನ್ನ ಕೋರಿಕೆಯನ್ನು  ಈಡೇರಿಸಿಕೊಳ್ಳುತ್ತಾನೆ. 

"ಸಂಭಾಷಣೆಯಲ್ಕಿ ಯಶಸ್ವಿಯಾಗ ಬೇಕಾದರೇ ಇಷ್ಟು ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದಾದಮೇಲೆ, ಜೀವನದಲ್ಲಿ ಇನ್ನೆಷ್ಟು ಕೋರಿಕೆಗಳನ್ನು ಈಡೇರಿಸಿಕೊಳ್ಳಬೇಕಾಗಿದೆ, ಅದಕ್ಕಾಗಿ ಇನ್ಬೆಷ್ಟು ಗುಣಗಳನ್ನು ರೂಢಿಸಿಕೊಳ್ಳಬೇಕು" ಎಂದು ಒಂದು ಬಾರಿ ಯೋಚಿಸಲೇಬೇಕು .......

ಗುಣಪೂರ್ಣರಾಗಲು, ಗುಣವಂತರಾಗಲು ನಿತ್ಯವೂ *ಅನಂತಗುಣಪೂರ್ಣನಿಗೆ ನಮೋನಮಃ* ಎಂದು ಶ್ರೀಹರಿಯನ್ನು ಚಿಂತಿಸೋಣ. ಇರುವ ನೂರಾರು ಸಾವಿರಾರು ಗುಣಗಳನ್ನು ಅಭಿವ್ಯಕ್ತಗಿಳಿಸುತ್ತಾನೆ. ನಮ್ಮನ್ನು "ವಿದ್ವಾನ್" ಎಂದು ಮಾಡಿ, ಎಲ್ಲ ಕಾರ್ಯಗಳಲ್ಲಿಯೂ ಯಶಸ್ವಿಯನ್ನಾಗಿ ಮಾಡುತ್ತಾನೆ.

*✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Unknown said…
Superb. Very well written. Your penning style is simple , apt, and crisp. More so understable . Thanks for sharing . Pranams Achsrya. 🙏🙏🙏
NYASADAS said…
ತುಂಬ ತುಂಬ ಸಂತೋಷ

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*