*ಧರ್ಮವಿಲ್ಲಿ ಕಂಡರೇ ಇದು ಇವರ ಶಕ್ತಿಯೇ*



*ಧರ್ಮವಿಲ್ಲಿ ಕಂಡರೇ ಇದು ಇವರ ಶಕ್ತಿಯೇ*

ಧರ್ಮವನ್ನು ನಂಬಿದ, ಧರ್ಮವನ್ನು ನೆಚ್ಚಿದ, ಧರ್ಮದಲ್ಲಿ ಮುಳುಗಿದ, ಧರ್ಮದ ಸಾಕಾರ ಮೂರ್ತಿ ಎಂತೆ ಇರುವ ನಮ್ಮ‌ ಪರಮಗುರುಗಳು. *ಮಹಾ ಆಚಾರ್ಯರು. (ಪರಮಪೂಜ್ಯ ಮಾಹುುಲೀ ಗೋಪಾಲಾಚಾರ್ಯರು.

ಆ ಮಹಾಗುರುಗಳು ನಮಗೆ ಅವರು ಅನುಗ್ರಹಿಸಿದ ಕೆಲ ಮಾತುಗಳನ್ನು ಪೂಜ್ಯ ಆಚಾರ್ಯರು ಸಂಗ್ರಹಿಸಿ ಅನುಗ್ರಹಿಸಿದ್ದಾರೆ‌. ಆ ಮಾತುಗಳನ್ನು ಒಮ್ಮೆ ಮೆಲಕು ಹಾಕೋಣ.
ಧರ್ಮ ಎಲ್ಲದಕ್ಕೂ ಅಡಿಪಾಯ. ಎಲ್ಲರಿಗೂ ಅಡಿಪಾಯ. ಧರ್ಮ ಎಷ್ಟು ಸ್ಥಿರವಾಗಿ ಹಾಗು ಆಳವಾಗಿ ದೃಢವಾಗಿ ಇದೆ ಅಷ್ಟು ಸುಖ ಸಾಧನ, ಗುಣ, ಇತ್ಯಾದಿಗಳ flor ಗಳು ಬೆಳಿತಾ ಹೋಗುತ್ತವೆ.

೧) ಸತ್ಯ, ನೀತಿ, ಧರ್ಮ ಇವುಗಳಿಗೆ ತಾತ್ಕಾಲಿಕವಾಗಿ ಸೋಲು ಆದಂತೆ ಕಂಡರೂ *ವಿಷ್ಣುಭಕ್ತ -  ಅಸತ್ಯ, ಅನ್ಯಾಯ ಅಧರ್ಮಗಳಿಗೇ ಜಯ* ಎಂದು ಕನಸಿನಲ್ಲೂ ಭಾವಿಸಲಾರ. ಇದು ಧಾರ್ಮಿಕನಿಗೆ ಇರುವ ದಾರ್ಢ್ಯತೆ.

೨) "ಧರ್ಮವಿದು ನಂಬುಗೆಯ ಪ್ರದರ್ಶನವಲ್ಲ. ಹೊಟ್ಟೆಪಾಡಿಗಾಗಿ ಮಾಡುವ ಉದ್ಯೋಗವೂ ಅಲ್ಲ." ಇದು ಶುದ್ಧ ಧಾರ್ಮಿಕನ ನೀತಿ.

*ಸರ್ವೇಶ್ವರ, ಸರ್ವಸಮರ್ಥ, ಅಚಿಂತ್ಯಶಕ್ತಿಯ ದೇವರ ಕುರಿತಾದ ತೀರ ಅಂತರಂಗದ, ತುಂಬ ಆಳವಾದ, ಬಾಳಿನ ನಿರ್ಧಾರ. ಬದುಕಿನ ನಿಶ್ಚಯವೇ ಧರ್ಮ.* ಈ ವಿಚಾರ ಧಾರ್ಮಿಕನ ನರನಾಡಿಗಳಲ್ಲಿ ಸುಸ್ಥಿರ..

೩) ಧರ್ಮ ನಮ್ಮ ಆಪತ್ತಿನಲ್ಲಿ ಆಸರೆ. ಸಂಪತ್ತಿನಲ್ಲಿ ಮಾರ್ಗದರ್ಶಿ. ಇದು ಧರ್ಮಕ್ಕೆ ಇರುವ ಸ್ಥಾನಮಾನ.

೩) "ಸಜ್ಜನಿಕೆ, ಸತ್ಯವಂತಿಕೆ, ಸಂತಸ" ಇವುಗಳ ಮೂಲ ನೆಲೆಯೇ ಪ್ರಾಮಾಣಿಕ ಧರ್ಮ. ಈ ನಿರ್ಧಾರ ಸಣ್ಣವಯಸ್ಸಿಗೇ ದೃಢವಾಗಬೇಕು.

೪) *ಭಕ್ತಿ ಇಲ್ಲದಾಗ ಭಾರವಾದ ಧರ್ಮ, ಭಕ್ತಿ ಮೂಡಿದಾಗ ಸೌಭಾಗ್ಯವೆನಿಸುತ್ತದೆ.* ಧರ್ಮ ಯಾರಿಗೆ ಭಾರವಾಗಿದೆ, ಯಾರು ಧರ್ಮವನ್ನು ಸೌಭಾಗ್ಯ ಎಂದು ಭಾವಿಸಿದ್ದಾರೆ ಅದರಮೇಲೆ ಅವರೆಷ್ಟು ಭಕ್ತರು ಎನ್ನುವದು ದೃಢವಾಗುತ್ತದೆ.

೫) "ಭಕ್ತಿ ಹೀನಾವಸ್ಥೆಯಲ್ಲಿ ಇರುವಾಗ, ಮೇಲ್ನೋಟಕ್ಕೆ ಇರುವ ಧರ್ಮ ಭಕ್ತಿ ಚಿಗುರಿದಾಗ ಗಾಢವಾಗಿ ಬೇರೂರುತ್ತದೆ."

೬) *ಭಕ್ತಿ ಇಲ್ಲದಾಗ ಅಲ್ಪವಾದ ಧರ್ಮ, ಭಕ್ತಿ ಬೆಳೆದಾಗ ವಿಪುಲವಾಗಿ ಹರಡುತ್ತದೆ.* ಫಲಕಾರಿಯಾಗುತ್ತದೆ. ಒಂದೇ ಫಲವನ್ನು ಅಲ್ಲ ಆಶ್ರಯಿಸಿದ ಸಾವಿರಾರು ಜನರಿಗೂ ತಣಿಸುವಷ್ಟು ಫಲಗಳನ್ನು ಕೊಡುತ್ತದೆ.

೭) "ದೇವರ ಭಕ್ತಿ ಇಲ್ಲದೆ ಮಾಡುವ ಕರ್ಮಗಳು ಕರ್ತವ್ಯಗಳು ಕೇವಲ ತೋರಿಕೆಗಾಗಿ ಇರುತ್ತವೆ. ಆ ಕರ್ಮ  ದೇವರ ಪ್ರೀತಿಯಿಂದ ಒಡಗೂಡಿದಾಗ ಧರ್ಮವೆಂದಾಗುತ್ತವೆ. ಆ ಧರ್ಮವೇ ಅಂತರಂಗದ ಸಂತಸದ ಸೆಲೆಗೆ ಕಾರಣವಾಗುತ್ತವೆ." ಧಾರ್ಮಿಕನ ಮನೋಭಾವ ಹೀಗರಲೇಬೇಕು. ಆಗಲೇ ಅವ ಯಶಸ್ವಿಯಾಗುವ.

೮) *ಕರ್ತವ್ಯವನ್ನು ಮಾಡುವಲ್ಲಿ ಎಳ್ಳಿನಷ್ಟೂ ಪ್ರಯತ್ನ ಕಡಿಮೆ ಇರಬಾರದು, ಫಲ ದೊರೆತಾಗ ಯಾವ ಅಂಶದಲ್ಲಿಯೂ ವಿಮನಸ್ಕನಾಗಬಾರದು*  ಇದು ಧರ್ಮದ ಬುನಾದಿಯ ಅಂಶ.

ಇಂತಹ ಧರ್ಮ ಬೋಧಕರು ತುಂಬ ವಿರಳ. ತಮ್ಮ ಜೀವನದಲ್ಲಿ ಇಂತಹ ನೂರಾರು ಸಾವಿರಾರು ಮಾತುಗಳನ್ನು ತಿಳಿಸಿ, ತಮ್ಮ ನಂಬಿದ ಸಾವಿರಾರು ಲಕ್ಷ ಲಕ್ಷ ಜನರಿಗೆ ಧರ್ಮಾಚರಣೆಯಲ್ಲಿ ಆಸಕ್ತಿ ಶ್ರದ್ಧೆ ಬೆಳಿಸುವ ಮಹಾತ್ಮ *ನಮ್ಮ ಪರಮ ಗುರುಗಳು.*

*ದೇವರಲ್ಲಿ ಅಚಲ ಭಕ್ತಿ. ಅಸದೃಶವಾದ ಗುರು ಭಕ್ತಿ. ಇವುಗಳೇ ಸಕಲ ಸಿದ್ಧಿಗಳ ಬುನಾದಿ. ಎಲ್ಲ ಸಾಧನಗಳ ಬೇರು. ಆಪತ್ತಿಗೆ ರಕ್ಷಕವಾಗಿದ್ದವು.* ಅಂತೆಯೆ ಎಲ್ಲದರಲ್ಲಿ ಜಯ ಯಶಸ್ಸು ಗುರು ವಾಯು ಭಗವತ್ಪ್ರೀತಿಗಳು ಸುರಿದು ಬಂದವು. ಎಂದು ತಿಳುಹಿಸಿ ಕೊಡುತ್ತಾರೆ ಪೂ‌. ಆಚಾರ್ಯರು.

ಆ ಮಹಾಗುರುಗಳು ಉಪದೇಶಿಸಿದ ಧರ್ಮ ಹಾಗೂ ಭಕ್ತಿಯಲ್ಲಿಯ ಕೆಲವುಗಳನ್ನಾದರು ಮಾಡುವ ಬೆಳಿಸಿಕೊಳ್ಳುವ ಸೌಭಾಗ್ಯ ಒದಗಿಸಿ ಕೊಡಲಿ ಎಂದು ನಮ್ಮ ಗುರುಗುಳಲ್ಲಿ, *ಇಂದಿನ ಆರಾಧ್ಯ ದೈವರಾದ ಪರಮ ಗುರುಗಳಲ್ಲಿ* ಕೋಟಿ ಕೋಟಿ ನಮನ ಪೂರ್ವಕ ಬೇಡುವೆ.

*✍🏼✍🏼✍🏼ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.

Comments

Anonymous said…
This comment has been removed by a blog administrator.
Anonymous said…
Each word and each sentence has meaningful, hatsoff for ur knowledge...it's really really meaningful and truthfulness

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*