*ವಿಜಯದಾಸರ ಸುಳಾದಿಯಲ್ಲಿ ವಿಜ್ಙಾನ*
*ವಿಜಯದಾಸರ ಸುಳಾದಿಯಲ್ಲಿ ವಿಜ್ಙಾನ*
"ಜ್ಙಾನ ದೇವರವರನ್ನಾಗಿ ಮಾಡಿದರೆ, ವಿಜ್ಙಾನ ದೇವರ ಸನಿಹ ಕರೆದೊಯ್ಯುತ್ತದೆ" ಅಂತೆಯೇ ವಿಜ್ಙಾನಕ್ಕೆ ನಮ್ಮ ಸಿದ್ಧಾಂತದಲ್ಲಿ ತುಂಬ ಮಹತ್ವ.
ದೇವರು ಸೃಷ್ಟಿಕರ್ತ, ಕರುಣಾಪೂರ್ಣ, ಸರ್ವಪ್ರೇರಕ, ಸರ್ವಾಪತ್ಪರಿಹಾರಕ ಇತ್ಯಾದಿಯಾಗಿ ಸಾಮಾನ್ಯವಾದ ತಿಳುವಳಿಕೆ "ಜ್ಙಾನ" ಎಂದೆನಿಸಿಕೊಂಡರೆ, ಹೇಗೆ ಸೃಷ್ಟಿ ಮಾಡಿದ, ಯಾವೆಲ್ಲತರಹದಲ್ಲಿ ದೇವರ ಕರುಣೆ ಇದೆ, ಹೇಗೆಲ್ಲ ಆಪತ್ತುಗಳನ್ನು ಪರಿಹರಿಸಿದ್ದಾನೆ ಇತ್ಯಾದಿಯಾಗಿ ಬಿಡಿಬಿಡಿಯಾಗಿ ತಿಳಿಯುವದೇನಿದೆ ಅದು "ವಿಜ್ಙಾನ" ಎಂದೆನಿಸಿಕೊಳ್ಳುತ್ತದೆ.
ಭಕ್ತರಾದ ನಾವು , ನಾವು ಮಾಡುವ ಭಕ್ತಿ ಬೆಟ್ಟಷ್ಟು ಇದೆ, ದೇವರು ನಮಗೇನು ಮಾಡಿಲ್ಲ ಎಂದು ಪದೆ ಪದೆ ಅನಿಸುವದಿದೆ. ಆದರೆ "ದೇವ ತಾ ಮಾಡಿದ ಕರುಣೆಗಿಂತಲೂ ನಮ್ಮ ಭಕ್ತಿ ಹೆಚ್ಚು ಇದೆ" ಎನ್ನುವ ಮಾತಿಗೆ ರಾಮಾ ಬ್ರಹ್ಮರಿಂದ ಆರಂಭಿಸಿ ತೃಣ ಪರ್ಯಂತ ಒಬ್ಬ ಜೀವನೂ ನಿದರ್ಶನವಾಗಿ ಸಿಗುವದೇ ಇಲ್ಲ. ಅಷ್ಟು ಅಪಾರ ಕರುಣೆ ದೇವರದ್ದು ಇದೆ.
ನನ್ನ ಭಕ್ತಿ ಬೇಡಿಕೆಗಳ ಈಡೇರಿಕೆಗೆ ಇದೆ. ಬೇಡಿದ್ದು ನಾಲಕು. ದೇವ ತಾ ಬೇಡದೆ ಕೊಟ್ಟಿದ್ದು ನೂರು. ಅತ್ಯದ್ಭುತವಾದ ಮೆದಳು, ಅತಿ ವಿಚಿತ್ರವಾದ ಮನಸ್ಸು, ಉತ್ಕೃಷ್ಟ ಕಣ್ಣು, ಕಿವಿ, ಮಾತು,ಸ್ನೇಹ, ಪ್ರೀತಿ, ಬಾಂಧವ್ಯ, ರಕ್ತ, ಪ್ಲೇಟ್ಲೆಟ್ಸ, ಮಜ್ಜ, ಕೋಟಿಕೋಟಿ ನರಗಳು, ಆ ರಕ್ತದ ಶುದ್ಧೀಕರಣ, ಹೀಗೆ ಎಣಿಸುತ್ತಾ ಹೋದರೆ ದೇವರು ಕೊಟ್ಟಿದ್ದು ಮುಗಿತು ಎಂದಾಗುವದೇ ಇಲ್ಲ. ನಾವು ಮುಗಿಸಬೇಕಷ್ಟೆ.
ನೀರು ಮೇಲ್ಮುಖವಾಗಿ ಹರಿಯದು. ಆದರೆ ವೃಕ್ಷದ ಬೇರಿಗೆ ಕೊಟ್ಟ ಶಕ್ತಿ ಇಷ್ಟು ಅಗಾಧ ಎಂದರೆ ಭೂಮಿಯಲ್ಲಿಯ ನೀರನ್ನು ತನ್ನ ಬೇರುಗಳ ಮುಖಾಂತರ, ತನ್ನ ಕೊನೆಯ ಎಲೆಯವರೆಗೂ ಮುಟ್ಟಿಸುತ್ತದೆ ಎಂದರೆ ಈ ಶಕ್ತಿ ದೇವರಲ್ಲದೆ ಇನ್ನಾರು ಕೊಟ್ಟಾರು.
ಒಂದು ಮಂಗವಿದೆ. ಆ ಮಂಗಗೆ ಈಗ ಹುಟ್ಟಿದ ಮರಿಮಂಗವಿದೆ. ಆ ಮರಿ ಎಸುಳೆ ತಾಯಿಯ ಉದರವನ್ನು ಇಷ್ಟು ಬಿಗಿಯಾಗಿ ಹಿಡಿದಿರತ್ತೆ ಎಂದರೆ, ಮಂಗ ಗುಡ್ಡದಿಂದ ಗುಡ್ಡ, ಗಿಡದಿಂದಕ್ಕೆ ಜಿಗಿದರೂ ತನ್ನ ಕೂಸಿಗೆ ಏನಾಗಲ್ಲ ಎಂಬ ಭರವಸೆ ತಾಯಿಗೆ ಮೂಡುವಷ್ಟು ಸುಭದ್ರರೀತಿಯಲ್ಲಿ ಹಿಡಿದಿರುತ್ತದೆ. ಈಗತಾನೆ ಹುಟ್ಟಿದ ಆ ಕೂಸು ಮಂಗಗೆ ಕೊಟ್ಟ ಶಕ್ತಿ ಎಷ್ಟದ್ಭುತ ಅಲ್ಲವೇ.
ದೇವರ ಈ ಕ್ಯಾಬಿನೆಟ್ ಅಲ್ಲಿ ದೇವ ತಾನು ಹುಟ್ಟಿಸಿದ ಒಂದೊಂದು ವಸ್ತುವೂ ಪರಮಾದ್ಭುತವಾದದ್ದೆ. ಒಂದು ವಸ್ತುವೂ ಕಚಡ ವಸ್ತುವಿಲ್ಲ. ಯಾವದರಲ್ಲಿ ಏನು ಶಕ್ತಿ ಇಟ್ಟಿದ್ದಾನೆ ದೇವನಿಗೇ ಗೊತ್ತು. ಯಾವದು ಯಾವ ಕಾಲಕ್ಕೆ ಉಪಯೋಗಕ್ಕೆ ಬರತ್ತೆ ಎನ್ನುವದನ್ನು ಯಾವು ಯೋಚಿಸಬೇಕಷ್ಟೆ.
ಈ ಕ್ರಮದಲ್ಲಿ ವಿಚಾರ ಮಾಡ್ತಾ ಹೋಗಿ, ಸುಳಾದಿ ಹಾಗೂ ಶ್ರೀಮದಾಚಾರ್ಯರ ಶಾಸ್ತ್ರಗಳಿಂದ ತಿಳಿದಂತೆ ತಿಳಿದಂತೆ ವಿಜ್ಙಾನ ಬೆಳಿಯುತ್ತಾ ಸಾಗುತ್ತದೆ. ನಾನು ವಿಜ್ಙಾನಿಯಾದರೆ ದೇವರ ಸನಿಹ ಹೋಗಲು ಆಗುತ್ತದೆ. ದೇವರ ಸನಿಹ ನಾ ಹೋದರೆ ದೇವ ತಾ ಬಿಗಿದಪ್ಪಿಕೊಳ್ಳುತ್ತಾನೆ.
*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ ಸಿರವಾರ.
Comments
most individuals wіll go along with уoᥙr views on this
site.