*ಆಸೆ ಹಾಗೂ ಸಂಕಲ್ಪ.....*
*ಆಸೆ ಹಾಗೂ ಸಂಕಲ್ಪ.....*
ಪೂ. ಮಾಹುಲೀ ಆಚಾರ್ಯರ ಉಪನ್ಯಾಸದಿಂದ
ಮನಸ್ಸಿನ ವಿವಿಧ ಆಯಾಮುಗಳಲ್ಲಿ "ಆಸೆ ಹಾಗೂ ಸಂಕಲ್ಪ" ಗಳೂ ಒಂದು ಮಹತ್ವದ ಮನೋ ವಿಭಾಗಗಳಾಗಿವೆ. "ಇದು ಬೇಕು" ಎನ್ನುವದು ಆಸೆ ಆದರೆ, "ಇದನ್ನು ಮಾಡುವೆ" ಎಂಬುವ ದೃಢ ನಿರ್ಧಾರವೇ ಸಂಕಲ್ಪ ಎಂದೆನಿಸಿಕೊಳ್ಳುತ್ತವೆ.
*ಆಸೆಗಳೆಂಬ ಗಿಡಗಳಿಗೆ ಸಂಕಲ್ಪವೆಂಬ ನೀರು ಬೇಕು...*
ನಮ್ಮ ಬದುಕು, ನಮ್ಮ ಜೀವನ ಇರುವದೇ ಆಸೆಗಳಮೇಲೆ. ಆಸೆಗಳೇ ಇಲ್ಲದಾಗಿದ್ದರೆ ಹತಾಶನಾಗಿ ಎಂದೋ ಕೊನೆಯುಸಿರು ಎಳದಾಗಿರುತ್ತಿತ್ತು. ಆಸೆಗಳು ಈಡೇರುವದು ಸಂಕಲ್ಪವೆಂಬ ಮಳೆಗೆರೆದಾಗ, ನೀರೆರೆದಾಗ ಮಾತ್ರ.
ಸತ್ಸಂಕಲ್ಪ ನಮ್ಮದಾದರೆ ಪುಣ್ಯದ ಗಿಡ ವಿಶಾಲವಾಗಿ ಬೆಳೆಯುತ್ತದೆ. ಅಲ್ಲಿ ಸಿಗುವ ಹಣ್ಣುಗಳೂ ಹಿತ, ಮಧುರ, ಪೌಷ್ಟಿಕ, ಗುಣಯುಕ್ತವೂ ಆಗಿರುತ್ತದೆ. ಆ ಹಣ್ಣಿನಿಂದ ಮತ್ತೊಂದು ಆ ತರಹದ ಗಿಡವೇ ಬೆಳಿಯುತ್ತದೆ.
ನಮ್ಮ ಆಸೆಯೇ ಕೆಟ್ಟದ್ದು ಆಗಿದ್ದರೆ, ಸಂಕಲ್ಪವೆಂಬ ನೀರು ಮುಳುಗಂಟಿಯ ಜಾಲಿಗಿಡವನ್ನೇ ಬೆಳಿಸುತ್ತದೆ. ಒಂದೇ ಒಂದು ಗಿಡ ದಾರಿಯುದ್ದಕ್ಕೂ ಬೆಳಿಸುತ್ತಾ ಹೋಗುತ್ತದೆ. "ಮುಟ್ಟಿದರೆ ಮುಳ್ಳು, ತಿಂದರೆ ಕಹಿ" ಎಲ್ಲರಿಂದಲೂ ಅವಮಾನಿತ, ತಿರಸ್ಕೃತ ಎಂದಾಗುತ್ತದೆ. ಹಾಗೆ ನಮ್ಮ ಸ್ಥಿತಿಯೂ ಆಗುತ್ತದೆ.
ನಮ್ಮನ್ನು ಮೇಲಸ್ತರಕ್ಕೆ ಒಯ್ಯುವ ಕೆಲ ಸದಾಸೆಗಳಿಗೆ ದೃಢ ಸಂಕಲ್ಪ ಅನಿವಾರ್ಯ, ನಮ್ಮನ್ನು ಪಾತಾಳಕ್ಕೆ ಕೆಡುವ ಕೆಲ ದುರಾಸೆಗಳಿಗೆ ಸಂಕಲ್ಪ ಮಾಡದಿರುವದೇ ಸೂಕ್ತ.
"ಸೂಕ್ತ ಯಾವದು, ಮೇಲೊಯ್ಯುವದು ಯಾವದು. ಸೂಕ್ತವಲ್ಲದು ಯಾವದು, ಪಾತಾಳಕ್ಕೆ ಕೆಡುವದು ಯಾವದು" ಎಂದು ನಿರ್ಧರಿಸುವದು ಬುದ್ಧಿ. ಹೃದಯಕ್ಕೆ ಪೆಟ್ಟು ಬಿದ್ದಾಗಲೇ ಬುದ್ದಿ ಸಾಮಾನ್ಯವಾಗಿ ಕೆಲಸ ಮಾಡಲು ಆರಂಭಸುವದು. *ಹೃದಯಕ್ಕೆ ಪೆಟ್ಟು ಬೀಳುವದು ಕೆಟ್ಟ ಮೇಲೆಯೇ.......*
*ಸತ್ಯ ಕಾಮಃ - ಸತ್ಯ ಸಂಕಲ್ಪಃ*
ವಿಷ್ಣು ಸಹಸ್ರ ನಾಮದಲ್ಕಿ ಬಂದ ನಿತ್ಯ ಈ ಎರಡು ನಾಮಗಳಿಂದ ನಿತ್ಯ ಚಿಂತಿಸಿದರೆ, ಸತ್ಯ ಕಾಮ ಸೂಕ್ತವಾದ ಕಾಮನೆಗಳನ್ನು ಆಸೆಗಳನ್ಬು ಹುಟ್ಟಿಸುವ. ಸತ್ಯ ಸಂಕಲ್ಪ ಈ ಸಕ್ಕಾಮನೆಗಳನ್ಬು ಸಾಧಿಸಿ ತೀರಿಸುವ ದೃಢ ನಿರ್ಧಾರವನ್ನೂ ಮಾಡಿಸುವ.
ಉತ್ತಮ ಸಂಕಲ್ಪಗಳಿಗೆ ಅತ್ಯುತ್ತಮ ನಿರ್ಧಾರ. ಆಗ ಬೇಳಿಯುವದು ಶ್ರೀಗಂಧವೃಕ್ಷ. ಸ್ವಯ ಸುಗಂಧ ಭರಿತ. ಸನಿಹ ಬಂದವರಿಗೂ ಸುಗಂಧ ವಾಸನೆ. ಕೊನೆಗೆ ದೇವರ ಪಾದಕ್ಕೆ ಗಂಧ ಸಮರ್ಪಿತವಾಗತ್ತೆ.
ದುರಾಸೆಗಳಿಗೆ ದೃಢ ನಿರ್ಧಾರ, ಅದರಿಂದ ಮುಳ್ಳಿನ ಜಾಲೀಗಿಡ. ಸ್ವಯಂ ತನ್ನ ಮೈ ಮೇಲೆ ಮುಳ್ಳುಗಳು. ಮುಟ್ಟಿದವರಿಗೂ ಚುಚ್ಚುವದು. ತಿಂದರೂ ಕಹಿ. ಉತ್ತಮ ಕಾಮಬೆಗಳಿಗೆ ಅವಶ್ಉ ದೃಢ ನಿರ್ಧಾರ ಅನಿವಾರ್ಯ. ದುರಾಸೆಗಳಿಗೆ ಸಂಕಲ್ಪ ನಿರ್ಧಾರ ಮಾಡದಿರುವದೇ ಸೂಕ್ತ.
"ಯಾವದು ಬೇಕೋ - ಹೇಗಿರಬೇಕೋ - ಏನಾಗಬೇಕೋ" ಇವುಗಳು ನಮ್ಮ "ಆಸೆ" ಹಾಗೂ "ದೃಢ ನಿರ್ಧಾರ" ಇವುಗಳನ್ನು ಅವಲಂಬಿಸಿದೆ. ಮುಂದಿನದು *ಸತ್ಯಕಾಮ ಸತ್ಯಸಂಕಲ್ಪನ* ವಿಚಾರ.
*✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments