*ಕೊಡಗನ್ನ ಸಿಂಹ ಮಾಡಿದ ಗುರುವಿರೆ.....ಏನೇನು ಭಯವಿಲ್ಲ ನಮಗೆ*

* ಕೊಡಗನ್ನ ಸಿಂಹ ಮಾಡಿದ ಗುರುವಿರೆ..... ಏನೇನು ಭಯವಿಲ್ಲ ನಮಗೆ*

ಗುರುಗಳು ಎಂದರೆ ಒಂದು ಸಕಾರಾತ್ಮಕ ಬೋಧನೆಯ ಗಣಿ ಎಂದರೆ ತಪ್ಪಾಗಲಿಕ್ಕಿಲ್ಲ.  ನಮ್ಮಿಂದೇನಾಗಲ್ಲ. ನಾವೇನು ಮಾಡಲ್ಲ. ನಮ್ಮಿಂದ ಸಾಧ್ಯವಿಲ್ಲ. ಆದರೆ ನೋಡುವ ನುಣುಚಿಕೊಳ್ಳುವ ನಮಗೆ ನಿನ್ನಿಂದ ಎಲ್ಲ ಸಾಧ್ಯವಿದೆ. ನಿನ್ನಿಂದ ಎಲ್ಲವೂ ಆಗತ್ತೆ. ಆದರೆ ಗೀದರೆ ಇಲ್ಲ, ಮಾಡಿ ನೋಡು ಕೈಯಲ್ಲಿ ಫಲವೇ ಎಂದು ಬೋಧಿಸುವವರು ಉದ್ಭೋಧಿಸುವವರು ಗುರುಗಳೇ. ಅಂತೆಯೇ ನಮ್ಮ ಪ್ರಾಂತದವರೇ ಆದ ಅಸ್ಕಿಹಾಳ ಗೋವಿಂದ ದಾಸರು ...
*ಕೊಡಗನ್ನ ಸಿಂಹ ಮಾಡಿದ ಗುರುವಿರೆ...* ಎಂದು ಬೋಧಿಸಿದರು. 

ಕೊಡಗ ಎಂದರೆ ಕೋತಿ ಮಂಗ. ಮಂಗ ನೇರ ಉದಹಾರಣೆದರೆ ಮಾನವನೇ. ಮನಾವನ ಮನಸ್ಸು ಇಂದ್ರಿಯ ಮಂಗನಂತೆಯೇ ಚಂಚಲ. *ಸ್ಥಿರವಾಗಿ ಉಳಿಯುವ ಗೆಳೆತನ ಮಾನವನದು ಅಲ್ಲ, ಯಾಕೆಂದರೆ ಮಾನವನ ಮನಸ್ಸು ಊಸರವಳ್ಳಿಯ  ಹಾಗೆ  ಬಣ್ಣ ಬದಲು ಆಗತ್ತೆ, ಮಂಗನ ಹಾಗೆ ಚಂಚಲವಾಗತ್ತೆ*  ಎಂದು ಕವಿ ನುಡಿದ. ಹಾಗೆ ನಮ್ಮ ಮನಸ್ಸು ಕೋತಿ ಮನಸ್ಸು ಇದ್ದ ಹಾಗೆ. 

ಸಾಧಿಸಲು ಹಂಬಲ ಇರುವ ಮಾನವನಿಗೆ ಚಾಂಚಲ್ಯ ಫಲಕೊಡುವದಿಲ್ಲ. ಅವನನ್ನು ಅಯಶಸ್ವಿ ಮಾನವನನ್ನಾಗಿಸುತ್ತದೆ. ಅವನು ಎಷ್ಟೇ ಬುದ್ಧಿವಂತ, ಚಾಣಾಕ್ಷ, ಪ್ರತಿಭಾವಂತನೇ ಆಗಿರಲಿ ಚಂಚಲನಾಗಿದ್ದರೆ ಅದ್ಯಾವದೂ ಉಪಯೋಗಕ್ಕೆ ಬಾರದು. ಯಾವ ಕೆಲಸದಲ್ಲಿಯೂ ಯಶಸ್ವಿ ಎಂದಾಗಲಾರ. ಎಲ್ಲದರಲ್ಲಿಯೂ ಆಡುವ ಮಾತು, ಮಾಡಿದ ವಿಚಾರಗಳಲ್ಲಿ ಫೇಲ್ ಆಗ್ತಾ ಸಾಗುವ. 

ಇಂಥ ಚಂಚಲ ಮನಸ್ಸು ಉಳ್ಳವರು ಮಾನವರು. ಮಂಗನಂತಹ ಮನಸ್ಸು ಉಳ್ಳವರು ಮಾನವರು. ಇಂತಹ ಮಾನವರನ್ನೂ ಸಹ ಸಿಂಹದಂತೆ ಮಾಡಿ ದೇಶದ ರಾಜ್ಯವನ್ನೇ ಆಳುವ ವೈಭವ ಕೊಡುವವರು ಗುರುಗಳೇ *ಕೃಮಿ ಇಂದ ರಾಜ್ಯವಾಳಿಸಿದೆ* ಎಂದು ಹೇಳಿದಂತೆ ಆ ಶಕ್ತಿ ಕೊಡುವವರು ಗುರುಗಳೇ ಎಂದು ಗೋವಿಂದ ದಾಸರು ಕೊಂಡಾಡ್ತಾ ಇದ್ದಾರೆ. 

*ಜೋಡು ಕರ್ಮದಿ ಬಿದ್ದು....*

ಪುಣ್ಯ ಪಾಪಕರ್ಮಗಳನ್ನು ಮಾಡುತ್ತಾ. ಒಂದೂ ಹರಿಪ್ರೀತಿಯ ಕರ್ಮವನ್ನು ಮಾಡದೇ, ದೇವರ ಪ್ರೀತಿಯ ಯಾವ ಉದ್ಯೇಶ್ಯವೂ ಇಲ್ಲದೇ, ಕರ್ಮದ ಸುಳಿಯಲ್ಲಿ ಸಿಕ್ಕುಬಿದ್ದ.  ಜೊತೆಗೆ...

*ಕೀಳು ಲಾಭಕೆ ಸಿಲುಕಿ....*

ಅಷ್ಟೆಲ್ಲ ಕರ್ಮಗಳನ್ನು ಮಾಡಿ ಪಡೆದ ಫಲವೇನು.. ?? ಅತ್ಯಂತ ಕ್ಷುದ್ರವಾದ ಫಲ. ತೃಪ್ತಿಸಿಗದ ಫಲ. ಸಂತೋಷವನ್ನುಂಟು ಮಾಡದ ಫಲ. ಈ ತರಹದ ಕ್ಷುದ್ರಫಲದಲ್ಲಿ ಸಿಕ್ಕು ಒದ್ದಾಡುವ. 

*ಮಾಡಿದ್ದೇ ಮಾಡುತ ಮೂಢನಾಗಿ....*

"ಮಾಡಿದ್ಧೇ ಮಾಡೋದು, ಆಡಿದ್ದೇ ಆಡೋದು" ಹೊಸದು ಇಲ್ಲ. ಹೊಸದೊಂದು ಸಾಧನೆ ಸೇರಿಕೆ ಆಯಿತು ಎಂದು ಇಲ್ಲವೇ ಇಲ್ಲ. ಶಾಸ್ತ್ರ ಪಾಠ ಪ್ರವಚನ ಇಲ್ಲ. ಧರ್ಮಾಚರಣೆ ಶೂನ್ಯ. ಭಕ್ತಿ ಭಾವಗಳಿಗೆ ಲೇಶ ಆಸ್ಪದವಿಲ್ಲ. ಹೀಗೆ ಏನೋ ಮೂಢನಂತೆ ಜೀವನ ನಡೆಸುವ ನನಗೆ ಹೆದರುಕೆ ಎಂಬುವದೇ ಇಲ್ಲ. ಯಾಕೆ..... 

*ಪವಮಾನ ಸೇವಕ ಗುರುಗಳ ದಯವಿರೆ. ಏನೇನು ಭಯವಿಲ್ಲ ನನಗೆ*

ಪವಮಾನ ಮುಖ್ಯಪ್ರಾಣ. ಮುಖ್ಯಪ್ರಾಣರನ್ನು ನಿರಂತರ ಸೇವಿಸುವ, ಮುಖ್ಯಪ್ರಾಣಾವತಾರಿ ಶ್ರೀಮದಾಚಾರ್ಯರ ಶಾಸ್ತ್ರಾಧ್ಯನರೂಪ ಸೇವೆಅಡುತ್ತಿರುವ ನಮ್ಮ ಗುರುಗಳ ದಯವಿರೆ ಏನೇನೂ ಭಯವಿಲ್ಲ. 

*ಯಾಕೆ.......*

ನಾನು ಮಂಗನಾದರೂ ಮಂಗನನ್ನು ಪಳಗಿಸಿ, ಆ ಮಂಗನನ್ನೇ ಏಕಾಗ್ರತೆ ಇಂದಿರುವ, ಎಲ್ಲ ಕೆಲಸವನ್ನೂ ಸಾಧಿಸುವ, ಸಿಂಹನಂತೆ ಮಾಡುವ ಶಕ್ತಿ ನಮ್ಮ ಗಿರುಗಳಿಗೆ ಇದೆ. ಆ ಗುರುಗಳ ದಯ ನನಗಿರುವಾಗ ಯಾತರ ಭಯವೂ ನನಗಿಲ್ಲ. ಎಂದು ಕೊಂಡಾಡಬೇಕು ಎಂದರೆ ಗುರುಗಳಲ್ಲಿ ಯಾವ ಮಟ್ಟದ ಭಕ್ತಿ ಮಾಡುತ್ತಿದ್ದರು, ನಾವು ಮಾಡಬೇಕು ಎರಡನ್ನೂ ತಿಳುಸುತ್ತಾ... ಭಕ್ತಿಯ ಫಲವಾಗಿ ಗುರುಗಳ ಅನುಗ್ರಹ ಹೇಗಾಗುತ್ತೇ, ಯಾವ ತರಹದ ಫಲಕೊಡತ್ತೇ ಎರಡನ್ನೂ ತಿಳಿಸುತ್ತಾರೆ ದಾಸರಾಯರು. 

*ಗುರುವಿನ ದಯೆ ಯಾಕೆ ಬೇಕು... ??*

*ಅವನು ದಯಮಾಡೆ ದೇವನು‌ಒಲಿವ. ಅವನ (ಗುರುಗಳನ್ಮು)  ನಂಬಲು ದೇವಗಣ ಕಾವಲಿಗಳಾಗಿ ರಕ್ಷಕರಾಗಿ, ಸಹಾಯಕಾರಾಗಿ  ಬರುವರಯ್ಯ. ಆದ್ದರಿಂದ ಗುರುಗಳ ದಯ ತುಂಬ ಅನಿವಾರ್ಯ. ಎಂದು ಸರಾಗವಾಗಿ ಕೊಂಡಾಡುತ್ತಾರೆ ದಾಸರಾಯರು. 

*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
Magiê, Se, Mn. Và một% tổng lượng kem vào sữa.
Anonymous said…
Is college planning something your purchasers need assistance with,
and yet, you already know you simply don’t have time to do it correctly?
In case you solely do a couple of college planning instances a 12 months, and wish to provide your purchasers the
highest stage of service & expertise…now you'll be able to refer college planning to our workforce of
seasoned and specialised experts. They may grow
to be your digital back office for your college planning work —
and serve your clients at the best stage potential. All you must do is interface with your shopper, and we handle all the
again office work. Have you already been admitted to varsity?
The college journey is as a lot a studying expertise as are traditional lessons.
For years, much of this data was a thriller
because it was managed by the faculties. Over time,
the U.S. The creator, Roger Clark (BSc) has over 25 years experience in profession improvement & recruitment at a senior level by high
administration positions he has held with main worldwide companies.

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*