*ಸ್ಪರ್ಧೆ ಉನ್ನತಿಗೆ ಬಲುಸೂಕ್ತ, ಆದರೆ......*

*ಸ್ಪರ್ಧೆ ಉನ್ನತಿಗೆ ಬಲುಸೂಕ್ತ, ಆದರೆ......*

ಸ್ಪರ್ಧಾತ್ಮಕ ಜಗದಲ್ಲಿ ಸ್ಪರ್ಧೆ ಅತ್ಯುತ್ತಮ. ಸ್ಪರ್ಧೆ ಮನುಷ್ಯನನ್ನು ಮುಂದೆಲೆಗೆ ಒಯ್ಯುತ್ತದೆ.   ಆದರೆ ಎಲ್ಲಿ ಸ್ಪರ್ಧೆ ಮಾಡುವದು ಯೋಗ್ಯ ಎಂದು ವಿಚಾರಿಸುವದೂ ಅತ್ಯಂತ ಸೂಕ್ತ. 

ಸ್ಪರ್ಧೆ ಹುಟ್ಟುವದು ಮೂರು ರೀತಿಯಲ್ಲಿ. ಒಂದು ಮಾತ್ಸರ್ಯ (jalousie) ದಿಂದ. ಮತ್ತೊಂದು ಉನ್ನತ ಗುರಿಗಳು ಇದ್ದಾಗ. ಮುಗದೊಂದು ಚಟದಿಂದ.  ಮಾತ್ಸರ್ಯದಿಂದ ಸ್ಪರ್ಧಿಸಿದವ ಮಣ್ಣಾದ ದುರ್ಯೋಧನ. ಉನ್ನತಗುರಿಗಳೊಂದಿಗೆ ಸ್ಪರ್ಧಿಸಿದ ಪಾಂಡವರು ಅಜರಾಮರ ಕೀರ್ತಿಪಡೆದರು. ಚಟದಿಂದ ಸ್ಪರ್ಧಿಸಿದ ಕರ್ಣ ಭಿಮಾದಿಗಳನ್ನೂ ಗೆಲ್ಲಲಾಗಲಿಲ್ಲ. ಜರಸಂಧನಂತಹ ಜರಾಸಂಧನನ್ನು ಸೋಲಿಸಿದರೂ ದೊಡ್ಡ ಕೀರ್ತಿ ಏನು ಪಡೆಯಲಿಲ್ಲ. 

ಇಂದು ಪ್ರತಿಯೊಂದಕ್ಕೂ ಪ್ರತಿಯೊಂದು ವಿಷಯದಲ್ಲಿಯೂ ಸ್ಪರ್ಧೆ ಇದೆ. ಮಾತಿಗೆ ಮಾತು, ಏಟಿಗೆ ಎದಿರೇಟು,  ಅಧ್ಯಯನ ಊಟ ನಿದ್ರೆ ಆಟ ಮೋಬೈಲು ಹೀಗೆ ಪ್ರತಿಯೊಂದರಲ್ಲಿಯೂ. ಸ್ಪರ್ಧಿಸುವಾಗ ನಮ್ಮತನಕ್ಕೆ ಹೊಡೆತ ಬಿದ್ದಿರಬಾರದು ಹಾಗೆ ಸ್ಪರ್ಧಿಸುವದು ಸೂಕ್ತ. ಆ ಸ್ಪರ್ಧೆ ಮಾತ್ಸರ್ಯದಿಂದ ಕೂಡಿರಬಾರದು ಅದುವೂ ಅಷ್ಟೇ ಮುಖ್ಯ. 

ಸಣ್ಣ ವ್ಯಕ್ತಿಗಳ ಜೊತೆಗೆ, ಕ್ಷುದ್ರವಿಷಯಕೆ ಸ್ಪರ್ಧೆಗೆ ಇಳಿಯುವದೇ ಇಂದು ಹೆಚ್ಚಾಗಿದೆ. *ಸ್ಪರ್ಧೆ  ಕೆಳಗೆ ಇಳಿಯಲು ಅಲ್ಲ, ಮೇಲೆರಲೇ ಆಗಿರಬೇಕು.*  ದುರ್ಬಲನ ಜೊತೆಗಿನ ಸ್ಪರ್ಧೆ ನಮ್ಮ ಗೆಲುವಿಗೆ ಸರಳ ಹಾದಿ. 

ಸಣ್ಣವ್ಯಕ್ತಿಗಳ ಜೊತೆಗಾಗಲಿ, ಕ್ಷುದ್ರವಿಷಯದ ಜೊತೆಗಾಗಲಿ ಸ್ಪರ್ಧೆಗೆ ಇಳಿದು ಗೆದ್ದರೆ ಮೇಲೇರಿದಂತೆಯೆ ಅಲ್ಲವೆ.. ಹಾಗಿರುವಾಗ ಸ್ಪರ್ಧಿಸಬಾರದು ಏತಕೆ... ??

ಒಂದು ಸುಂದರ ಕಥೆ.....

ಒಂದು ಪ್ರಾಣಿಗಳ ಧಾಮ. ಅಲ್ಲಿ ಮೊಲ ನಾಯಿ ಸಿಂಹ ಚಿರತೆ ಮೊದಲಾದ ಅನೇಕ ಪ್ರಾಣಿಗಳೂ ಇದ್ದವು. ಆ ಪ್ರಾಣಿಗಳ ಮಧ್ಯೆ ಒಂದು ಸ್ಪರ್ಧೆ ಏರ್ಪಟ್ಟಿತು. ಓಟದ ಸ್ಪರ್ಧೆ ಯಾರು ಮೊದಲೋ ಅವರಿಗೆ ಬಹುಮಾನ ಎಂದು. 

ನಾಯಿ -  ಮೊಲ -  ಚಿರತೆ ಮೊದಲಾದ ಅನೇಕ ಪ್ರಾಣಿಗಳು ಭಾಗವಹಿಸಿದ್ದವು. ಸ್ಪರ್ಧೆ ಆರಂಭವಾಯಿತು. ಎಲ್ಲವೂ ಓಡಲು ಶುರು ಮಾಡಿದವು. ಆದರೆ.....

ಚಿರತೆ ಮಾತ್ರ ಹಾಗೆಯೇ ಮಲಗಿತ್ತು ಅಂತೆ. ಆಗ ಚಿರತೆಯನ್ನು ಓಟದಲ್ಲಿ ಚೆನ್ನಾಗಿ ಸಿದ್ದಪಡಿಸಿದ ಕೋಚ್ ಗೆ ಕೇಳಿದರಂತೆ. ಎಲ್ಲ ಪ್ರಾಣಿಗಳು ಓಡಿದವು. ನಿನ್ನ ಚಿರತೆ ಹೀಗೆ ಮಲಗಿದೆಯಲ್ಲವೇ ಎಂದು.

ಗೆಲವು ಅತೀಮುಖ್ಯ. ಗೆಲುವಿಗೋಸ್ಕರ ಸ್ಪರ್ಧೆ ತುಂಬ ಮುಖ್ಯ. "ನಾನೇನು ನನ್ನ ಸಾಮರ್ಥ್ಯವೇನು ಯಾರೆದರು ನಾ ಗೆದ್ದೆ" ಅದುವೂ ಅಷ್ಟೆ ಮುಖ್ಯ. ಹೀಗೆ ಯೋಚಿಸಿ ನನ್ನ ಚಿರತೆ ಕೂತಲ್ಲಿಂದ ಅಳಗಾಡಿಲ್ಲ ಎಂದು. 

"ಚಿರತೆಗೆ ತನ್ನ ಸಾಮರ್ಥ್ಯದ ಅರಿವು ಚೆನ್ನಾಗಿದೆ. ನಾಯಿಯ ಮೊಲಗಳ ಜೊತೆ ಓಡಿ ತನ್ನ ಸಾಮರ್ಥ್ಯವನ್ನು ತೋರಿಸುವ ಅವಶ್ಯಕತೆ ತನಗೆ  (ಚಿರತೆಗೆ) ಸರ್ವಥಾ ಇಲ್ಲ. ತಾ ಏನಿದ್ದರೂ ಚಿರತೆಯೇ. ಅದು ಸ್ಪರ್ಧೆಯಲ್ಲಿ ಭಾಗವಹಿಸುವದಾದರೆ ಮತ್ತೊಂದು ಚಿರತೆಯ ಜೊತೆಗೇ ಆಗಬೇಕು" ಎಂದು ಯೋಚಿಸಿ ಸುಮ್ಮನೆ ಕುಳಿತಿರಬಹುದು ಎಂದು ಹೇಳಿದನಂತೆ. 

ಸ್ಪರ್ಧಾತ್ಮಕ ಜಗದಲ್ಲಿ ಎಲ್ಲರೂ ಸ್ಪರ್ಧಿಗಳೆ. ಆದರೆ ನನ್ನ ಸಾಮರ್ಥ್ಯಕ್ಕೆ ಅನುಗುಣ ಸ್ಪರ್ಧಾಳು ಸಿಕ್ಕರೆ ಸ್ಪರ್ಧಿಸೋಣ. ಗೆದ್ದರಂತೂ ಕೀರ್ತಿ ಇದ್ದೇ ಇದೆ. ಸೋತರೂ ಕೀರ್ತಿ ಇದೆ. ಕ್ಷುದ್ರರ ಜೊತೆಗೆ ಕ್ಷುದ್ರವಿಷಯಕೆ ಸರ್ವಥಾ ಸ್ಪರ್ಧೆ ಬೇಡವೇಬೇಡ. ಸೋತೆವು ಎಂದಾರೆ ಅಪಕೀರ್ತಿ ಕಟ್ಟಿಟ್ಟಬುತ್ತಿ. ಗೆದ್ದರೂ ಮಹಾ ಕೀರ್ತಿಏನು ಬರದು ಇದುವೂ ಅಷ್ಟೇ ನಿಶ್ಚಿತ. ಸ್ಪರ್ಧೆಗೆ ಇಳಿಯುವ ಮೊದಲು ಒಂದುಬಾರಿ ಯೋಚಿಸೋಣ.....

*✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*