*ಬಾರೆ ಭಾಗ್ಯದ ನಿಧಿಯೇ...*

*ಬಾರೆ ಭಾಗ್ಯದ ನಿಧಿಯೇ...*

ಇಂದು ವರ ಕೊಡುವ ಮಹಾತಾಯಿತಾದ ಮರಮಹಾ ಲಕ್ಷ್ಮೀದೇವಿಯ ವ್ರತ ಮಹೋತ್ಸವ.

 *ವರಮಹಾಲಕ್ಷ್ಮೀ ಪೂಜೆ* ಸಾಮಾನ್ಯವಾಗಿ ಎಲ್ಲರೂ ಮಾಡಿದ್ದೇವೆ. ಮಾಡುತ್ತಾ ಇರುತ್ತೇವೆ. ಮುಂದೂ ಮಾಡುತ್ತೇವೆ. ಲಕ್ಷ್ಮೀದೇವಿಯ ಕೆಲ‌ಮಹಿಮೆಗಳನ್ನು ತಿಳಿದು ಪೂಜಿಸೋಣ. 

*ಕೆಲ ಮಹಿಮೆಗಳು....*

ಪ್ರಕೃತಿಗೆ ಅಭಿಮಾನಿ ಹಾಗೂ ನಿಯಾಮಕಳಾಗಿ ಇದ್ದು ಪ್ರಕೃತ್ಯಾತ್ಮಕ ಇಪ್ಪತ್ತುನಾಲಕು ತತ್ತ್ವಗಳನ್ನು ಪ್ರೇರಿಸುವವಳು ಲಕ್ಷ್ಮೀ ದೇವಿ.  ಅವಳ ಕರುಣೆಗೆ ಪಾತ್ರರೂ ಆಗಿದ್ದರೆ ಉತ್ತಮವಾಗಿ ಪ್ರೇರಿಸುವವಳು. ಇಲ್ಲವಾದಲ್ಲಿ ತುಂಬ ಕಷ್ಟ.

ಲಕ್ಷ್ಮೀದೇವಿಯ ಇಚ್ಛೆ ಅತ್ಯಂತ ಪ್ರಮುಖ. ಅವಳ ಕೃಪಾಕಟಾಕ್ಷೆಯೂ ಅತೀಪ್ರಮುಖ. "ಯಸ್ಯಾಃ ಕಟಾಕ್ಷಮಾತ್ರೇಣ ಬ್ರಹ್ಮರುದ್ರೇಂದ್ರಪೂರ್ವಕಾಃ. ಸುರಾಃ ಸ್ವೀಯಾಃ ಪದಾನ್ಯಾಪುಃ"  ಯಾವ ಲಕ್ಷ್ಮೀದೇವಿಯ ಕೃಪಾಕಟಾಕ್ಷವಿದ್ದರೇ ಬ್ರಹ್ಮ ರುದ್ರಾದೇವತೆಗಳು ತಮ್ಮ  ತಮ್ಮ ಪದವಿಪಡೆಯಲು ಅರ್ಹತೆಯನ್ನು ಪಡೆಯುತ್ತಾರೆ. ಅವಳ ಇಚ್ಛೆಯಿದ್ದರೆ ರುದ್ರ ರುದ್ರರು ಆಗುವವರು. ಬ್ರಹ್ಮ ಬ್ರಹ್ಮರು ಆಗುವವರು. ನಾವು ನಾವಾಗಿಯೇ ಉಳಿಯಲು ಬೇಕು ಲಕ್ಷ್ಮೀದೇವಿಯ ಇಚ್ಛೆ. 

*ಪೂಜೆ ಏನಕೆ.....*

ಪೂಜೆ *ಇಷ್ಟೇಲ್ಲ ಕೊಟ್ಟಿದ್ದಕ್ಕಾಗಿ, ಇಷ್ಟೆಲ್ಲ ಕೊಡು ಎಂದಾಗಿಯೋ ಅಥವಾ ಪೂಜ್ಯ ದೇವತೆಯ ಪ್ರೀತಿಗೊಸ್ಕರ* ಈ ಮೂರು ಕಾರಣಕ್ಕಾಗಿಯೇ ಇರುತ್ತದೆ. 

*ಇಷ್ಟು ಕೊಡಲೇಬೇಕು* ಎಂದು ಪೂಜಿಸುವವರು ನಾವು ಆದರೆ. ಜ್ಙಾನಿಗಳು ಕೊಡು ಎಂದು ಬೇಡದೇ *ಇಷ್ಟೆಲ್ಲ ಕೊಟ್ಟಿದ್ದೀರಲ್ಲ* ಎಂದು ತಿಳಿದು ಕೃತಜ್ಙತಾ ಪೂರ್ವಕ  ಪೂಜಿಸುತ್ತಾರೆ. ಇಂಥಿಂಥ ಮಹಾ ಮಹಿಮೋಪೇತಳಾದ *ನಿನ್ನ  ಪ್ರೀತಿಗೋಸ್ಕರವೇ* ಪೂಜೆ ಎಂಬುವವರು ನಿಷ್ಕಾಮ ಜ್ಙಾನಿಗಳು. ಈ ಮೂವರಲ್ಲಿ ಕ್ರಮವಾಗಿ ಉತ್ತೋಮೋತ್ತಮರು ಆಗಿರುತ್ತಾರೆ. 

ಈ ಮೂವರಲ್ಲಿ ಕನಿಷ್ಠರು ನಾವೇ ಬೇಡುವದಕ್ಕಾಗಿಯೇ ಪೂಜಿಸುವವರು. 

ಅದರಲ್ಲೂ ದಾಸರಾಯರು ಉತ್ತಮತೆಯನ್ನು ತಿಳಿಸುತ್ತಾರೆ. *ಬೇಡುವದೇ ಕರ್ತವ್ಯ ಎಂದಾದರೆ ಅವಷ್ಯ ಬೇಡು. ಬೇಡುವಾಗ "ಬಾರೇ ಭಾಗ್ಯದ ನಿಧಿಯೇ" ಎಂದು  ಲಕ್ಷ್ಮೀದೇವಿಯನ್ನೇ ಬಾ ಬೇಡು* ಈ ತರಹದ ಬೇಡುವಿಕೆ ಉತ್ತಮೋತ್ತಮ ಎಂದು ಭಾವಿಸುತ್ತಾರೆ ದಾಸರಾಯರು. 

ಭಾಗ್ಯದ ನಿಧಿಯಾದ ಮೋಕ್ಷ ಕೊಡುವ ನೀನೇ ಎನ್ನ ಮನೆಗೆ ಎನ್ನ ಮನಸ್ಸಿಗೆ ಬಾ ಎಂದು ಪ್ರಾರ್ಥಿಸುತ್ತಾರೆ. *ನಿನ್ನಿಂದ ಎನಗೆ ಬೇಡ, ನೀನೇ ಎನಗೆ ಬೇಕು* ಎಂಬ  ಈ ಪ್ರಾರ್ಥನೆಯಲ್ಲಿ ಧರ್ಮ ಮೊದಲು ಮಾಡಿ ಮೋಕ್ಷ ಕೊನೆಯಾದ ಸಕಲ ಪುರುಷಾರ್ಥವಿದೆ ಎಂದು ಭಾವಿಸಿ ದಾಸರು ನುಡಿಯುತ್ತಾರೆ. ಈ ತರಹದ ಬೇಡುವಿಕೆ ಇಂದ ಮಹಲಕ್ಷ್ಮೀದೇವಿಗೂ ಅತ್ಯಂತ ಪ್ರೀತಿಯೂ ಅಡಗಿದೆ.

ಬೇಡುವವರೇ ನಾವು. ಬೇಡುವದೇ ಆದರೆ ಅವಳನ್ನೇ ಬೇಡಿ ಆ ಮಹಲಕ್ಷ್ಮೀ ದೇವಿಯನ್ನೇ ಸಂತೋಷಗೊಳಿಸಿ ಎಂದು ದಾಸರಾಯರು ಹೇಳುತ್ತಾರೆ. ಆದ್ದರಿಂದ ಮಹಿಮಾಜ್ಙಾನ ಪೂರ್ವಕ ಉತ್ತಮೋತ್ತಮ ಆರಾಧನೆ ಮಾಡಿಯೇ ಆ ಮಹಾತಾಯಿಗೆ ಪ್ರೀತಿಪಾತ್ರರಾಗೋಣ. ನಾವೂ ಉತ್ತಮರ ದಾರಿಯಲ್ಲಿ ಸಾಗೋಣ.

*✍🏼✍🏼✍🏼ನ್ಯಾಸ*
(ಗೋಪಾಲದಾಸ
ವಿಜಯಾಶ್ರಮ, ಸಿರವಾರ)

Comments

Anonymous said…
There's definately a great deal to find out about this issue.
I really like all of the points you made. I’ve been browsing on-line more than 3 hours as of late, but I never
discovered any attention-grabbing article like yours.
It is pretty worth enough for me. Personally, if all web owners and bloggers made good content material as you did, the web shall be much more
useful than ever before. Way cool! Some extremely valid points!
I appreciate you writing this post and the rest of the site
is extremely good. http://foxnews.co.uk
Anonymous said…
Very interesting subject, regards for posting.
Anonymous said…
Chúng ta cũng có thể mất tuổi thọ của nhà bạn để quy định.
NYASADAS said…
ಧನ್ಯವಾದ
Unknown said…
Thanks for this nice information . V true . 🙏🏻🙏🏻🙏🏻Prayer as gratitude , and Prayer just for the loving Grace , and sheer the mark of her presence makes us shielded and secured . 🙏🏻🙏🏻🙏🏻 May Sri Vatalakshmi's Grace be on you and your family now and always . .

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*