*ನೆನಪಿನ ಶಕ್ತಿ*

*ನೆನಪಿನ ಶಕ್ತಿ*

ದೇವರು ಕೇಳದೇ ಕೊಟ್ಟ ನೂರಾರು ಪದಾರ್ಥಗಳಲ್ಲಿ ಅತ್ಯಮೂಲ್ಯಪದಾರ್ಥ ಅದು "ನೆನಪಿನಶಕ್ತಿ" ಎಂದರೆ ತಪ್ಪಾಗಲಿಕ್ಕಿಲ್ಲ. 

ಹುಟ್ಟಿದಾಗಿನಿಂದ ಸಾಯುವವರೆಗೆ ಒಟ್ಟು ಬದುಕಿನಲ್ಲಿ ಹತ್ತು ಕೋಟಿ ಕೋಟಿ ವಿಷಯಗಳನ್ನು ನೆನಪನಲ್ಲಿ ಇಟ್ಟುಕೊಳ್ಳತ್ತದೆ ಎಂದು ಒಂದು ಅಂದಾಜು. 

ತಾಯಿಯನ್ನು ನೋಡಿ ಗುರುತು ಹಿಡಿಯುವದು, ಅಮ್ಮಾ ಎಂದು ತಾಯಿ ಹೇಳುತ್ತಿದ್ದಂತೆ ಪುನಃ ಹೇಳುವದು, ಹೆಸರಿಟ್ಟು ಕರೆದಾಕ್ಷಣ ತಿರುಗಿ ನೋಡುವದು ಹೀಗೆ ಒಂದೊಂದನ್ನೂ ನೆನಪಿನಲ್ಲಿಟ್ಟುಕೊಳ್ಳುವ ಕೆಲಸ ಮೆದುಳಿನ ಕೆಲಸಗಳು. ಈ ರೀತಿ ಒಬ್ಬ ವ್ಯಕ್ತಿ ಬದುಕಿನಲ್ಲಿ ನೆನಪಿಟ್ಟುಕೊಂಡ ಪದಗಳು ಆಲೋಚನೆಗಳು, ವಸ್ತುಗಳು, ವಿಷಯಗಳು ಎಲ್ಲವನ್ನೂ ಒಂದೆಡೆ ಕ್ರೋಡೀಕರಿಸಿ ಬರೆದರೆ ಹತ್ತುಕೋಟಿ ಐವತ್ತುಲಕ್ಷ ಮೈಲು  ಆಗುತ್ತದೆ ಎಂದು ಒಂದು ಅಂದಾಜು ಅಷ್ಟೆ. 

ಇಷ್ಟು ಅಗಾಧವಾದ ಶಕ್ತಿ ಒಂದು ಕಿಲೋಗ್ರಾಮಿನ ಮೆದುಳಿಗೆ ದೇವರುಕೊಟ್ಟಿದ್ದಾನೆ. ಈ ಒಂದು ಮೆದುಳಿಗೆ ಸಹಾಯಕವಾಗಿ  ಲಕ್ಷಕೋಟಿ ನರಗಳು ಅನುಕ್ಷಣವೂ ಬಿಡದೆ ಕೆಲಸ ಮಾಡುತ್ತಿರುತ್ತವೆ.  ಒಂದು ಕಿಲೊ ಗ್ರಾಂ ಅಷ್ಟಿರುವ ಮೆದಳಿನಲ್ಲಿ ಅಂದಾಜು ಲಕ್ಷ ಕೋಟಿ‌ ನರಗಳು ಇರುತ್ತವೆ ಎಂದರೆ ಎಷ್ಟು ಸೂಕ್ಷ್ಮವಾಗಿ ಇರುತ್ತವೆ ಎಂದು ಯೋಚಿಸಬೇಕು. 

"ಒಂದು ದೊಡ್ಡ ಕಾಂಪ್ಯುಟರ್ ಆಫೀಸಿನ ಹಾಲಿನಲ್ಲಿ ಕೋಟಿಜನ ತಲೆ ಎತ್ತದೆ ಕೆಲಸ ಮಾಡುತ್ತಿರುತ್ತಾರೆ" ಎನ್ನುವದನ್ನು ಊಹಿಸಿ ನೋಡಿದಾಗ "ಈ ಮೆದುಳಿನಲ್ಲಿಯೂ ಹಾಗೆಯೇ ನಡೆಯುತ್ತಿರುತ್ತದೆ" ಎಂಬ ಕಲ್ಪನೆ ಬರಬಹುದು. 

*ನೆನಪಿನ ಶಕ್ತಿಗೋಸ್ಕರ ಮೆದಳನ್ನು ಸ್ವಚ್ಛವಾಗಿ ಇಟ್ಟಿರಬೇಕು....*

ಲಕ್ಷಕೋಟಿ ನರಗಳಿಂದ ಸಹಿತವಾದ ಮೆದಳು ಒಂದು ದೊಡ್ಡ ಆಫೀಸು ಎಂದಾದರೆ, ಬೆಳಿಗ್ಗೆ ಎದ್ದಾಕ್ಷಣಕ್ಕೆ  "ಧ್ಯಾನ ಚಿಂತನ ಯೋಗ" ಇವುಗಳ ಮುಖಾಂತರ ಅದನ್ನು ಸ್ವಚ್ಛಾವಾಗಿ ಇಟ್ಟಿರಬೇಕು. 

ಈ ಆಫೀಸಿನಲ್ಲಿ ಅನಗತ್ಯವಾದ ಕಸಗಳನ್ನು ತುಂಬಿದಷ್ಟು ಅಗತ್ಯವಾದ ವಸ್ತುಗಳಿಗೆ ಸ್ಥಳವೇ ಇಲ್ಲದಂತಾಗಿರುತ್ತದೆ. ಅನಗತ್ಯ ವಸ್ತುಗಳನ್ನು ನಿತ್ಯವೂ ಕಸಗುಡಿಸಿ ಹೊರ ಎಸೆಯುತ್ತಾ ಇರಬೇಕು. 

ಮೆದಳಿಗೇ ವೈರಸ್ಸಿನಂತೆ  ನೇರ  ಹಾನಿ ಮಾಡುವ ಸಿಗರೇಟು ಕುಡಿತ ಮೊಬೈಲು ಇವಗಳಿಂದ ದೂರ ಇಟ್ಟಿರಬೇಕು.  *ಅನಗತ್ಯವಸ್ತುಗಳು ನೆನಪನಲ್ಲಿ ಉಳಿಯದೇ, ಅಗತ್ಯವಸ್ತುಗಳು ಮಾತ್ರ ನೆನಪಿನಲ್ಲಿ ಉಳಿಯುವಂತಾಗಿರುತ್ತದೆ.*

ಇಂತಹ ಅತ್ಯದ್ಭುತವಾದ ಮೆದಳು ಕೊಟ್ಟವ, ತಾಯಿಯ ಉದರದಲ್ಲಿ ಸೃಷ್ಟಿ ಮಾಡಿದವ ಎಮ್ಮೊಡೆಯ ದೇವರೇ. ಅವನುಪಕಾರ ಎಷ್ಟು ಎಂದು ಊಹಿಸಲಸಾಧ್ಯ. 

ನೆನಪಿನಶಕ್ತಿ ಒಂದಿದ್ದಿಲ್ಲದಾಗಿದ್ದರೆ ನಮ್ಮವಸ್ಥೆ ಏನಾಗ್ತಿತ್ತು ಎಂದು ಮಲಗುವಾಗ ಏಕಾಂತದಲ್ಲಿ ಯೋಚಿಸೋಣ. ಅವನ ಉಪಕಾರ ಕ್ಷಣ ಕ್ಷಣಕ್ಕೂ ಇಮಡಿ ಮುಮ್ಮಡಿ ನೂರ್ಮಡಿ ಹೆಚ್ಚಾಗ್ತಾ ಸಾಗುತ್ತದೆ. 

ಮನೋ ನಿಯಾಮಕ ಮನಸೃಷ್ಟಿ ಕರ್ತ ಶ್ರೀಹರಿಗೆ ಅನಂತ ನಮೋ ನಮೋ.....💐💐🌹🌹 🙏🏽🙏🏽🙏🏽

*✍🏽ನ್ಯಾಸ..*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
Heу I am ѕo grateful I found your webpage, I really
found you by accident, whie I was researching on Google for something elsе, Anyways I am
here now and would just like to say many thanks for a marveⅼous post and
a alll roᥙnd entertaining blog (I akso love
the theme/design), Ӏ don't have time to read through it alll at the
moment but I have savbed it andd alѕo added iin your
RSS feeds, sso when I have time I will be back to read a lot more,
Please ddo keep up the awesome jоb.

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*