ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||


ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ|
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

ಗುರುಸಾರ್ವಭೌಮರಾದ ಶ್ರೀಶ್ರೀರಾಘವೇಂದ್ರ ಪ್ರಭುಗಳ ಆರಾಧನಾ ಮಹೋತ್ಸವ. ಆ ಮಹಾಮಹಿಮರ ಚರಮಶ್ಲೋಕದ ಅರ್ಥವನ್ನು ತಿಳಿಯುವ ಪ್ರಯತ್ನ ಮಾಡೋಣ. 

*ಪೂಜ್ಯಾಯ* - ಶ್ರೀಮಟ್ಟೀಕಾಕೃತ್ಪಾದರು ವ್ಯಾಸರಾಜರು ಶ್ರೀರಘೂತ್ತಮರ ತರುವಾಯ ಜಗತ್ತಿನಲ್ಲಿಯೇ ಪರಮಪೂಜ್ಯರಾದ. *ಸತ್ಯ ಧರ್ಮರತಾಯ ಚ* - ಸತ್ಯ ಹಾಗೂ ಭಾಗವತಧರ್ಮಗಳಲ್ಲೇ ರತರಾದ. *ಭಜತಾಂ ಕಲ್ಪವೃಕ್ಷಾಯ* - ಸೇವೆ ಮಾಡುವ ಸದ್ಭಕ್ತರಿಗೆ ಕಲ್ಪವೃಕ್ಷದಂತೆ ಸರ್ಸ್ವವನ್ನೂ ಕೊಡುವ. *ನಮತಾಂ ಕಾಮಧೇನವೇ* - ನಮಸ್ಕಾರ ಮಾಡುವ ಭಕ್ತರಿಗೆ ಕಾಮಧೇನುವಿನಂತಿರುವ. *ರಾಘವೇಂದ್ರಾಯ* ಶ್ರೀರಾಘವೇಂದ್ರ ಪ್ರಭುಗಳಿಗೆ. *ನಮಃ* - ನಮಸ್ಕಾರಗಳು. 

ವಿವರಣೆ.....

ಹಿರಿಯರು ಎಂದಿಗೂ ನಮಗೆ ಆದರ್ಶ ಪುರುಷರೇ. ತಮ್ಮ ನಡೆ ನುಡಿಗಳಿಂದ ನಮಗೂ ಮಾರ್ಗ ತೋರಿಸಿಟ್ಟಿರುತ್ತಾರೆ. ಅತ್ಯುತ್ತಮರಾದ ರಾಯರೂ ಮಹಾನ್ ಆದರ್ಶರೇ ಮಾರ್ಗದರ್ಶಕರೇ. 

*ರಾಯರು ಪೂಜ್ಯರು ಏಕೆ  ಹೇಗೇ.....*

ಪೂಜ್ಯತೆಗೆ ಕಾರಣ ಒಂದು ಧರ್ಮಾಚರಣೆ ಇನ್ನೊಂದು ನಿಸ್ವಾರ್ಥ ಪರೋಪಕಾರ. ರಾಯರಲ್ಲಿ ಈ ಎರಡೂ ಗುಣಗಳು ನಿಸ್ಸೀಮವಾಗಿದ್ದವು. ಅಂತೆಯೇ ಇಂದಿಗೂ ಎಂದೆಂದಿಗೂ ಪೂಜ್ಯರೆ.

*ಧರ್ಮಪರಾಯಣರು ರಾಯರು...*

ಭಾಗವತ ಧರ್ಮಗಳನ್ನು ರೂಢಿಸಿಕೊಂಡವರು ರಾಯರು. ಎಲ್ಲ ಧರ್ಮಗಳೂ ಅವರ ನರನಾಡಿಗಳಲ್ಲಿ ಇದ್ದವು. ಆ ಎಲ್ಲ ಧರ್ಮಗಳೂ ಬಹಳೇ ಸೂಕ್ಷ್ಮ ಹಾಗೂ ಆಳವಾಗಿ ಇದ್ದವು. ವಿಷ್ಣುವಿಗೆ ಪರಮ ಪ್ರಿಯವೂ ಆಗಿದ್ದವು.  ಉದಾಹರಣೆಗೆ *ವಾಕ್ಸೇವೆ* ಇದೊಂದು ಧರ್ಮ.  ಈ ಧರ್ಮದಲ್ಲಿ ಅವರ ನಾಲಿಗೆ ಜೀರ್ಣವಾಗಿತ್ತು ಸವೆದುಹೋಗಿತ್ತು ಎಂದು ಹೇಳುತ್ತಾರೆ. ವಾಕ್ಸೇವಾ ರೂಪ ಧರ್ಮ ಆ ಮಟ್ಟದಲ್ಲಿ ಸಾಗಿತ್ತು. ಹೀಗೇ ಎಲ್ಲ ಧರ್ಮಗಳೂ.

ಧಾರ್ಮಕತೆಯ ಮುಖವಾಡ ಹಾಕಿದವರೆ ಪೂಜ್ಯರಾಗಿ ಮೆರೆಯುತ್ತಿರುವಾಗ, ಧರ್ಮವೇ ಉಸಿರಾಗಿ ಪಡೆದವರು ಎಷ್ಟು ಪೂಜ್ಯರಾಗಿರಬಹುದು ಎಂದು ನಮ್ಮಂತಹ ಸಾಮಾನ್ಯರಿಗೆ ಊಹಿಸಲೂ ಆಗದು. 

ರಾಯರನ್ನು ನಿಂದಿಸಿದವರುಂಟು,  ಬುಸಿನಸ್ಸಿಗೋಸ್ಕರ ಬಳಿಸಿಕೊಂಡವರುಂಟು, ರಾಯರೊಬ್ಬ ಬುಸಿನೆಸ್ ಮ್ಯಾನ್ ಅಂದವರು ಹಲವರು ಆದರೆ ಎಲ್ಲರೂ ರಾಯರಿಗೆ ತಲೆಬಾಗಿದವರೇ. ಆ ಎಲ್ಲರಿಂದಲೂ ರಾಯರೂ ಪೂಜ್ಯರೇ. 

*ನಿಃಸ್ವಾರ್ಥ ತ್ಯಾಗಿಗಳೂ ಪೂಜ್ಯರೇ ಆಗಿರುತ್ತಾರೆ....*

ರಾಯರ ಚರಮ ಶ್ಲೋಕದಲ್ಲಿ ಕಾಮಧೇನು ಹಾಗು ಕಲ್ಪವೃಕ್ಷ ಇವುಗಳಿಗೆ ಹೋಲಿಸಿ ವರ್ಣನೆ ಮಾಡಿದ್ದಾರೆ ರಾಯರನ್ನು. ಇದರಿಂದ ಇಂದಿನ ಉಪನ್ಯಾಸದಲ್ಲಿ ಒಂದು ಯೋಚಿಸಿದೆ..

ಕಾಮಧೇನು ಆಕಳು. ತಾನು ಹುಲ್ಲು ತಿಂದು ಹಾಲು ಕೊಡುವವಳು ಕಾಮಧೇನು. ಸ್ವಾರ್ಥ ಸ್ವಲ್ಪವೂ ಇಲ್ಲ. ಹಾಲು ತನಗೆ ಬೇಕು ಎಂಬ ವ್ಯಾಮೋಹವೂ ಇಲ್ಲ. ಇಂದು ಆಕಳನ್ನು ಸಾಕಲು ಹಿಂದೇಟು ಹಾಕಿ ಬೀದಿಗೆ ಬಿಟ್ಟರೂ ಮನಿಗೆ ಬಂದು ಹಾಲು ಕೊಟ್ಟು ಹೋಗತ್ತೆ. ಈ ಹಾಲು ನನಗೆ ಬೇಕು ಎಂದು ಎಂದಿಗೂ ಹೇಳದು. ಆದ್ದರಿಂದ ಕಾಮಧೇನು  (ಆಕಳು) ಪೂಜ್ಯವೇ. ಅದೇರೀತಿ ಹಾಲು ಮಾತ್ರವಲ್ಲ ಮೋಕ್ಷಾದಿ ಪುರುಷಾರ್ಥ ಕೊಡುವ ಕಾಮಧೆನು ರಾಯರು. ಆದ್ದರಿಂದಲೇ ಮಹಾಪೂಜ್ಯರು. 

ಕಲ್ಪವೃಕ್ಷವೂ ಹಾಗೆಯೇ ಅಲ್ಲವೆ. ಹಣ್ಣು ಮತ್ತೊಬ್ಬರಿಗೆ, ಕಟ್ಟಿಗೆ ಮತ್ತೊಬ್ಬರಿಗೆ, ನೆರಳೂ ಮತ್ತೊಬ್ಬರಿಗೆ. ತನ್ನನ್ನು ಕಡಿಯಲು ಬಂದವನಿಗೂ, ತಾನು ಬಿಸಲಲ್ಲಿ ನಿಂತು ಕಡಿಯುವವ ದಣಿದರೆ ಅವನಿಗೆ ನೆರಳು ಕೊಡತ್ತೆ ಈ ಮಟ್ಟದ ಪರೋಪಕಾರ ಸಾಮಾನ್ಯ ವೃಕ್ಷದ್ದು. ಕಲ್ಪವೃಕ್ಷದ್ದು ಹೇಳಲಸಾಧ್ಯ. ದೇವರಲ್ಲಿ ಭಕ್ತ್ಯಾದಿಗುಣಗಳನ್ನು ಕರುಣಿಸುವ ನಿಃಸ್ವಾರ್ಥ ವೃಕ್ಷ ಕಲ್ಪವೃಕ್ಷ ರಾಯರೇ. ಅಂತೆಯೇ ಪೂಜ್ಯರು ರಾಯರು. 

ಇಂದು ನಮ್ಮವಸ್ಥೆ ಮನೆಯಲ್ಲಿ ಪೂಜ್ಯತೆ ಇಲ್ಲ. ಆಫೀಸನಲ್ಲಿ ಪೂಜ್ಯತೆ ಇಲ್ಲ. ಮಾರ್ಕೇಟಿನಲ್ಲಿ ಪೂಜ್ಯತೆ ಇಲ್ಲ. ಕಂಡವರಿಂದೆಲ್ಲ ಬೈಯಿಸಿಕೊಳ್ಳುವದೇ ಆಗಿದೆ. ಹಾಗೆ ಆಗದೇ ರಾಯರ ಹಾಗೆ ನಾವೂ ಧರ್ಮಗಳನ್ನು ಮಾಡಿ, ನಿಃಸ್ವಾರ್ಥತ್ಯಾಗವನ್ನೂ ಮಾಡಿ ಪೂಜ್ಯರಾಗೊಣ. ಒಟ್ಟಾರೆಯಾಗಿ ಪೂಜ್ಯರಾಗದೆ ಇರುವದು ಬೇಡ. ಈ ಆರಾಧನೆಯ ಪ್ರಸಂಗದಲ್ಲಿ  ಆ ರೀತಿಯ ಅನುಗ್ರಹವಾಗಲಿ.

*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.

Comments

Anonymous said…
Аw, this was an exceptionally good post. Finding the time
ɑnd actual effort too generate a very good article… bսt what
can I say… I һesitate a whօle lot annd don't manage to get anything done.

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*