*ಅನು ಬಂಧದ ಸಂಕೇತ ರಕ್ಷಾಬಂಧನ.....*


*ಅನು ಬಂಧದ ಸಂಕೇತ ರಕ್ಷಾಬಂಧನ.....*

ರಕ್ಷಾ ಬಂಧನ ಒಂದು ಉತ್ತಮ ಬಾಂಧವ್ಯದ ಸಂಕೇತ. ವಿಶಿಷ್ಟ ಬಾಂಧವ್ಯ ದ್ಯೋತಕ. ನಿರ್ಮಲ ಅಂತಃಕರಣ ಸೂಚಕ. ನಿರಂತರ ರಕ್ಷಣೆಯ ಕಳಕಳಿ. ಪ್ರೀತಿ ಅಂತಃಕರಣದ ಮಹಪೂರ. ವಿಶ್ವಾಸ ಭರವಸೆಯ ಆಗರ.  ನಿರ್ವ್ಯಾಜ ಹಾಗೂ ನಿಷ್ಕಲ್ಮಷ  ಪ್ರೀತಿಯ ಓಕುಳಿ ತುಂಬಿದೆ . ಅನುಬಂಧಗಳ ಅಲೆಗಳಿಗೆ ಭದ್ರವಾದ ಆಣೆಕಟ್ಟು ಇದಾಗಿದೆ.  "ರಕ್ಷಾ ಬಂಧ ಅಪಜಯಗಳು ಅಧರ್ಮಗಳು ದುಷ್ಟ ವಿಚಾರಗಳು ಸುಳಿಯದಿರಲಿ, ಜಯ ಸದ್ವಿಚಾರ ಧರ್ಮಗಳೇ ಒಲಿದು ಬರಲಿ"  ಎಂಬ ಉದ್ದೇಶ್ಯದಿಂದ ಈ ಹಬ್ಬವನ್ನು ಆಚರಿಸುವದು. 

ಒಂದು ಪುಟ್ಟ ಇತಿಹಾಸ ಇದರಹಿಂದೆ ಅಡಗಿದೆ.
ದೇವಾಸುರರ ಸಂಗ್ರಾಮ ಯುದ್ಧ ಸದಾ ಇರುವದೇ. ತಾತ್ಕಾಲಿಕವಾಗಿ ಜಯ ಅಸುರರಿಗೆ ಸಿಗುವದು ನಿಶ್ಚಿತ. ಹಾಗೆಯೇ ಕೊನೆಗೆ ಸಿಗುವ ಜಯ ದೇವತೆಗಳಿಗೆ ಇದು ಅಷ್ಟೇ ನಿಶ್ಚಿತ. 

ಒಂದು ಬಾರಿ ದೇವಾಸುರರ ಯುದ್ಧ ನಡೀತಾಯಿದೆ ಜಯ ಯಾರಿಗೂ ಸಿಗುತ್ತಿಲ್ಲ. ಒಂದು ದಿನದ ಮೇಲುಗೈ ಅಸುರರದು ಆದರೆ, ಮತ್ತೊಂದು ದಿನ ದೇವತೆಗಳದು. ಹೀಗೆ ೧೨ ವರ್ಷಗಳ ಕಾಲ ಉರುಳಿತು. ಜಯ ಮಾತ್ರ ಇಬ್ಬರಿಗೂ ಮರೀಚಿಕೆಯೇ ಆಗಿ ಉಳಿತು. 

ಹೀಗಿರುವಾಗ ಜಯ ಸಿಗುವದಕ್ಕಾಗಿ ದೇವತೆಗಳಿಂದ ಅನೇಕ ವ್ರತ ಜಪ ಪೂಜೆ ಸಾಗುತ್ತಾ ಇತ್ತು. ಒಂದು ದಿನ ದೆವೇಂದ್ರನ ಮಾಡದಿಯಾದ ಶಚೀ ದೇವಿ ವಿಚಾರ ಮಾಡುತ್ತಾಳೆ. ಹಿಂದೆ ದೈತ್ಯ ಚಕ್ರವರ್ತಿಯಾದ "ಬಲಿ ಚಕ್ರವರ್ತಿ" ತನ್ನ ಜಯಕ್ಕಾಗಿ ಯಾವ ರಕ್ಷಾ ಕವಚ ರೂಪವಾಗಿ "ರಕ್ಷಾಬಂಧನ"ವನ್ನು ಮಾಡಿಸಿಕೊಂಡಿದ್ದನೋ ಅದೇ ರಕ್ಷಾಕವಚ ರೂಪವಾದ "ರಕ್ಷಾಬಂಧನ"ವನ್ನು ಇಂದು ಪುರಂದರನೇ ಮೊದಲಾದ ಎಲ್ಲ ದೇವತೆಗಳಿಗೆ ಮಾಡುವೆ ಅದರಿಂದ ದೇವತೆಗಳಿಗೆ ಜಯ ನಿಶ್ಚಯ ಎಂದು ವಿಚಾರಿಸಿ...

ಏನ ಬದ್ಧೋ ಬಲೀ ರಾಜಾ 
ದಾನವೇಂದ್ರೋ ಮಹಾಬಲಃ|
ತೇನ ತ್ವಾಂ ಅನುಬಧ್ನಾಮಿ 
ರಕ್ಷೇ ಮಾ ಚಲ ಮಾ ಚಲ||  ಧರ್ಮಸಿಂಧು.

ಈ ಶ್ಲೋಕವನ್ನು ಪಠಿಸಿ ಎಲ್ಲರಿಗೂ ರಕ್ಷಾ ಕವಚರೂಪವಾಗಿ ಶ್ರಾವಣ ಪೌರ್ಣಿಮಾ ದಿನದಂದು  ಬಂಧನ ಮಾಡುತ್ತಾಳೆ ಶಚೀದೇವಿ.  

ರಕ್ಷಾಬಂಧನ ಮಾಡಿದ ದಿನದಿಂದ  ಕೇವಲ ಎರಡು ತಿಂಗಳಗಳೊಳಗೆ ಹನ್ನೆರಡು ವರ್ಷಗಳಲ್ಲಿ ಸಿಗದ ಜಯ, ದೇವತೆಗಳಿಗೆ ಜಯ ಒಲಿದು ಬರುತ್ತದೆ. ಜಯವಾದ ದಿನವೇ ನಾವು ಇಂದು *ವಿಜಯ ದಶಮಿ* ಎಂದು ನಾವು ಆಚರಿಸುತ್ತೇವೆ. 

(ವಿಜಯದಶಮಿಯ ದಿನ ಜಯ ದೊರೆತ ಮಾತನ್ನು ದಾಸರು "ದಕ್ಷೀಣದಿಕ್ಕಿನಲ್ಲಿ ರಾಕ್ಷಸರೆದುರಾಗಿ ........"  ನಡೆದೂ ಬಾರಯ್ಯಾ ಎಂಬ ಹಾಡಿನಲ್ಲಿ ತಿಳುಹಿಸಿಕೊಡುತ್ತಾರೆ. ಶಾಸ್ತ್ರಗಳಲ್ಲಿಯೂ ಸಿದ್ಧ ವಿಷಯ.)

ಅಂದಿನಿಂದ ಇಂದಿನವರೆಗೆ ಶ್ರಾವಣ ಪೌರ್ಣಿಮಾದಿನ "ರಕ್ಷಾಬಂಧನ" ದ ವಿಶೇಷ ಆಚರಣೆ ಹಿರಿಯರು ಮಾಡುತ್ತಾ ಬಂದಿದಾರೆ. ಇಂದು ನಾವೆಲ್ಲರೂ ವಿಶೇಷವಾಗಿ ಮಾಡುತ್ತಾ ಇದ್ದೇವೆ. 

ರಕ್ಷಾ (ರಾಖೀ) ಬಂಧನ ಮಾಡುವ ಭಗಿನಿಯರು ಮೇಲೆ ತಿಳಿಸಿದ ಈ ಶ್ಲೋಕವನ್ನು ಹೇಳಿ ಬಂಧನಮಾಡಲಿ. ಭಗಿನಿಯರಿಗೆ ತಿಳಿಯದಾಗಿದ್ದರೆ ಕಟ್ಟಿಸಿ ಕೊಳ್ಳುವವರಾದರೂ ಈ ಶ್ಲೋಕವನ್ನು ಹೇಳಿಸಿ ಕಟ್ಟಿಸಿ ಕೊಳ್ಳಲಿ. 

ಇಂದ್ರನಿಗೆ ಜಯ ದೊರೆತಂತೆ ನಮ್ಮ ಭ್ರಾತೃಗಳಿಗೂ ಅವರಲ್ಲಿಯ ಸದ್ವಿಚಾರಗಳ ಜಯ ದೊರೆಯಲಿ. ದೇವರು ಇಂದ್ರಾದಿಗಳನ್ನು ರಕ್ಷಿಸಿದಂತೆ ನಮ್ಮ ಬ್ರಾತೃಗಳನ್ನು ಸರ್ವವಿಧದಿಂದಲೂ ರಕ್ಷಿಸಲಿ ಎಂದು ಯೋಚಿಸಿ ಸದ್ಭಾವ , ನಿರ್ವ್ಯಾಜ ಪ್ರೀತಿ , ನಿಷ್ಕಲ್ಮಷ ಅಂತಃಕರಣಗಳಿಂದ ಈ ರಕ್ಷಾ ಬಂಧನವನ್ನು ಎಲ್ಲ ಭಗಿನಿಯರೂ ಮಾಡಲಿ.

*ನಮ್ಮ ಜಯದ ಯೋಚನೆ ಇಟ್ಟುಕೊಂಡು ರಕ್ಷಾಬಂಧನವನ್ನು ಮಾಡಿದ ಎಲ್ಲ ಭಗಿನಿಯರಿಗೂ ತಪ್ಪದೆ ಪ್ರೀತಿಯ ಧನ್ಯವಾದಗಳನ್ನೂ ಸಲ್ಲಿಸೋಣ.*

*✍🏼✍🏼ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
Atyanta sundara
Unknown said…
Thankyou ri achaar rakhi habba yak yavgind acharnee bantu ant ತಿಳಿಸಿ ಕೊಟ್ಟಿದಕ್ಕೆ
NYASADAS said…
ನೀವು ಯಾರು ಗೊತ್ತಾಗಲಿಲ್ಲ

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*