*ಓ ಸ್ವರಮಣ !!! ನಿನಗೆ ನಮಃ*
*ಓ ಸ್ವರಮಣ !!! ನಿನಗೆ ನಮಃ*
"ಸ್ವಸ್ಮಿನ್ನೇವ ರಮತಿ ಇತಿ ಸ್ವರಮಣಃ- ತನ್ನಲ್ಲಿಯೇ ತಾನು ಆನಂದದಿಂದ ಇರುತ್ತಾನೆ ಆದ್ದರಿಂದ ಸ್ವರಮಣ" ದೇವರು. ಇದೇ ನಿಜವಾಗಿ ಆನಂದಾನುಭವ. ಹೀಗೇ ನಾವೂ ಆಗಬೇಕು.
ಸುಖಕ್ಕಾಗಿ ಆನಂದಕ್ಕಾಗಿ ಇರುವವರು ನಾವು. ಆನಂದ ಸ್ವರೂಪ ದೇವರು. ಸೌಖ್ಯ ಆನಂದ ಮೊದಲುಮಾಡಿ ಎಲ್ಲವನ್ನೂದೇವರೇ ದಯಪಾಲಿಸುತ್ತಾನೆ . ಅಭಿವ್ಯಕ್ತಗೊಳಿಸುತ್ತಾನೆ.
ಇಂದು ಸುಖ ಸಿಗುವದು ಹೊರಗಿನ ಪದಾರ್ಥಗಳಿಂದ ಎಂದು ನಾವು ಭಾವಿಸಿದ ಕಾರಣ, ಎಲ್ಲವನ್ನೂ ಹೊರಗಿನಿಂದಲೇ ಪಡೆಯಲು ಹಂಬಲಿಸುತ್ತೇವೆ. ಸುಖ ಅನುಭವಿಸುವವ ನಾನು ಅಂದರೆ ಜೀವ. ಅವನೋ ಒಳಗೆ ಇದ್ದಾನೆ. ಸುಖವೋ ಹೊರಗಿನ ಪದಾರ್ಥಗಳಿಂದ ಎಂದು ಆದರೆ ಅದು ಅಸಾಧ್ಯ. "ಹೊರಗಿನ ಯಾವ ಪದಾರ್ಥವನ್ನು ದೇಹ ಮನಸ್ಸು ಒಳಗೆ ಸೇರಿಸಲು ಬಿಡಲಾರದು." ಅದು ಹೊರಗೆ ಹಾಕುವದು ನಿಶ್ಚಿತ. ಅದು ಹೇಗೆ... ??
ನಾವು ಎಷ್ಟು ಸ್ವಾರ್ಥಿಗಳೋ ಅಷ್ಟೇ ಸ್ವಾರ್ಥಿ ದೇಹ ಮತ್ತು ಮನಸ್ಸುಗಳು. ಕಣ್ಣು ಇದೆ ಹೊರಗಿನ ಯಾವ ಪದಾರ್ಥ ಸೇರಿದರೂ ಅದನ್ನು ಹೊರ ಹಾಕುವವರೆಗೆ ಅದಕ್ಕೆ ಸಮಾಧಾನವೇ ಇರುವದಿಲ್ಲ. ಹೊಟ್ಟೆ ಇದೆ, ಅದೂ ಅಷ್ಟೆ. ತಾಯಿಯ ಉದರ ಗರ್ಭಕೋಶ ಇದೆ. ಜೀವ ಒಳ ಹೋದ ಕ್ಷಣದಿಂದ ಹೊರ ಹಾಕಲು ಶ್ರಮಿಸುತ್ತದೆ. ಒಂಭತ್ತು ತಿಂಗಳು ತರುವಾಯ ಆದರೂ ಸರಿ ಹೊರಗೆ ಹಾಕಿಯೇ ತೀರುತ್ತದೆ. ಇದು ದೇಹದ ಸ್ಥಿತಿ ಆದರೆ ...
ಮನಸ್ಸೂ ತೀರ ವಿಭಿನ್ನವೇನಲ್ಲ. ತನ್ನದು ಅಲ್ಲದ್ದು, ತನಗೆ ಸಂಬಂಧವಿಲ್ಲದ್ದು, ಅಥವಾ ಸಂಬಂಧ ಕೆಡಿಸಿಕೊಂಡಿದ್ದು, ಅಂತೂ ತನ್ನದಲ್ಲದ್ದು ಹೊರ ಹಾಕಿಯೇ ತೀರುತ್ತದೆ. ಎರಡು ದಿನ ತಡ ಮಾಡಬಹುದಷ್ಟೆ ದೇಹ ಮನಸ್ಸಿನ ಸ್ಥಿತಿಯೇ ಹೀಗಿರುವಾಗ ಆತ್ಮಾ ಇನ್ನಹೇಗಿರಬಹುದು.. ??
ಸುಖಕ್ಕಾಗಿ ಎಷ್ಟೇ ಹೊರಗಿನ ಪದಾರ್ಥಗಳನ್ನು ಒದಗಿಸಿದರೂ ತೃಪ್ತನು ಆಗಲಾರ. ಅದನ್ನು ತಾನು ಇಟ್ಟುಕೊಳ್ಳಲಾರ. ಆ ಹೊರಗಿನ ಯಾವ ಪದಾರ್ಥದಿಂದಲೂ ಕೊನೆಗೆ ದುಃಖವೇ. ಇದು ಎಲ್ಲರ ಅನುಭವ ಸಿದ್ಧ. ಹಾಗಾದರೆ ಜೀವನಿಗೆ ಬೇಕಾಗಿರುವದು ತನ್ನದೇ ಆದ, ತನ್ನಲ್ಲಿಯೇ ಇರುವ ಆನಂದದ ಆಭಿವ್ಯಕ್ತಿಯೇ ಹೊರತು ಇನ್ಯಾವುದನ್ನು ತಂದೊದಗಿಸಿದರೂ ಅದನ್ನು ನಿರ್ಭಿಡೆಯಿಂದ ಹೊರಗೆಸೆಯುವ. ಹೊರಗೆಸೆಯುವ ಪದಾರ್ಥಕ್ಕಾಗಿ ಸಂಪೂರ್ಣ ಜೀವನ ತೆತ್ತುವದು ಅಷ್ಟು ಸಮಂಜಸವಲ್ಲ.
*ಓ ಸ್ವರಮಣನೇ..... !!!*
ಇಲ್ಲಿಯ ವರೆಗೆ ಜೀವನೇ ಹೊರಗೆಸೆಯುವ ಸುಖಕ್ಕಾಗಿ ನನ್ನ ಜೀವನವನೆಲ್ಲ ಸವಿಸಿ, ನಿನ್ನ ಮರೆತು, ದುಃಖದಲ್ಲಿ ಮುಣುಗೆದ್ದೆ. ಇನ್ನುಮುಂದೆ ಹಾಗೆ ಮಾಡದೇ *ಸ್ವರಮಣನಾದ ನಿನ್ನ ಚಿಂತನೆ ಇಂದಲೇ* ನಿನ್ನ ಪ್ರತಿಬಿಂಬ ನಾದ ನನ್ನನ್ನೂ ಸ್ವರಮಣನನ್ನಾಗಿಸು.
*ತಂ ನಿರ್ವೃತೋ ಭಜೇತ*
ನಮ್ಮ ವಿಹಿತ ಕಾರ್ಯಗಳನ್ನು ನಾವು ಮಾಡುವಾಗ ಆಗಲಿ, ಅಥವಾ ನಮಗೋಸ್ಕರ ನಮ್ಮ ನಮ್ಮ ಕಾರ್ಯಗಳನ್ನು ಮಾಡುತ್ತಿರುವಾಗ ಆಗಲಿ ಮೊದಲು ನಮಗೇ ತೃಪ್ತಿಯಾಗದಿದ್ದರೆ ಕಣದ ದೇವರಿಗೆ ತೃಪ್ತಿ ಯಾಗಿರಬಹುದು ಎಂದು ಊಹಿಸಲೂ ಆಗುವದಿಲ್ಲ. ಹಾಗಾಗಿ ನಮಗೆ ತೃಪ್ತಿಯಾಗುವಂತೆ ನಾವು ಮಾಡೋಣ. ದೇವರನ್ನು ಸಂತೃಪ್ತ ಪಡಿಸೋಣ. ಸಂತೃಪ್ತನಾದ ದೇವರಂತೆ ನಾವೂ ಸ್ವರಮಣ ನಮ್ಮಲ್ಲಿಯೇ, ನಮ್ಮ ಪದಾರ್ಥಗಳಿಂದಲೇ, ನಮ್ಮವರಿಂದಲೇ, ನಮಗೆ ಯೋಗ್ಯವಾದವುಗಳಿಂದಲೇ ತೃಪ್ತರಾಗಿ ಇರೋಣ....
*✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments
these things, therefore I am going to let know her.
I have been browsing online greater than three hours as of late, yet I never discovered any attention-grabbing article like yours.
It’s beautiful worth enough for me. Personally, if all website owners
and bloggers made just right content material as you did, the web can be much
more helpful than ever before. Woah! I'm really enjoying the template/theme of this site.
It's simple, yet effective. A lot of times it's tough to get that "perfect balance"
between superb usability and visual appeal. I must say you've done
a great job with this. Additionally, the blog loads very
fast for me on Safari. Superb Blog! http://pepsi.net
taking some time to release it on your post.
Really Appreciated. I will be visiting your blog
site once again as i just found you release such a remarkable things here.
I figured out a site which is devoted to people who are eager to loose weight quicker
or later on. It's about Keto Body Tone that is getting popular in the USA, and
they are concerning other countries too. Hope you might enjoy to check it out and share your views about Keto Body
Tone Diet Product.