*ವ್ಯಾಸರಾಜೋ ವ್ಯಾಸರಾಜ ಇತಿ ಭಕ್ತ್ಯಾ ಸದಾ ಜಪನ್*
*ವ್ಯಾಸರಾಜೋ ವ್ಯಾಸರಾಜ ಇತಿ ಭಕ್ತ್ಯಾ ಸದಾ ಜಪನ್*
ಅತ್ಯಂತ ಸಂತೋಷದ ಮಹಾ *ವಿಜಯೋತ್ಸವದ ದಿನ* ಪ್ರಾತಃಸ್ಮರಣೀಯ ದೇವಾಂಶ ಸಂಭೂತ ಶ್ರೀಶ್ರೀ ವ್ಯಾಸರಾಜರ ವೃಂದಾವನ ಪುನಃ ಪ್ರತಿಷ್ಠಾಪಿಸಿದ ವೈಭವದ ದಿನ.
ಮೊನ್ನೆಯ ದಿನ ಕಿಡಗೇಡಿಗಳು ವೃಂದಾವನವನ್ನು ಒಡೆದು ಹೋದರು ನಿಜ. ಅಂದಿನಿಂದ ಇಂದಿನ ವರೆಗೆ ಅನೇಕ ನೆಗೆಟಿವ್ ಆದ ಮಾತುಗಳನ್ನು "ನಮ್ಮಿಂದ ನಿಮ್ಮನ್ನು ಉಳಿಸಿಕೊಳ್ಳಲಾಗಲಿಲ್ಲ" "ಕ್ಷಮಿಸಿಬಿಡಿ, ನಿಮ್ಮನ್ಮು ಉಳಿಸಿಕೊಳ್ಳುವ ಯೋಗ್ಯತೆ ನಮಗಿಲ್ಲ" "ಯಾರ್ಯಾರ್ರದೋ ಗದ್ದಲಗಳಲ್ಲಿ ನಿಮನ್ನು ಕಳೆದುಕೊಂಡು ಬಿಟ್ಟೆವು" ಹಾಗೆ ಹೀಗೆ ಮನಬಂದ ತಲೆತೋಚಿದ ನೂರಾರು ಸಾವಿರ ಸಾವಿರ ಮಾತು ಕೇಳಿ ನೋಡಿ ತುಂಬ ಬೇಸರವೂ ಆಯಿತು.
*ಶ್ರೀವ್ಯಾಸರಾಜರು*
"ವ್ಯಾಸರಾಜೋ ವ್ಯಾಸರಾಜ ಇತಿ ಭಕ್ತ್ಯಾ ಸದಾ ಜಪನ್ | ಮುಚ್ಯತೇ ಸರ್ವದುಃಖ್ಯೇಭ್ಯಃ ತದಂತರ್ಯಾಮಿಣೋ ಬಲಾತ್ ||" *ವ್ಯಾಸರಾಜೋ ವ್ಯಾಸರಾಜ ಸ್ಮರಣೆ ಮಾತ್ರದಿಂದ ಶ್ರೀವ್ಯಾಸರಾಜರ ಅಂತರ್ಯಾಮಿಯ ಮಹಾ ಶಕ್ತಿಯಿಂದ ಅಪಜಯ ಮೊದಲಾದ ಎಲ್ಲ ದುಃಖಗಳೂ ನಾಶವಾಗುತ್ತವೆ* ಎಂದು ಶ್ರೀ ಶ್ರೀ ವಿಜಯೀಂದ್ರತೀರ್ಥರು ಮನಬಿಚ್ಚಿ ಹೇಳುತ್ತಿರುವಾಗ ಅವರನ್ನು ಉಳಿಸುವವರು ನಾವ್ಯಾರು... ?? "ವ್ಯಾಸರಾಜರಿಂದ ಶ್ರೀಮದಾಚಾರ್ಯರ ಶ್ರೀಮಟ್ಟೀಕಾಕೃತ್ಪಾದರ ದಿವ್ಯ ಸಿದ್ಧಾಂತ ಉಳಿತೋ, ಅಂತಹ ವ್ಯಾರಾಜರ ಬಗ್ಗೆ ಮಾತಾಡುವವರು ನಾವ್ಯಾರು... ?? ಅತಿಭೀಕರವಾದ ಕುಹ ದೊಷವನ್ನು ಪರಿಹರಿಸಿ, ಅಪಮೃತ್ಯುವಿನಿಂದಲೆ ಗೆಲ್ಲಿಸಿದ ವ್ಯಾಸರಾಜರನ್ನು ಉಳಿಸಿಕೊಳ್ಳುವವರು ಅಂದರೆ ಏನು.... ?? ಶ್ರೀವ್ಯಾಸರಾಜರನ್ನು ಉಳಿಸಿಕೊಳ್ಳುವ ಸಾಮರ್ಥ್ಯ ನಮಗೇನಿದೆ... ?? ನಮ್ಮಂತಹ ಕೋಟಿಕೋಟಿ ಜೀವರಾಶಿಗಳನ್ನು ಉಳಿಸುವ ಅವರ ಶಕ್ತಿ ಸಾಮರ್ಥ್ಯಗಳ ಮುದೆ ಕೊಟ್ಯಂಶಕ್ಕೂ ಸಮ ನಮ್ಮೆಲ್ಲರ ಶಕ್ತಿ ಸಾಮರ್ಥ್ಯಗಳಿಲ್ಲ " ಇದುವೂ ಅಷ್ಟೇ ನಿಜ ತಾನೆ.
*ಇಂದು ನಮ್ಮ ಮಾತಿನ ಧಾಟಿ ಬದಲು ಮಾಡಿಕೊಳ್ಳುವ ಅನಿರ್ಯತೆ ಇದೆ.*
ಭೀಮಸೇನದೇವರಿಗೆ ವನವಾಯಿತು, ಭೀಮಸೇಮದೇವರ ವನವಾಸ ಆಗದಿರುವ ಹಾಗೆ ನೋಡಿಕೊಳ್ಳಬಹುದಾಗಿತ್ತು" ಎಂಬ ಮನಬಂದಂತೆ ಮಾತಾಡುವದು ಸಲ್ಲದು. ಭೀಮನಿಗೆ ಆದ ವನವಾಸವೇ ದುರ್ಯೋಧನಾದಿಗಳ ಸಾವಿಗೆ ಕಾರಣವಾಯಿತು. ಧರ್ಮ ಉಳಿಯಲು ಕಾರಣವಾಯಿತು. ಹಾಗೆಯೇ ಮೊನ್ನೆ ನಡೆದ ದುರ್ಘಟನೆಯಿಂದ ಇನ್ನುಮುಂದೆ ಆಗಬಹುದಾದ ದುಷ್ಟರ ಶಿಕ್ಷೆ ನೆನೆಸೋಣ. ದುಷ್ಟರ ದುಷ್ಟಭಾವಗಳ ಸಂಹಾರ ಕಾಣೋಣ.
*ಜಯರಾಯರ ಅನುಗ್ರಹವಿರುವವರಿಗೆ ಶಾಶ್ವತ ವಿಜಯವೇ ಕಟ್ಟಿಟ್ಟ ಬುತ್ತಿ*
"ಟೀಕಾ ಗಾಂಭೀರ್ಯಮುದ್ಧರ್ತುಂ ವ್ಯಾಸತೀರ್ಥಾದಯಃ ಕ್ಷಮಾಃ" "ಶ್ರೀಮಟ್ಟೀಕಾಕೃತ್ಪಾದರ ಪ್ರತಿವಾಕ್ಯಗಳ ಗಾಂಭಿರ್ಯ ಆಳವಾದ ಅರ್ಥವನ್ನು ಹೊರತಗೆಯಲು ಶ್ರೀಶ್ರೀ ವ್ಯಾಸರಾಜರಂಥಹ ಮಹಾನುಭಾವರೇ ಸಮರ್ಥರು" ಎಂದು ಗುರು ಸಾರ್ವಭೌಮರಾದ ರಾಘವೇಂದ್ರ ಪ್ರಭುಗಳು ಹೇಳುತ್ತಾರೆ. ಇಷ್ಟದ್ಭುತವಾಗಿ ಶ್ರೀವ್ಯಾಸರಾಜರು ಸೇವೇಮಾಡಿ ಶ್ರೀಮಜ್ಜಯತೀರ್ಥರ ಮಹಾನ್ ಅನುಗ್ರಹಕ್ಕೆ ಪಾತ್ರರಾಗಿರುವಾಗ ಅವರಿಗೆ ಸೋಲು ಪರಾಭವ ನಾಶ ಹಾನಿಗಳುಂಟೇ... ??? ಸರ್ವಥಾ ಇಲ್ಲ. ಹಾಗೇನಾದರೂ ತೋಚಿದ್ದರೆ ಅದು ಕೇವಲ ನಮ್ಮ ಭ್ರಮೆ ಮಾತ್ರ.
ಇಂದಿನ ಸಣ್ಣ ಹಾನಿ ಮುಂದಿನ ಮಹಾ ದುಷ್ಟರ ನಾಶಕ್ಕೆ ನಾಂದಿ ಆಗಿದೆ. ದೈತ್ಯರ ದುಷ್ಟರ ಅಧರ್ಮದ ನಾಶಕ್ಕೆ ಇಂದಿನ ಈ ಘಟನೆ ನಾಂದಿಯಾಗಿದೆ. ಆದ್ದರಿಂದ ತಲೆಯಿದೆ ಎಂದು ತಲೆಗೆ ಬಂದ ಮಾತು ಬೇಡ.
ಪ್ರತಿನಿತ್ಯ ಶ್ರೀವ್ಯಾಸರಾಜರ ಸ್ತೋತ್ರ ಪಠಣ ಮಾಡೋಣ. ನಮ್ಮೆಲ್ಲರ ಉದ್ಧಾರಕ್ಕಾಗಿಯೇ ರಚಿಸಿಕೊಟ್ಟ ವ್ಯಾಸತ್ರಯ ಮೊದಲಾದ ಗ್ರಂಥಗಳನ್ನು ಆದ್ಯಯನ ಮಾಡೋಣ. ಆ ಉದ್ಗ್ರಂಥಗಳ ಅಧ್ಯಯನ ಯಾರಿಗೆ ಅಸಾಧ್ಯವೋ ಅವರಿಗೋಸ್ಕರವೇ ಕನ್ನಡದ ನೂರಾರು ಕೃತಿಗಳನ್ನು ರಚಿಸಿಕೊಟ್ಟಿದ್ದಾರೆ ಅವುಗಳನ್ನು ತಯಾರು ಮಾಡೋಣ. ದುರ್ಗುಣಗಳ ನಾಶವಾಗಿ, ಉತ್ತಮೋತ್ತಮ ಗುಣಗಳ ಅಭಿವೃಧ್ಧಿಗಾಗಿಯೇ ಅನೇಕ ಊರು ಕೇರಿಗಳಲ್ಲಿ ಹನುಮಂತದೇವರನ್ನು ಸ್ಥಾಪಿಸಿಕೊಟ್ಟಿದ್ದಾರೆ ನಿತ್ಯ ಆ ಹನುಂತನ ಆರಾಧನೆ ಮಾಡೋಣ. ಶ್ರೀಶ್ರೀವ್ಯಾಸರಾಜರ ಅನುಗ್ರಹಕ್ಕೆ ಪಾತ್ರರಾಗಿ *ನಮ್ಮನ್ನು ನಾವು ಉಳಿಸಿಕೊಳ್ಳದ ದುರ್ಧರ ಪ್ರಸಂಗದಿಂದ ಗೆದ್ದು ಬರೋಣ* ಈ ಮೂರು ಕಾರ್ಯಗಳನ್ನು ಇಂದಿನ ವಿಯೋತ್ಸವದ ದಿನದಿಂದ ಆರಂಭಿಸೋಣ. "ಶ್ರೀಶ್ರೀಶ್ರೀವ್ಯಾಸರಾಜರಿಗೆ ಅನಂತಾನಂತ ವಂದನೆಗಳನ್ನು ಸಲ್ಲಿಸುತ್ತಾ ನಿಮ್ಮ ದಾಸರ ಗುಂಪಿನಲ್ಲಿರಿಸಿ ಅಯತಾರ್ಥ ಜ್ಙಾನ ಬರದಿರುವದಂತೆ ಮಾಡಿ" ಎಂದು ಪ್ರಾರ್ಥಿಸಿತ್ತಾ ಲೇಖನಿಯನ್ನು ಕೆಳಗಿಳಿಸುವೆ.
*✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.
Comments
Your suggestions are well taken
But huge Brahmin community with so many religious leaders has to have some responsibility to protect our own heritage. No excuses on that. Please forgive me if I am wrong
ಎಲ್ಲ ಬಿಡಿ, ಐನೂರು ವರ್ಷದ ಪಾರಂಪರಿಕ ವೃಂದಾವನ ಧ್ವಂಸ ಮಾಡಿದರಲ್ಲ, ಅಲ್ಲಿರುವ ಭದ್ರತಾ ಲೋಪದ ಬಗ್ಗೆಯಷ್ಟೇ ನನ್ನ ಅಭಿಪ್ರಾಯ. ನಿಧಿಯಾಸೆಗೆ ಮಾಡಿದ್ದರೆ ಅದು ವ್ಯಾಸರಾಜರು ಅವರ ವ್ಯಾಪ್ತಿ ಇಷ್ಟೊಂದಿದೆ ಎಂಬ ಕಲ್ಪನೆಯೂ ನಾಶ ಮಾಡಿದವರಿಗಿರುವುದಿಲ್ಲ. ಹಂಪಿಯನ್ನು ಕಾಯಲಿಕ್ಕೆ ಮೂರು ಮೂರು ಸಂಸ್ಥೆಗಳಿದ್ದರೂ ಹೀಗಾಯಿತಲ್ಲವೆಂಬುದಷ್ಟೇ ನನ್ನ ಕಳವಳ. ದಯವಿಟ್ಟು, ಇನ್ನೊಮ್ಮೆ ಲೇಖನ ಓದಿ, ಅರ್ಥವಾಗಲಿಲ್ಲವಾ ಇನ್ನೂ ಹತ್ತು ಬಾರಿ ಓದಿ. ಅರ್ಥಮಾಡಿಕೊಳ್ಳಿ. ಆಮೇಲೆ ದೋಷ ಕಂಡರೆ ಹೇಳಿ, ದೋಷವಿದ್ದರೆ ತಿದ್ದಿಕೊಳ್ಳುತ್ತೇನೆ, ಸರಿಯಿದ್ದರೆ ಸಮರ್ಥಿಸುತ್ತೇನೆ. ಆದರೆ ಸರಿಯಾಗಿ ಅರ್ಥವೇ ಮಾಡಕೊಳ್ಳದೆ ನನ್ನನ್ನು ವೃಥಾ ಅಪರಾಧಿಯನ್ನಾಗಿಸಬೇಡಿ. ಏಕೆಂದರೆ ವ್ಯಾಸರಾಯರ ಬಗ್ಗೆ ನೀವೆಷ್ಟು ಭಾವುಕರೋ ಅದರ ಹತ್ತು ಪಟ್ಟು ಭಾವುಕ ನಾನು. ಅವರ ಗ್ರಂಥವನ್ನೋದಿದವ ನಾನು ಅವರ ಬಗ್ಗೆ ಮಾತನಾಡತ್ತೇನಾ?? ನಾನನ್ನದೇ ಇದ್ದದ್ದನ್ನ ಅಂದಿದ್ದೀ ಎಂದು ನೀವೇ ತೀರ್ಮಾನಿಸಿ ನನ್ನೆದೆ ಇರಿಯಬೇಡಿ. ತುಂಬ ನೋವಾಗುತ್ತದೆ ಇಂಥ ಮಾತು ಕೇಳಲು. ಅವರು ನನಗೂ ವ್ಯಾಸರಾಜರೆ🙏🏼🙏🏼🙏🏼
.
.
ಯಾಜ್ಞವಲ್ಕ್ಯ ಜೋಷಿ