*ಲೆಕ್ಕಾಚರ ಬಂತು, ಬಲ ಇಲ್ಲವಾಯಿತು*

*ಲೆಕ್ಕಾಚರ ಬಂತು, ಬಲ ಇಲ್ಲವಾಯಿತು*

ಮನಸ್ಸಿನಲ್ಲಿ ಯಾವ ಗೊಂದಲಗಳೂ ಲೆಕ್ಕಾಚಾರಗಳು ಇರುವದಿಲ್ಲವೋ ಅವನು ವಿನೋದ ಭರಿತ. ಯಾರು ವಿನೋದ ಭರಿತರೋ ಅವ ಬಲಶಾಲಿ. ಯಶಸ್ವೀ ಮನುಷ್ಯ. 

ಬಿಲ್ವಿದ್ಯೆಯಲ್ಲಿಯೋ, ಗಣಿತದಲ್ಲಿಯೋ, ದೇಹದಾರ್ಢ್ಯತೆಯಲ್ಲಿಯೋ, ಕ್ರೀಡೆಯಲ್ಲಿಯೋ, ತತ್ವಜ್ಙಾನದಲ್ಲಿಯೋ ಬಹಳ ನಿಪುಣನಾಗಿರುತ್ತಾನೆ. ಆದರೆ ಸ್ನಮಾನ ಬಹುಮಾನ prize ಹೀಗೆ ತಲೆಯಲ್ಲಿ ಹೋಯಿತು ಎಂದಾದರೆ ಅವ ಟೆನ್ಶೆನ್ ಗೆ ಒಳಗಾಗುತ್ತಾನೆ ಕೈಕಾಲು ನಡಗಲು ಆರಂಭಿಸುತ್ತವೆ. ಫೇಲ್ ಆಗುವ ಸಂಭವ ಹೆಚ್ಚಾಗುತ್ತದೆ. 

ಒಂದು ಸುಂದರ ಕಥೆ... 

ಒಬ್ಬ ಭಿಕ್ಷುಕ. ಅವನ ಮಗ. ಭಿಕ್ಷೆಯಲ್ಲಿ ಬಂದದ್ದು ತಿನ್ನುವದು.   ಗಿಡದ ಕೆಳಗೆ ವಾಸ ಮಾಡುವದು. ಹೀಗೆ ಅವರ ಜೀವನ.  ಮಗನಲ್ಲಿ ಒಂದು ಬಲಾಢ್ಯ ಶಕ್ತಿ ಕೌಶಲ. ಆಗಾಗ ಆ ಕೇರಿಗೆ ರಾಜ ಆನೆಯ ಮೇಲೆ ಕುಳಿತು ಬರಬೇಕು. ಈ ಹುಡಗ ಆನೆಯ ಬಾಲ ಹಿಡಿದ ಎಂದಾದರೆ ಆನೆಗೆ ಮುಂದೆ ಹೋಗಲೇ ಆಗ್ತಿರಲಿಲ್ಲ. ಹೀಗೆ ಆಗಾಗ ನಡೀತಾ ಇರಬೇಕು. ಊರ ಜನ ನೋಡಿ ನಗಬೇಕು. ರಾಜನಿಗೋ ಅವಮಾನ. 

ರಾಜ ತನಗೆ ಆಗುವ ಈ ಅವಮಾನ ಕಂಡು ಬೇಸತ್ತು ಮಂತ್ರಿಯ ಬಳಿ ಹೇಳಿಕೊಳ್ಳುತ್ತಾನೆ.  ಆ ಹಳ್ಳಿಗೆ ಹೋಗಲೇ ಮಾನ ಸಾಲದಾಗಿದೆ. ಹಾಗೆ ಹೀಗೆ ಅಲವತ್ತುಕೊಳ್ಳುತ್ತಾನೆ. ಹೇಗಾದರು ಮಾಡಿ ಅವನನ್ನು ದುರ್ಬಲನನ್ನಾಗಿ ಮಾಡಬೇಕು. 

ಮಂತ್ರಿ ಯೋಚಿಸಿ ಹೇಳುತ್ತಾನೆ. ಏನಿಲ್ಲ. ಅವನಿಗೆ ಯಾವ ಚಿಂತೆಯಿಲ್ಲ. ಹಾಗಾಗಿ ಬಲಾಢ್ಯ.  *ಅವನ ಬಲ ಮೀರಿಸುವದು ಒಂದು* ಆದರೆ ಅದು ಅಸಾಧ್ಯ. *ಅವನನ್ನು ನಮ್ಮ ಬಲದ ಕೆಳೆಗೆ ನೂಕುವದು* ಮತ್ತೊಂದು. ಇದು ಸರಳ. ಅವನನ್ನು ದುರ್ಬಲನನ್ನಾಗಿ ಮಾಡು.  

ಆ ಬಲಾಢ್ಯ ಬಾಲಕನಿಗೆ ಕರೆದು ಹೇಳು. "ನಿತ್ಯವೂ ದೇವರ ಗುಡಿಗೆ ಹೋಗಿ ದೇವರ ಎದುರಿಗೆ ದೀಪ ಹಚ್ಚಿ ಬರಬೇಕು. ನಾನು ನಿತ್ಯವೂ ಒಂದು ನಿನಗೆ ಭಂಗಾರದ ನಾಣ್ಯ ಕೊಡುವೆ"  ಎಂದು. 

ನಿತ್ಯವೂ ಬಾಲಕ ದೀಪ ಹಚ್ಚಿ ಬರಬೇಕು. ನಾಣ್ಯ ಪಡಿಯಬೇಕು. ಹೀಗೆ ಹತ್ತಾರು ದಿನಗಳು ಕಳೆದವು. ಒಮ್ಮೆ ರಾಜ ಆನೆಯ ಮೆಡಲೆ ಕುಳಿತು ಯಥಾ ಪ್ರಕಾರ ಬಂದ. ಈ ಹುಡುಗ ಬಾಲ ಹಿಡಿದ. ಆನೆ ಆ ಬಾಲಕನನ್ನು ಎಳೆದೊಯ್ದು ಬಿಡ್ತು. ರಾಜನಿಗೆ ಊರಿನವರಿಗೆ ಸ್ವಯಂ ಆ ಹುಡಗನಿಗೆ ಆಶ್ಚರ್ಯ. ಇದು ಹೇಗೆ ಸಾಧ್ಯ... 

ಮಂತ್ರಿ - *ದುರ್ಬಲನ್ನಾಗಿ ಮಾಡಲು ಸರಳ ಉಪಾಯ disturb ಮಾಡುವದು.* ಆ ಬಾಲಕನಿಗೆ ನಿತ್ಯ ಒಂದು ನಾಣ್ಯ ಕೊಡ್ತಾ ಇದ್ದೀ. "ಇವುಗಳು ಐದು ಎಂದಾದಾವು.. ಹತ್ತು ಎಂದು ಆದಾವು. ನೂರು ಎಂದು ಆದಾವು.. ಅವುಲ ರಕ್ಷಣೆ ಹೇಗೆ... ಏನು ತೆಗೆದುಕೊಂಡು ಖರ್ಚು ಮಾಡಬೇಕು..." ಹೀಗೆ ಅವನು ವಿಚಾರ ಮಾಡಲು ಲೆಕ್ಕಾಚಾರ ಹಾಕಲು ಆರಂಭಿಸಿದ.  ಎಂದು ಲೆಕ್ಕಾಚಾರ ಮನಸ್ಸಿನಲ್ಲಿ ಹೋಯಿತೊ ಅಂದೇ ಮಾನಸಿಕವಾಗಿ ಅವನು ದುರ್ಬಲನಾಗ್ತಾ ಸಾಗಿದ.  

ಮನಸ್ಸು ಏಕಾಗ್ರವಾಗಿದ್ದರೆ ಬಲಶಾಲಿಯಾಗಿಯೇ ಇರತ್ತೆ. ಯಾರ ಕೈಕಾಲುಗಳೂ ಎಂದಿಗೂ ನಡುಗುವದಿಲ್ಲ. ಆದರೆ ಎಂದು ಮನಸದಸು ಲೆಕ್ಕಾಚಾರಕ್ಕೆ ಇಳಿತೋ, ಆ ಕ್ಷಣಕ್ಕೆ ಅವ ತನ್ನ ಅಮೂಲ್ಯವಾದ ಬಲವನ್ನೆಲ್ಲ ಕಳೆದುಕೊಂಡ ಎಂದೇ ಅರ್ಥ.  ಇದು ನೀ ಹೇಗೆ ತಿಳಿದುಕೊಂಡೀ ಇದು ರಾಜರ ಪ್ರಶ್ನೆ... 

ಮಂತ್ರಿಯ ಉತ್ತರ ಸರಳ. ಬ್ರಹ್ಮಣರನ್ನು ನೋಡಿ ಕಲೆತೆ. ಬ್ರಹ್ಮಣ ಏಕಾಗ್ರತೆ ಎಂದು ಕೆಡಿಸಿಕೊಂಡ ಅಂದೇ ಅವ ದುರ್ಬಲನಾದ. ಎಂದು ಏಕಾಗ್ರತೆ ಪಡೆಯುವ ಅಂದು ಅವನನ್ನು ಅಲ್ಲ, ಅವನ ಉಸಿರನ್ನೂ ಅಲಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಇದು ಸಾವಿರಾರು ಋಷಿ ಮುನಿಗಳ ನಿದರ್ಶನದಿಂದ ನೋಡಿ ತಿಳಿದೆ.

ಈ ಕಥೆಯಿಂದ ನಾವು ತಿಳಿಯುವದ ಒಂದೇ, ನಮ್ಮನ್ನು disturb ಮಾಡಲು ನೂರು ಬರಬಹುದು. ಸಾಧ್ಯ ವಿದ್ದಷ್ಟು ಏಕಾಗ್ರತೆ ಸಂಪಾದಿಸಿದರೆ ನಮ್ಮ ಈಗಿರುವ ಬಲವನ್ನಾದರೂ ಉಳಿಸಿಕೊಳ್ಳಬಹುದು. ಕೈ ಕಾಲು ನಡುಗದೇ ಪರೀಕ್ಷೆಯಲ್ಲಿ ಗೆದ್ದು ಬರಬಹುದು. ಏಕಾಗ್ತೆಗೋಸ್ಕರ *ಸಂಧಾ / ಜಪ / ಪೂಜೆ* ಇವುಗಳು ಅನಿವಾರ್ಯ..

*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
It’s the best time to make some plans for the future and it is time to be happy.
I have read this post and if I could I wish to suggest
you few interesting things or advice. Perhaps you can write
next articles referring to this article. I want to read more things
about it! Hi, i read your blog occasionally and i own a similar
one and i was just wondering if you get a lot of
spam comments? If so how do you prevent it, any plugin or anything you can recommend?
I get so much lately it's driving me mad so any support is very much appreciated.
Wow, this article is fastidious, my younger sister is analyzing such things, thus I am going to inform her.
http://foxnews.net
Anonymous said…
4. Save space with mini-packets of laundry detergent.
Anonymous said…
Get your own Clever Solar Box plans and get to function.
Anonymous said…
Plus, solar panels are not portable either.
Anonymous said…
This Clever Solar Box is extremely easy to make.
Anonymous said…
Hi i am kavin, its my first occasion to commenting anyplace, when i read
this post i thought i could also create comment due to this sensible article.
Anonymous said…
Your way of explaining the whole thing in this article is really fastidious, every one can effortlessly
know it, Thanks a lot.
Anonymous said…
If you wish for to get a great deal from this article then you have to apply such techniques to your won website.

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*