*ಆಷಾಢ ಏಕಾದಶೀ*

*ಆಷಾಢ ಏಕಾದಶೀ*

ನಮ್ಮ ಮಾತುಗಳನ್ನು ದೇವರು ಏಕೆ ಕೇಳುವದಿಲ್ಲ... ?? ಉತ್ತರ ಸಹಜ, *ದೇವರ ಮಾತನ್ನು ನಾವು ಕೇಳುವದಿಲ್ಲ."  ನಾವು ಯಾರ ಮಾತು ಕೇಳುತ್ತೇವೆ, ಅವರು ನಮ್ಮ ಮಾತು ಕೇಳುತ್ತಿರುತ್ತಾರೆ. ದೇವರ ಮಾತು ನಾವು ಕೇಳುವದಿಲ್ಲ. ನಮ್ಮ ಮಾತು ಅವನು ಕೇಳುದಿಲ್ಲ. 

*ದೇವರ ಯಾವ ಮಾತು ಕೇಳಿಲ್ಲ.... ???* 

"ನಿತ್ಯ ಸಂಧ್ಯಾವಂದನೆ ಮಾಡು" ಆಗುವದಿಲ್ಲ. "ನಿತ್ಯ ದೇವರ ಪೂಜೆ ಮಾಡು" ಸಮಯವಿಲ್ಲ. "ಅರ್ಧಗಂಟೆ ಅಧ್ಯಯನ ಮಾಡು" ಓದು ನಮಗೆ ಅಗಲ್ಲ.  *ಹದಿನೈದಿ ದಿನಕ್ಕೊಮ್ಮೆ ಏಕಾದಶೀ ಮಾಡು* ಅಸಾಧ್ಯದ ಮಾತು. ಹೀಗೆ ಯಾವ ಮಾತೂ ಕೇಳಲು ಆಗುವದೇ ಇಲ್ಲ. ಎಲ್ಲ ಮಾತುಗಳನ್ನೂ ಕೇಳಿದ್ದರೆ ಇಂದು ಇಲ್ಲಿ ಇರುತ್ತಿದ್ದಿಲ್ಲ. ಒಂದಾದರೂ ಕೇಳೇಬಿಡೋಣಲ್ಲವೇ.....

ವರ್ಷದ ಇಪ್ಪತ್ತು ನಾಲ್ಕು ಏಕಾದಶಿ ಉಪವಾಸ ಮಾಡಿದ ಫಲ ಬರತ್ತೆ ಆಧದರಿಂದ *ಪ್ರಥಮ ಏಕಾದಶೀ ಉಪವಾಸ ಮಾಡು* ಎಂದು ಹೇಳಿದ್ದಕ್ಕಾಗಿ ಇಂದು ಒಂದು ದಿನ ಉಪವಾಸ ಮಾಡುವ ಮುಖಾಂತರ ದೇವರ ಮಾತು ಕೇಳುವ ಪ್ರಸಂಗ ಬಂದಿದೆ. ಅದಕ್ಕೇ ನಾವು ಖುಶಿ ಪಡಬೇಕಷ್ಟೆ...

*ಈ ಬಾರಿಯ ಏಕಾದಶೀ......*

ದೇವರ ಅಪಾರ ಕಾರುಣ್ಯದಿಂದ  ನಾಳೆಗೆ  ಏಕಾದಶೀ ಇದೆ. ಅದೂ ಪ್ರಥಮೈಕಾದಶಿ.   ಸಂತತ ಏಕಾದಶಿ ಹರಿಯ ಸನಿಹದಲ್ಲಿ ಕುಳಿತು ಭಾಗವತಾದಿ ಗ್ರಂಥಗಳ ಶ್ರವಣ ಮಾಡುತ್ರಾ, ಹರಿನಾಮ ಸರಣೆ ಮಾಡುತ್ತಾ ಉಪವಾಸ ಮಾಡು ಎಂಬ ಮಾತನ್ನು ಪಾಲಿಸುವ ಸಮಯ ನಾಳೆಗೆ ಒದಗಿ ಬಂದಿದೆ. 

*ಉಪವಾಸ ಮಾಡಬೇಕು ಯಾಕೆ*

ಏಕಾದಶೀ ದಿನ ಮಾಡುವ ಉಪವಾಸ, ಅಂದು ಅನುಭವಿಸುವ ಹಸಿವೆಯ ಕ್ಷಣ ಕ್ಷಣದ ಕಷ್ಟ, ನಮ್ಮ ನೂರಾರು ಜನ್ಮದ ಪಾಪ ಪರಿಹರಿಸುತ್ತದೆ. ಅಪಾರ ಪುಣ್ಯರಾಶಿಯನ್ನು ಒದಗಿಸುತ್ತದೆ. ಜೊತೆಗೆ ಇಂದಿನ ಒಂದೊಂದ ತುತ್ತಿನ ಅನ್ನದ ಮಹತ್ವವನ್ನೂ ತಿಳಿಸುತ್ತದೆ. 

ಏಕಾದಶೀ ದಿನದಂದು ತಿನ್ನುವ ಪ್ರತೀ ಅಗಳಿನಲ್ಲೂ ಎಲ್ಲ  ಪಾಪಗಳು, ಪಾಪಾಭಿಮಾನಿ ದೈತ್ಯರೂ ಸೇರಿಕೊಂಡಿರುತ್ತಾರೆ. ಏಕಾದಶಿಯಂದು ತಿನ್ನುವದು ಎಂದರೆ *ಆ ಎಲ್ಲ ಪಾಪಗಳಿಗೂ ಪಾಪಾಭಿಮಾನಿ ದೈತ್ಯರಿಗೂ ನಮ್ಮ ದೇಹವೆಂಬ ಮನೆಗೆ welcome ಸ್ವಾಗತ ಮಾಡಿದ ಹಾಗೆಯೇ.* ಹೀಗೆ ಎರಡು ಕಾರಣಗಳಾದರೆ   ಇನ್ನೊಂದು ಕಾರಣ "ದೇವರು ತನಗೋಸ್ಕರ ಇಟ್ಟುಕೊಂಡ  ದಿನ ಇಂದಿನ  ಈ ದೀನದ ಏಕಾದಶೀವ್ರತ" ಇಂದು ಉಪವಾಸ ವ್ರತ ಮಾಡದಿದ್ದರೆ *ಸ್ಪಷ್ಟವಾಗಿ ನಾನು ನಿನ್ನ ಮಾತು ಕೇಳುವದಿಲ್ಲ* ಎಂದು ದೇವರನ್ನು ತಿರಸ್ಕರಿದಂತೆಯೇ ಸರಿ"  ಈ ಎಚ್ಚರ ಇಟ್ಟುಕೊಂಡೇ ನಿರ್ಣಯಿಸೋಣ. ನಾಳೆ ಇರುವ ಉಪವಾಸ ಮಾಡೋಣವೇ ಬೇಡವೆ ಎನ್ನುವದನ್ನು.

*ಉಪವಾಸದ ದಿನದಂದು ಏನೇನು ಮಾಡಬೇಕು*

ಹರಿವಾಸರ ಹರಿದಿನ ಕೆಲವರಿಗೆ  ನಾಳೆ ಆದ್ದರಿಂದ ಇಂದಿನ ಪ್ರತಿಕ್ಷಣ ಪ್ರತಿ ಉಸಿರು ದೇವರಿಗೇ ಮೀಸಲು. ಸ್ನಾನ/ ಸಂಧ್ಯಾವಂದನ/ ಜಪ/ಪಾರಾಯಣ/ ಭಾಗವತ ಮಹಾಭಾರತ ಶ್ರವಣ/ ಭಜನೆ/ ಜಾಗರಣೆ ಇತ್ಯಾದಿ ಅನೇಕ ಇಂದು ವಿಧಿಸಿದ್ದಾರೆ. ಮೌನವ್ರತಕ್ಕೆ ತಮಬ ಫಲವಿದೆ. 

ಎಲ್ಲದರ ಮೇಲೆ ಉಪವಾಸ ಎಂದರೆ  *ಚಹ ಕಾಫಿ ಕುಡಿದು, ನಾಲ್ಕು ಹೊತ್ತೂ ತಿಂದು, ಉಪವಾಸ ಇದ್ದೇನೆ ಎಂದು ಬೀಗಿ, ಇಂದು ಜಾಗರಣೆ ಮೊದಲು ಮಾಡಿ  ಏನು ಮಾಡಿದರೂ ಅದರಿಂದ ಏನೂ ಫಲವಿಲ್ಲ* ಇದು ನೂರಷ್ಟು ಸಿದ್ಧ.  ಎಲ್ಲದರ ಮೇಲೆ ದೇವರ ಮಾತು ಮೀರಿದಂತೆ ಆಗುವದು. ಆದ್ದರಿಂದ ಉಪವಾಸ ಮಾಡಿಯೇ ತೀರೋಣ. 

ದೇವರ ಮಾತು ನೂರು ಕೇಳದಿದ್ದರೂ, "ಇಂದಿನ ಈ ವ್ರತ ಮಾಡುವ ಮುಖಾಂತರ ನಾನು ನಿನ್ನ ಮಾತು ಕೇಳುವವರ ಸಾಲಿನಲ್ಲಿ ಬರುವೆ" ಎಂದು ದೇವರೆದುರಿಗೆ ಸಾಬೀತು ಮಾಡಿ ತೋರಿಸೋಣ. ಅವನೂ ನಾವು ಹೇಳದ ಬೇಡದ ನೂರು ಸಾವಿರ ಅನಂತ ಉಪಯುಕ್ತಗಳನ್ನು ಒದಗಿಸಿದ್ದರೂ "ನಾವು ಕೇಳಿದ ಮೂರ್ನಾಲ್ಕನ್ನೂ ಒದಗಿಸಿಕೊಡುತ್ತಾನೆ" ಎಂಬ ಭರವಸೆಯಿಂದಾದರೂ ಉಪವಾಸ ಮಾಡಿಯೇ ತೀರೋಣ.....

ನಾನು ವೈಷ್ಣವವಿಷ್ಣುಭಕ್ತ ಎಂದು   ಸಾಬೀತು ಮಾಡಲು ಇದೊಂದು ಅತ್ಯುಪಯುಕ್ತವ್ರತ. ಎಲ್ಲ ವ್ರತಗಳಲ್ಲೂ ಸರ್ವೋತ್ತಮ ವ್ರತ ಏಕಾದಶೀ ವ್ರತ. ವಿಷ್ಣುವಿಗೆ ಪರಮ ಪ್ರಿಯವಾದ ವ್ರತ. ನಮ್ಮ ಆರೋಗ್ಯಕ್ಕೂ ಉಪವಾಸ ಬಹಳ ಶ್ರೇಷ್ಠ ಉಪಾಯ. ಮನೋ ನಿಗ್ರಹ ಕ್ಕೆ ಉಪಾಯ ಉಪವಾಸ. ಇಂದ್ರಿಯ ಜಯಕ್ಕೆ ಉಪವಾಸ ಮೊದಲ ಮೆಟ್ಟಲು. ಸಾಧಿಸೋಣ, ಸಿದ್ಧರಾಗೋಣ...

*✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ. ಸಿರವಾರ.

Comments

NYASADAS said…
Adbhuta lekhana

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*