*ಭಕ್ತ್ಯೈವ - ತುಷ್ಯತಿ*
*ಭಕ್ತ್ಯೈವ - ತುಷ್ಯತಿ*
ಸಾಧಕನಾದ ಜೀವ, ಸಿದ್ದಿಕೊಡುವವ ದೇವ. "ಸಾಧಕನಲ್ಲಿ ಇರುವವದು ಮೊಟ್ಟ ಮೊದಲಗುಣ ಭಕ್ತಿ ಎಂದಾದರೆ. ದೇವನಿಂದ ಪಡೆಯುವ ಅತೀ ಶ್ರೇಷ್ಠ ಫಲ ಭಗತ್ಪ್ರೀತಿ" ಇವೆರಡೂ ಇರುವದು ಅನಿವಾರ್ಯ. ಅಂತೆಯೇ ಶ್ರೀಮದಾಚಾರ್ಯರು *ಭಕ್ತ್ಯೈವ ತುಷ್ಯತಿ* ಭಕ್ತಿಯಿಂದಲೆ ಭಗವತ್ಪ್ರೀತಿ ಎಂದರು. ಈ ವಾಕ್ಯಕ್ಕೆ ಮೂಲಾಧಾರವಾಗಿ ವೇದವ್ಯಾಸರು *ಭಕ್ತಪ್ರಿಯಮ್* ಎಂದು ಹೇಳಿದರು.
*ಜ್ಙಾನೇನೈವ ಭಕ್ತಿಃ*
ಭಕ್ತಿ ಬರುವದು ಉಂಟಾಗುವದು ಕೈ ಮುಗುದೆ, ಕಾಲು ಮುಗುದೆ, ಉರುಳುಹಾಕಿದೆ, ಇನ್ನೇನೋ ದೈಹಿಕ ನೂರು ಮಾಡಿದರೂ ಅದು ಭಕ್ತಿ ಎಂದಿನಿಸದು. ಅವುಗಳಿಂದ ಅಥವಾ ಕೈ ಮುಗಿ ಎಂದರೆ ಭಕ್ತಿ ಪುಟ್ಟದು. "ನಾನಾವಿಧ ಗುಣಗಳ ಜ್ಙಾನದಲ್ಲಿ ಮುಳುಗಿದಾಗಲೇ ಭಕ್ತಿ ಪುಟ್ಟುವದು" ಜ್ಙಾನ ಬೆಳೆದಂತೆ ಬೆಳಿಯುವದು. ಜ್ಙಾನಶುದ್ಧವಾದಂತೆ ಭಕ್ತಿ ದೃಢವಾಗುವದು. ಭಕ್ತಿ ಪುಟ್ಟಲು ಜ್ಙಾನವೇ ಮೂಲ. ಜ್ಙಾನವಿಲ್ಲದ ಭಕ್ತಿ "ಕುರುಡಭಕ್ತಿ" ಎಂದೇ ಅನಿಸುವದು. ಭಕ್ತಿ ಹಾಗಾಗಲೇ ಬಾರದು ಎಂಬ ಬಯಕೆ ಇರುವವರೆಲ್ಲರೂ ತತ್ವಜ್ಙಾನದಲ್ಲಿಯೇ ತೊಡಗಿಕೊಂಡರು.
*ವೈರಾಗ್ಯದಿಂದಲೇ ಜ್ಙಾನ*
ವಿಜಯದಾಸರು ಹೇಳಿದಂತೆ "ಜ್ಙಾನವಿಲ್ಲದೇ ಮೋಕ್ಷವಿಲ್ಲ* ಎಂದು ಹೇಳಿದಂತೆ ಮುಕ್ತಿಗೋಸ್ಕರ ಭಕ್ತಿ, ಭಕ್ತಿಗೋಸ್ಕರ ಜ್ಙಾನ. ಜ್ಙಾನಕ್ಕಾಗಿ ವೈರಾಗ್ಯ. ಭೋಗಿಯಾದವಗೆ ಜ್ಙಾನ ಹಗಲುಗನಸಾಗಬಹುದು. ಅದು ನನಸು ಆಗಬೇಕಾದರೆ ಸೃವಸಂಗ ಬಿಟ್ಟು ಗುರುಬಳಿ ತೆರಳಿ ಗುರು ಶುಶ್ರೂಶೆಯ ದ್ವಾರಾ ಜ್ಙಾನ ಸಂಪಾದಿಸಿದಾಗಲೇ ಶುದ್ಧ ಜ್ಙಾನ ದೊರೆಯುವದು.
ವೈರಾಗ್ಯವಿದ್ದರೆ ಜ್ಙಾನಕ್ಕೆ ಅವಕಾಶ. ಜ್ಙಾನವಿರುವಲ್ಲಿ ಭಕ್ತಿ ಇರುವದೇ. ಭಕ್ತಿ ಇದ್ದಲ್ಲಿ ವಿಷ್ಣುಪ್ರೀತಿಯೇ ಮಹಾಫಲ. ವಿಷ್ಣು ಪ್ರಿಯನಾಗಿ ಇರುವದೇ ಜೀವನದ ಮಹಾ ಸಾಫಲ್ಯ. ಅಂತೆಯೇ *ಭಕ್ತ್ಯೈವ ತುಷ್ಯತಿ* ಎಂದು ಆಚಾರ್ಯರು ಸಾರಿದರು.
ಭಕ್ತಿ ಮಾಡದ, ಭಗವತ್ಪ್ರೀತಿಯನ್ನು ವರವಾಗಿ ಪಡೆಯದೆ ಇನ್ನೇನೆಲ್ಲವನ್ನೂ ಪಡೆದರೂ ಅದೆಲ್ಲವೂ ವ್ಯರ್ಥವೇ ಸರಿ, ಇದ್ದರೂ ಇಲ್ಲದ ಹಾಗೆಯೇ. ಅವೆಲ್ಲವುದರುಗಳಿಂದ ಸುಖ ಶಾಂತಿ ಸಮೃದ್ಧಿ ವೈಭವ ಇವುಗಳು ಸಿಗುವದೇ ಇಲ್ಲ. ಏನೂ ಇರದಿದ್ದರೂ *ಭಕ್ತಿ ವಿಷ್ಣುಪ್ರೀತಿ* ಇವುಗಳು ಇದ್ದರೆ ಎಲ್ಲವೂ ಇದ್ದ ಹಾಗೇಯೇ.
ದೇವರ ಲಕ್ಷ್ಮೀದೇವಿಯ ವಾಯುದೇವರ ದೇವತೆಗಳ ಪೂಜೆ ಸ್ತೋತ್ರ ಮಾಡುವಾಗ ವರ ಬೇಡುವಾಗ *ಭಕ್ತಿ ಮಾಡೋಣ, ವಿಷ್ಣುಪ್ರೀತಿ ಬೇಡೋಣ* ಅಂತೆಯೇ " ಕಿಮಲಭ್ಯಂ ಭಗವತಿ ಪ್ರಸನ್ನೇ ಶ್ರೀನಿಕೇತನೆ" ಎಂದಿತು ಶಾಸ್ತ್ರ.
*✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments