*ಯಾರೂ ಇಲ್ಲ.........????*

*ಯಾರೂ ಇಲ್ಲ.........????*

*ಯಾರೂ ಇಲ್ಲ*  ಯಾರಿದ್ದಾರೆ ನಮ್ಮ ಕಷ್ಟದಲ್ಲಿ. ನಮ್ಮವರ ಕಣ್ಣೀರೊರಿಸಿಯೇ ಕೈ ಸವೆದವು, ನಮ್ಮ ಕಣ್ಣೀರೊರೆಸಲು ಒಂದು ಟವೆಲ್ಲೂ ಇಲ್ಲ. ಕೈಗಳಂತೂ ದೂರದ ಮಾತು. ನೂರಾರು ಜನ ಇದ್ದಾರೆ ಅಲ್ಲವೇ.... ಕೊರಗು ಯಾಕೆ.. ??  ಎಲ್ಲರಿದ್ದರೂ ನಮ್ಮ ಸಮಯಕ್ಕೆ ಯಾರೂ ಇರುವದಿಲ್ಲ. ಬರುವದೂ ಇಲ್ಲ. 

ದ್ರೌಪದಿ ಮಹಾಧಾರ್ಮಿಕಳು. ಮಹಾ ಬಲಿಷ್ಠರ ಮಡದಿ. ಮಾವಂದಿರೂ ಧಾರ್ಮಿಕೋತ್ತಮರು. ಹಾಗಿದ್ದಾಗಲೂ ವಸ್ತ್ರಾಪಹರಣ ವಾಗುತ್ತಿರುವಾಗ *ಯಾರೂ ಇರಲಿಲ್ಲ.*
ಧರ್ಮರಾಜನ ಮಾನ ಹಾಗೂ ಮರ್ಯಾದೆ ಉಳಿಸಲು ಅಭಿಮನ್ಯು ಬೇಕಾದ, ಅವನ ಪ್ರಾಣ ಉಳಿಸಲು *ಯಾರೂ ಇಲ್ಲವಾದರು.*  ಇದು ಕಟು ಸತ್ಯ. ಅತ್ಯಂತ ಘೋರ ಪರಿಸ್ಥಿತಿ. ಅಭಿಮನ್ಯು ಸಾಮನ್ಯನೇನಲ್ಲ. ಸ್ವಯಂ ಪರಾಕ್ರಮಿ, ಅರ್ಜುನನ ಮಗ, ಭೀಮ ಧರ್ಮರ ಮಗ, ಕೃಷ್ಣನ ಸೋದರ ಅಳಿಯ, ಇಷ್ಟಿದ್ದರೂ ಅವನ ಕಷ್ಟಕಾಲಕ್ಕೆ *ಯಾರೂ ಇಲ್ಲದಾದರು.* ಈ ಅವಸ್ಥೆಯನ್ನು ಇಂದಿಗೂ ಜೀರ್ಣ ಮಾಡಿಕೊಳ್ಳಲು ನಮಗಾಗದು. ಇಂತಹ ನೂರು ನಿದರ್ಶನ ಸಿಗತ್ತೆ. ಎಲ್ಲರ ಆಪತ್ತಿಗೆ ಕೃಷ್ಣ ಬೇಕಾದ, ಅವನಿಗೆ ಬೇಡರವ ಬಾಣ ಬಿಟ್ಟಾಗ ಯಾರಿದ್ದರು.. ?? *ಯಾರೂ ಇಲ್ಲ...* 

ನಮ್ಮ ಕಷ್ಟದಲ್ಲಿ ನಮ್ಮ ಕಣ್ಣೀರು ಒರೆಸಲು ಎರಡು ಕೈಗಳು ಬೇಕಾಗುತ್ತದೆ. ಆದರೆ ಅದೇ ಕೈಗಳು ಕಷ್ಟದಲ್ಲಿ ಸಿಲುಕಿದಾಗ ಆ ಕೈಗಳ ಕಡೆ ಗಮನವೇ ಇಲ್ಲದಾಗುತ್ತದೆ. ಇದು ಇಂದಿನ ಸ್ಥಿತಿ. ಹಣವಿದ್ದಾಗ ಎಲ್ಲರೂ ಇರುತ್ತಾರೆ, ಸಮೃದ್ಧವಾಗಿ ಇದ್ದಾಗ ಇರುತ್ತಾರೆ, ಕಣ್ಣೀರು ಒರೆಸುವ ಪ್ರಸಂಗ ಬಂದರೆ ಹಾರಿಹೋಗುತ್ತಾರೆ. ಹೀಗಾಗದೇ ಇರಲು ಪುಣ್ಯ ಖಂಡಿತವಾಗಿಯೂ ಬೇಕು. 

ಅರ್ಜುನನಿಗೆ ಬಂದ ಆಪತ್ತುಗಳು ನೂರು, ದ್ರೌಪದಿಗೆ ಬಂದ ಆಪತ್ತುಗಳು ಅನೇಕ.  ಆ ಎಲ್ಲ ಆಪತ್ತಿನ ಪ್ರಸಂಗದಲ್ಲಿ, ಎಲ್ಲರೂ ಕೈ ಕೊಟ್ಟು, ಕೈ ಬಾಯಿ ಕಟ್ಟಿಕೊಂಡು ಕುಳಿತಾಗಲೂ *ಯಾರೂ ಇಲ್ಲದ ದುರವಸ್ಥೆಯಲ್ಲಿಯೂ* ಕೈ ಹಿಡಿದು ರಕ್ಷಿಸಿದ ಸಂರಕ್ಷಿಸಿದ ಹೆದ್ದೊರೆ ನಮ್ಮ ಕೃಷ್ಣ. 

ಪುಣ್ಯವಂತರಿಗೆ ಕೈ ಹಿಡಿಯುವವರು ನೂರುಜನ. ಪುಣ್ಯ ವಿಹೀನನಗೆ ಕೈ ಹಿಡಿದವರೇ ಬಿಡಲೂ ಬಹುದು. ದ್ವಾರಕೆಯಲ್ಲಿ ಇದ್ದ ಕೃಷ್ಣ, "ಹಾ ಕೃಷ್ಣ ದ್ವಾರಕಾ ವಾಸಿನ್ !!!" ಎಂದು ಕೂಗಿದಾಕ್ಷಣ ಅಕ್ಷಯ ಸೀರೆಯೊದಗಿಸಿದ ಸ್ವಾಮಿಗೆ, ಅದೇ ರಣರಂಗದಲ್ಲಿಯೇ ಇದ್ದ ಕೃಷ್ಣ ಅಭಿಮನ್ಯವಿನ ಮುಖವನ್ನೂ ನೋಡಲಿಲ್ಲ. ಇದರಿಂದಲೇ ಸ್ಪಷ್ಟವಾಗುವದು ಪುಣ್ಯವಂತರ ಕೈ ಹಿಡಿಯುವವರು  ದೇವರು, ದೇವತೆಗಳು, ಮಾನವರು. ಇಲ್ಲವಾದಲ್ಲಿ ಎಲ್ಲರೂ ಕೈ ಬೀಸಿ ಟಾ ಟಾ ಮಾಡುವವರೇ.

ನೂರು ಜನರ ಕಣ್ಣೀರು ನೂರುಬಾರಿ ಒರೆಸಿರಬಹುದು. ಆದರೆ ನಮ್ಮ ಆಪತ್ತಿನಲ್ಲಿ ಯಾರು ಇಲ್ಲ ಎಂದಾದಾಗ ದುಃಖಿಸಬೇಡ. ನನ್ನ ಪುಣ್ಯವಿಲ್ಲ ಎಂದು ತಿಳಿ. 

ನನ್ನ ಕಣ್ಣೀರು ಒರೆಸಲು ಎರಡು ಕೈಗಳು ಇರಬೇಕೇ... ?? ಹಾಗಾದರೆ ಸಮೃದ್ಧವಾಗಿ ಪುಣ್ಯ ಮಾಡು. ಯಾರೂ ಇಲ್ಲದಿದ್ದರೂ ದೇವರಾದರೂ ಓಡಿ ಬರುವ. ಬಂದು ಕಣ್ಣೀರೊರೆಸುವ. ಆಪತ್ತಿನಿಂದ ಪಾರುಮಾಡುವ. 

*ಯಾರೂ ಇಲ್ಲ* ಎಂಬ ಕೊರಗು ಬೇಡ. ಸಂಧ್ಯಾವಂದನೆ, ಗಾಯತ್ರೀ ಜಪ, ರಾಮಕೃಷ್ಣ ಮಂತ್ರ ಜಪ, ಅಚ್ಯುತಾನಂತ ಗೋವಿಂದ ನಾಮಸ್ಮರಣೆ, ನಿರಂತರ ಅಧ್ಯಯನ ಅಧ್ಯಾಪನ  ಇವುಗಳನ್ನು ನಿರಂತರ ಮಾಡುತ್ತಾ ಅಪಾರ ಪುಣ್ಯಸಂಪಾದಿಸಿದ  ಪುಣ್ಯವಂತರಿಗೆ, ಮಹಾ ಭಕ್ತರಿಗೆ ದೇವರಿದ್ದಾನೆ ಎಂಬ ಭರವಸೆ ಇರಲಿ. ಯಾರಿಲ್ಲದಿರುವಾಗಲೂ ಅವನು ಓಡಿ ಬಂದೇ ಬರುತ್ತಾನೆ... 😊😊

*✍🏽✍ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
I recommend typically the useful details you give you inside your content pieces.
I’ll bookmark your web page and look at once listed here consistently.
I’m somewhat of course I’ll master several
new stuff at this point! Have a great time for an additional!
Anonymous said…
Yes! Finally something about Agen Poker Indonesia.

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*