ನಮ್ಮ ದುಃಖವನ್ನು ನಾವು ಎಂದಿಗೂ ಅವಮಾನಿಸಬಾರದು.....

ನಮ್ಮ ದುಃಖವನ್ನು ನಾವು ಎಂದಿಗೂ ಅವಮಾನಿಸಬಾರದು....

ಸುಖ ದುಃಖಗಳು ದೇವರು ಕೊಟ್ಟ ಒಂದದ್ಭುತ ವರ. ಕೆಲವರು ಸುಖವನ್ನು ಗೌರವಿಸುತ್ತಾರೆ. ದುಃಖವನ್ನು ಅವಮಾನಿಸುತ್ತಾರೆ.ಸುಖವನ್ನೂ ಅವಮಾನಿಸುವವರು ಮತ್ತೆ ಕೆಲವರು.

ಸುಖ ದುಃಖಗಳು ಗಾಲಿಗಳು ಇದ್ದಹಾಗೆ. ಒಂದರನಂತರ ಮತ್ತೊಂದು, ಸುಖದನಂತರ ದುಃಖ, ದುಃಖದ ಕೊನೆ ಸುಖ ಹೀಗೆಯೇ ಬರುವಂತಹದ್ದು ಯಾವದೂ ಶಾಶ್ವತವಲ್ಲ.

ಸುಖಬಂದಾಗ ಒಳಗೊಳಗೇ ಖುಶಿ, ಚೆನ್ನಾಗಿ ಭೋಗಿಸುತ್ತಾನೆ. ಆದೇ *ದುಃಖಬಂದಾಗ ಕಣ್ಣೀರು ಸುರಿಸಿ ರಂಪ ಮಾಡುತ್ತಾನೆ. ಇದುವೇ ದುಃಖಕ್ಕೆ ಮಾಡುವ ದೊಡ್ಡ ಅವಮಾನ.* 

ಸುಖ ಬಂದಾಗ *ಹೇ ಶ್ರೀಹರಿ ನೀನೇ ಕೊಟ್ಟದ್ದು* ಎಂದು ಬಾಯಿಮಾತಿಗೂ ಒಪ್ಪಿಕೊಳ್ಳದ ಮಾನವ, ದುಃಖ ಬಂದಾಕ್ಷಣ ದೇವರಿಗೆ ಕೈ ಮಾಡಿ ತೋರಿಸುವದೇನಿದೆ ಸುಖ ದುಃಖಗಳ ನಿಯಮಿಸುವ ಶ್ರೀಹರಿಗೂ ಮಾಡುವ ಒಂದು ದೊಡ್ಡ ಅವಮಾನವೇ ಸರಿ.

ದುಃಖ ಅಪ್ಪಳಿಸಿದಾಗ ಗುರು, ಜೋತಿಷಿ, ಆಚಾರ್ಯ, ಗೆಳೆಯ, ಸ್ನೇಹಿತ, ಹೋಮಕ್ಕೆ ದೇವತೆಗಳು, ಶಾಸ್ತ್ರ, ಪಾರಾಯಣ, ಜಪ,  ಇವೆಲ್ಲದರ ಅವಷ್ಯಕತೆ ಇನ್ನಿಲ್ಲದಂತೆ ಬೇಕಾಗುವದು. ಆದರೆ ಅದೇ ಸುಖ ಬಂದ ಕ್ಷಣದಲ್ಲಿ ಆ ಎಲ್ಲ ಉಪಕಾರಿಗಳನ್ನು ಮರೆಯುವದೋ ಅಥವಾ ಉಪಕಾರವನ್ನು ಸ್ಮರಿಸದೇ ಇರುವದು ಏನಿದೆ ಅದು ಆ ಎಲ್ಲರಿಗೂ ಮಾಡುವ ಅವಮಾನವೇ ಸರಿ..... 

ಹಾಗಾಗಿ ದುಃಖವನ್ನೋ, ದುಃಖಕೊಟ್ಟ ದೇವತೆಯನ್ನೋ, ಅಥವಾ ದುಃಖ ಪರಿಹಾರಕ್ಕೆ ಬೆನ್ನೆಲುಬು ಆಗಿ ನಿಂತವರನ್ನೋ ಅವಮಾನಿಸುವದು ಎಷ್ಟರಮಟ್ಟಿಗೂ ತರವಲ್ಲ.

ಬೇಡವಾದ ದುಃಖವನ್ನೋ, ದುಃಖಕೊಟ್ಟ ಹರಿಯನ್ನೋ ಅಥವಾ ದುಃಖದ ಸಮಯದಲ್ಲೂ ಸೇವೆ, ಹಣ, ದ್ರವ್ಯದಾನ, ಅದು ಇದು ಎಂದು ಕೀಳಿದ ಈ ವ್ಯಕ್ತಿಗಳನ್ನೋ ಅವಮಾನಿಸುವದು ತರವೇ ಆಗಿದೆ ಅಲ್ಲವೇ.... ????ಸರ್ವಥಾ ತರವಲ್ಲ. ಅವಮಾನಕ್ಕೆ ಅವುಗಳು ಸುತರಾಂ ಯೋಗ್ಯವೂ ಅಲ್ಲ.

೧)ಸಕ್ಕರೆಯ ಮಹತ್ವ ಖಾರ ತಿಂದಾಗಲೇ ತಿಳಿಯುವದು, ಹಾಗೆಯೇ ಸುಖದ ಮಹತಿ ತಿಳಿಯುವದೇ ದುಃಖಬಂದಾಗ ಮಾತ್ರ. ಪ್ರತಿ ಕ್ಷಣದ ಸುಖವನ್ನು ಮನಃಪೂರ್ವಕ, ಗೌರವ ಪ್ರೀತಿ ಆದರಗಳಿಂದ, ಅನುಭವಿಸಬೇಕು ಎಂದಾದರೆ ಆ ಸುಖ, ದುಃಖದ ನಂತರವೇ ಬಂದದ್ದಾಗಿರಬೇಕು....  ಆದ್ದರಿಂದ ದುಃಖವನ್ನು ಎಂದಿಗೂ ಅವಮಾನಿಸುವದು ಬೇಡ.

೨) ಕೆಲವರಿಗೆ ಸುಖ, ನನ್ನಂತಹವರಿಗೆ ದುಃಖ ಕೊಡುವ ದೇವರನ್ನು ಅವಮಾನಿಸುವದು ಸರಿಯಲ್ಕವೇ..?? ಸರ್ವಥಾ ಸರಿಯಾದದ್ದು ಅಲ್ಲ. 
*ಸರ್ವತಂತ್ರ ಸದವತಂತ್ರನಾದ ದೇವರೂ "ದುಃಖಗಳನ್ನು ನಮ್ನ ಪೂರ್ವಾರ್ಜಿತ ಕರ್ಮಗಳನ್ನೇ ಮಾನದಂಡಗಳನ್ನಾಗಿ ಇಟ್ಟುಕೊಂಡೇ ಕೊಡುತ್ತಾನೆ.*  ನಾನು ಸಂಪಾದಿಸಿರುವದೇ ನನಗೆ ಕೊಟ್ಟಿದ್ದಾನೆ, ಅದಕ್ಜೆ ನಾ ಯಾಕೆ ಕೊಟ್ಟವನನ್ನು ಅವಮಾನಿಸಬೇಕು.. ?? ನನ್ನ ಸಂಪಾದನೆ ಸುಖ ಕೊಡುವಂತಹದ್ದೇ ಆಗಿದ್ದರೆ ಸುಖ ಕೊಡುತ್ತಾನೆ ಅಷ್ಟೆ.. ಆದ್ದರಿಂದ ದೇವರನ್ನೂ ಅವಮಾನಿಸುವದ ಸರ್ವಥಾ ತರವಲ್ಲ.

೩) ರೋಗಿಷ್ಠ ತನ್ನ ರೋಗ ಪರಿಹಾರಕ್ಕಾಗಿ ವೈದ್ಯರಿಗೆ ಹಣ ಕೊಡುತ್ತಾನ ಹಾಗೆ ಹಸಿದ ವ್ಯಕ್ತಿ ತನ್ನ ಹಸಿವು ನೀಗಿಸಲು ಹಣ ಕೊಡುತ್ತಾನೆ ಇಂತಹ ಪ್ರಸಂಗದಲ್ಕಿ ಯಾರಾದರೂ "ನಾನು ರೋಗಿಷ್ಠ, ಹಸಿವಿನಿಂದ ಬಳಲುತ್ತಾ ಇದ್ದೇನೆ ಇಂತಹ ಅವಸ್ಥೆಯಲ್ಲಿಯೂ ಹಣ ಕೀಳ್ತಾನೆ ಈ ವೈದ್ಯ ಹಾಗೂ ಸಿರಿವಂತ" ಎಂದು ಯಾರಾದರೂ ಅವಮಾನಿಸುತ್ತಾರೆಯಾ.... ???
ಸರ್ವಥಾ ಇಲ್ಲ ತಾನೆ... ರೋಗ ಪರಿಹಾರಕ ಉಪಚಾರಗಳಿಗೆ  ಹಾಗೂ ಹಸಿವೆ ನೀಗಿಸಿಕೊಳ್ಲಲಿಕ್ಕೆ ಹಣ ಅವಶ್ಯವಾಗಿ ಕೊಡಲೇಬೇಕು. 
ಅದೇರೀತಿಯಾಗಿ "ದುಃಖಪರಿಹಾರ ಮಾಡಲು ಸಹಾಯಕರಾಗಿ ನಿಂತ ಗುರು, ಜೋತಿಷಿ, ಆಚಾರ್ಯ, ಗೆಳೆಯ, ಸ್ನೇಹಿತ, ಹೋಮದ್ರವ್ಯಗಳು, ದೇವರು, ದೇವತೆಗಳು, ಅವರ ಸೇವೆ, ದ್ರವ್ಯದಾನ  ಹೀಗೆ ಪ್ರತಿಯೊಂದುವೂ ನಮ್ಮ ದುಃಖ ಪರಿಹಾರಕವೇ... ಅವರು ಎಂದೆಂದಿಗೂ ಗೌರವಾರ್ಹರೇ.. ಅವರನ್ನು ಎಂದಿಗೂ ಮರಿಯಲೇ ಬಾರದು.. ಅವಮಾನಿಸುವದಂತೂ ಸುತರಾಂ ಮಹಾ ತಪ್ಪು ಅಲ್ಲವೇ.....

ಆದ್ದರಿಂದ ದುಃಖವನ್ನೋ, ದುಃಖ ಕೊಟ್ಟ ಹರಿಯನ್ನೋ, ಅಥವಾ ದುಃಖ ಪರಿಹರಿಸಲು ಸಹಾಯಕರಾಗಿ ಬಂದವರನ್ನೋ ಎಂದಿಗೂ ಅವಮಾನಿಸುವದು ಸರ್ವಥಾ ಬೇಡ ಅಲ್ಲವೆ.....   *ನಮ್ಮಿಂದ ಅವಮಾನಿತ ವ್ಯಕ್ತಿ, ಪದಾರ್ಥ ನಮಗೆ ಎಂದಿಗೂ ಇನ್ಮುಂದೆ ಹಿತೈಷಿಯಾಗಿ ನಮ್ಮ ಜೊತೆ ಇರಲಾರ(ದು)ರು.* 

ಅಂತೆಯೇ ದಾಸರು ಆಡಿದ ಮಾತು *ಸುಖವಾಗಲಿ, ಬಹುದುಃಖವಾಗಲಿ ಸಖ ನೀನಾಗಿರು- ಪಾಂಡುರಂಗ* ಎಂದು. 

*✍🏽✍🏽✍ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.

Comments

Anonymous said…
appreciate it word wide web internet websites.
Anonymous said…
Thanks for sharing your info. I truly appreciate your efforts
and I will be waiting for your further post thank you once again.
Anonymous said…
Chú ý vệ sinh ở tại những kẽ hở bên trong
dàn máy nhé.
basavarajmath said…
ಮಹತ್ವದ ಮಾತು.
NYASADAS said…
ಎಲ್ಲರಿಗೂ ಧನ್ಯವಾದಗಳು

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*