ರಾಮಾಯಣ......
*ರಾಮಾಯಣ*
ವಾಲ್ಮೀಕೀ ಋಷಿಗಳು ಬರೆದ, ಇಪ್ಪತ್ತು ನಾಲ್ಕು ಸಾವಿರ ಶ್ಲೊಕಾತ್ಕವಾದ, ಏಳು ಕಾಂಡಗಳನ್ನೊಳಗೊಂಡ ಆದಿ ಕವಿಯಿಂದ ರಚಿತವಾದ, ಆದಿ ಕಾವ್ಯ *ಶ್ರೀಮದ್ರಾಮಾಯಣ.*
ನೂರುಕೋಟಿ ಶ್ಲೋಕಾತ್ಮಕವಾದ, ಹಯಗ್ರಿವದೇವರಿಂದ ರಚಿತವಾದ ಮೂಲರಾಮಯಣಕ್ಕೆ ಅನುಸಾರಿ ಗ್ರಂಥ ವಾಲ್ಮೀಕಿ ರಾಮಾಯಣ.
ಜೀವನದ ಆದರ್ಶಗಳೆಲ್ಲ ತುಂಬಿ ದ ಮೆರು ಕೃತಿ. ಯಾರೆಲ್ಲರ ಜೊತೆಗೆ (ತಂದೆ, ತಾಯಿ, ರಾಜಾ ಸೇವಕ, ಮಂತ್ರಿ, ಅಣ್ಣ ತಮ್ಮ, ಗುರುಗಳು, ಶತ್ರು, ಮಿತ್ರ) ಹೇಗಿರಬೇಕು, ಮಾತು ವಿಚಾರಗಳು ಎಂತಹದ್ದಾಗಿರಬೇಕು, ಯಾವದು ಹಿತ, ಯಾವುದು ಅಹಿತ ಎಲ್ಲವನ್ನೂ ಎಳೆ ಎಳೆಯಾಗಿ ತಿಳುಹಿಸುವ ದಿವ್ಯ ಕೃತಿ *ರಾಮಾಯಣ.*
ಆಸ್ತಿ - ಅಂತಸ್ತು - ಕುಲ- ಹಣ ಇವುಗಳಿಂದ ದೊಡ್ಡವನಾಗ ಬೇಡ. ಈ ದೊಡ್ಡಸ್ತನಿಕೆ ಶಾಶ್ವತವಲ್ಲ. ದೊಡ್ಡವನಾಗುವ ಹೆಬ್ಬಯಕೆ ಇದ್ದರೆ *ಗುಣಗಳಿಂದಲೇ ದೊಡ್ಡವನಾಗು* ಎಂದು ಹೆಜ್ಜೆ ಹೆಜ್ಜೆಗೆ ಸಾರುವ ಗ್ರಂಥ *ಶ್ರೀಮದ್ರಾಮಾಯಣ.*
*ರಾಮ* ಎಂಬ ಎರಡಕ್ಷರದ ಬಲವಿದ್ದವನಿಗೆ ದೇವರೂ ಬೇಡ, ನಿನ್ನ ನಾಮದ ಬಲ ಒಂದೇ ಸಾಕು ಎಂಬ ದಾಸರ ಮಾತು ಇದೆ. ಹೀಗಿರುವಾಗ ರಾಮಾಯಣದ ಬಲ ಇದ್ದವನ ವೈಭವ ಏನು ಎಂದು ಊಹಿಸಲೂ ಸಾಧ್ಯವಿಲ್ಲ.
ರಾಮದೇವರ ಕೋಟಿ ಕೋಟಿಗುಣಗಳನ್ನು ಸಾರುವ ಗ್ರಂಥ. ಹನುಂತ ದೇವರ ಬಲ ಭಕ್ತಿ, ಜ್ಙಾನ, ವಿಷ್ಣುಪ್ರೀತಿ ಇವುಗಳನ್ನು ಚಿತ್ರಿಸುವದು ಈ ಗ್ರಂಥ. ಸೇವೆ ಹೇಗಿರಬೇಕು ಬೇಡಿಕೆಯೂ ಹೇಗಿರಬೇಕು ಎಂದು ವಿವರಿಸುವ ಕೃತಿ. ಕಪಿಗಳ ಸೇವೆ - ಇವುರುಗಳ ಪಡೆದ ಫಲ, ದುಷ್ಟರ ದೌರ್ಜನ್ಯ - ಅದಕ್ಕಿರುವ ಫಲ, ಸಾಮಾನ್ಯ ಜನರೂ ಹೇಗಿದ್ದರು, ಹೇಗಿರಬೇಕು ಎಲ್ಲ ತರಹದ ವಿಷಯಗಳೂ ಇಲ್ಲಿವೆ.
ಮಾಡಿದ ಮಾಡುವ ಅತೀ ಘೋರ ಪಾಪಗಳಿಗೆ ರಾಮಾಯಣ ರಾಮಬಾಣವಿದ್ದಂತೆಯೇ ಸರಿ. ಶಿವಾನಿ ಮಂಗಳ ಸ್ವರೂಪಳಾಗಿರುವದೇ ಈ ರಾಮ ನಾಮ ಸ್ಮರಣೆಯಿಂದ. ಹಾಗಾಗಿ ಪಾಪಕಳೆದು ಪಾವಿತ್ರ್ಯ ಒದಗಿಸುವದೂ *ಶ್ರೀರಾಮಯಣವೇ.*
ಕೊಟಿ ಕೋಟಿ ವರ್ಷಗಳಿಂದ ಲಕಗಷ ಲಕ್ಷ ಜನ ತುಳಿತಾ ಬಂದಿದ್ದರೂ, ಕೋಟಿ ಕೋಟಿ ಜನರಿಗೆ ದಿವ್ಯ ಜೀವನ ಮಾರ್ಗದರ್ಶಿಯಾದ ಅಜರಾಮರ ಗ್ರಂಥ *ಶ್ರೀಮದ್ರಾಮಾಯಣ.*
ಜಗತ್ತಿನಲ್ಲಿ ಗಿಡ ಪರ್ವತ ನದಿಗಳು ಎಲ್ಲಿಯವರೆಗೆ ಇರತ್ತೆ ಅಲ್ಲಿಯವರೆಗೂ ಶಾಶ್ವತವಾಗಿ ಉಳಿಯುವ ಮೇರು ಗ್ರಂಥ. ರಾಮಾಯಣ ಕೇಳುವವರಲ್ಲಿ ಹೆಚ್ಚು ಕಡಿಮೆಯಾಗಬಹುದು, ರಾಮಾಯಣವೇ ಇಲ್ಲ ಎಂದಾಗದು. ರಾಮಾಯಣ ಇಲ್ಲ ಎಂದಾಗುವದು ಪ್ರಲಯವಾದರೆ ಮಾತ್ರ. ಇದು ರಾಮಾಯಣಕ್ಕೆ ಇರುವ ಬ್ರಹ್ಮದೇವರ ವರ.
ಹನುಮ, ಭಾರತೀ, ಶಂಕರ, ಶಿವಾಣೀ ಮೊದಲು ಮಾಡಿ ಎಲ್ಲ ಮಹಾನ್ ಮೇಧಾವಿ ಜ್ಙಾನಿಗಳ ಕಕ್ಷೆಯಲ್ಲಿಯೇ ಅತ್ಯುತ್ತಮರಾದ ಈ ಮಹಾನುಭಾವ ದೇವತೆಗಳೂ ಉಸಿರುರವವರೆಗೆ ಹಾಡಿ ಹೊಗಳಿ ಕಮಡಾಡಿ ಅನುಸರಿಸುವ ದಿವ್ಯ ಕೃತಿ *ಶ್ರೀಮದ್ರಾಮಾಯಣ.*
*ರಾಮ ನವರಾತ್ರೋತ್ಸವ* ನಿಮಿತ್ತವಾಗಿ ಇಂದಿನಿಂದ ನೂರಾರು ಕಡೆ *ರಾಮಾಯಣ ಉಪನ್ಯಾಸ* ಆರಂಭ ವಾಗಿರುತ್ತದೆ. ಆಹ್ವಾನ ಕೊಡಬೇಕು, ಕರಿಯಬೇಕು ಎಂಬ ಯಾವ ಆಸೆ ಅಪೇಕ್ಷಗಳಿಟ್ಟುಕೊಳ್ಳದೆ *ಸದಾಕಾಲ ನಮ್ಮೊಡನೆ ಇರುವ* ರಾಮನ ಚರಿತೆಯನ್ನು ಕೊಂಡಾಡುವ ರಾಮಾಯಣದ ಉಪನ್ಯಾಸ ಹೇಳೋಣ. ಹೇಳುವಲ್ಲಿ ಉಪನ್ಯಾಸಕ್ಕೆ ಹೋಗೋಣ.
ಇಂದಿನಿಂದ ನವಮಿಯ ವರೆಗೆ ಎಲ್ಲರೂ ನಿತ್ಯ *ರಾಮ ರಾಮ ರಾಮ* ಎಂದು ಕನಿಷ್ಠ ಸಾವಿರ ಬಾರಿಯಾದರೂ ರಾಮ ಮಂತ್ರ ಜಪಿಸೋಣ. ಸಾವಿರ ಬಾರಿ ರಾಮ ರಾಮ ಎಂದು ಹೇಳಲಿ ಕೇವಲ ಹತ್ತು ನಿಮಿಷ ಮಾತ್ರ ಆಗತ್ತೆ. ಸಮಯವಿಲ್ಲ ಎಂದು ಹೇಳುವದು ಬೇಡವೇ ಬೇಡ. *ಧಾರಾವಾಹಿ ನೋಡುವಾಗ ಅಡ್ವಟೇಸ್ ಬಂದಾಗ ಅಷ್ಟೆ ಟಿವಿ ಬಂದು ಮಾಡಿದರೂ ಸಾಕು ಸಾವಿರ ಜಪ ಆಗಿಯೇ ಬಿಡುತ್ತದೆ* ಸಾವಿರಕ್ಕಿಂತಲೂ ಹೆಚ್ಚು ಆಗಬಹುದು. ಜಪ ನಾಮಸ್ಮರಣೆ ಮಾಡುವವರು ಸಾವಿರ ಜನ ನಾವು ಜಪಿಸಿದರೂ ಆಯ್ತು ಅನಾಯಾಸೇನ *ಒಂದು ಕೋಟಿ ರಾಮ ಮಂತ್ರ* ರಾಮನವಮಿಯ ದಿನ ಸಮರ್ಪಿಸಬಹುದು.
*✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments
He used to be totally right. This put up truly made my day.
You can not consider just how a lot time I had spent for this information! Thank
you!
Finally I have found something that helped me. Appreciate
it!
I like what I see so now i am following you.
Look forward to going over your web page yet again.
also with the structure to your blog. Is this a paid topic or
did you modify it your self? Anyway keep up the excellent quality writing, it is rare to look
a great blog like this one today..