ಹೇ ವಿಕಾರಿ !! ಅವಿಕಾರಿಯನ್ನು ಮರಿಸಬೇಡ...*

*ಹೇ ವಿಕಾರಿ !! ಅವಿಕಾರಿಯನ್ನು ಮರಿಸಬೇಡ...*

*ಯುಗಾವರ್ತ* ನಾದ ಹರಿ, ತನ್ನ ಕಾಲಚಕ್ರದಲ್ಲಿ  ಯುಗಗಳನ್ನು ಆವರ್ತಿಸುತ್ತಿರುತ್ತಾನೆ. ಆ ಕ್ರಮದಲ್ಲಿ ಇಂದಿಗೆ *ವಿಲಂಬಿ* ಮುಗಿದು ನಾಳೆಗೆ *ವಿಕಾರಿ* ಸಂವತ್ಸರ ಆರಂಭವಾಗುವದಿದೆ. 

ಕಳೆದ ವಿಲಂಬಿ  ವರ್ಷದಲ್ಲಿ ಏನು ಪಡೆಯುವದು ಇತ್ತೋ ಅದೆಲ್ಲವನ್ನೂ ಪಡೆದಿದ್ದೇವೆ. ಆದರೆ ಪಡೆಯಿವದರಲ್ಲಿ ಕೆಲವುಕಡೆ  ವಿಲಂಬವಾಗಿದೆ, ಕೆಲವುಕಡೆ ಅದಲು ಬದಲು ಆಗಿದೆ, ಮತ್ತೆ ಹಲವೆಡೆ ಎಡವಟ್ಟು ಆಗಿದೆ, ಇನ್ನು ಹಲವು ಕಡೆ ದುಃಖಾಂತವಾಗಿದೆ. ಪಡೆಯುವ ಕರ್ಮ ನನ್ನದಿತ್ತು. ಪಡೆದೆ, ಆದರೆ ಪಡೆಯುವಿಕೆಯಲ್ಲಿ  ಹೀಗೇಕೇ ಆಯಿತು... ?? ಎಂಬ ಪ್ರಶ್ನೆಬಂದರೆ... 

*ವಿಲಂಬಿ* ಯಲ್ಲಿ *ಅವಿಲಂಬ* ಭಗವಂತನನ್ನು ಕೈ ಬಿಟ್ಟಿದ್ದಕ್ಕಾಗಿ ನೆನಸದೇ ಇರುವದಕ್ಕಾಗಿ, ಕೊಟ್ಟ ಸಾವಿರ ಸಾವಿರ ಪದಾರ್ಥಗಳ ಕೃತಜ್ಙತೆ ಸಲ್ಲಿಸದಿದ್ದಕ್ಕಾಗಿ ಈ ಎಡವಟ್ಟುಗಳು  ಆದವು. 

*ಹಿಂದನದ್ದು ಏನಾದರಾಗಲಿ, ಮುಂದೆನ್ನ ಕಾಯೋ..*

ತಪ್ಪು ಮಾಡುವವನು ನಾನೇ. ತಪ್ಪೇ ಮಾಡದಿರಲು ನಾನೇನು ಋಜು ಅಲ್ಲ. ಹಿಂದೆ ಕಳೆದ ವರ್ಷಗಳಲ್ಲಿ  ಅದ ತಪ್ಪು ಇಂದು ಈ ಹೊಸ ವರ್ಷದಲ್ಲಿ ಮತ್ತೆ ಮಾಡಿಸಬೇಡ ಎಂದು ಪರಿಪರಿಯಾಗಿ ಬೇಡುವೆ. 


*ಹೇ ವಿಕಾರಿ !! ಅವಿಕಾರಿಯನ್ನು ಮರಿಸಬೇಡ...*

*ವಿಕಾರಿ* ಹೆಸರೇ ತಿಳಿಸುವಂತೆ ನಮ್ಮ ದೇಹ ಇಂದ್ರಿಯ ಮನಸದಸುಗಳಲ್ಲಿ ವಿಕಾರಗಳನ್ನು ತರುವದೆ. *ಅವಿಕಾರಿ* ಎಂದೆಂದಿಗೂ ವಿಕಾರಗೊಳ್ಳದ, ಯಾವ ತರಹದ ವಿಕಾರವೂ ಇಲ್ಲದ ಶ್ರೀಹರಿಯನ್ನು ನೆನೆದರೆ, ಮನೋ ಬುದ್ಧಿಗಳಲ್ಲಿ ಆಗುವ ವಿಕಾರಗಳು ಸಕಾರಾತ್ಮಕವಾಗಿ ಆಗಿರಲಿ. ಧರ್ಮ, ತತ್ವಜ್ಙಾನ, ದೇವರು, ಭಕ್ತಿ, ಗುರುಗಳು, ಪ್ರೀತಿ, ಅಂತಃಕರಣ, ಸ್ನೇಹ, ಸಹನೆ, ದಯೆ, ದಾನ, ಇತ್ಯಾದಿಗಳ ಕಡೆ ವಿಕಾರವಾಗುವಂತೆ ಮಾಡು.  ನಕಾರಾತ್ಮಕವಾದ ಸಂಶಯ, ಝಗಳ, ವೈಮನಸ್ಸು, ಅಶಾಂತಿ, ಅಭದ್ರತೆ, ದುರ್ವಿಚಾರ,  ಈ ತರಹದ ವಿಕೃತ ವಿಕಾರಗಳು ಸರ್ವಥಾ ಆಗದಿರುವಂತೆ ನೋಡಿಕೊಳ್ಳಲು ಸಮರ್ಥ *ಅವಿಕಾರಿ* ಶ್ರೀಹರಿಯೆ....  ಅಂತೆಯೇ ಅವಿಕಾರಿ ಹರಿಯ ಸ್ಮರಣೆ ಅನಿವಾರ್ಯ.

*ಯುಗಾವರ್ತನೇ ವಿಕಾರಿ* ಆ ವಿಕಾರಿ ಹರಿಯಲ್ಲಿ ಬೇಡುವದಿಷ್ಟೆ *ಅವಿಕಾರಿ ಹರಿಯ* ಚಿಂತನೆ ಧ್ಯಾನ ಜ್ಙಾನ ನಿರಂತರ ಮಾಡಿಸು. ಮರೆಯದಿರುವಂತೆ ನೋಡಿಕೋ. ಹಾಗಾದರೆ ನಿನ್ನವನಾದ ನಾನೂ ಸಾಧನೆಯಲ್ಲಿ ತೊಡಗುವೆ. ಇನ್ನು ಮುಂದೆ ಅಂದರೆ ವಿಕಾರಿ ಸಂವತ್ಸರದ ಆರಂಭದ ದಿನವಾದ ನಾಳೆಯಿಂದಲೇ ದುರ್ವಿಚಾರಗಳಲ್ಲಿ ಮನಸ್ಸು ವಿಕಾರಗೊಳ್ಳದಿರುವಂತೆ ಮಾಡಿ ರಕ್ಷಿಸು ಸಂರಕ್ಷಿಸು ನಿನಗೆ ಕೋಟಿ ಕೋಟಿ ವಂದನೆ, ಅನಂತ ಸಾಷ್ಟಾಂಗ ನಮನಗಳು. 

ನಿನ್ನ ಸ್ಮರಣೆಯೊಂದಿಗೆ ಇಂದಿನ ರಾತ್ರಿ ಕಳೆಯುವೆ, ನಾಳೆ ಬೆಳಿಗ್ಗೆ ನಿನ್ನ ಸ್ಮರಣೆಯೇ ಒದಗಿಸು. ನಂತರ ಸಂಪೂರ್ಣ ವರ್ಷ ನಿನ್ನ ಸ್ಮರಣೆಯಲ್ಲಿಯೇ ಕಳೆಯಲಿ. *ಹೇ ವಿಕಾರಿ !! ಅವಿಕಾರಿಯ ಸ್ಮರಣೆ ಜಪ ಧ್ಯಾನ ನಿರಂತರ ಒದಗಿಸುವೆಯಾ... ???* ಪ್ರಾರ್ಥನೆ ಎನ್ನದು ದಯೆ ನಿನ್ನದು... 🙏🏽🙏🏽🙏🏽

*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.


Comments

Anonymous said…
Hey There. I discovered your blog the usage of msn. That is an extremely well written article.
I will be sure to bookmark it and return to read
extra of your helpful information. Thank you for the post.
I will definitely comeback.

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*