ತಪಸ್ಸು.....
ತಪಸ್ಸು.....
ಮಾನವ ಜೀವನದ, ಸಾಧನೆಯ ಹಂಬಲ ಉಳ್ಳವನ, ಏನನ್ನಾದರೂ ಪಡೆದೆ ತೀರುವೆ ಎಂಬ ಆಸೆ ಉಳ್ಳವನಿಗೆ ಪ್ರಾಣದಂತೆ ಅವಿನಾಭೂತವಾದ ಅಂಗ ಎಂದರೆ ಅದು *ತಪಸ್ಸು* ಎಂದು ಹೇಳಬಹುದು.
ದೇವರು ಕೇಳದೇ ಕೊಟ್ಟದ್ದು ಸಾವಿರ ಸಾವಿರ. ಇಂದ್ರಿಯಗಳು ಬೇಕು ಎಂದು ನಾವು ಕೇಳಿಲ್ಲ, ಮನಸದಸು ಬೇಕೆಂದು ಕೇಳಿಲ್ಲ, ರಕ್ತ ಬೇಕು ಎಂದು ಕೇಳಿಲ್ಲ, ಕ್ಷಣಕ್ಷಣಕ್ಕೆ ರಕ್ತ ಶುದ್ಧವಾಗಬೇಕು ಎಂದು ಬೇಡಿಲ್ಲ, ಮನಸ್ಸಿನ ನಾನಾವಿಧ ಭಾವನೆಗಳು ಬೇಕು ಎಂದು ಬೇಡಿಯೇ ಇಲ್ಲ, ಅನ್ನ, ವಸತಿ, ಗೆಳೆಯ, ಗೆಳತಿ, ಭಯ ಕ್ರೋಧ, ಕಾಮ, ಆಸೆ ಇದ್ಯಾವದನ್ನೂ ನಾನು ಬೇಡಿಲ್ಲ. ದೇವರು ಕೊಟ್ಟಿದ್ದಾನೆ. ಇಂತಹ ಲಕ್ಷ ಲಕ್ಷ ಕೊಟ್ಟಿದ್ದಾನೆ. ಆದರೆ ಬೇಡಿದ ಬಯಸಿಸದ ನಾಲ್ಕಾರು ಕೊಟ್ಟಿಲ್ಲವಷ್ಟೆ....
ಏನಕೆ ಕೊಟ್ಟಿಲ್ಲ.....
ನನ್ನ ಯೋಗ್ಯತೆ ಏನಿದೆ, ನಾನು ಏನನ್ನು ಪಡೆದು ಬಂದಿದ್ದೇನೆ, ಏನನ್ನು ಪಡೆಯಲು ನಾನು ಕರ್ಮಮಾಡಿಟ್ಟುಕೊಂಡಿದ್ದೇನೆ ಯಾವದು ದೇವರಿಚ್ಛೆಗೆ ಇದೆ ಅದೆಲ್ಲವನ್ನೂ ನಾನು ಬೇಡುದರೂ, ಬೇಡದಿದ್ದರೂ ಕೊಟ್ಟಿದ್ದಾನೆ. ಕೊಡುತ್ತಲೂ ಇರುತ್ತಾನೆ. ಇನ್ನು ನಾನು ಏನು ಬೇಡಿದ್ದೇನೆ ಇದು ದೇವರ ಇಚ್ಛೆಗೆ ವಿರುದ್ಧವೂ, ನನಗೆ ಅಯೋಗ್ಯವಾಗಿರುವದೂ, ಯೋಗ್ಯ ಕರ್ಮವಿಲ್ಲದಿರುವದೂ ಆಗಿರುತ್ತದೆ. ಇದೆಲ್ಲದರ ಮೇಲೆ *ಅದನ್ನು ಪಡೆಯಲಾಗದಂತಹ ದೊಡ್ಡ ಪಾಪ ಕರ್ಮ* ಅಡ್ಡವಾಗಿ ಇರುತ್ತದೆ ಹಾಗಾಗಿ ಪಡೆಯಲಾಗಿರುವದಿಲ್ಲ.
ಅಸಾಧ್ಯವಾದದ್ದನ್ನು ಪಡೆಯಬೇಕಾದರೆ ಏನು ಮಾಡಬೇಕು.... ?? ಮಹಾಭಾರತ ತುಂಬ ಸೊಗಸಾಗಿ ಉತ್ತರಿಸುತ್ತದೆ.
"ಯದ್ದುರಾಪಂ ದುರಾರಾಧ್ಯಂ
ದುರಾಧರ್ಷಂ ದುರುತ್ಸಹಮ್.
ತತ್ಸರ್ವಂ ತಪಸಾ ಶಕ್ಯಂ
ತಪೋ ಹಿ ದುರತಿಕ್ರಮಮ್ ||ಮಹಾಭಾರತ
ಸಾಮಾನ್ಯವಾಗಿ ಎಲ್ಲರಿಗೂ ದೊರೆಯದ ನಿಲುಕದ ಕಷ್ಟ ಸಾಧ್ಯವಾದ *ತಪಸ್ಸನ್ನು* ಯಾರು ಆಚರಿಸುತ್ತಾರೆ ಸಾಮಾನ್ಯರಿಗೆ ನಿಲುಕದ ಕಷ್ಟ ಸಾಧ್ಯವಾದ ಸಾಮಾನ್ಯರಿಗೆ ದೊರೆಯದ ಅದ್ಭುತ ಫಲ ಭಾಗಿಯಾಗುತ್ತಾರೆ. ಫಲವನ್ನು ಪಡೆದು ತೀರುತ್ತಾರೆ.
ತಪಸ್ಸು ಪುಣ್ಯಕೊಡತ್ತೆ, ಪ್ರತಿಬಂಧಕ ಪಾಪ ಪರಿಹರಿಸುತ್ತದೆ. ದೇವರನ್ನೂ ಸಂತೃಪ್ತಗೊಳಿಸುತ್ತದೆ. ನನ್ನ ಯೋತೆಯನ್ನು ತಿಳಿಸುತ್ತದೆ. ನನ್ನನ್ನು ಯೋಗ್ಯನನ್ನಾಗಿಸುತ್ತದೆ. ಅಂತೆಯೇ ಋಷಿ ಮುನಿ ದೇವತೆ ಗಳೆಲ್ಲರೂ ತಪಸ್ಸಿಗೆ ಮೊರೆಹೋದರು. ತಪಸ್ಸನ್ನೇ ಆಚರಿಸಿದರು. ಅಗಾಧವಾದ, ಅಮೋಘವಾದ, ಅತ್ಯದ್ಭುತವಾದದ್ದನ್ನೇ ವಿಷ್ಣುವಿನ ಅನುಗ್ರಹದಿಂದಲೇ ಪಡೆದರು.
ಈ ತಪಸ್ಸು ಕೇವಲ ದೇವತೆಗಳಿಗೆ ಮಾತ್ರವೆ.. ?? ಹಾಗೇನಿಲ್ಲ. ದೈತ್ಯರೂ ಮಾಡುತ್ತಾರೆ.
ದೇವತೆಗಳನ್ನು ಸೋಲಿಸುವ, ಎದುರಿಸುವ ಸಾಮರ್ಥ್ಯವನ್ನು ಪಡೆಯಲು ದೈತ್ಯರೂ ಸಹ ದೇವತೆಗಳನ್ನು ಮೀರಿಸುವ, ಅವರ ತಲೆಯನ್ನು ಕೆಡೆಸುವ, ಇಂದ್ರಾದಿ ಪದವಿಗಳನ್ನು ಹೊಂದುವ, ದೇವರ ವಿರುದ್ಧ ಯುದ್ಧವಾಡುವ ಶಕ್ತಿ ಸಾಮರ್ಥ್ಯ ಇವುಗಳನ್ನು ಪಡೆದದ್ದೇ ತಪಸ್ಸಿನಿಂದ. ದುರ್ಯೋಧನ ಮುನ್ನೂರಾ ಅರವತ್ತು ಮಂತ್ರಗಳನ್ನು ಅಯಾತಯಾಮವಾಗದಿರುವಂತೆ ಜಪಮಾಡಿ ಸಿದ್ಧಮಾಡಿಕೊಂಡಿರುತ್ತಾನೆ.
*ತಪಸ್ಸು ಯಾರಿಗೆ ಒಲಿದು ಬರುತ್ತದೆ.... ??*
ಯಾರಿಗೆ ತಮ್ಮ ನ್ಯೂನತೆಯ ಅರಿವಾಗಿದೆ, ಅವರು ತಪಸ್ಸು ಮಾಡುತ್ತಾರೆ. ಯಾರಿಗೆ ದೇವರ ಆರಾಧನೆ ಉತ್ಕೃಷ್ಟ ರೀತಿಯಿಂದ ಮಾಡುವ ಹಂಬಲವಿದೆ ಅವರು ತಪಸ್ಸು ಮಾಡುತ್ತಾರೆ. ಏನು ಪಡೆದರೂ ಅದನ್ನು ತಪಸ್ಸಿನಿಂದಲೇ ಪಡೆಯುವೆ ಎಂಬ ಹಂಬಲವಿದೆ ಅವರು ಖಂಡಿತಾ ತಪಸ್ಸು ಮಾಡುತ್ತಾರೆ.
ದೈತ್ಯರಿಗೆ ತಮ್ಮ ನ್ಯೂನತೆಯ ದೌರ್ಬಲ್ಯದ ಅರಿವು ಚೆನ್ನಾಗಿದೆ ಆದ್ದರಿಂದ ಅವರು ತಪಸ್ಸು ಮಾಡುತ್ತಾರೆ. ದೇವರ ಸೇವೆ ಉತ್ಕೃಷ್ಟರೀತಿಯಿಂದ ಮಾಡುವ ಹಂಬಲ ದೇವತೆಗಳಿಗೆ ಇದೆ ಅವರೂ ತಪಸ್ಸು ಮಾಡುತ್ತಾರೆ. ಏನು ಪಡೆದರೂ ತಪಸ್ಸಿನಿಂದಲೇ ಪಡೆಯುವೆ ಎಂಬ ತುಮುಲ ಋಷಿ ಮುನಿಗಳಿಗಿದೆ ಅವರೂ ತಪಸ್ಸು ಸತತಮಾಡುತ್ತಾರೆ. *ಇದ್ಯಾವದೂ ಇಲ್ಲದ ಮಾನವ ಮಾತ್ರ ಎಂದಿಗೂ ತಪಸ್ಸುಅಡಲಾರ.*
ತಾಳ್ಮೆ ಇಲ್ಲದ ಮಾನವ ಏನನ್ನು ಅತ್ಯಂತ ವೇಗದಿಂದ ಪಡೆಯುತ್ತಾನೆ ಅದಕ್ಕೂ ಹೆಚ್ಚು ವೇಗದಲ್ಲಿ ಕಳೆದುಕೊಳ್ಳುತ್ತಾನೆ. ಏನನ್ನು ಪಡೆದಿದ್ದಾನೆ ಅದರಿಂದ ಸುಖ ಪಡೆಯಲಾರ, ಕಿರಿಕಿರಿಯನ್ನೇ ಹೆಚ್ಚು ಹೆಚ್ಚಾಗಿ ಪಡೆಯುತ್ತಾನೆ. ಇದಕ್ಕೆ ಕಾರಣ ತಪಸ್ಸು ಇಲ್ಲದಿರುವಿಕೆಯೇ ಮೂಲ. ಹಾಗಾಗಿ ಮಧ್ಯದ ಮಾನವ ಅದೂ ಇಲ್ಲ, ಇದೂ ಇಲ್ಲ ಅಂತಾಗದೆ ತಪಸ್ಸಿನಲ್ಲಿ ತೊಡಗಿಸಿಕೊಳ್ಳುವಂತಾಗಲಿ.
ಮನುಷ್ಯ ಅಸಾಧ್ಯವಾದದ್ದೆಲ್ಲವನ್ನೂ ಪಡೆಯುವಂತಾಗಲಿ ಎಂಬ ಕಾರಣಕ್ಕೋ ಏನೋ ಏಂಟನೇಯ ವರ್ಷಕ್ಕೇ ಉಪನಯನ ಮಾಡಿ, ಗಾಯತ್ರೀ ನಾರಾಯಣ ಮೊದಲಾದ ಮಂತ್ರಗಳ ಜಪಕ್ಕೆ ಹಚ್ಚುವ ಸಂಪ್ರದಾಯ ನಮ್ಮಲ್ಲಿ ಬಂದಿತು ಎಂದೆನಿಸುತ್ತದೆ. *ನಿತ್ಯ ಹತ್ತು ಜಪ ಮಾಡುವವರು, ನೂರೆಂಟು ಜಪ ಮಾಡುವಂತೆಯಾದರೂ ಸಾಕು* ಅಸಾಧ್ಯವಾದ ಅನೇಕ ಪಡೆಯಲು ಸುಸೂತ್ರವಾಗುತ್ತದೆ ಎಂದು ಹಿರಿಯರ ಮಾತು. ಮುಂದಿನದು ನಮ್ಮದು.
*ನ್ಯಾಸ...✍🏽✍*
ಗೋಪಾಲದಾಸ,
ವಿಜಯಾಶ್ರಮ, ಸಿರವಾರ.
Comments
I think I would never understand. It seems
too complex and very broad for me. I'm looking forward for your next
post, I will try to get the hang of it!