*ಕೌಸಲ್ಯೆಯ ಹರಕೆಗಳು..... ನಮಗೆ ಮಾರ್ಗದರ್ಶಕವೂ*
*ಕೌಸಲ್ಯೆಯ ಹರಕೆಗಳು..... ನಮಗೆ ಮಾರ್ಗದರ್ಶಕವೂ*
"ಯಂ ಪಾಲಯಸಿ ಧರ್ಮಂ ತಂ
ಪ್ರೀತ್ಯಾ ಚ ನಿಯಮೇನ ಚ.
ಸ ವೈ ರಾಘವ ಶಾರ್ದೂಲ
ಧರ್ಮಸ್ತ್ವಾಂ ಅಭಿರಕ್ಷತು"
ಕೌಸಲ್ಯೆ ರಾಮನಿಗೆ ಹರಿಸುವ ಮಾತು. ಎಲ್ಲ ತಂದೆ ತಾಯಿಗಳಿಗೂ, ಉತ್ತಮ ಮಗನಿಗೂ ಒಂದು ಉತ್ಕೃಷ್ಟ ಸಂದೇಶದಂತಿದೆ.
"ರಾಮ ನೀನು ಮಾಡುವ ಧರ್ಮದಲ್ಲಿ ಪ್ರೀತಿ ಇರಲಿ, ನಿಯಮವೂ ಹೊಕ್ಕಿರಲಿ. ಧರ್ಮ ಮಾಡುವಾಗ ಧರ್ಮವನ್ನು ಬೇಸರಿಸ ಬೇಡ. ಪ್ರೀತಿಯಿಂದ ಮಾಡು. ನಿಯಮೇನ ಮಾಡು. ಎಂದೂ ತಪ್ಪಿಸಬೇಡ. ಪ್ರೀತಿಯಿಂದ ನಿಮಬದ್ಧವಾಗಿ ಮಾಡಿದ ಧರ್ಮವೇ ನಿನ್ನನ್ನು ರಕ್ಷಿಸಲಿ. ರಕ್ಷಿಸುತ್ತದೆ." ಎಂದು....
ನಾವು ಮಾಡುವ ಧರ್ಮದಲ್ಲಿ ಪ್ರೀತಿ ಇರುವದಿಲ್ಲ. ಅಂತೆಯೇ ಧರ್ಮ ಮಾಡುವಾಗ ಟೀವಿ ಮೋಬೈಲು ಹರಟೆ ಇವುಗಳ ಹೆಚ್ಚು ಗಮನ ಹೋಗುತ್ತದೆ.
ನಿಯಮವಂತೂ ಸರ್ವಥಾ ಇರದು. ಸ್ವಾಮಿಗಳು ಹೇಳಿದರು, ಉಪನ್ಯಾಸ ಕೇಳಿದೆ, ಏನೋ ಕಷ್ಟ ಆವರಿಸಿತು, ಯಾವದೋ ಕ್ಷೇತ್ರಕ್ಕೆ ಹೋಗಿದ್ದೆ ಆಗ ಅತ್ಯುತ್ತಮ ರೀತಿಯಲ್ಲಿ ಎಲ್ಲ ಧರ್ಮಗಳೂ ಸಾಗಿರುತ್ತವೆ. ಆದರೆ ಕೆಲ ಹೊತ್ತು, ಕೆಲದಿನಗಳು ಉರುಳಿದರೆ ಆ ಧರ್ಮ ಶಿಥಿಲವಾಗುತ್ತದೆ. ಇನ್ನ ನಾಲ್ಕು ದಿನಗಳು ಕಳೆಯುವದರೊಳಗೇ ಸತ್ತೇ ಹೋಗಿರುತ್ತದೆ.
ಯಾವ ಧರ್ಮದಲ್ಲಿ ಪ್ರೀತಿ ಇದೆ ಆ ಧರ್ಮ ನಿಯಮೇನ ಇರುವದಿಲ್ಲ. ಯಾವುದನ್ನು ನಿಯಮೇನ ಮಾಡ್ತಾ ಇರುತ್ತೀವಿ ಅದರಲ್ಲಿ ಪ್ರೀತಿ ಇರದೆ ಯಾಂತ್ರಿಕವಾಗಿ ಮೆಕಾನಿಕಲ್ ಆಗಿರುತ್ತದೆ. ಈ ತರಹದ ಧರ್ಮ ನಮ್ಮನ್ನು ಸುತರಾಂ ರಕ್ಷಿಸುವದಿಲ್ಲ.
ಶ್ರೀರಾಮ !! "ಎಲ್ಲಿ ರಾಮನೋ ಅಲ್ಲಿ ಧರ್ಮ, ಎಲ್ಲಿ ಧರ್ಮವೋ ಅಲ್ಲಿ ಜಯ ಸಮೃದ್ಧಿ, ಸೌಖ್ಯ, ಸಮಾಧಾನ," ಈ ಮಾತು ಜಗಜ್ಜಾಹಿರ ಆಗಬೇಕು ಎಂದು ಆಶೀರ್ವಾದ ಮಾಡುವ ಮುಖಾಂತರ ಆಜ್ಙಾಪಿಸುತ್ತಾಳೆ.
ನಿನ್ನ ದಾರಿಯಲ್ಲಿ ಬರುವ ಏನೆಲ್ಲ ದೇವಸ್ಥಾನ, ಗೋ, ಭ್ರಾಹ್ಮಣರು, ಋಷಿಗಳು, ಮುನಿಗಳನ್ನು ಕಾಣುತ್ತೀಯಾ, ಆ ಎಲ್ಲರಿಗೂ ನೀನು ನಮಸ್ಕಾರ ಆದರ ಗೌರವ ಪ್ರೀತಿ ಸಲ್ಲಿಸು ಅದುವೇ ನಿನ್ನನ್ನು ರಕ್ಷಿಸುತ್ತದೆ.
ನೀ ಇಂದಿನವರೆಗೆ ಮಾಡಿದ ಪಿತೃಸೇವೆ, ಮಾತೃಸೇವೆ, ಗುರುಸೇವೆ, ರಾಷ್ಟ್ರಸೇವೆ ಇವು ಎಂದಿಗೂ ಹುಸಿ ಹೋಗುವದಿಲ್ಲ. ಅರಣ್ಯದಲ್ಲಿ ಇದ್ದರೂ ವೈಭವ ಕಡಿಮೆಯಾಗದಿರುವ ಹಾಗೆ ನೋಡಿಕೊಳ್ಳುತ್ತವೆ. ಆ ಎಲ್ಲ ಸೇವೆಗಳೂ ನಿನ್ನನ್ನು ರಕ್ಷಿಸಲಿ.
ಈ ಹರೆಕೆಯಿಂದ ತಿಳಿಸುವ ಹಿನ್ನಲೆ ಈ ಯಾವ ಧರ್ಮವನ್ನು ಬಿಡುವ ಹಾಗಿಲ್ಲ ಎಂದು ಎಚ್ಚರಿಸುತ್ತಾಳೆ. ಈ ಧರ್ಮಗಳು ಅನಿವಾರ್ಯ ಕರ್ತವ್ಯ ಎಂದೂ ಆದೇಶಿಸುತ್ತಾಳೆ.
ಈ ತರಹದ ಅನುಗ್ರಹ ಮಕ್ಕಳಿಗೆ ಎಚ್ಚರಿಕೆಯ ಗಂಟೆಯಾಗಬಹುದು.
"ತಾವು ಪೀಡಿತರಾದಾಗ, ನಾವು ಧರ್ಮ ಮಾಡಲಿಲ್ಲ, ನಮಗೆ ಈ ತರಹದ ಪೀಡೆ ಬಂದೊದಗಿದೆ" ಎಂಬ ಭಾವ ಪಶ್ಚಾತ್ತಾಪ ಆದರೂ ಬರಲಿಕ್ಕೆ ಸಾಧ್ಯತೆ ಇದೆ. ಈ ತರಹದ ಪಶ್ಚಾತ್ತಾಪ, ಧರ್ಮ ಮಾರ್ಗಲ್ಲಿ ತಳವೂರಲು, ಕ್ರಮಿಸಲು, ಮುಂದೋಡಲೂ ಮಾರ್ಗವೂ ಆಗುತ್ತದೆ......
ರಾಮ !!! ಧರ್ಮ ಕೊಡು ರಾಮ.
ಪುಣ್ಯ ಉಳಿಸು ರಾಮ.
ಜ್ಙಾನ ಬೆಳಿಸು ರಾಮ.
ಭಕ್ತಿ ದೃಢಕರಿಸು ರಾಮ.
ಮುಕ್ತಿಯ ಒದಗಿಸು ರಾಮ.
ಎನ್ನ ಜೀವಕೆ ಜೀವ ರಾಮ.
ಕಷ್ಟಕೊಡು ರಾಮ.
ಕಷ್ಟ ಸಹಿಸುವ ಶಕ್ತಿಯೂ ಕೊಡು ರಾಮ.
ನಿನ್ನ ನೆನೆದವರಿಗೆ ಕಷ್ಟ ಒಂದಿಲ್ಲ ರಾಮ.
*ಇದುವೇ ಬೇಕು ಎಂಬ ಹಠ ಬೇಡ, ಇಂತಹದ್ದು ಬೇಕು ಎಂಬ ಕೊರಿಕೆ ಕೊಡೋ ರಾಮ*
ನಿನ್ನ ಅನುಗ್ರಹ ಇದ್ದರೆ ಬಾಗಿಲು ಹೊರಗಿರುವ ಜಡವಾದ ಕಟ್ಟಿಗೆಯ ಅಥವಾ ಚರ್ಮದ ಪಾದರಕ್ಷೆಗೆ ರಾಜ್ಯವಾಳುವ ಸೌಭಾಗ್ಯ ಒದಗಿಬಂತು. ಹೀಗಿರುವಾಗ ನಾನು ನಿನ್ನ ಅನುಗ್ರಹ ಪಡೆದರೆ ನನ್ನ ಸೌಭಾಗ್ಯ ಹೇಗಿರಬಹುದು ಎಂದು ಯೋಚಿಸಲೂ ಅಸಾಧ್ಯನೋ... ಅನುಗ್ರಹಿಸು ಕರುಣಿಸು.
*✍🏽✍🏽ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments
It’s rather value enough in my opinion. Professionally, if perhaps all site owners
in addition to people created fantastic articles and other content as you made, the world wide
web might be far more invaluable than you ever have.