*"ಗುರುಹಿರಿಯರ ಅವಮಾನ ಬಿರುಗಾಳಿ ಎಚ್ಚರಿಕೆ......."*
*"ಗುರುಹಿರಿಯರ ಅವಮಾನ ಬಿರುಗಾಳಿ ಎಚ್ಚರಿಕೆ......."*
ನಮ್ಮ ಸಮಾಜದಲ್ಲಿ ನಮ್ಮ ಸಿದ್ಧಾಂತದಲ್ಲಿ ಗುರುಗಳಿಗೆ ಹಾಗೂ ಹಿರಿಯರಾದ ದೇವತೆಗಳಿಗೆ ಕೊಡುವ ಸ್ಥಾನ ಇನ್ಯಾವ ಸಿದ್ಧಾಂತ ಹಾಗೂ ಸಮಾಜದಲ್ಲಿ ಕೊಡುವದಿಲ್ಲ. ಆ ಮಟ್ಟದ ಗೌರವಸ್ಥಾನ ಆದರಣೀಯಸ್ಥಾನ ಗುರು ಹಿರಿಯರದ್ದು.
ಏನಿದೆ ಹಂತಹದ್ದು. ... ಅವರೂ ಒಬ್ಬರು ಚೇತನರು ಅಲ್ಲವೇ? ?
ಮನೆಯಲ್ಲಿಯ ಭಂಗಾರ ತುಂಬ ಬೆಲೆ ಬಾಳುವಂತಹದ್ದು. ಮನೆ ತುಂಬ ದೊಡ್ಡದು. ಆದರೆ ಮನೆಯನ್ನು ಭದ್ರಪಡಿಸುವದು ಸಣ್ಣದಾದ ಬಾಗಿಲು. ಆ ಬಾಗಿಲನ್ನೂ ಭದ್ರಪಡಿಸುವದು ಕೀಲಿ. ಆ ಕೀಲಿಯನ್ನೂ ಘಟ್ಟಿಯಾಗಿ ಇಟ್ಟಿರುವದು ಕೀಲಿ ಕೈ. ಅಂತೆಯೇ ಕೀಲಿಕೈ ಅನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳುತ್ತೇವೆ, ಇದೇನುದ ಕೀಲಿಕೈ ಎಂದು ಉಡಾಫೆ ಮಾಡಿದರೆ ಪಶ್ಚಾತ್ತಾಪ ಪಾಡುವದು ಅನಿವಾರ್ಯ ವೆಂದಾಗುತ್ತದೆ.
ಹಾಗೆಯೇ ಅನಂತ ಆನಂದರೂಪ ಮೋಕ್ಷ, ಆ ಮೋಕ್ಷವನ್ನು ಕೊಡುವವ ದೇವ, ಆ ದೇವರ ಮಹಾಪ್ರಸಾದ, ಪ್ರಸಾದಕ್ಕಾಗಿ ವಿಷ್ಣುವಿನ ತತ್ವಜ್ಙಾನ, ಆ ಜ್ಙಾವನ್ನು ಒದಗಿಸುವವರು ಕೇವಲ *ಗುರುಗಳು ಹಾಗೂ ಹಿರಿಯರಾದ ದೇವತೆಗಳು.* ಹಾಗಾಗಿ ಗುರು ಹಿರಿಯರಿಗೆ ಅಷ್ಟು ಮಹತ್ವ.
ಗುರುಗಳು ತತ್ವಜ್ಙಾನೋಪದೇಶಕರಾದರೆ, ನಾನಾ ಇಂದ್ರಿಯ, ಮನಸ್ಸು ದೇಹ ಇವುಗಳಲ್ಲಿ ಇದ್ದು ಪ್ರೇರಿಸಿ ಅನುಗ್ರಹಿಸುವವರು *ತತ್ವಾಭಿಮಾನಿ ದೇವತೆಗಳು.* ಹಾಗಾಗಿ ಇವರೀರ್ವರಿಗೆ ತುಂಬ ಮಹತ್ವ. ಉಡಾಫೆ ತೋರಿದರೆ ಅನರ್ಥ ನಿಶ್ಚಿತ.
*ಗುರುಗಳಿಗೆ ಮಾಡಿದ ಅವಮಾನ ಹಾಗೂ ಅಪಹಾಸದ ಫಲ*
ಮಹಾಭಾರತದ ಒಂದು ಸುಂದರ ಕಥೆ ತಿಳಿಸುತ್ತದೆ....
ರತಿ ದೇವಿ ದೊಡ್ಡ ದೇವತೆ. ಅನಂತ ಜೀವರಾಶಿಗಳಲ್ಲಿ ಒಂಭತ್ತನೆಯ ಸ್ಥಾನ ರತೀದೇವಿಯದು. ಆ ರತೀ ದೇವಿಯ ಗುರು ಸ್ಥಾನದಲ್ಲಿರುವವರು ಶಚೀ, ಪಾರ್ವತೀ, ಭಾರತೀ ದೇವಿಯರು. ಈ ದೇವತಾ ಸ್ತ್ರೀಯರುಗಳಿಗೆ ಒಂದೇ ದೇಹ ಇದೆ ಏಕದಹದಲ್ಲಿ ಇದ್ದಾರೆ. (ಕಿರಿಯರಾದ ಉಷಾ ಶ್ಯಾಮಲಾ, ಗುರು ಸ್ಥಾನದಲ್ಲಿರುವ ಪಾರ್ವತೀ ಶಚಿಯರಿಗೆ ಶಾಪ, ಅವರೆಲ್ಲರ ಮೇಲೆ ಭಾರತೀದೇವಿಯ ಕೃಪೆ) ಇವೆರಡು ಕಾರಣಗಳಿಂದಾಗಿ ಈ ದೊಡ್ಡರಿಗೆ ಏಕದೇಹ ಬಂದಿದೆ.
ಒಂದೇ ದೇಹದಲ್ಲಿ ಐದು ಜನರು ಇರುವದನ್ನು ನೋಡಿ ನೋಡಿ ಕೇಳಿ ಅಪಹಾಸ ಮಾಡಿರುತ್ತಾಳೆ ರತೀದೇವಿ. ಆ ಕಾರಣದಿಂದ ರತೀದೇವಿ ಅನೇಕ ವರ್ಷಗಳ ಕಾಲ ಮಹಾದೈತ್ಯನಾದ ಶಂಬರಾಸುರನ ದಾಸಿಯಾಗಿರುವ ದೌರ್ಭಾಗ್ಯವನ್ನು ಪಡೆಯುತ್ತಾಳೆ. ಇದು ರತೀದೇವಿಯ ಅವಸ್ಥೆಯಾದರೆ...
ಮುದ್ಗಲ ಋಷಿಗಳದೂ ಹೀಗೆಯೇ ಕಥೆ ಇದೆ. ಇಂತಹ ನೂರಾರು ಕಥೆಗಳನ್ನು ಮಹಾಭಾರತ ರಾಮಾಯಣದಲ್ಲಿ ಕೇಳುತ್ತೇವೆ.
ದೊಡ್ಡ ಜ್ಙಾನಿಗಳು, ಅತೀವ ಭಗವತ್ಪ್ರಿಯರು, ಎಂದೋ ಒಮ್ಮೆ ಮಾಡಿದ ಪುಟ್ಟ ಅಪಹಾಸ ಮಾಡಿರುವದರಿಂದ ಮಹಾ ಮಹಾ ಅನರ್ಥಕ್ಕೆ ಗುರಿ ಆಗಿರುತ್ತಾರೆ. ಎಷ್ಟೋ ವರ್ಷಗಳ ಕಾಲ ಗುರು ದೇವತಾ ಧರ್ಮ ದೇವರುಗಳಿಂದ ವಿಮುಖರಾಗುವ ಪ್ರಸಂಗ ಬರತ್ತೆ.
ಇನ್ನು ಏನೂ ಜ್ಙಾನವಿಲ್ಲದ, ಭಗವಂತನನ್ನು ಎಂದೂ ಮನಸಾರೆ ನೆನೆಯದ, ಭಗವಂತ ಹೇಳಿದ ಯಾವ ಮಾತನ್ನೂ ಕೇಳದ, ಮಾನವ ನಿರಂತರ ಗುರು ಹಿರಿಯರನ್ನು ನಿಂದಿಸುತ್ತಾ ಸಾಗಿದರೆ ಆಗುವ ಅನರ್ಥ ಅವನ ದೃಷ್ಟಿಂದ ನೋಡಲಸಾಧ್ಯ. ಅವನ ಮನಸ್ಸಿನಿಂದ ಊಹಿಸಲೂ ಅಸಾಧ್ಯ. ಆ ಕಾರಣದಿಂದಲೇ ಪುರಂದರ ದಾಸರು *ಎಚ್ಚರಿಕೆ* *ಮಾನ್ಯರ ಬಿರುಗಾಳಿ ಕೇಳೆಚ್ಚರಿಕೆ* ಎಂದು ಹೇಳಿ ಎಚ್ಚರಿಸುತ್ತಾರೆ.
ನಮ್ಮ ಗುರುಗಳು ಸದಾ ಒಂದು ಮಾತು ಹೇಳುತ್ತಿರಬೇಕು *ಅತೀವ ಅನರ್ಥಮಾಡಿಕೊಳ್ಳುವ ಹೆಬ್ಬಯಕೆ ಇದ್ದರೆ, ಗುರುಗಳನ್ನು ನಿಂದಿಸು, ದೇವತೆಗಳು ದ್ವೇಶಿಸು* ಎಂದು. ಹಿರಿಯರಿಗೆ ಮಾಡುವ ಅವಮಾನ ಬಿರುಗಾಳಿ ಇದ್ದಂತೆ, ಕೊಚ್ಚಿಕೊಂಡು ಹೋಗತ್ತೆ, ಎಲ್ಲಿ ಬಿಸಾಡತ್ತೋ ಗೊತ್ತಿಲ್ಲ. ಎದ್ದು ಬರಲು ತುಂಬ ಜನುಮಗಳು ಬೇಕಾಗಬಹುದು.
ಅಂತೆಯೇ *ಹರೌ ರುಷ್ಟೇ ಗುರುಸ್ತ್ರಾತಾ, ಗುರೌ ರುಷ್ಟೇ ನ ಕಥಂಚನ* ಹರಿ ಸಿಟ್ಟಾದರೆ ಗುರು ರಕ್ಷಿಸಿಯಾನು. ದೀನ ದೂನ ಅನಾಥ ಶರಣಾಗತ ಎಂದು ಪ್ರಾರ್ಥಿಸಿಯಾನು. ಆದರೆ ಆ ಗುರುವೇ ಸಿಟ್ಟಾದರೆ ನಾಯಿನೂ ನಮ್ಮಕಡೆ ನೋಡದ ಅವಸ್ಥೆ ನಮ್ಮದಾಗಬಹುದು....
ಗುರು ಭಕ್ತಿ ಮಾಡದಿದ್ದರೂ ಪರ್ವಾಗಿಲ್ಲ, ತತ್ವಜ್ಙಾನ ಸಿಕದಿರಬಹುದು ಅಷ್ಟೆ. ಗುರುದ್ವೇಶ ಮಾಡಿದರೆ ಮಹಾ ಅನರ್ಥ ಅಂತೂ ಪ್ರತಿಶತಃ ನೂರರಷ್ಟು ನಿಶ್ಚಿತ.
ಅತೀ ಶ್ರೇಷ್ಠ ಹಿತೈಶಿ, ಧರ್ಮಬೋಧಕ, ಆಪತ್ತಿಗೆ ಒದಗುವ, ತನ್ನದನ್ನು ತ್ಯಜಿಸಿದ, ನಮಗಾಗಿ ಪರಿತಪಿಸುವ, ತನ್ನ ಸಾಧನೆಗಳಲ್ಲಿ ನನ್ನನ್ನೂ ಭಾಗಿಯಾಗಿಸುವ, ಪಾಠ, ಉಪನ್ಯಾಸ, ಹಿತ ಮಾತುಗಳ ಮುಖಾಂತರ ಅಥವಾ ಮತ್ತಿನ್ನೆನೋ ಮಾರ್ಗಗಳಿಂದ ದೇವರಲ್ಲಿ ಶಾಸ್ತ್ರದಲ್ಲಿ ಭಕ್ತಿ ಬೆಳೆಸುವ, *ಗುರುಗಳಿಗಂತೂ ಅವಮಾನ ತಿರಸ್ಕಾರ ಎಂದಿಗೂ ನಮ್ಮಿಂದಾಗದಿದ್ದರೆ ಸಾಕು.....*
*✍🏽✍🏽ನ್ಯಾಸ.... 😊 😊*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments