ವಿಚಾರವಿಲ್ಲದ ಇತರರ ಅನುಸರಣೆ ಈ ಕಾಲದ ಒಂದು ಭಯಂಕರ ರೋಗ*



ವಿಚಾರವಿಲ್ಲದ ಇತರರ ಅನುಸರಣೆ ಈ ಕಾಲದ ಒಂದು ಭಯಂಕರ ರೋಗ*

ಮನುಷ್ಯನಿಗೇ ರೋಗಗಳು ಅನೇಕ. ಪ್ರಾಣಿ ಪಶು ಪಕ್ಷಿಗಳಕ್ಕಿಂತಲೂ ಅಧಿಕ ಮಟ್ಟದಲ್ಲಿ ರೋಗಿಷ್ಠ ಮನುಷ್ಯ. ದೈಹಿಕ ರೋಗಗಳು ಒಂದಾದರೆ ಮನಸ್ಸಿನ ರೋಗಳೂ ತುಂಬ,  ಇವುಗಳ ಮಧ್ಯದಲ್ಲಿ  *ಇನ್ನೊಬ್ಬರ ಅನುಕರಣೆಯಿಂದ* ಬರುವ ರೋಗಗಳೂ ಅತಿ ಭಯಂಕರ ವಾದವುಗಳು. 

 ಪುರುಷರೋ/ಸ್ತ್ರೀಯರೋ ಗೋಪಿಚಂದನ್ನು  ಅಥವಾ ಕುಂಕುಮವನ್ನು ಧರಿಸುವದು ಬಿಟ್ಟಿರುತ್ತಾರೆ. ಬಿಡುವದಕ್ಕೆ ಮೂಲವೇನು... ?? ಗೋಪಿಚಂದನ, ಕುಂಕುಮ, ಅಂಗಾರ ಅಕ್ಷತೆ, ಬಳೆ ಇವುಗಳ ಮೇಲೆ ದ್ವೇಶ ಇಲ್ಲ. ಕೇವಲ ಪರರ ಅನುಕರುಣೆಯೇ ಹೊರತು ಇನ್ನೇನು ಬೇರೆ ಕಾರಣವೇ  ಇರುವದಿಲ್ಲ. ಕೇವಲ ಇದು ಒಂದು ಉದಾಹರಣೆ ಮಾತ್ರ.

ಧರ್ಮ ಬಿಡಲು ಮನುಷ್ಯನಿ ಧೈರ್ಯವಿಲ್ಲ. ಅದರೂ ಧರ್ಮವನ್ನು ಬಿಡುತ್ತಾನೆ. ಧರ್ಮ ಮಾಡಲು ತುಂಬ ಮನಸ್ಸಿದೆ ಆದರೂ ಮಾಡುವ ದಿಲ್ಲ.  ಧರ್ಮದ ದ್ವೇಶ ಸರ್ವಥಾ ಇಲ್ಲ, ಆದರೂ ಬಿಡುತ್ತಾನೆ. ಧರ್ಮದ ಮೇಲೆ ವಿಶ್ವಾಸವೂ ತುಂಬಾ ಇದೆ ಆದರೂ ಧರ್ಮ ಬಿಡುತ್ತಾನೆ. ಧರ್ಮದಿಂದಲೇ ಎನಗೆ ಹಿತ ಎಂದು ಸ್ಪಷ್ಟವಾಗಿ ಗೊತ್ತಿದೆ ಆದರೂ ಧರ್ಮಬಿಡುತ್ತಾನೆ ಅದಕ್ಕೆ ಒಂದೇ ಕಾರಣ *ಪರರ ಅನುಕರಣೆ.*  

ಧರ್ಮ ಮಾಡದ ಅವನು ಚೆನ್ಬಾಗಿ ಇದ್ದಾನೆ, ಹಾಗಿರುವಾಗ ನಾನೇಕೆ ಧರ್ಮವನ್ನು ಮಾಡಬೇಕು..? ಎಂದು ಯೋಚಿಸಿಯೇ ಬಿಟ್ಟಿರುತ್ತಾನೆ. ಹೀಗಾಗುವದು ಏಕೆ..??
ಸ್ವಂತ ವಿಚಾರವಿಲ್ಲದ, ಸ್ವಂತಿಕೆಯೇ ಇಲ್ಲದ ಮನುಷ್ಯ, ಇನ್ನೊಬ್ಬರನ್ನು ಅನುಕರಣೆ ಮಾಡುವದನ್ನುಳಿದು ಬೇರೆ ಮಾರ್ಗವಂತೂ ಇರಲಾರದು. ಆ ಕಾರಣದಿಂದಾಗಿಯೇ ದರ್ಮ ಬಿಡುವ.

ಒಂದು ಬಾರಿ ಒಬ್ಬರ ಅನುಕರಣೆಯ ರುಚಿ ಹತ್ತಿತೋ ಮತ್ತೊಮ್ಮೆ ಇನ್ನೊಬ್ಬ ಸಿಗುವ, ಅವನ ಅನುಕರಣೆ ಆರಂಭ. ಮುಗುದೊಮ್ಮೆ ಇನ್ನೊಬ್ಬನ ಅನುಕರಣೆ. ಕೊನೆಗೆ ಇನ್ನೊಬ್ಬರ ಹೀಗೆ ಅನುಕರಿಸುವದರಲ್ಲೇ ಜೀವನದ ಕೊನೆ. ಅಂತೆಯೇ ಇಂದು ನಮ್ಮ ಸ್ವಂತಿಕೆ ಹೋಗಿದೆ, ಏಳುವದರಿಂದಾರಂಭಿಸಿ ಮಲಗುವವರೆಗೆ ಪರರ ಅನುಕರಣೆಯ ರೋಗವೇ ಹೆಮ್ಮರವಾಗಿ ಬೆಳೆದು ನಿಂತಿದೆ. 

ಏಳುತ್ತಿರುವಾಗಲೇ bed cofy, ನಮ್ಮದೆ ಆದ ದೇವರ ನಾಮ ಸ್ಮರಣೆ ಇಲ್ಲ. ಬಹಿರ್ದೇಶಕ್ಕೆ ಹೋಗುವದು ಪರರ ಅನುಕರಣೆ. ದಂತ ಧಾವನ ಸ್ನಾನ ಪರರ ಅನುಕರಣೆ. ಮನೆಯಲ್ಲೆಲ್ಲ ಬೂಟು ಹಾಕ್ಕೊಂಡು ಓಡಾಡುತ್ತಾ class / office ಗೆ ತಯಾರಾಗಿ ಹೊರಡಲು ಸಿದ್ಧವಾಗುವದು ಪರರ ಅನುಕರಣೆ. Table ಮೇಲೆ ಊಟ. ಪೂಜೆ ಮಾಡದ, ನೈವೆದ್ಯ  ದೆವರಿಗರ್ಪಿಸದ ಊಟ.  ಕೈಯಲ್ಲಿ,  ತೊಡೆಯ ಮೆಲೆ ಇಟ್ಟುಕೊಂಡು ಮಾಡುವ ಊಟ ಎಲ್ಲವೂ ಪರರ ಅನುಕರಣೆಯೇ.  Hi hello ಹೇಳ್ತಾ ಪ್ರೀತಿ ಅಂತಹಕರಣವಿಲ್ಲದ, ಕೇವಲ ತುಟಿಯ ಮಾತುಗಳೂ ಪರರ ಅನುಕರಣೆಯಿಂದಲೇ ಬಂದದ್ದು. ಕೊನೆಗೆ mobail TV ನೋಡುತ್ತಾ ಮಲಗುವದೂ ಪರರ ಅನುಕರಣೆಯಿಂದಲೇ... ಹೀಗೆ ಎಲ್ಲವೂ ಪರರನ್ನು ಅನುಕರಿಸುವಂತಹ ದೊಡ್ಡ ರೋಗಕ್ಕೆ ತುತ್ತು ಆಗಿದ್ದೇವೆ. 

ಪರರ ಅನುಕರಣೆಯೆಂಬ ರೋಗಕ್ಕೆ *ಸ್ವಂತದ ವಿಚಾರವೇ* ದೊಡ್ಡ ಔಷಧಿ. ಸ್ವಂತ ವಿಚಾರ ಕಳೆದುಕೊಂಡದ್ದಕ್ಕಾಗಿಯೇ ಈ *ಪರರ ಅನುಕರಣೆಯ ರೋಗ ಗ್ರಸ್ತ* ಆಗಿರುವ ಮಾನವ.  ಆದ್ದರಿಂದ ನಮ್ಮ ಶಾಸ್ತ್ರ, ನಮ್ಮ ಸಿದ್ಧಾಂತ, ನಮ್ಮ ಭವ್ಯ ಪರಂಪರೆ, ನಮ್ಮ  ಅನಾದಿ ಸಂಸ್ಕಾರ, ನಮ್ಮ ಅಗಾಧ ಬುದ್ಧಿ ಇವುಗಳಿಂದ ನಮ್ಮದೇ ಆದ ಶಾಸ್ತ್ರ ದೇವ ಸಮ್ಮತವಾದ, ಇಂದಿಗೂ ಎಂದೆಂದಿಗೂ ಅತ್ಯಂತ ಹಿತಕಾರಿಯಾದ ವಿಚಾರಗಳನ್ನು ಮಾಡಿ, ನಿರ್ಣಯ ಮಾಡಿಕೊಂಡು ಕನಿಷ್ಠಮಟ್ಟದಲ್ಲಿ ಆದರೂ *ಪರರನ್ನು ಅನುಕರಿಸುವ ರೋಗದಿಂದ*  ಮುಕ್ತರಾಗುವತ್ತ ಹೆಜ್ಜೆ ಇಡೋಣ. ಪರರ ಅನುಕರಿಸುವ ರೋಗದ ಮುಂದೆ ಈದೈಹಿಕ ರೋಗಗಳು ಲೆಕ್ಕ್ಖಕ್ಕೆ ಬರುವದಿಲ್ಲ. ದೈಹಿಕ ರೋಗಗಳು ಇ ಜನ್ಮಕ್ಕೆ ಮಾತ್ರ, ಅನುಕರಣೆಯ ರೋಗ ಜನ್ಮಜನ್ಮಾಂತರಕ್ಕುಕೂ ಬಿಸಿ ಮುಟ್ಟಿಸುವ ರೋಗ.

ಇನ್ನೊಬ್ಬರನ್ಬೇ ಅನುಕರಿಸುವದು ಎಂದಾದರೆ ನಮ್ಮವರನ್ನೆ ಅನುರಿಸೋಣ. ನಮ್ಮ ಸಿದ್ದ್ಧಾಂತ, ನಮ್ಮ ಶಾಸ್ತ್ರ, ಸಮ್ಮ ಸಂಪ್ರದಾಯ, ನಮ್ಮ ಗುರು ಹಿರಿಯರು, ಹೀಗೆ ನೂರು ಇವೆ. ಮಹಾಧೈರ್ಯ ಭೀಮಬಲ ಎರಡೂ ಅವಶ್ಯಕ.   *ನಮ್ಮವರು  ಮುಂದಿಟ್ಟ ಒಂದು ಹೆಜ್ಹೆ, ಹತ್ತುಜನರ ಹಜ್ಜೆಗೆ ಕಾರಣವಾಗುತ್ತದೆ.* ಈ ಕ್ರಮ ನಮ್ಮವರನ್ನಾದರೂ ನಾವು ಅನುಕರಿಸಿಓಣ. ನಮ್ಮವರನ್ನೇ ಅನುಸರಿಸೋಣ. 

*✍🏻✍🏻✍🏻ನ್ಯಾಸ.*
ಗೋಪಾಲ ದಾಸ
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*