ಗೋ ರೂಪೀ- ಸರಸ್ವತಿ

*ಗೋ ರೂಪೀ-  ಸರಸ್ವತಿ*

ಶುದ್ಧ ಜ್ಙಾನಾಭಿಮಾನೀ ಹಾಗೂ ಜ್ಙಾನಪ್ರದಳು ಸರಸ್ವತೀ ದೇವಿ. ಇಂದು ಪರಿಶುದ್ಧ ಜ್ಙಾನವೇ ಇಲ್ಲದೆ ಪರದಾಡುತ್ತಿರುವವರು ನಾವು. ಜ್ಙಾನ knowledge ಇದು ಅತ್ಯಂತ ಅಮೂಲ್ಯ. ಒಂದು ಹೆಜ್ಜೆ ಮುಂದಿಡಲೂ ಜ್ಙಾನ ಬೇಕು. ಒಂದು ಸಣ್ಣ ಕಾರ್ಯ ಮಾಡಲೂ ಜ್ಙಾನ ಬೇಕು. ಊಟ ನಿದ್ರೆಗೂ ಜ್ಙಾನ ಆವಶ್ಯಕ. ಒಂದರ್ಥದಲ್ಲಿ ಜ್ಙಾನವಿಲ್ಲದೇ ಏನಿಲ್ಲ, ಏನೂ ಆಗದು, ಏನೂ ಮಾಡಲಾಗದು. ಹೊಟ್ಟೆ ತುಂಬತ್ತೆ, ನಾನು ಮುಂದೇ ಹೋಗುವೆ, ಹಣಘಳಿಸ ಬಹುದು ಇತ್ಯಾದಿ ಇತ್ಯಾದಿ ಜ್ಙಾನ ವಿಲ್ಲದಿದ್ದರೆ, ಊಟ ಮಾಡುತ್ತಿರಲಿಲ್ಲ, ಮುಂದೆ ಹೆಜ್ಜೆ ಇಡುತ್ತಿರಲಿಲ್ಲ, ಕೆಲಸಕ್ಕೆ ಹೋಗುತ್ತಿರಲಿಲ್ಲ....

ನಮ್ಮಲ್ಲಿ ಅಪಾರಾದ ಜ್ಙಾನ ಇದೆ, ನಾವು ಜ್ಙಾನವಂತೆರೆ ಇದರಲ್ಲಿ ಸಂಶಯವಿಲ್ಲ. ಆದರೆ ಆ ಜ್ಙಾನ ಅನಂತ ಫಲಕ್ಕೆ ಕಾರಣವಾಗದೆ, ಕ್ಷುದ್ರಫಲಕ್ಕೆ ಕಾರಣವಾಗಿದೆ ಇದೇ ಬೇಸರದ ಸಂಗತಿ. ಹಾಗಾದರೆ ಅನಂತ ಫಲಕ್ಕೆ ಕಾರಣವಾದ ಜ್ಙಾನವೂ ಇದೆಯಾ.. ?? ಇದ್ದರೆ ಆ ಜ್ಙಾನವನ್ನು ಪಡೆಯುವ ಬಗೆ ಹೇಗೆ ?? ಉತ್ತರವನ್ನು ಬೃಹದಾರಣ್ಯಕ ಉಪನಿಷತ್ತು ತುಂಬಾ ಸೊಗಸಾಗಿ ಕೊಡುತ್ತದೆ.

*ವಾಗಭಿಮಾನಿ ಸರಸ್ವತಿಯನ್ನು "ಗೋ" ಎಂದು ತಿಳಿ* 

ಅನಂತ ಆನಂದದ ಫಲಕ್ಕೆ ಕಾರಣವಾದ, ವಿದ್ಯೆಯ ಸಿದ್ಧಿಗೆ ಆವಶ್ಯಕವಾದ ಚಿಂತನೆಯನ್ನು ಈ ಪ್ರಕರಣದಲ್ಲಿ ತಿಳುಹಿಸಿಕೊಡುತ್ತಾರೆ ಎಂದು ಇಂದಿನ ಆರಾಧ್ಯ ಗುರುಗಳಾದ ಶ್ರೀ ರಘೂತ್ತೀರ್ಥರು ತಿಳುಹಿಸಿಕೊಡುತ್ತಾರೆ. 

ಸರ್ವಿದ್ಯಾಭಿಮಾನಿ ವಾಗಭಿಮಾನಿಯಾದ ಸರಸ್ವತೀ (ಭಾರತೀ)ದೇವಿ "ಗೋ" ರೂಪದಲ್ಲಿ ಇದ್ದಾಳೆ. ಗೋ ಜಗತ್ತಿಗೆ ತಾಯಿ. ಆ ಕಾರಣದಿಂದಲೇ ಸರಸ್ವತೀ (ಭಾರತೀ) ದೇವಿ ಗೋರೂಪದಿಂದ ನೆಲೆನಿಂತಿದಾಳೆ. ಈ "ಗೋ" ರೂಪದ ಸರಸ್ವತೀ(ಭಾರತೀ) ದೇವಿಯನ್ನೇ ಉಪಜೀವಿಸಿ ದೇವತೆಗಳು, ಪಿತೃಗಳು, ಮನುಷ್ಯರು ಇದ್ದಾರೆ. ಈ ಸರಸ್ವತೀ(ಭಾರತೀ) ದೇವಿಯ ಪತಿ, ವೃಷಭಸೂಕ್ತದಿಂದ ಪ್ರತಿಪಾದ್ಯರಾದ "ವೃಷಭರೂಪ" ದಿಂದಲೇ ಇರುವ, ಅನಂತ ಅಪಾರ ಜ್ಙಾನನಿಧಿಗಳಾದ ವಾಯುದೇವರೇ ಆಗಿದ್ದಾರೆ. ಅಪಾರ ಅನಂತ ಜೀವರಾಶಿಗಳ ಮನೋನಿಯಾಮಕರು ಆದ "ರುದ್ರದೇವರೆ" ಇವರೀರ್ವರ ಪುತ್ರನು ಆಗಿದ್ದಾರೆ. 

ಈ ತರಹದಿಂದ "ಗೋರೂಪಳಾದ" ಸರಸ್ವತೀ (ಭಾರತೀ) ದೇವಿಯರನ್ನು ಯಾರು ನಿತ್ಯ ಚಿಂತಿಸುತ್ತಾರೆ, ಅವರಿಗೆ ಅನಂತಫಲ ರೂಪವಾದ ಆನಂದಕ್ಕೆ ಕಾರಣವಾದ ಪರಿಶುದ್ಧ ಜ್ಙಾನದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಶ್ರೀಮದಾಚಾರ್ಯರು ಶ್ರೀಭಾಷ್ಯದಲ್ಲಿ, ವ್ಯಾಖ್ಯಾನದಲ್ಲಿ ಶ್ರೀರಘೂತ್ತಮತೀರ್ಥರು ತಿಳುಹಿಸಿಕೊಡುತ್ತಾರೆ. 

ಇಂದು ತಾತ್ಕಾಲಿಕ ಕ್ಷುದ್ರಫಲಗಳನ್ನು ಪಡೆಯಲು ಬೇಕಾದ knowledge ಗೋಸ್ಕರ ಲಕ್ಷ, ಹತ್ತುಲಕ್ಷ, ಐವತ್ತು ಲಕ್ಷ,  ಎಂಭತ್ತು ಲಕ್ಷ ಕೊಡಲು ಸಿದ್ಧರಾದ ನಾವು, ಅನಂತ ಆನದಕ್ಕೆ ಕಾರಣವಾದ ಪರಿಶುದ್ಧ ಜ್ಙಾನ ಕೊಡುವ ಈ ತರಹದ ಉಪಾಸನೆಗಳನ್ನು ಪಡೆಯಲು ಹಣದ ಅವಶ್ಯಕತೆ ಇಲ್ಲ. ಸಮಯದ ಅವಶ್ಯಕತೆ ಇದೆ ಜೊತೆಗೆ ಮನಸ್ಸು ಮಾಡಬೇಕು ಮತ್ತು ಪ್ರಯತ್ನ ಬೇಕು. ಇವುಗಳು ಇದ್ದರೆ ಇಂತಹ ನೂರಾರು ಸಾವಿರಾರು ಚಿಂತನೆಗಳನ್ನು ಉಪಾಸನೆಗಳನ್ನು ಕುಳಿತಲ್ಲಿಯೇ, ಒಂದುಡ್ಡು ಖರ್ಚು ಮಾಡದೇ ಪಡೆಯಬಹುದು. 

"ಜ್ಙಾನೇನೈವ ಪರಂ ಪದಮ್" ಎಂದು ಶಾಸ್ತ್ರ ಹೇಳಿದರೆ, "ಜ್ಙಾನವಿಲ್ಲದೇ ಮೋಕ್ಷವಿಲ್ಲ" ಎಂದರು ದಾಸರು. ಹೀಗಿರುವಾಗ ಜ್ಙಾನ ಸಂಪಾದಿಸಿಕೊಳ್ಳುವ ಅತ್ಯಂತ ಯೋಗ್ಯವಾದ ಅವಸ್ಥೆಯಲ್ಲಿ ನಾವಿರುವಾಗ, ಊರೂರುಗಳಲ್ಲಿ ಜ್ಙಾನೋಪದೇಶಕರು ದೊರೆಯುವ ಸಮಯ ಈಗಿರುವಾಗ ನಾವು ಜ್ಙಾನಪಡೆಯದೇ ಇರಲು ಸಾಧ್ಯವೇ...?? 

ಇಂದಿನಿಂದಲೇ ಅನಂತಫಲಕ್ಕೆ ಕಾರಣವಾದ, ಪರಿಶುದ್ಧವಾದ  ಜ್ಙಾನಮಾರ್ಗದಲ್ಲಿ ಇರುವಂತೆ ಗುರುಗಳು, ಜ್ಙಾನಿಗಳು, ದೇವತೆಗಳು, ರುದ್ರದೇವರು, ಸರಸ್ವತೀ ವಾಯುದೇವರುಗಳು, ಸ್ವಯಂ ದೇವರು ಪ್ರೇರಿಸಲಿ, ಪ್ರಚೋದಿಸಲಿ ಎಂದು ನಾವಿಬ್ವರೂ ಪ್ರಾರ್ಥಿಸಿಕೊಳ್ಳೋಣ...

*✍🏽✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
Waahhhh exlent :)
NYASADAS said…
ಧನ್ಯವಾದಗಳು

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*