ಧರ್ಮ ಅಸ್ತಂಗತ ವಾಗುತ್ತಿದೆಯಾ..... ? ಅಸ್ತಮಾಡುತ್ತಿದ್ದೇವೆಯಾ..??
ಧರ್ಮ ಅಸ್ತಂಗತವಾಗುತ್ತಿದೆಯಾ.. ? ಅಸ್ತಮಾಡುತ್ತಿದ್ದೇವೆಯಾ..?
ನಮ್ಮನ್ನು ಬದುಕಿಸುವ ಸೂರ್ಯನೆಂಬ ಧರ್ಮ ಅಸ್ತಂಗತವಾಗುವ ಕಾಲ ಸನ್ನಿಹಿತವಾಗಿದೆಯಾ.. ಎಂಬ ಸಂಶಯ ದಿನಕಳೆದಂತೆ ಎಲ್ಲ ಧಾರ್ಮಿಕರಿಗೂ ಕಾಡುತ್ತಿದೆ. ಅಂತಹ ಅವಸ್ಥೆ ಇಂದಿನ ನಮ್ಮ ಅವಸ್ಥೆ....
ಧರ್ಮ ಶಾಸ್ತ್ರ್ರ ನಂಬದ ಜನರದ್ದೇ ರಾಜ್ಯ. ಸ್ವಾತಂತ್ರ್ಯ ಎಲ್ಲರಿಗೂ ಅಪೇಕ್ಷಿತ. ಧಾರ್ಮಿಕ ಕಟ್ಟುಪಾಡುಗಳಲ್ಲಿ ಸಿಲಕುವ ಆಸೆ ಯಾರಿಗಿಲ್ಲ್ಲ. ಅಂತಹೇಳಿ ಕಟ್ಟುಪಾಡುಗಳೇ ಇಲ್ಲದ ಜೀವನವಾ.. ??? ಅದೂ ಇಲ್ಲ. ಸ್ವತಂತ್ರವಾಗಿ ನನ್ನಿಷ್ಟಕ್ಕೆ ತಕ್ಕ ಹಾಗೆ ನಿನುರುತ್ತೇನೆ ಅಂದರೆ ನಡೆಯುತ್ತದೆಯಾ...????? ಅದೂ ಇಲ್ಲ. ಏನಿದು ನಮ್ಮವಸ್ಥೆ.......
ನಮ್ಮ ಇಚ್ಛೆಗೆ ತಕ್ಕಂತೆ ನಾನಿದ್ದರೆ ಆಗ ನಾನು ಸ್ವತಂತ್ರ.....
ನನ್ನ ಇಚ್ಛೆಗೆ ತಕ್ಕ ಹಾಗೆ ನಾನಿರುವದು ಅಸಾಧ್ಯದ ಮಾತೇ. ಹತ್ತುಗಂಟೆಗೆ ಏಳುತ್ತೇನೇ ಎಂದರೆ ಸಾಧ್ಯವಾ... ಮನಸ್ಸಿಗೆ ಬಂದಾಗೆ ಓಫೀಸಿಗೆ ಹೋಗುತ್ತೇನೆ ಎಂದರೆ ಸಾಧ್ಯವೇ.... ನನಗೆ ಹೇಗೆಬೇಕೋ ಹಾಗೆ ಸ್ಕೂಲಿಗೆ ಹೋಗಲು ಸಾಧ್ಯವೇ.... ನನ್ನ ಮನಸ್ಸಿಗೆ ಬಂದದ್ದು ನಾನು ತಿನ್ನುವೆ ಸಾಧ್ಯದ ಮಾತೇ.... ಯಲ್ಲದಕ್ಕೂ ಅದರದ್ದೇ ಆದ ರೀತಿ ರಿಯಾಜುಗಳು ಇವೆ. ಹಾಗಾದರೆ ಯಾವದಕ್ಕೂ ನನ್ನ ಮನಸ್ಸಿನ ತಕ್ಕಹಾಗೆ ಇರಲು ಸಾಧ್ಯವಿಲ್ಲವೇ...... ಸಾಧ್ಯವೇ ಇಲ್ಲ. ಹಾಗಾದರೆ ಇಂದಿನ ಸ್ವಾತಂತ್ರ್ಯದ ಗತಿಯೇನು...... ??????
ಆ ಗತಿಯೇ ಇಂದಿನ ನಮ್ಮ ದುರ್ದೈವ....
ಅದೇರೀತಿ ಹೀಗೆಯೇ "ಇರಬೇಕು, ಹೀಗಿರುವ ಹಾಗಿಲ್ಲ" ಎಂಬ ಕಟ್ಟುಪಾಡುಗಳು ದೇಶದ ಉನ್ನತ ಪ್ರಜೆಯಿಂದಾರಂಭಿಸಿ, ಅತಿ ಸಣ್ಣವ್ಯಕ್ತಿಯ ವರೆಗೂ ಇದೆ, ಆದರೇ ಧರ್ಮ ಶಾಸ್ತ್ರವೇನಾದರೂ ಕಟ್ಟುಪಾಡಗಳನ್ನು ವಿಧಿಸಿದ್ದರೆ ಅಲ್ಲಿ ಮಾತ್ರ ನಿನ್ನ ಸ್ವೇಚ್ಛಾಚಾರ. ನೀನು ಸ್ವತಂತ್ರ. ನಿನ್ನ ಮನಸ್ಸಿಗೆ ತಕ್ಕಹಾಗೆ ನೀನಿರಬಹುದು.
ಇಂದಿನ ಸ್ವಾತಂತ್ರ್ಯದ ಹಾಗೂ ಸ್ವೆಚ್ಛಾಚಾರದ ಉದ್ಯೇಶ್ಯ ಸುಸ್ಪಷ್ಟ. ಧರ್ಮವನ್ನು ಹಾನಿ ಮಾಡುವದೇ... ಯಾರೂ ಧಾರ್ಮಿಕರಾಗಿ ಇರಬಾರದು..... ಜಗತ್ತಿನಲ್ಲಿ ವಟ್ಟಾರೆಯಾಗಿ ಧರ್ಮ ನಶಿಸಿ ಹೋಗಬೇಕು.... ಯಾಕೆಂದರೆ... ಧರ್ಮ ಶಾಸ್ತ್ರ ಇದೊಂದು ಮೂಢ... ನಾವು ಮಾತ್ರ ಬುದ್ಧಿವಂತರು. ನಾವು ಹೇಳಿದ್ದೇ ನಿರ್ಣಯ ಎಂಬ ಭಾವನೆ ಅತ್ಯಂತ ದೃಢವಾಗಿ ತಳವೂರಿದೆ. ಆದ್ದರಿಂದಲೇ ಈ ಅವಸ್ಥೆ......
ದೀಪಾವಳಿ ಬಾಣ ಹಚ್ಚುವ ಹಾಗಿಲ್ಲ.... ವಾತಾವರಣ ಕೆಡತ್ತೆ ಆದ್ದರಿಂದ. ಕಂಪನಿಗಳನ್ನು ಬಂದು ಮಾಡಿಸುತ್ತಾರೆಯಾ..... ಬಾಣವನ್ನು ಹಚ್ಚಬೇಡಿ ಎಂದು ಹೇಳುವ ಬುದ್ಧಿಜೀವಿಗಳು ತಮ್ಮ ಕಾರುಗಳನ್ನು ಬಳಿಸುವದು ನಿಲ್ಲಿಸುತ್ತಾರೆಯಾ... ?????
ಗಿಡಗಳು ನಾಶವಾದರೆ ಜಗತ್ತಿನ ಕಷ್ಟವೆಂದು ಅರಿತವರು ವಿಜಯದಶಿಯಿ ದಿನ ಬನ್ನಿ ವಿತರಿಸುವದಕ್ಕೆ ಕಡಿವಾಣ ಹಾಕಬಹುದು. ಆದರೆ ರೋಡುಗಳನ್ನೋ ಅಥವಾ ದೊಟ್ಟ ದೊಟ್ಟ ಇಮಾರತು(ಬಿಲ್ಡಿಂಗ್)ಗಳನ್ನೋ ನಿರ್ಮಿಸಲು ಲಕ್ಷಲಕ್ಷ ಗಿಡಗಳನ್ನು ಬುಡಸಹಿತ ಹಾಳು ಮಾಡುವದಕ್ಕೆ ತಡೆಮಾಡುತ್ತಾರೆಯಾ...??? ಜಿಂಕೆ ಚರ್ಮ ಉಪಯೋಗಿಸುವದು ಶಿಕ್ಷಾರ್ಹ ಎಂದು ಸಾರಿದವರೇ, ಅವನಿ ಎಂಬ ಸಿಹವನ್ನು ಸಂಹರಿಸಲು ಅಪ್ಪಣೆಯನ್ನೇ ಕೊಡಬಹದು. ಅದು ಸೂಕ್ತವೇ... ??? ಸತ್ತ ಜಿಂಕೆಯ ಚರ್ಮವನ್ನು ಬಳಿಸುವವರನ್ನು ಜೇಲಿಗೆ ಕಳಿಸುವ ಅಧಿಕಾರಿಗಳಿಗೆ, ಆಕಳು, ಕುರಿ, ಮೇಕೇ, ಕೋಳಿ, ಮೀನು ಇವುಗಳನ್ನು ಸಂಹಾರ ನಡೆಯುವದು ಗೊತ್ತೇ ಇಲ್ಲವೆ.... ??
ನಾಳೆಯದಿನ ದೀಪ ಹಚ್ಚುವದರಿಂದ ಭೂಮಿಯ ವಾತಾವರಣ ನಾಶವಾಗುತ್ತದೆ ಆದ್ದರಿಂದ ದೀಪಹಚ್ಚುವ ಹಾಗಿಲ್ಲ ಎಂಬ ನಿರ್ಧಾರ ನಾಳೆ ಪ್ರಕಟಿಸಲೂ ಬಹುದು. ದೀಪಾವಳಿಯ ದಿನ ಅಭ್ಯಂಗವನ್ನು ಮಾಡಿದರೆ, ನೀರು ತುಂಬ ಪೋಲು ಆಗತ್ತೆ ಆದ್ದರಿಂದ ಯಾರೂ ಎಣ್ಣಿಯನ್ನು ಬಳಿಸಬಾರದು ಎಂಬ ನಿರ್ಧಾರ ಬಂದರೂ ಅಚ್ಚರೆ ಪಡಬೇಕಿಲ್ಲ. ಆದರೆ ಪೆಟ್ರೋಲ್ ಡಿಸೈಲ್, ವೈನ್, ಹೆಂಡ ಬಳುಸುವದು ಕಡಿಮೆಮಾಡಿ, ಅಥವಾ ಇಷ್ಟನ್ನೇ ಬಳಿಸಿ ಎಂದು ಕಡಿವಾಣ ಹಾಕಲು ಯಾರಪ್ಪನೂ ಹೇಳಲಾರ.... ಇತ್ಯಾದಿ ಇತ್ಯಾದಿ ನೂರಾರು ಸಾವಿರಾರು ನಿರ್ಧಾರಗಳನ್ನು ನೋಡಿದಾಗ ಒಂದಂತೂ ಅನಿಸುತ್ತದೆ ಎಲ್ಲ ನಿರ್ಧಾರಗಳೂ ಧರ್ಮದ ಮೇಲೇಯೇ ಆಗುತ್ತಿದೆ. ಎಲ್ಲ ಸ್ವೇಚ್ಛಾಚಾರಘಳೂ ಧರ್ಮದಮೇಲೇಯೇ ನೆಯುತ್ತಿದೆ.
ಈ ತರಹದ ವಿಚಾರಗಳು ಕೇವಲ ಸರ್ಕಾರದ ವಿಷಯವಲ್ಲ. ಮನೆ ಮನೆಗಳಲ್ಲಿಯೂ ಹೀಗೇಯೇ ನಡೆಯುತ್ತಿದೆ. ಸಂಧ್ಯಾವದನೆ ಮನಸ್ಸಿಗೆ ಬಂದಷ್ಟು, ಮನಸ್ಸಿಗೆ ಬಂದಾಗ ಮಾಡು. ಸ್ಕೂಲು ಕ್ಷಣಕಾಲ ತಡಮಾಡುವ ಹಾಗಿಲ್ಲ, ಒಂದಿನ ತಪ್ಪಿಸುವ ಹಾಗೂ ಇಲ್ಲ.
ಪೂಜೆ ಹಬ್ಬಹರಿದಿನಗಳಲ್ಲಿ ಮಾಡು, ಉಳಿದ ದಿನಗಳಲ್ಲಿ ಬಿಟ್ಟುಬಿಡು. ಪೌಡರ್ ಹಚ್ಚುಕೊಳ್ಳವದು ತಪ್ಪಿಸುವ ಹಾಗಿಲ್ಲ, ಗೋಪಿಚಂದನ ನಿನ್ನಿಷ್ಟ. ಹೀಗೆ ರಾಜ್ಯ ರಾಷ್ಟ್ರ ಮನೆ ಎಲ್ಲಡೆಯೂ ಧರ್ಮ ನಾಶಮಾಡಲು ಹೊರಟವರ ಕೈಲಿ ಸಿಕ್ಕುಬಿದ್ದ ನಮ್ಮವಸ್ಥೆ ಹೇಳತೀರದು.
ಒಂದು ನಿಶ್ಚಿತ ನಮ್ಮನ್ನು ರಕ್ಷಿಸುವದು ಧರ್ಮವೇ. ನಮ್ಮನ್ನು ರಕ್ಷಿಸುವ ಧರ್ಮವನ್ನು ಇಂದು ನಾವು ರಕ್ಷಿಸದೇ ಇದ್ದರೆ ಮುಂದಿನ ಅವಸ್ಥೆ ಏನಿದೆಯೊ ನಾವೇ ಊಹಿಸಿಕೊಳ್ಳಬಹುದು. ಈ ಕಲಿಯಿಗದಲ್ಲಿ ಧರ್ಮದ ರಕ್ಷೆಣೆಗೆ ದೇವರಂತೂ ಬರಲಾರ ಇದು ಅತ್ಯಂತ ನಿಶ್ಚಿತ. ನಾವೂ ಧರ್ಮವನ್ನು ರಕ್ಷಣೆ ಮಾಡದಿದ್ದರೆ ನಮ್ಮ ರಕ್ಷಕರು ಯಾರು..... ????? ಉತ್ತರ ಕೊಂಡುಕೊಳ್ಳುವ ಅವಸ್ಥೆ ಇಂದೊದಗಿದೆ.....
ಅಸ್ತವಾಗುತ್ತಿರುವ, ಅಥವಾ ಅಸ್ತಂಗತನನ್ನಾಗಿ ಮಾಡುತ್ತಿರುವ ನಮ್ಮ ಕೈಲ್ಲಿಯೇ, ಧರ್ಮವೆಂಬ ಸೂರ್ಯನನ್ನು ಮತ್ತೆ ಉದಯಿಸುವ ಸಾಮರ್ಥ್ಯವೂ ಇದೆ...
*ದೀಪವಾಳಿ ಹಬ್ಬ ಇಂದಿನಿಂದ ಆರಂಭ, ಯಥೇಚ್ಛವಾದ, ದರ್ಮ ಶಾಸ್ತ್ರೋಕ್ತರೀತಿಯಿಂದ ವೈಭವದ ದೀಪಾವಳಿನ್ನು ಆಚರಿಸಿಬಿಡೋಣ* ಬರುವ ವರ್ಷ ದೀಪಾವಳಿನ್ನೇ ಆಚರಿಸುವ ಹಾಗಿಲ್ಲ ಎಂಬ ನಿರ್ಣಯ ಬಂದರೂ ಬರಬಹುದು....... *ದೀಪವಾಳೀ ಹಬ್ಬದ ಶುಭಾಷಯಗಳು😃😃😂😂*
*✍🏽✍🏽✍ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments