*ಅನ್ಯಾಯವ ಮಾಡಿ ಹರಿ ನಿನ್ನ‌ ಮೊರೆಹೊಕ್ಕೆ......*

*ಅನ್ಯಾಯವ ಮಾಡಿ ಹರಿ ನಿನ್ನ‌ ಮೊರೆಹೊಕ್ಕೆ......*

ಹೇ ಹರಿಯೇ ... !! ನೀನು ಸರ್ವಜ್ಙ. ಸರ್ವಸಾಕ್ಷೀ. ಸರ್ವಪ್ರೇರಕ. ನನಗೇ ನೀನೇ ಗತಿ. ನಿನ್ನ ಆಜ್ಙಾ ಪಾಲನೆಯೇ ನನಗೆ ಅಂತಿಮ. ಇದುವೇ ನಿಶ್ಚಿತ. ಇದು ನನಗೂ ಸ್ಪಷ್ಟ. ಆದರೆ..........

ನ್ಯಾಯ ಮಾರ್ಗದಲ್ಲಿ ಎಂದೂ ಬರಲಿಲ್ಲ. ಅನ್ಯಾಯ ಮಾರ್ಗ ಎಂದಿಗೂ ಬಿಡಲಿಲ್ಲ. ಅನ್ಯಾಯ ಮಾರ್ಗದಲ್ಲಿ ಇದ್ದರೂ, ನಿನಗೆ ನಿರಂತರ ಅನ್ಯಾಯ ಮಾಡಿದರೂ ನಿನಗೆ ಮೊರೆಹೋಗುವದು ಬಿಡಲಿಲ್ಲ.

ಇಂದು ನಿನ್ನ ಆಜ್ಙೆ ಒಂದೂ ಕೇಳುವದಿಲ್ಲ. ನೀ ಹೇಳಿದ್ದು ಮಾಡುವದಿಲ್ಲ. ನಿನ್ನ ವಿರುದ್ಧವೇ ಎನ್ನ ವರ್ತನೆ. ಹೀಗಿದ್ದರೂ ಇಂದು ನಾ ನಿನಗೆ ಮೊರೆ ಬರುವೆ.

ಇಂದು ನಾ ಮಾಡುವ ಮಾಡಿದ ಧರ್ಮಗಳು ತೊಂಭತ್ತು ಪ್ರತಿಶತಃ ನನಗಾಗಿಯೇ ಇವೆ. ಎನ್ನ ಸ್ವಾರ್ಥಕ್ಕೇ ಇದೆ. ನಿನಗೋಸ್ಕರ ನಿನ್ನ ಪ್ರೀತಿಗೋಸ್ಕರ ಎಂಬುದು ಇಲ್ಲವೇ ಇಲ್ಲ. *ಗಂಧ ಅಕ್ಷತೆ ಹಚ್ಚಿಕೊಳ್ಳುವವರು ಎಷ್ಟಿದ್ದಾರೆ ನೋಡಿ ತೇಯ್ತೇನೆಯೇ ಹೊರತು ನಿನಗೋಸ್ಕರ ಗಂಧ ತಗೆಯಲಾರೆ* ಇದು ಇಂದಿನ ನನ್ನ ಸ್ಥಿತಿ. ಹೀಗಿದ್ದರೂ ನಿನಗೆ ಮೊರೆಬಂದಿದ್ದೇನೆ.

ನೀನು ಹೇಳಿದ ಯಜ್ಙ , ದಾನ, ಜ್ಙಾನ,  ತಪ, ನಾನಾವಿಧ ಕರ್ಮಗಳು, ಧರ್ಮಗಳು, ಪಾಠಪ್ರವನಗಳು, ಪರೋಪಕಾರ, ಸಂಧ್ಯಾವಂದನೆ ಪೂಜೆಗಳು, ಪ್ರದಕ್ಷಿಣೆ ನಮಸ್ಕಾರಗಳು, ಅತಿಥಿ ಆಭ್ಯಾಗತರ ಸತ್ಕಾರ, ತಂದೆ ತಾಯಿಗಳ ಸೇವೆ, ಗುರುಸೇವೆ, ಮೊದಲಾದ ಯಾವ ಧರ್ಮವೂ ಮಾಡದೆ ಹರಿಯೇ ನಿನಗೆ ಮೊರೆ ಬಂದಿದ್ದೇನೆ....

ನಾನು ಯಾರಿಗಾದರೂ ನನ್ನದೇ ತಪ್ಪಿದ್ದೂ  ಬಯ್ದೀದೀನಿ ಅಂದರೆ ಅದು ನಿನಗೊಬ್ಬನಿಗೇನೆ. ನನ್ನಿಂದ ಬಯಸ್ಕೊಂಡೂ ಅನ್ನಿಸಿಕೊಂಡೂ ಎಲ್ಲವನ್ನೂ ಕೊಟ್ಟವರಾರಾದರೂ ಇದ್ದಾರೆ ಎಂದರೆ ಅದು ನೀನೊಬ್ಬನೆ. ನಿನ್ನ ಭಕ್ತನಾಗುವ ಭರದಲ್ಕಿ ನಿನ್ನನ್ನು ದುರುಪಯೋಗ ತೊಗೊಳ್ಳವದರಲ್ಲಿ ಮೊದಲಿಗನು ನಾನೇ ಇದ್ದೇನೆ... ಹೀಗಿದ್ದರೂ ನಿನಗೆ ಮೊರೆ ಬಂದಿದ್ದೇನೆ.

ಅನಂತ ಅಪರಾಧಗಳು ಎನ್ನಲ್ಲಿ ತುಂಬಿದ್ದರೂ ತಲೆ ಕೆಡಿಸಿಕೊಳ್ಳದೆ *ಇಂದು ನಿನಗೆ ಮೊರೆ ಬಂದಿದ್ದೇನೆ -- ಎಂದಿಗಾದರೂ ಎನ್ನ ಕಾಯು* ಮರೆಯಬೇಡ. ಎನ್ನ ಎಲ್ಲ ಅಪರಾಧಗಳನ್ನೂ ಕ್ಷಮಿಸು. ಈ ಗರ್ವಾಂಧಕಾರದಿಂದ ಎನ್ನನು ರಕ್ಷಿಸು ಸಂರಕ್ಷಿಸು.

*✍🏽✍🏽✍ನ್ಯಾಸ.....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

NYASADAS said…
Short n sweet :)

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*