*ಅಪೇಕ್ಷಗಳನ್ನಿಟ್ಟುಕೊಂಡವ ಅಪೇಕ್ಷೆಗಳಿಗೆ ಸ್ಪಂದಿಸಲಾರ....*

ಅಪೇಕ್ಷೆಗಳಿರುವದು ಸಹಜ. ಎಲ್ಲರಲ್ಲಿಯೂ ಇರುವಂತಹದ್ದೇ. ಆದರೆ ಯಾರು ಅಪೇಕ್ಷೆಗಳನ್ನು ಹೆಚ್ಚೆಚ್ಚು ಬಯಸುತ್ತಾರೆ, ಅವರು ಸಾಮಾನ್ಯವಾಗಿ ಇನ್ನೊಬ್ಬರ ಅಪೇಕ್ಷೆಗಳಿಗೆ ಸ್ಪಂದಿಸಲಾರರು. ತಮ್ಮವರ ಅಪೇಕ್ಷೆಗಳಿಗೆ ಸ್ಪಂದಿಸದ ಕಾರಣವೇ ಅನೇಕ ಬಾರಿ ತಮ್ಮವರನ್ನೇ ಕಳೆದುಕೊಳ್ಳವ ಪರಿಸ್ಥಿತಿ ಎದುರುಮಾಡಿಕೊಂಡಿರುತ್ತಾರೆ.
ಯಾರಿಗೆ ಯಾರಿಂದಲೂ ಏನನ್ನೂ ಅಪೇಕ್ಷೆ ಇಟ್ಟುಕೊಂಡಿರುವದಿಲ್ಲವೋ ಅವರು ಸಾಮಾನ್ಯವಾಗಿ ಎಲ್ಲರ ಅಪೇಕ್ಷೆಗಳಿಗೂ ಸ್ಪಂದಿಸಿರುತ್ತಾರೆ. ಎಲ್ಲರ ಅಥವಾ ತನ್ನವರ ಅಪೇಕ್ಷೆಗಳಿಗೆ ಸ್ಪಂದಿಸುವವರು ತನ್ನ ಎಲ್ಲ ಅಪೇಕ್ಷೆಗಳನ್ನೂ ಬಿಟ್ಟವರೇ ಆಗಿರುತ್ತಾರೆ. ಅಂತೆಯೇ ತನ್ನವರನ್ನು ಎಂದಿಗೂ ಕಳೆದುಕೊಳ್ಳುವದೂ ಇಲ್ಲ.
ದೇವರಿಂದ ನಮಗೆ ನೂರು ಅಪೇಕ್ಷೆಗಳಿವೆ. ನಿತ್ಯವೂ ದೇವರಿಂದ ಅಪೇಕ್ಷೆಪಡುತ್ತೇವೆ. ಆದರೆ ದೇವರ ಯಾವ ಅಪೇಕ್ಷೆಗಳಿಗೂ ಕಿಂಚಿತ್ತೂ ಸ್ಪಂದಿಸುವದಿಲ್ಲ. ಆ ಕಾರಣದಿಂದಲೇ ದೇವರು ನಮ್ಮವನಾಗಿ ಉಳಿದಿಲ್ಲ. *ನಮ್ಮ ಅಪೇಕ್ಷೆಗಳಿಗೇ ದೇವರು ಸ್ಪಂದಿಸಲಿ, ನಾನು ಮಾತ್ರ ದೇವರ ಯಾವ ಅಪೇಕ್ಷೆಗಳಿಗೂ ಸ್ಪಂದಿಸುವದಿಲ್ಲ. ನನ್ನಿಂದ ಅವನು ಏನೂ ಅಪೇಕ್ಷಿಸಬಾರದು* ಎಂಬ ಹಠವಿರುವದರಿಂದಲೇ ನಾವು ಇಂದು ಸರ್ವ ಸಮರ್ಥ, ಪರಮಾಪ್ತ, ಅತ್ಯಂತಪ್ರಿಯತಮ ದೇರಿಂದ ತುಂಬದೂರಾಗಿದ್ದೇವೆ. ಒಂದರ್ಥದಲ್ಲಿ ಅವನನ್ನು ಕಳೆದೂಕೊಂಡಿದ್ದೇವೆ.
ಕೇವಲ ದೇವರನ್ನು ಮಾತ್ರವಲ್ಲ, ನನ್ನವರಾದ, ನನ್ನ ಹಿತೈಷಿಗಳಾದ, ನನ್ನ ಆಪತ್ತಿಗೆ ಒದಗುವ, ನನಗಾಗಿ ನಿರಂತರ ಪರಿತಪಿಸುವ, ಅಂತೆಯೇ ನನಗೆ ಸಖ ಮಿತ್ರ ಸ್ನೇಹಿತನಂತೆ ಇರುವ ಎಲ್ಲರನ್ನೂ ಕಳೆದುಕೊಂಡಿದ್ದೇನೆ. ಇದಕ್ಕೆ ಕಾರಣ *ಅವರಿಂದ ನಾನು ತುಂಬ ಅಪೇಕ್ಷೆಗಳನ್ನಿರಿಸಿಕೊಂಡಿದ್ದೇನೆ, ಅವರ ಅಪೇಕ್ಷೆಗಳಿಗೆ ನಾ ಕಿಂಚಿತ್ತೂ ಸ್ಪಂದಿಸುತ್ತಾ ಇಲ್ಲ.* ಇದುವೇ ಮೂಲ ಕಾರಣ.
ಒಂದು ಸುಂದರ ಕಥೆ......
ಸರ್ಪವಿದೆ. ಹಾವಿಗೆ ತುಂಬ ಅಪೇಕ್ಷೆಗಳು ಇರತ್ತೆ ಎಂದು ಕೇಳಿದ ನೆನಪು. ಅಂತೆಯೇ ಇರುವಿಗಳಿಂದ ತುಂಬ ಅಪೇಕ್ಷೆ. ಆ ಇರುವಿಗಳೋ ಬಹಳ ಕಷ್ಟದಿಂದ ಶ್ರಮಿಸಿ, ಕಣಕಣ ಸೇರಿಸಿ ದೊಡ್ಡದಾದ ಹುತ್ತನ್ನೇ ನಿರ್ಮಿಸುತ್ತದೆ.
ಹಾವು ಆ ಇರುವೆಗಳು ನಿರ್ಮಿಸಿದ ಮನೆಯಲ್ಲಿ ತಾನು ಸೇರಿ. ಆ ಇರುವೆಗಳ ಉಪಕಾರವನ್ನು ಕಿಂಚಿತ್ತೂ ನೆನಿಸದೆ, ಆ ಎಲ್ಲ ಇರುವಿಗಳ ಅಪೇಕ್ಷೆಗಳಿಗೆ ಕಿಂಚಿತ್ತೂ ಸ್ಪಂದಿಸದೇ, ಅವುಗಳನ್ನು ಓಡಿಸಿಬಿಡುತ್ತದೆ.
ಇರುವೆಗಳಿಂದ ತನ್ನ ಅಪೇಕ್ಷೆಗಳನ್ನೇನೋ ಈಡೇರಿಸಿಕೊಂಡ ಹಾವು, ಇರುವಗಳಿಗೆ ಸ್ಪಂದಿಸದೇ ಇರುವದರಿಂದಲೋ ಏನೋ ಎಲ್ಲರಿಂದಲೂ ನಿಂದ್ಯವಾಗುತ್ತದೆ. ಎಲ್ಲರಿಂದಲೂ ಕಲ್ಲೆಸೆಯಲ್ಪಡುತ್ತದೆ. ಯಾರಿಗೂ ಬೇಕಾದವನು ಎಂದು ಎಂದಿಗೂ ಆಗುವದಿಲ್ಲ.
ಯಾರಿಂದಲೂ ಏನನ್ನೂ ಅಪೇಕ್ಷೆ ಇಟ್ಟುಕೊಳ್ಲದ ವ್ಯಕದತಿ ಶ್ರೀಹರಿ. ಅಂತೆಯೇ ಎಲ್ಲರಿಗೂ ಎಲ್ಲತರಹದ ಕಷ್ಟಗಳಿಗೂ ಶ್ರೀಹರಿಯ ನೆನಪಾಗುವದು. ಹಾಗಾಗಿ.....
ನಾವೂ ಸಾಧ್ಯವಿದ್ದಷ್ಟು ಅಪೇಕ್ಷೆಗಳನ್ನಿಟ್ಟುಕೊಳ್ಳುವದು ಬೇಡ. ಕನಿಷ್ಠ ನಮ್ಮವರಿಂದಲಾದರೂ ಅಪೇಕ್ಷೆಗಳನ್ನಿರಿಸುಕೊಳ್ಳುವದು ಬೇಡ. ಅವರ ಅಪೇಕ್ಷೆಗಳಿಗೆ ನಮ್ಮ ಸ್ಪಂದನೆ ಸದಾ ಇರಲಿ. ನಾವಂತೂ ಅವರವರಾಗಿಯೇ ಉಳಿಯುತ್ತೇವೆ. ಅವರು ನಮ್ಮವರಾಗಿ ಉಳಿಯುವದು ಅವರ ಜವಾಬ್ದಾರಿ. ನಾವು ಅವರವರಾಗಿ ಉಳಿಯುವದು ನಮ್ಮ ಕೆಲಸ. ಅದರಲ್ಲಿ ಯಶಸ್ವಿಯಾಗುವತ್ತ ದಾಪುಗಾಲು ಇಡೋಣ.....
*✍🏽✍🏽✍ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments