*ದೇವನೊಬ್ಬನು ಇದ್ದಾನೆ ಎನ್ನುವದನ್ನು ಮರೆಯಬೇಡ......*

*ದೇವನೊಬ್ಬನು ಇದ್ದಾನೆ ಎನ್ನುವದನ್ನುಮರೆಯಬೇಡ......*

ಅನುಪಯುಕ್ತ ಜಗತ್ತಿನ ಎಲ್ಲ ವಸ್ತುಗಳೂ ನೆನಪಿನಲ್ಲಿ ಇರುತ್ತವೆ, ಆದರೆ ಅತ್ಯುಪಯುಕ್ತ ಸರ್ವಶಕ್ತ ದೇವರು ಮಾತ್ರ ನೆನಪಿನಲ್ಲಿ ಇರುವದೇ ಇಲ್ಲ. 

ಎಲ್ಲಿ ಶಾಶ್ವತ ಪರಿಹಾರ ಸಿಗದೋ ಅಲ್ಲಿ ನಮ್ಮ ದುಃಖ ತೋಡಿಕೊಳ್ಳುತ್ತೇವೆ, ಪರಿಹಾರ ಸಿಕ್ಕೇ ಸಿಗುವ ದೇವರೆದುರಿಗೆ ಮಾತ್ರ ಒಂದಿನವೂ ನಮ್ಮ ದುಃಖ ತೋಡಿಕೊಂಡಿಲ್ಲ. ಅವನನ್ನು ಅತ್ಯಾಪ್ತನನ್ನಾಗಿ ಮಾಡಿಕೊಳ್ಳುವ ಯಾವ ಪ್ರಯತ್ನವನ್ನೂ ಮಾಡಿಲ್ಲ. ಆಪ್ತರು ರಕ್ಷೆಣೆಗೆ ಬಾರರು, ರಕ್ಷೆಣೆಗೆ ಬರುವ ದೆವ ಆಪ್ತನಲ್ಲ.

*ದೇವನಿಗೆ ಕಠಿಣವೆನ್ನುವದು ಯಾವದಿಲ್ಲ*

ಶತ್ರುವಿಗೆ ಮತ್ತೊಬ್ಬ ಶತ್ರು ಕಠಿಣವೆನಿಸ ಬಹುದು ಆದರೆ, ದೈವಕ್ಕೆ  *ನ ದೈವಸ್ಯಾತಿಭಾರೋಸ್ತಿ* ದೇವನಿಗೆ ಕಠಿಣವಾದದ್ದು ಎನ್ನುವದು ಇಲ್ಲವೇ ಇಲ್ಲ.  ಎಂದು ಮಹಾಭಾರತ ಸ್ಪಷ್ಟು ನುಡಿಗಳಲ್ಲಿ ನೂರಾರು ಬಾರಿ ಸಾರಿ ಸಾರಿ ಹೇಳುತ್ತದೆ. "ಕಡುದರಿದ್ರ ಹೊತ್ತು ಕಳೆಯುವದರಲ್ಲಿಯೇ ಶ್ರೀಮಂತನಾಗಬಹುದು, ಸಿರಿವಂತ ಕ್ಷಣದಲ್ಲಿಯೇ ಕಡು ದರಿದ್ರನಾಗಬಹುದು" ಏನೂ ಆಗಬಹುದು. ಯಾವದೂ ಕಠಣವಲ್ಲ. ಅಸಾಧ್ಯವೆಂಬುವದು ಇಲ್ಲವೇ ಇಲ್ಲ. "ಏನಿದೆ ಏನಾಗ್ತಿದೆ ಎಲ್ಲವೂ ದೈವಾಧೀನವೇ."

*ದೈವ ಎಷ್ಟು ಪ್ರಬಲ....??*

"ದೈವ ಎಷ್ಟು ಪ್ರಬಲ" ಎಂದು ಹೇಳಲು ಸಾಧ್ಯವೇ ಇಲ್ಲ.  ಒಂದು ಸತ್ತ ನಾಯಿಯನ್ನು ಒಬ್ಬ ಚಾಂಡಾಲಿ ಹೇಗೆ ಎಳೆದೊಯ್ಯಬಹುದೋ ಹಾಗೆಯೇ ದೈವ ಎಲ್ಲರನ್ನೂ ಎಳೆದೊಯ್ಯುತ್ತದೆ. ಇದಕ್ಕೆ ಬ್ರಹ್ಮದೇವರೂ ಹೊರತಲ್ಲ. ಅಂತೆಯೇ *ದೈವಕ್ಕೆ ಸಮ ಯಾರಿಲ್ಲ* ಎಂದು ಘಂಟಾಘೋಷವಾಗಿ ಹೇಳಬಹುದು.

*ದೈವವನ್ನು ಮೀರಬಹುದೇ...??*

ಮಹಾಭಾರತ *ನ ದೈವಾಸ್ಯಾತಿವರ್ತನಮ್* ದೈವವನ್ನು ಮೀರಲು ಯಾರಪ್ಪನಿಗೂ ಸಾಧ್ಯವಿಲ್ಲ ಎಂದು ಅತ್ಯಂತ ಸುಸ್ಪಷ್ಟವಾಗಿ ತಿಳಿಸಿಕೊಡುತ್ತದೆ. ಧಾರ್ಮಿಕೋತ್ತಮ ನಲಮಹಾರಾಜ, ಧರ್ಮಸ್ವರೂಪಿ ಧರ್ಮರಾಯರೇ ದೃಷ್ಟಾಂತರು.

*ದೈವ ನಮ್ಮಂತಹವರಿಗೆ ಅನುಕೂಲವಾಗಿರುತ್ತದೆಯೇ..??*

ಈ ಪ್ರಶ್ನೆಗೂ ಮಹಾಭಾರತ ಸುಂದರವಾಗಿ ಉತ್ತರಿಸುತ್ತದೆ *ಸದಾ ದೈವಾಗಮೇ ಯತ್ನಃ*  ಎಂದು.  ದೈವಕ್ಕೆ ಎದರು ಇಲ್ಲ. ದೈವವನ್ನು  ಮೀರಲು ಸಾಧ್ಯವಿಲ್ಲ. ಆದರೆ ದೈವವನ್ನು ನಮಗೆ ಅನುಕೂಲವನ್ನಾಗಿ ಅವಶ್ಯವಾಗಿ ಮಾಡಿಕೊಳ್ಳಬಹುದು.

*ದೈವವನ್ನು ಅನುಕೂಲ ಮಾಡಿಕೊಳ್ಳುವದರಿಂದ ಲಾಭವೇನು...??*

ದೈವವನ್ನು ಪರಿಪೂರ್ಣವಾಗಿ ಮಾರ್ಪಾಡು ಮಾಡುವ ಸಮರ್ಥ ವಸ್ತು  ಒಂದು ಜಗತ್ತಿನಲ್ಲಿ ಇದೇ ಎಂದರೆ ಅದು *ದೈವವೇ* ಆಗಿರಬೇಕು. ದೈವವೇ ದೈವವನ್ನು ಮೀರಲು ಸಾಧ್ಯ. ಅಂತೆಯೇ ನಮಗೆ ದೈವ ಅನುಕೂಲವಿದ್ದರೆ ಹೆಚ್ಚೆಚ್ಚು ಉಪಯುಕ್ತ. ಎಷ್ಟು ಲಾಭವಿದೆ ಎನ್ನುವದನ್ನು ಊಹೆ ಮಾಡಿ ಹೇಳಲೂ ಸಾಧ್ಯವಿಲ್ಲ. ಅಂತೆಯೇ *ಕಿಂ ಕುರ್ವಂತಿ ಗ್ರಹಾಃ ಸರ್ವೇ ಪ್ರಸನ್ನೇ ಶ್ರೀನಿಕೇತನೇ* ಒಬ್ಬ ದೈವ ಸಂತುಷ್ಟನಾಗಿ ಅನುಕೂಲನಾದರೆ ಯಾವ ಗ್ರಹಗಳು ಏನು ವಿಪರೀತ ಮಾಡಿಯಾವು...?? ಎಂದು ಶಾಸ್ತ್ರವೇ ಕೇಳುತ್ತೆ. ಈ ಲಾಭಕ್ಕಿಂತಲೂ ಮಿಗಿಲಾದ ಲಾಭ ಇನ್ಯಾವದು ಇದೆ....

*ದೇವರೊಬ್ಬನಿದ್ದಾನೆ ಎನ್ನುವದನ್ನು ಯಾವಕಾರಣಕ್ಕೂ ಮರಿಯಬೇಡ*  ಆ ದೇವ ಏನು ಮಾಡಿದರೆ ಅನುಕೂಲನಾದಾನು ಯೋಚಿಸು. ಅನುಕೂಲನನ್ನಾಗಿ ಮಾಡಿಕೋ...... ನನ್ನದೂ ಏನಿದೆ ಎಲ್ಲವೂ ದೇವರದ್ದು. "ಸುಖ ದುಃಖ ಲಾಭ ಹಾನಿ ಮಾನ ಅವಮಾನ ಕೀರ್ತಿ ಅಪಕೀರ್ತಿ ಜ್ಙಾನ ಅಜ್ಙಾನ ಭಕ್ತಿ ದ್ವೇಶ" ಏನು ಪಡೆಯುವವನಿದ್ದೇನೆ ಅದೇಲ್ಲವೂ ದೇವರೇ ಕೊಡುವಂತಹದ್ದು.  ಅವನೊಬ್ಬ ಅನುಕೂಲನಿದ್ದರೆ ಸಕಾರಾತ್ಮಕ ಎಲ್ಲವೂ ಸಿಗತ್ತೆ, ಅವನೊಬ್ಬ ಪ್ರತಿಕೂಲನಾದರೆ ಎಲ್ಲವೂ ವಿಪರೀತವಾದದ್ದೇ ಪಡೆಯುವದಾಗುತ್ತದೆ. ಆದ್ದರಿಂದ ಅನೊಬ್ಬನನ್ನು ಮರೆಯುವಂತೆ ಆಗುವದು ಸರ್ವಥಾ ಬೇಡ....

*✍🏽✍🏽✍ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*