ದಾಸರ ದೃಷ್ಟಿಯಲ್ಲಿ ರಕ್ಷಾಬಂಧನ
*ದಾಸರ ದೃಷ್ಟಿಯಲ್ಲಿ ರಕ್ಷಾಬಂಧನ*
*ನಮ್ಮಣ್ಣನ ಬಲವೆಂಬೊ ಘನ್ನ ಛತ್ರದ ನೆರಳು ಮನ್ಮಸ್ತಕದಲಿ ಇರುವಾಗ ಯಾವುದರ ಭಯ ಎನಗೆ....... ನಿನ್ನ ಪ್ರಿಯ ತಂಗಿ *ಶಚಿ.....*
ಜಗತ್ತಿಗೆ ನಿಜವಾದ ಹಾಗು ಸ್ವತಂತ್ರನಾದ ಅಪ್ಪ ಗುರು *ಅಣ್ಣ* ಶ್ರೀಹರಿ ಒಬ್ಬನೇ. ಸ್ವತಂತ್ರನಾದ ಅಣ್ಣನಿರುವಾಗ, ಅಸ್ವತಂತ್ರನಾದವರೆಲ್ಲರೂ ತಂಗಿಯರೇ. ಅಂತೆಯೆ ದಾಸರಾಯುರು "ಎನ್ನಪ್ಪ ಎನ್ನಮ್ಮ ಎನ್ನಯ್ಯ *ಎನ್ನಣ್ಣ* ಎನ್ನ ಕಾಯುವ ದೇವ" ಎಂದು ಕೊಂಡಾಡಿದರು. ಅದ್ದರಿಂದ ಎನ್ನಣ್ಣನಾದ ಶ್ರೀಹರಿಯ ಕೃಪೆ ಎಮ್ಮೆಲ್ಲರಲ್ಲಿಯೂ ಖಂಡಿತವಾಗಿಯೂ ಇರಲೇಬೇಕು.
ಜಗದಣ್ಣನ ಬಗ್ಗೆ ದಾಸರಾರ ಭಾವಾಭಿವ್ಯಕ್ತಿ....
"ಎನ್ನಣ್ಣನ ಕೃಪೆ ಇನ್ನು ಎನಗಿಲ್ಲದುದರಿಂದ ಎನ್ನ ಮೇಲೆ ಈ ಪರಿ ಮುನದ್ಯಾ ದೇವಾ."
"ಎನ್ನಣ್ಣನ ಕೃಪೆ ಇನ್ನು ತೊಲಗಿದುದರಿಂದ ಘನ್ನವಾದ ಸ್ಥಾನದಿಂದ ಇಳಿದೇ."
"ಎನ್ನಣ್ಣನ ಕೃಪೆ ಇನ್ನು ಹಿಂಗದ ಕಡೆಯಿಂದ ಛಿನ್ನವಾದ ಅಜ್ಙಾನಿ ಆದೆನೆಂದು"
"ಎನ್ನಣ್ಣನ ಕೃಪೆ ಇನ್ನು ಜರಿದು ಪೋದದರಿಂದ ಅಚ್ಛಿನ್ನ ಭಕುತಿಯಿಂದ ಹೀನನಾದೆ"
"ಎನ್ನಣ್ಣನ ಕೃಪೆ ಇನ್ನು ತಪ್ಪಿದುದರಿಂದ ನಿನ್ನ ನಿಗ್ರಹಕ್ಕೆ ವಿಷಯನಾದೆ"
"ಎನ್ನಣ್ಣನ ಕೃಪೆ ಇನ್ನು ಇಲ್ಲದ ಕಾರಣದಿ ಎನ್ನ ಈ ಪರಿ ನೀನು ಬಳಲಿಸುವಿ"
"ಎನ್ನಣ್ಣನ ಕೃಪೆಯಿಂದ ಗುರು ವಿಜಯ ವಿಠ್ಠಲರೇಯಾ ಮನ್ನಿಸುವಿ ಎನ್ನ ಆವಕಾಲ ||"
ಮಟ್ಟತಾಳ
"ಅಣ್ಣನ ಕೃಪೆಯಿಂದ ವಿಜಯವುಳ್ಳವನಾಗಿ ಜನರೊಳಗೆ ಶ್ರೇಷ್ಠನೆಂದೆನಿಸಿ ಮೆರದೆ"
"ಅಣ್ಣನ ಕೃಪೆಯಿಂದ ಬಲು ವಿಧವಾದಂಥ ಮು(ಘ)ನ್ನ ಭಾಗ್ಯೋದಯವಾಯಿತು ಬಲು ಪರಿ."
"ಅಣ್ಣನ ಕೃಪೆಯಿಂದ ಜ್ಙಾನ ಬಲವು ಎನಗೆ"
*ಅಣ್ಣನ ಕೃಪೆಯಿಂದ ಶ್ರುತಿ ತತಿಗೋಚರ ಅನಂತ ಮಹಿಮನ್ನ ಆಪ್ತನೆನೆಸಿಕೊಂಡೆ*
"ಅಣ್ಣನ ಕೃಪೆಯಿನ್ನು ಜರಿದ ಕಾರಣದಿಂದ ಎನ್ನನ್ನೀ ಪರಿ ಮಾಡಿ ಬಳಲಿಸುವೆ ಧೊರಿಯೆ"
"ಘನ್ನ ದಯಾನಿಧೆ ಗುರು ವಿಜಯ ವಿಠ್ಠಲರೇಯ ನಮ್ಮಣ್ಣನ ಬಲವೆ ಎನಗೆ ಮುಖ್ಯ ಸತತ ||"
ಇದು ದಾಸರ ದೃಷ್ಟಿಯಲ್ಕಿ ನಿಜವಾದ ಅಣ್ಣನ ಮಹತಿ. ಇಂತಹ ಅಣ್ಣನ ತಂಗಿಯರಾಗಿ ಬರುವದೆ ಎಮ್ಮೆಲ್ಲರ ಸುಗತಿ.
ಇಂದು ನನ್ನ ಪ್ರೀತಿಯ ತಂಗಿ ಹಾಗೂ ಎಲ್ಲ ಅಕ್ಕ ತಂಗಿಯರಿಗೂ ದಾಸರಾಯರು ತಿಳುಹಿಸಿದ ಒಂದು ಪುಟ್ಟದಾದ ದರೆವರಲ್ಲಿ ಪ್ರಾರ್ಥನೆ ಬೇಡಿಕೆ ರೂಪವಾದ ಸಂದೇಶ. "ಜಗತ್ತಿಗೇ ಅಣ್ಣನಾದ ಮೇಲೆ ತಿಳಿಸಿದ ಗುಣಯುಕ್ತನಾದ ಶ್ರೀಹರಿಯ ವಿಶೇಷ ಸನ್ನಿಧಾನ ವಿರುವ ಅಣ್ಣಂದಿರೆ ದೊರೆತುಬರಲಿ. ದೊರೆತ ಅಣ್ಣಂದಿರಲ್ಲಿ ಆ ದಿವ್ಯ ಸನ್ನಿಧಾನ ಅಭಿವೃದ್ದಿಸಲಿ.
*ಅಣ್ಣನ ಪುಣ್ಯದ ಪ್ರಭಾವದಿಂದ ನಮ್ಮ ನಮ್ಮ ಜೀವನ ಸಾರ್ಥಕವೆಂದಾಗಿ, ಆ ಅಣ್ಣನ ಛತ್ರಛಾಯೆಯಲ್ಲಿಯೇ ಸುಖವಾಗಿ ಇರುವ ಸೌಭಾಗ್ಯ ಒಲಿದು ಬರಲಿ....." ಇಂತಹ ಅಣ್ಣನನ್ನು ಪಡೆದ ನಾನಂತೂ ಸೌಭಾಗ್ಯವಂತಳೆ - ಈ ಅಣ್ಣನಲ್ಲಿ ಇನ್ನೂ ವಿಶೇಷವಾದ ಹರಿಯ ಸನ್ನಿಧಾನ ಹೆಚ್ಚೆಚ್ಚು ಅಬಿವೃದ್ದಿಸಲಿ* ಎಂದು ಹಾರೈಸುತ್ತಾ *ರಕ್ಷಾ ಬಂಧನದೊಂದಿಗೆ* ಪ್ರಾರ್ಥಿಸುವ ,....,
ನಿನ್ನ ಪ್ರೀತಿಯ ತಂಗಿ *ಶಚಿ.....*
ಹೀಗೆ ಪ್ರೀತಿಯಿಂದ ದೆವರಲ್ಲಿ ನಿರಂತರ ಪ್ರಾರ್ಥಿಸುವ ನನ್ನ ತಂಗಿಗೆ ಹಾಗೂ ತಮ್ಮ ತಮ್ಮ ಅಣ್ಣ ಹಾಗೂ ತಮ್ಮಂದಿರ ಪರವಾಗಿ ಬೇಡಿಕೊಳ್ಳುವ ಎಲ್ಲ ಅಕ್ಕ ತಂಗಿಯರಿಗೂ *ರಕ್ಷಾಬಂಧನ* ದಿನದ ಹೃತ್ಪೂರ್ವಕ ಶುಭಾಷಯಗಳು...
*✍🏽✍🏽✍🏽ನ್ಯಾಸ.....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments