ಅರ್ಚತ ಪ್ರಾರ್ಚತ

*ಪೂಜಾ ರಹಸ್ಯ*

ನಮ್ಮ ಜೀವನದಲ್ಲಿ ಉಸಿರು ಎಷ್ಟು ಮುಖ್ಯಸ್ಥಾನವನ್ನು ಪಡೆದಿದೆಯೋ ಅದಕ್ಕೂ ಮುಖ್ಯ ಸ್ಥಾನ *ಭಗವತ್ಪೂಜೆ* ಗೆ ಇದೆ ಎಂಬುವದೇ ನಮ್ಮ ಸಿದ್ಧಾಂತ.

ಹಿಂದೆ ಇಂದು ಪಡೆದದ್ದರ ಕೃತಜ್ಙತೆಗೆ ಬೇಕು ಹರಿ ಪೂಜೆ..
ಮುಂದೆವಪಡೆಯುವದರ ಪ್ರಾರ್ಥನೆಗೆ ಬೇಕು ಹರಿಪೂಜೆ...
ಹಿಂದೆ ಘಟಿಸಿದ ಪಾಪಗಳ ಪರಿಹಾರಕ್ಕೆ ಬೆಕು ಹರಿಪೂಜೆ...
ಮುಂದೆ ಮಾಡಬಹುದಾದ ಪಾಪಗಳ ಮಾಡದಿರುವಂತಾಗಲು ಬೇಕು ಹರಿಪೂಜೆ....

ಭಗವನ್ಮಹಿಮಾ ಜ್ಙಾನಪೂರ್ವಕ ಭಕ್ತಿಗೆ ಬೇಕು ಹರಿಪೂಜೆ...
ದುಃಖಮಯ ಸಂಸಾರದಿಂದ ಮುಕ್ತಿಗೆ ಬೇಕು ಹರಿಪೂಜೆ...

ನಿತ್ಯಸುಖಪೂರ್ಣ ಹರಿಯ ಪ್ರೀತಿಗೆ ಹರಿಪೂಜೆ ಅತ್ಯವಶ್ಯವಾಗಿ ಬೇಕು...

ನಾವಾಚರಿಸುವ ಪೂಜೆ ಕೆಲೊಮ್ಮೆ ಶುದ್ಧವಾಗಿರದು....
ಪ್ರತಿಮೆಯೇ ದೇವರೆಂದು ಭಾವಿಸಿರುತ್ತೇವೆ... ದೇವರೂ ನಮ್ಮ ಹಾಗೇಯೇ ಒಬ್ಬ ಎಂಬ ಭಾವನೆ ಇರತ್ತೆ... ಗುಣಗಳ ಚಿಂತನೆ ಇರದು... ಕ್ರಮಬದ್ಧತೆಯಲ್ಲಿ ವ್ಯತ್ಯಾಸ ವಿರುತ್ತದೆ... ಯಾಂತ್ರಿಕವಾಗಿರುವ ಸಾದಧ್ಯತೆ ಹೆಚ್ಚು... ತೀರ್ಥಕ್ಕಾಗಿ ದೇವರ ಪೂಜೆ ಕೆಲವೆಡೆ ಕಾಣುತ್ತೇವೆ... ಹೀಗೇ ಏನೇನೋ ಪ್ರಸಂಗಗಳಿಂದ ದೇವರ ಪೂಜೆಯಲ್ಲಿ ಸ್ಖಾಲಿತ್ಯ ಕಂಡು ಬರುತ್ತದೆ.....  ಇದೆಲ್ಕದರ ಮೇಲೆ ನಾನು ಮಾಡಿದ ಪೂಜೆಯೇ ಸರಿಯಾದ ಪೂಜೆ ಎಂದೇ ಆಗಿರುತ್ತದೆ....  ಅದಕ್ಕಾಗಿ‌..

ಶ್ರೀಮದಾಚಾರ್ಯರು ತಮ್ಮ ಉದ್ಗ್ರಂಥವಾದ *ತಂತ್ರಸಾರ* ಎಂಬ ಪರಮ ಪವಿತ್ರ ಗ್ರಂಥದಲ್ಲಿ, ಅನಾದಿ ಅನೂಚಾನ ಸಂಪ್ರದಾಯದಿಂದ ಬಂದ, ಅನಂತ ವೇದೋಕ್ತ, ತಂತ್ರಸಾರೋಕ್ತ ಪೂಜಾಪದ್ಧತಿಯನ್ನು ಅರುಹಿಸಿಕೊಟ್ಟಿದ್ದಾರೆ. ತಂತ್ರಸಾರೋಕ್ತ ಪದ್ಧತಿಗೆ ಅನುಗುಣವಾಗಿಯೇ *ಪದ್ಯಮಾಲಾ* ಎಂಬ ಉದ್ಗ್ರಂಥವನ್ನೇ  ಶ್ರೀಮಟ್ಟೀಕಾಕೃತ್ಪಾದರು ರಚಿಸಿ ಅನುಗ್ರಹಿಸಿ‌ಕೊಟ್ಟಿದ್ದಾರೆ.  ಇಂಥಹ ವೈಭವದ ಪೂಜಾಪದ್ಧತಿಯೇ ಇಂದು ನಮ್ಮೆಲ್ಲರಲ್ಕಿ ಬಂದಿರುವಂತಹದ್ದು.

ತಂತ್ರಸಾರ ಹಾಗೂ ಪದ್ಯಮಾಲಾ ಮೊದಲಾದ ಗ್ರಂಥಗಳಲ್ಲಿ ಬಂದ ಷೋಡಷೋಪಚಾರ ಪೂಜೆಗಳ ಹಿಂದಿನ ಒಂದೊಂದು ಚಿಂತನೆ ಅತ್ಯದ್ಭುತವಾದದ್ದೇ...

ಭಗವತ್ಪೂಜೆಗೆ ಅಧಿಕಾರ, ಸಂಕಲ್ಪ, ಭಗವಂತನ ಪೀಠ,  ಆವಾಹನ ಕ್ರಮ, ಸ್ನಾನ, ಅರ್ಚನೆ, ನೈವೇದ್ಯ, ದೀಪ, ಆರತಿ, ಸಮರ್ಪಣೆ ಹೀಗೆ ಪ್ರತಿಯೊಂದರ ಹಿಂದೆಯೂ ಪರಾಮದ್ಬುತ ಚಿಂತನೆಗಳು ಅಡಗಿವೆ...

ನಮ್ಮ ಸ್ನಾನ, ಸಂಧ್ಯೆ, ನಾರಾಯಣಮಂತ್ರ ಜಪ ಕ್ರಮ, ಪಾಪ ಪರಿಹಾರ ಕ್ರಮ, ಬ್ರಹ್ಮಪಾರಸ್ತೋತ್ರದ ಮಹಿಮೆ, ನಂತರ ನಿರ್ಮಾಲ್ಯ, ಶಂಖ ಘಂಟೆ ಕಲಶಪೂಜಾ,  ಹೀಗೆ ಒಂದೊಂದು ಕ್ರಮಗಳು ಪರಮಾದ್ಭುತವಾಗಿವೆ..

ಈ ತರಹದ ನೂರಾರು ಸಾವಿರಾರು ವಿಷಯಗಳನ್ನು, ಚಿಂತನೆಗಳನ್ನು, ಮಂತ್ರಾರ್ಥಗಳನ್ನು  ಸ್ವಯಂ ತಾವು ಪ್ರತಿಯೊಂದು ಉಪಚಾರಗಳ ಮಧ್ಯದಲ್ಲಿ ನಿಮಿಷ ಎರಡು ನಿಮಿಷ ಐದು ನಿಮಿಷ ಕೆಲೊಮ್ಮೆ ಹತ್ತು ಹತ್ತು ನಿಮಿಷ ಭಗವಂತನ ಗುಣ ರೂಪ ಕ್ರಿಯೆಗಳನ್ನು ಚಿಂತಿಸಿ, ಯೋಚಿಸಿ, ಧೇನಿಸಿ  *ಅರ್ಚತ ಪ್ರಾರ್ಚತ* ಎಂಬ ಪೂಜಾ ಪದ್ಧತಿಯನ್ನು ಪರಿಶುದ್ಧ ಕ್ರಮದಲ್ಲಿ ನಮ್ಮ ಸ್ವರೂಪೋದ್ಧಾರಕ ಗುರುಗಳಾದ ಪೂಜ್ಯ *ಮಾಹುಲೀ (ಪಂ. ವಿದ್ಯಾಸಿಂಹಾಚಾರ್ಯ ಮಾಹುಲೀ)  ಆಚಾರ್ಯರು ಸಂಗ್ರಹಿಸಿ ರಚಿಸಿ ಅನುಗ್ರಹಿಸಿಕೊಟ್ಟಿದ್ದರು.*

ನಂತರದಲ್ಲಿ *ಅರ್ಚತ ಪ್ರಾರ್ಚತ* ಎಂಬ ಗ್ರಂಥವೇ ವಿಸ್ತೃತರೂಪವನ್ನು ಪಡೆದು *ಪೂಜಾರಹಸ್ಯ* ಎಂಬುವದಾಗಿ ಪುನಃ ಶ್ರೀಸತ್ಯಧ್ಯಾನ ವಿದ್ಯಾಪೀಠದಿಂದ ಎರಡು ಆವೃತ್ತಿಗಳಲ್ಲಿ ಪ್ರಕಾಶನೆಗೊಂಡಿತ್ತು. ಆ  ಗ್ರಂಥವೇ ಇಂದು ಇನ್ನೂ ವಿಸ್ತೃತ ರೂಪದೊಂದಿಗೆ "ವಿಶ್ವಮಧ್ವಮಹಾ ಪರಿಷತ್, ಉತ್ತರಾದಿಮಠ, ಬೆಂಗಳೂರು" ವತಿಯಿಂದ ಪುನಃ ಮುದ್ರಣಗೊಂಡಿದೆ. (ಪುಸ್ತಗಳು ದೊರೆಯುವ ಸ್ಥಳವೂ ಇದೇ ಆಗಿದೆ)

ಶ್ರೀ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹ ಸಂದೇಶ....

*ನಮ್ಮ ಪೂರ್ವಾಶ್ರಮದ ವಿದ್ಯಾಗುರುಗಳಾದ ಪಂ. ಕುಲಪತಿ ವಿದ್ಯಾಸಿಂಹಾಚಾರ್ಯ ಮಾಹುಲೀ ಇವರು ಸ್ವಯಂ ಭಕ್ತಿ ಪರವಶರಾಗಿ, ಭಕ್ತಿಪೂರ್ವಕ ಅನುಸಂಧಾನ ಗಂಗೆಯನ್ನು ಈ ಪುಸ್ತಕದಲ್ಲಿ ಹರಿಸಿದ್ದಾರೆ.*
*ಶ್ರೀಮದ್ಭಾಗವತ, ಸರ್ವಮೂಲ, ಪದ್ಯಮಾಲಾ, ಯೋಗದೀಪಿಕೆ, ಪೂಜಾಕಲ್ಪಲತಾ, ಮಾನಸಸ್ಮೃತಿ, ಷೋಡಶೀ ಮೊದಲಾದ ಅನೇಕಕೃತಿಗಳನ್ನು ಶೋಧಿಸಿ ಪರಿಶೀಲಿಸಿ ಸಾಧಕನು ಮಾಡಬೇಕಾದ ಅನುಸಂಧಾನಗಳನ್ನು ಪೂಜಾ ವಿಧಿಗಳೊಡನೆ ಈ ಗ್ರಂಥದಲ್ಲಿ ಬರೆದಿದ್ದಾರೆ* ಹೀಗೆ  ಶ್ರೀ ಸತ್ಯಾತ್ಮತೀರ್ಥರು ಅನುಗ್ರಹ ಸಂದೇಶವನ್ನು ದಯಪಾಲಿಸಿದ್ದಾರೆ.

ಎರಡು ಸಹಸ್ರ ಪ್ರತಿಗಳಿಂದ ಕೂಡಿದ *ಪೂಜಾರಹಸ್ಯ* ಎಂಬ ಗ್ರಂಥ ಪ್ರಕಟನೆಗೊಂಡ ಕೆಲವೇ ದಿನಗಳಲ್ಲಿ ಸಾವಿರ ಪುಸ್ತಗಳನ್ನು ಭಗವದ್ಭಕ್ತರು ಸ್ವೀಕರಿಸಿಕೊಂಡಿದ್ದಾರೆ. ಇನ್ನು ಕೆಲವೇ ಪುಸ್ತಕಗಳು ಉಳಿದಿವೆ ಭಗವದ್ಭಕ್ತರಾದ ನಾವೆಲ್ಲರೂ ಎರಡು ಮೂರು ಪ್ರತಿಗಳನ್ನು ತೆಗೆದುಕೊಳ್ಳೋಣ. ನಾವು ಓದೋಣ. ನಮ್ಮವರಿಗೆ ಓದಲು ಪ್ರೋತ್ಸಾಹಿಸೋಣ. ಸಮಸ್ತ ಹರಿಭಕ್ತರೂ ನಿತ್ಯ ನಿರಂತರ ಪೂಜಾರತರಾಗಿ ವೈಭವೋಪೇತರಾಗುವಂತೆ ಸ್ವಲ್ಪ ಪ್ರಯತ್ನ ಮಾಡೋಣ.....

*✍🏽✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ ಸಿರವಾರ.


Comments

Anonymous said…
Excellent.

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*