*ಶ್ರೀಪಾದರಾಜರ ಆರಾಧನಾ ಮಹೋತ್ಸವ

*ಶ್ರೀಪಾದರಾಜರ ಆರಾಧನಾ ಮಹೋತ್ಸವ

*ನಾಯಮಾತ್ಮಾ ಬಲಹೀನೇನ ಲಭ್ಯಃ*



ಈ ಭತವಂತ ಬಲಹೀನರಿಗೆ ಹಾಗೂ ಬಲಹೀನತೆಗಳನ್ನು ಪಕ್ಕದಲ್ಲಿ ಇರಿಸಿಕೊಂಡು, ಬಲಹೀನತೆಗಳ ದಾಸನಾದವರಿಗೆ ದೊರೆಯುವದಿಲ್ಲ.


ಬಲ ಎಂದರೆ ಯುಕ್ತಿ, ವಿಚಾರಗಳು. ಯಾರು ವಿಚಾರಹೀನರೋ ಅಥವಾ ವಿಚಾರ ಹೀನರ ದಾಸರೋ ಅಂತಹವರಿಗೆ ದೇವರೂ ಸಿಗಲ್ಲ, ದೇವತಾ  (ಸೌಖ್ಯ, ಸಮೃದ್ಧಿ, ಕೀರ್ತಿ, ಹಣ, ಯಶಸ್ಸು, ಗುಣವಂತಿಕೆ, ಜ್ಙಾನ ಭಗವದ್ಭಕ್ತಿ,) ಸ್ವಭಾವವೂ ಉಳಿಯುವದಿಲ್ಲ.

ಬಲಹೀನತೆಗಳು ಮೊದಲು  ತಾವು ಬೆಳೆಯುವದಕ್ಕಾಗಿ ಆಕರ್ಷಣೀಯವಾಗಿ ಕಾಣುತ್ತವೆ. ಕಾಲು ಹಿಡಿಯುತ್ರವೆ. ಕಾಲೆಳದು ತನ್ನ ಸಮಾನವಾಗಿ ತರುತ್ತವೆ. ನಂತರ ನಮ್ಮ ತಲೆಯಮೇಲೆ ಕುಳಿತು ತಾಂಡವ ಆಡುತ್ತವೆ. ಈ ತೆರದಲ್ಲಿ ನಮ್ಮನ್ನು ದುರ್ಬಲನನ್ನಾಗಿ ಮಾಡುತ್ತವೆ. ಈ ತೆರದಲ್ಲಿ ನಾವೂ ಬಲಹೀನರೇ  ಆದರೆ ನಮ್ಮ ಅವಸ್ಥೆ ಗೋವಿಂದ.... ಹಾಗಾಗಿ ನಾವು ಬಲಿಷ್ಠರಾಗಲೇಬೇಕು.

 ಬಲಹೀನತೆಗಳಿಂದ ದೂರೋಡಬೇಕಾ... ??

ಬಲಹೀನತೆಗಳನ್ನು ದೂರಮಾಡಬೇಕು. ಇಲ್ವೇ ನಾವಾದರೂ ದೂರ ಹೋಗಲೇಬೇಕು. ಆದರೆ ಕೆಲ ಬಲಹೀನತೆಗಳನ್ನು ಪಕ್ಕದಲ್ಲಿಯೇ ಇಟ್ಟುಕೊಳ್ಳಬೇಕಾದ ಅನಿವಾರ್ಯತೆ ಬರತ್ತೆ, ಅನಿವಾರ್ಯತೆ ಇರತ್ತೆ. ಆಗ ನಾವು ಬಲಿಷ್ಠರಾದರೆ ಸಾಕು. ಬಲಹೀನತೆಗಳೆಲ್ಲ ಹೀನವಾಗಿಯೇ, ಹಡೆ ಬಿಚ್ಚದಹಾಗೆಯೇ ಕುಳಿತುಕೊಳ್ಳುತ್ತವೆ.

ಬಲಹೀನತೆಗಳನ್ನೇ ದಾಸರನ್ನಾಗಿ ಮಾಡಿಕೊಂಡ ಒಂದಾದರೂ ನಿದರ್ಶನ ಸಿಗಬಹುದೆ... ??

ಸ್ವಯಂ ಬಲಿಷ್ಠರು ಶ್ರೀಮದಾಚಾರ್ಯರು. ಆ ಆಚಾರ್ಯರ ಅನುಗ್ರಹದಿಂದ ಬಲಿಷ್ಠರೇ‌ ಆಗಿರುತ್ತಾರೆ.  ಪ್ರಾರಬ್ಧವಶಾತ್ ಜ್ಙಾನಿಗಲ್ಲಿ ಒಂದಿಲ್ಲ ಒಂದು ಬಲಹೀನತೆ ಕಂಡರೇ, ಬಲಹೀನತೆಗಳನ್ನೇ ದಾಸರನ್ನಾಗಿ ಮಾಡಿಕೊಂಡಿರುತ್ತಾರೆ.... ಆ ಎಲ್ಲ ಜ್ಙಾನಿಗಳಲ್ಲಿ ಇಂದಿನ ಕಥಾನಾಯಕರಾದ ಶ್ರೀಪಾದರಾಯರೇ ದೊಡ್ಡ ಉದಾಹರಣೆ.

ಅತಿಯಾದ ಊಟ, ಮುತ್ತು ಮಾಣಿಕ್ಯಗಳ ವೈಭವ ವಿರಕ್ತ ಸನ್ಯಾಸಿಯ  ಒಂದು ಬಲಹೀನತೆಯೇ. ಬಲಹೀನತೆಯ ಮೊಟ್ಟಮೊದಲ ಫಲ  ಜ್ಙಾನಹ್ರಾಸ ಹಾಗೂ ತಪೋಭಂಗ...

ಶ್ರೀಪಾದರಾಜರ ವೈಭವ

ಆರವತ್ತು ನಾಲಕು ಭಕ್ಷ್ಯಭೋಜ್ಯಗಳನ್ನು ನಿತ್ಯ ದೇವರಿಗೆ ಸಮರ್ಪಿಸಿ ತಾವು ಉಂಡರೂ ಅತ್ಯಂತ ವಿರಕ್ತಶಿಖಾಮಣಿಗಳಾಗಿಯೇ ಇದ್ದರು. ವಜ್ರ ವೈಡೂರ್ಯಗಳ ತೊಲೆಗಳಂತೆ ಇರುವ ನಾನಾವಿಧ ಆಭರಣಗಳನ್ನು ಧರಿಸಿ ಮೆರೆದರೂ ವಿರಕ್ತ ಶಿಖಾಮಣಿಗಳೇ... ಈ ಎಲ್ಲ ಬಲಹೀನವಾದ ಭೋಗದ್ರವ್ಯಗಳನ್ನೂ ತಮ್ಮ ದಾಸರನ್ನಾಗಿ ಮಾಡಿಕೊಂಡಿದ್ದರು, ಅಂತೆಯೇ ಆ ಎಲ್ಲ ಭೋಗಗಳನ್ನು ಭೋಗಮಾಡಿ ಮೆರದರೂ ಅದರ ಬಾಧೆ ಕಿಂಚಿತ್ತೂ ಆಗಲಿಲ್ಲ. ಬಲಹೀನತೆಗಳು ಶ್ರೀಪಾದರಾಜರನ್ನು ಎಂದಿಗೂ ಆಳಲಿಲ್ಲ. ಅವುಗಳನ್ನೇ ಆಳಿದರು ಶ್ರೀಪಾದರಾಜರು. 

ಬಲಹೀನತೆಗಳು ಜ್ಙಾನ ಮತ್ತು ತಪಸ್ಸಿಗೆ ಭಂಗ ತಂದು ಕೊಡುತ್ತದೆಯಾ... ??

ಬಲಹೀನತೆಗಳ ದಾಸನಾದವನಿಗೆ ತಪಸ್ಸೂ ಭಂಗ ವಾಗುತ್ತದೆ. ಜ್ಙಾನ ನಾಶವೇ ಆಗುತ್ತದೆ,  ಇಲ್ಲವೇ ನೀಂತನೀರಾಗಿ ಉಳಿಯುತ್ತದೆ. ಅವುಗಳ ವಿಕಾರಗಳು ದೇಹೇಂದ್ರಿಯ ಮನಸ್ಸುಗಳ ಮೇಲೆ ಕ್ರಮವಾಗಿ ಆಗುತ್ತಾ ಸಾಗುತ್ತವೆ.  ಈ ತರಹದ  ಬಲಹೀನತೆಗಳನ್ನೇ ದಾಸರನ್ನಾಗಿ ಮಾಡಿಕೊಂಡವರಿಗೆ ಸ್ವಲ್ಪವೂ ಕುಂದುಂಟು ಮಾಡುವದಿಲ್ಲ. ಜ್ಙಾನ ತಪಸ್ಸು ಕ್ಷಣೇ ಕ್ಷಣೇ ಬೆಳೆಯುತ್ತಾ ಸಾಗುತ್ತದೆ.

ಜ್ಙಾನದ ಮೇರು ಶ್ರೀವಿಬುಧೇಂದ್ರತೀರ್ಥ ಶ್ರೀಪಾದಂಗಳವರು. ಅವರಿಂದ ಪರಿಪೂರ್ಣ ಜ್ಙಾನವನ್ನು ಪಡೆದ ಧೀರಯೋಗಿ ಶ್ರೀ ಶ್ರೀ ೧೦೦೮ ಶ್ರೀಲಕ್ಷ್ಮೀನಾರಾಯಣ ತೀರ್ಥರು.

ಶ್ರೀಪಾದರಾಜರ  ಜ್ಙಾನದ ವೈಭವ  ಹೇಗಿತ್ತು ಎಂದರೆ ಪರವಾದಿಗಳಿಂದ "ಅಭಿನವ ವೇದವ್ಯಾಸ" ಎಂದೇ ಬಿರುದಾಂಕಿತ ಶ್ರೀವ್ಯಾಸರಾಜರೇ ಮಹಾಶಿಷ್ಯರಾಗಿದ್ದರು. ಇದುವೇ ದೊಡ್ಡ ಮಹಾವೈಭವ. ಅವರ ಮುಖಾಂತರ ಇಂದಿಗೂ ಆ ವೈಭವವನ್ನು ಕಾಣುತ್ತೇವೆ. ಇದು ಶ್ರೀಶ್ರೀಪಾದರಾಜರ ಜ್ಙಾನದ ವೈಶಿಷ್ಟ್ಯ.

ತಪಸ್ಸಿನ ವೈಭವೂ ಅತ್ಯದ್ಭುತ.....

ವಿಪ್ರನಿಗೆ ಬಂದ ಬ್ರಹ್ಮಹತ್ಯೆಯನ್ನು ಕೇವಲ ಭಗವತ್ ಶಂಖೋದಕ ಪ್ರೋಕ್ಷಣೆಯಿಂದ ಕಳೆದು ಹಾಕಿದರು. ಬ್ರಹ್ಮಹತ್ಯೆ ಹೋಗಿದ್ದನ್ನು "ಕಪ್ಪು ವಸ್ತ್ರವನ್ನು ಬಿಳಿಯನ್ನಾಗಿಸಿ" ನೆರೆದ ಜನರಿಗೆ ತೋರಿಸಿಯೇಕೊಟ್ಟರು ಇದು ಶ್ರೀಪಾದರಾಜರ ತಪೋ ವೈಭವ. 

ನಿರಂತರ ಪಾಠಪ್ರವಚನ. ತಪಸ್ಸು. ಜಪ. ದಾಸಸಾಹಿತ್ಯದ ಪುನರುಜ್ಜೀವನ. ಇತ್ಯಾದಿ ನೂರಾರು ವೈಭವಗಳಿಗೆ ಒಂದಿನಿತೂ ಭಂಗತರಲಿಲ್ಲ ಅವರ ಭೋಗ ಅವರ ವೈಭವ.  ಇದು ವೈಭವಗಳನ್ನು ತಮ್ಮ ದಾಸರನ್ನಾಗಿ ಮಾಡಿಟ್ಟುಕೊಂಡದ್ದರ ಪರಿಣಾಮ. 

ನಾವು ನಮ್ಮ ಯೋಗ್ಯತಾನುಸಾರ ಬಲಿಷ್ಠರಾಗೋಣ. ಅನೇಕ ಬಲಹೀನತೆಗಳನ್ನು ದೂರ ಓಡಿಸೋಣ. ಅಪರಿಹಾರ್ಯವಾಗಿ ಇರುವ ಬಲಹೀನತೆಗಳನ್ನು ಶ್ರೀಶ್ರೀಪಾದರಾಜರ ಅನುಗ್ರಹದಿಂದ ಮೆಟ್ಟಿನಿಲ್ಲೋಣ ಆ ಮುಖಾಂತರ ಭಗವದ್ಭಕ್ತರಾಗಿ ದೇವತಾ ಸ್ವಭಾವವನ್ನೇ ಹೊಂದೋಣ.....

ಪದವಾಕ್ಯಪ್ರಮಾಣಾಬ್ಧಿ
ವಿಕ್ರೀಡನ ವಿಶಾರಾನ್ |
ಲಕ್ಷ್ಮೀನಾರಾಣ ಮುನೀನ್
ವಂದೇ ವಿದ್ಯಾಗುರೂನ್ಮಮ ||

 ಈ ಶ್ಲೋಕವನ್ನು ಪಠಿಸಿ ಆ ಗುರುಗಳ ಅನುಗ್ರಹಕ್ಕೆ ಪಾತ್ರರಾಗೋಣ.



✍🏽✍🏽✍🏽ನ್ಯಾಸ....

ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
ಅದ್ಭುತವಾಗಿದೆ... ಸಂಕ್ಷಿಪ್ತವಾಗಿದೆ.. ಭಕ್ತಿ ಬರುವ ಹಾಗಿದೆ ನಿಮ ಈ ಲೇಖನ
Anonymous said…
ಅತ್ಯಂತ ಸುಂದರವಾದ ವಿವರಣೆ
ಶ್ರೀಪಾದರಾಜ ಗುರುವೇನಮ

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*