ಶ್ರೀಸತ್ಯಾತ್ಮತೀರ್ಥರ ವರ್ಧಂತಿ ಮಹೋತ್ಸವ
*ಪರೋಪಕಾರದ ಮಹಾಗಣಿ - ಶ್ರೀಸತ್ಯಾತ್ಮತೀರ್ಥರು* ಇಂದಿನ ವಾರ್ತಾ ಪೇಪರ್ ಅಲ್ಲಿ ಒಂದು ವಿಷಯ ಇತ್ತು "ಭಾರತದ ಜನರು - ಸರ್ವಾಧಿಕವಾಗಿ *ದೇವಸ್ಥಾನಗಳಿಗೆ ಹಾಗೂ ದೀನರಿಗೆ ದಾನವಾಗಿ ಕೊಡುತ್ತಾರೆ* ಎಂದು. ಈ ಕಾರ್ಯವನ್ನು ನಮ್ಮ ಸ್ವಾಮಿಗಳು ಎಷ್ಟು ವಿಸ್ತರಿಸಿಕೊಂಡಿದ್ದಾರೆ ಎಂದರೆ *ಕೇವಲ ಹಣ ದಾನಮಾತ್ರವಲ್ಲದೆ - ಜ್ಙಾನಧನ, ಗುಣಧನ, ನಡತೆಯಧನ, ಆದರ್ಶಗಳಧ ಹೀಗೇ ನೂರಾರು ಸಹಸ್ರ ಸಹಸ್ರ ಧನಗಳ ದಾನದ ರೂವಾರಿಗಳು* ನಮ್ಮ ಮಹಾಸ್ವಾಮಿಗಳು ಆಅಗಿದ್ದಾರೆ. ನೂರಾರು ತರಹದ ದಾನಗಳಿಗೆ ಆದರ್ಶರು ನಮ್ಮ ಮಹಾಸ್ವಾಮಿಗಳು ಆಗಿದ್ದಾರೆ. *ಈ ಆದರ್ಶವನ್ನು ಪಡೆದ ಅನೇಕ ಸದ್ಗ್ರಹಸ್ಥರು ದಾನವೀರರಗಿದ್ದಾರೆ* ಎಂದರೆ ತಪ್ಪಾಗದು. *ದೀನ ನಾನು ಸಮಸ್ತಲೋಕಕೆ ದಾನಿ ನೀನು* ಸಮಸ್ತ ಲೋಕಗಳಿಕೆ ಸರ್ವಸ್ವದಾನಿಯಾದ ದೇವನ ಅತ್ಯುತ್ತಮಗುಣಮಟ್ಟದ ಆರಾಧಕರಾದ ಶ್ರೀಸತ್ಯಾತ್ಮತೀರ್ಥರೂ ಸಹ *ದಾನದಗಣಿ* ಯೇ. ಪಾಪಿಷ್ಠರಾದ ಅಂತೆಯೇ ದೀನರಾದ ನಮ್ಮಂಥ ಕೊಟಿ ಕೋಟಿ ಭಾಕ್ತರಿಗೆ ದಾನಿಗಳಾಗಿ ಚಿಂತಾಮಣಿ- ಕಲ್ಪವೃಕ್ಷ- ಕಾಮಧೇನುವಿನಂತೆ ಒಲೆದುಬಂದ ಮಹಾ *ಮಹಾ ಆತ್ಮಾ- ಸತ್ಯಾತ್ಮತೀರ್ಥರು - ದೀನಾತ್ಮರು* *೧) ಜ್ಙಾನದಾನ - ಜ್ಙಾನಾತ್ಮರಿವರು* ಜಯತೀರ್ಥವಿದ್ಯಾಪೀಠದ ಮುಖಾಂತರ ಅವರು ಜ್ಙಾನದಾನವನ್ನು ಕನಿಷ್ಠ ನೂರಕ್ಕೂ ಹೆಚ್ಚು ವಿದ್ವಾಂಸರುಗಳಿಗೆ ಜ್ಙಾನವನ್ನು ದಾನಮಾಡಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಮಗ್ರ ಸುಧಾಪರೀಕ್ಷೆಕೊಡಿಸುವ ಮುಖ...