ಇಂದು ಚಂದ್ರಗ್ರಹಣ - ಪರ್ವಕಾಲ*

*ಇಂದು ಚಂದ್ರಗ್ರಹಣ - ಪರ್ವಕಾಲ* ಪರ್ವಕಾಲಗಳು ನೂರಾರು. ಆ ಎಲ್ಲ ಪರ್ಚಕಾಲಗಳಲ್ಲಿ ಶ್ರೇಷ್ಠವಾದದ್ದು "ಚಂದ್ರಗ್ರಹಣ" ಎಂಬ ಉತ್ತಮ ಪರ್ವಕಾಲ. ದೇವ-ಪಿತೃ-ಮಾನವ-ರಾಕ್ಷಸ ಇವರುಗಳನ್ನು ಸಂತೋಷ ಪಡಿಸುವ ಕಾಲ. ೧) ಸ್ನಾನ, ದೇವತಾರ್ಚನೆ, ಪೂಜೆ, ಹೋಮ, ಜಪ, ತರ್ಪಣಗಳಿಂದ ದೇವತೆಗಳನ್ನು ಸಂತೋಷ ಪಡಿಸುವದು ಈ ಕಾಲದಲ್ಕು. ೨) ತಿಲತರ್ಪಣ ಶ್ರಾದ್ಧಗಳಿಂದ ಪಿತೃಗಳನ್ನೂ ಸಂತೋಷಪಡಿಸುವ ಕಾಲ. ೩) ನಾನಾತರಹದ ದಾನಗಳಿಂದ ಮನುಷ್ಯರನ್ನು ತೃಪ್ತಿಪಡಿಸುವ ಕಾಲವೂ ಇದೆ. ೪) ನಮ್ಮ ಉತ್ಕರ್ಷಕ್ಕೆ ಅಡ್ಡಿಗಳಾದ ರಾಕ್ಷಸರನ್ನೂ ವಿಶೇಷವಾದ ದಾನಾದಿಗಳಿಂದ ಸಂತೊಷಪಡಿಸುವ ಮುಖಾಂತರ ರಾಕ್ಷಸ ಪೀಡಾ ಪರಿಹಾರ ಮಾಡಿಕೊಳ್ಳುವ ಕಾಲವೂ ಈ ಗ್ರಹಹಣ ಕಾಲ. *ಸಕಲ ಸಿದ್ಧಿಗಳೂ ಇಲ್ಲಿಯೇ...* ಉಪದಿಷ್ಟವಾದ ಗಾಯತ್ರೀ ನಾರಾಯಣ ಇತ್ಯಾದಿ ಮಂತ್ರಗಳ ಸಿದ್ಧಿಯಾಗುವದು ಈ ಕಾಲದಲ್ಲಿ. ಪಾರಾಯಣದಿಂದ ಸ್ತೋತ್ರಗಳ ಸಿದ್ಧಿ. ಯಂತ್ರಗಳ ಸಿದ್ಧಿಯೂ ಒದಗುತ್ತದೆ. ಮಂತ್ರ ಯಂತ್ರಗಳ ಪ್ರಭಾವವೂ ನೂರ್ಮಡಿ ಹೆಚ್ಚಾಗುತ್ತದೆ ಈ ಕಾಲದಲ್ಲಿ. *ಉಪವಾಸ ವ್ರತದಿಂದ ಸತ್ಸಂತಾನ ಭಾಗ್ಯ* ವೇಧಾರಂಭದಿಂದ ಆರಂಭಿಸಿ ಗ್ರಹಣ ಸಮಾಪ್ತಿಪರ್ಯಂತ ಉಪವಾಸ ವ್ರತ ಮಾಡುವದರಿಂದ ಬಹುಪುತ್ರರನ್ನು ಪಡೆಯುತ್ತಾನೆ. ಬಹು ಐಶ್ವರ್ಯ ಪಡೆಯುತ್ತಾನೆ. ಕೀರ್ತಿಮಾನ್ ಆಗುತ್ತಾನೆ. ಕೊನೆಗೆ ಬ್ರಹ್ಮ ಲೋಕವನ್ನೈ ಪಡೆಯುತ್ತಾನೆ. *ವೇಧಾರಂಭದಿಂದ ಗ್ರಹಣ ಮಧ್ಯದಿ ಉಂಡರೆ....