Posts

Showing posts from December, 2024

ರಾಯರಚೂರಿನಲ್ಲಿ - ಜಯರಾಯರ ಆತ್ಮಾ*

 * ರಾಯರಚೂರಿನಲ್ಲಿ - ಜಯರಾಯರ ಆತ್ಮಾ* ಪ್ರಭುಗಳಾದ ರಾಯರ ಸ್ಥಾನವಾದ ಮಂತ್ರಾಲಯದ ಚೂರು ಎನಿಸಿರುವ ನಮ್ಮ ರಾಯಚೂರಿನಲ್ಲಿ, ಜಯರಾಯರ ಅಂತರಂಗ ಎಂದೇ ಪ್ರಸಿದ್ಧರಾದ ಶ್ರೀಸತ್ಯಾತ್ಮತೀರ್ಥರ ಭವ್ಯ ದಿವ್ಯ ದಿಗ್ವಿಜಯ.  ತುಂಬ ವರ್ಷಗಳ ತರುವಾಯ ಎಂಟುದಿನಗಳ ದಿಗ್ವಿಜಯದ ಹಾದಿಯನ್ನು ಕರುಣಿಸಿದವರು ಸ್ಚಯಂ ಶ್ರೀಗಳವರು. ಇದು ಅವರ ಮಹತ್ಕರುಣೆ.  ಪ್ರತಿನಿತ್ಯವೂ ಉಪಾಸ್ಯ ದೇವರುಗಳಾದ ಶ್ರೀರಾಮದೇವರ ದರ್ಶನ, ಭಕ್ತರಿಗೆ ಬೆಳಿಗ್ಗೆ ಪಾಠ, ಮಧ್ಯಾಹ್ನ ತೀರ್ಥಪ್ರಸಾದ, ಸಾಯಂ ಅಮೃತೋಪದೇಶ. ಈ ನಿಟ್ಟಿನಲ್ಲಿ ದಿವ್ಯವಾಗಿ ವೈಭವದಿಂದ ಜರುಗಿತು.  *ಪಾಠದ ಪರಿಣಾಮ...* ಬೆಳಿಗ್ಗೆ ಶ್ರೀಗಳವರ ಪಾಠ ಸತ್ಯನಾಥ ಕಾಲೋನಿಯ ಮಠದಲ್ಲಿ ಏರ್ಪಡಿಸಲಾಗಿತ್ತು.   ತೀವ್ರವಾದ ಛಳಿಯನ್ನೂ ಗಮನಿಸಿದೆ ಪಾಠದ ಪೂರ್ಣ ಸದ್ಚಿನಿಯೋಗವನ್ನು ಪಡೆದವರು ಭಕ್ತರು. ನಿತ್ಯವೂ ಪಾಠ ಬಿಡಲೇಬಾರದು ಎಂಬ ದೃಢ ನಿರ್ಧಾರ ಮಾಡಿಕೊಂಡರು. ಇದು ನಿಜವಾದ ಕ್ರಾಂತಿ.  ಪ್ರತಿನಿತ್ಯ ಒಂದೊಂದು ಬಡಾವಣೆಗಳಿಗೆ ಹೋಗಿ ಅಲ್ಲಿಯೇ ಪಾದಪೂಜೆ, ಮುದ್ರಾಧಾರಣೆ, ಅನುಗ್ರಹ ಸಂದೇಶ, ರಾಮದೇವರ ದರ್ಶನ ಇತ್ಯಾದಿ ನೆರೆವೇರಿಸಿ ಎಲ್ಲ ಬಡಾವಣೆಗಳಲ್ಲೂ ತಮ್ಮ ಪಾದಧೂಳಿಯನ್ನು ಪಸರಿಸಿದರು.  *ಸಮಗ್ರ ತತ್ವಪ್ರಕಾಶಿಕಾ ಪರೀಕ್ಷೆ* ಸರ್ವಮೂಲಗ್ರಂಥಗಳ್ಲಿ ಗ್ರಂಥರಾಜ ಎಂದರೆ *ಸೂತ್ರಭಾಷ್ಯವೇ* ಇದು ಜಗತ್ಪ್ರಸಿದ್ಧ. ಸೂತ್ರಭಾಷ್ಯಕ್ಕೆ ಮೇರು ಟೀಕೆ *ತತ್ವಪ್ರಕಾಶಿಕಾ* ಸಮಗ್ರವಾದ ತತ್ವಪ್...