Posts

Showing posts from July, 2024

ಶ್ರೀಸತ್ಯಾತ್ಮತೀರ್ಥರ ೨೯ನೇಯ ಚಾತುರ್ಮಾಸ್ಯ*

 *ಶ್ರೀಸತ್ಯಾತ್ಮತೀರ್ಥರ ೨೯ನೇಯ ಚಾತುರ್ಮಾಸ್ಯ*  ಉತ್ತರಾದಿ ಮಠಾಧೀಶರಾದ ಶ್ರೀಶ್ರೀಗಳವರು ತಮ್ಮ ೨೯ ನೇಯ ಚಾತುರ್ಮಾಸ್ಯ ಸಂಕಲ್ಪಕ್ಕಾಗಿ ಮುಂಬಯಿ ಆಗಮಿಸಿದ್ದಾರೆ.   "ಮೋಹನಗರಿ ಮಾಯಾನಗರೀ ಎಂದೇ ಪ್ರಸಿದ್ದವಾದ  ಮುಂಬಯಿ ಮಹನಾಗರವನ್ನು, ಮಹಾವಿರಾಗಿಗಳಾದ, ತತ್ವಜ್ಙಾನದ ಗಣಿಗಳಾದ,  ಭಗವಂತನ ಅನೇಕಗುಣಗಳಿಗೆ  ಪ್ರತಿಬಿಂಬಗುಣಗಳನ್ನು ರೂಢಿಸಿಕೊಂಡಿರುವ, ಶ್ರೀಮದಾಚಾರ್ಯರಿಂದಾರಂಭಿಸಿ ಹಿರಿಯಶ್ರೀಗಳವರೆಗೆ ಎಲ್ಲ ಗುರುಗಳ ಮೂರ್ತಿಗಳಾದ ಶ್ರೀಶ್ರೀಗಳವರು ಇಂದಿನ ಶುಭ ಅವಸರದಲ್ಲಿ ಮುಂಬಯಿಯನ್ನು ಪ್ರವೇಶಿಸಿದರು.  *ಸತ್ಯಧ್ಯಾನ ವಿದ್ಯಾಪೀಠ*  ದ್ವೈತವಾಙ್ಮಯ ಪ್ರಪಂಚದಲ್ಲಿ ತುಂಬ ಪ್ರಾಚೀನ ವಿದ್ಯಾಸಂಸ್ಥೆ ಪರಮಪೂಜ್ಯ ಮಾಹುಲೀ ಹಿರಿಯಾಚಾರ್ಯರು ಸಂಸ್ಥಾಪಿಸಿದ,  ಇಂದು ಪೂಜ್ಯ ಮಾಹುಲೀ ಆಚಾರ್ಯರು ಕುಲಪತಿಗಳಾಗಿ ನಡೆಸುತ್ತಿರುವ ಸಂಸ್ಥೆ ಅದು *ಸತ್ಯಧ್ಯಾನ ವಿದ್ಯಾಪೀಠ - ವಾಣೀವಿಹಾರ ವಿದ್ಯಾಲಯ* ಇದು ಜಗತ್ಪ್ರಸಿದ್ಧ. ಈ ಸತ್ಯಧ್ಯಾನ ವಿದ್ಯಾಪೀಠದಲ್ಲಿ ೧೯೭೩ ರಲ್ಲೇ ಶ್ರೀಶ್ರೀಸತ್ಯಪ್ರಮೋದತೀರ್ಥರು ಚಾತುರ್ಮಾಸ್ಯಗೈದಿದ್ದರು. ಆ ವರುಷವೇ ಸರ್ವಜ್ಙಾಚಾರ್ಯರು (ಶ್ರೀಸತ್ಯಾತ್ಮರು) ಅವತಾರಗೈದ ವರುಷವೂ ಆಗಿತ್ತು.  ಶ್ರೀಸರ್ವಜ್ಙಾಚಾರ್ಯರ ಸಂಪೂರ್ಣ ಬಾಲ್ಯ ಅವಸ್ಥೆ ವಿದ್ಯಾಪೀಠದಲ್ಲಿಯೆ. ಸಮಗ್ರ ಶಾಸ್ತ್ರಾಧ್ಯಯನ ಪೂ ಮಾಹುಲೀ ಆಚಾರ್ಯರಲ್ಲಿಯೇ. ನಿರಂತರ ಅಧ್ಯಯನಶೀಲರು. ನಿರಂತರ ಉತ್ಸಾಹ. ವಿದ್ಯಾ...