Posts

Showing posts from December, 2022

*"ಸ್ಥಗಿತ ಮನಸ್ಸು" ಮಹಾ ಹಾನಿಕಾರಕ...*

Image
 *"ಸ್ಥಗಿತ ಮನಸ್ಸು" ಮಹಾ ಹಾನಿಕಾರಕ...* ಮನಸ್ಸು ತುಂಬ ಕುಶಲಿ. ನಿರಂತರ ಕ್ರಿಯಾಶೀಲ.  ಶ್ರಾಂತವಾಗುವದು ತುಂಬ ವಿರಳ. ದೇಹ ಬಲು ಬೇಗ ಶ್ರಾಂತವಾಗುತ್ತದೆ. ದೇಹಕ್ಕಿಂತಲೂ ಬಲಶಾಲಿ  ಇಂದ್ರಿಯಗಳು ಸ್ವಲ್ಪತಡವಾಗಿ ಶ್ರಾಂತವಾಗುತ್ತವೆ. ಮನಸ್ಸು ಮಾತ್ರ ಮಹಾ ಬಲಿಷ್ಠ. ಅತ್ಯಲ್ಪಕಾಲದಲ್ಲಿ ವಿಶ್ರಾಂತಯನ್ನು ಬಯುಸುವದು. ನಿದ್ರೆಯಲ್ಲಿಯೂ ಸ್ವಪ್ನರೂಪದಿಂದ ವ್ಯಾಪಾರ ನಟಿಸುತ್ತಾ ಇರುತ್ತದೆ. ಅತ್ಯಲ್ಪಸಮಯದ ವಿಶ್ರಾಂತಿ ಮನಸ್ಸಿಗೆ ಸಾಕು.  ಮನಸ್ಸು ಕ್ರಿಯಾಶೀಲವಾಗಿ ಒಂದುಬಾರಿ ಉದ್ಯುಕ್ತವಾದರೆ ಎಲ್ಲವನ್ನೂ ಸಾಧಿಸಿಯೇ ತೀರುತ್ತದೆ. ಮನಸ್ಸಿಗೆ ಅಸಾಧ್ಯವಾಗಿರುವದು ಯಾವದೂ ಇಲ್ಲ. ಈ ರೀತಿಯಲ್ಲಿ ಕ್ರಿಯಾಶೀಲವಾದ ಮನಸ್ಸು ಒಂದೇ ಬಾರಿ ಸ್ಥಗಿತ ಗೊಂಡಿತು ಎಂದಾದರೆ ಮಾನವನ ಏಳಿಗೆ ತುಂಬ ಕಠಿಣ.  ನಿರಂತರ ಓಡುವ ಅಥವಾ ನಿಂತೇ ಇರುವ ಕುದುರೆ ಮಲಗಿರುವದು ಎಂದಾದರೆ ಅದರ ಸಾವು ಸನ್ನಿಹಿತ ಎಂದೇ ಅರ್ಥ. ಹಾಗೆಯೆ ನಿರಂತರ ಕೋಟಿ ಕೋಟಿ ವ್ಯಾಪಾರ ಮಾಡುವ ಮನಸ್ಸು ಸ್ಥಗಿತಗೊಂಡಿತು ಎಂದಾದರೆ ಸತ್ತಂತೆಯೇ ಸರಿ.  ಮನಸ್ಸು ಜಡ ಮಾಡಿಕೊಂಡವ ಜಡನೇ ಆಗುವ. ಒಂದು ಪುಟ್ಟ ಉದಾಹರಣೆ.. ಆನೆ ಮಹಾ ಬಲಿಷ್ಠ. ನಮಗೆಲ್ಲ ಗೊತ್ತಿರುವ ವಿಚಾರವೇ. ಆದರೆ ಆನೆಯನ್ನು ಪಳಗಿಸುವ ಮಾವುತಗೆ ಹೆದರಿ ಸಾಯುತ್ತದೆ. ಗಜ ತನ್ನ ಬಲವನ್ನೇ ಕಳೆದುಕೊಂಡಾಗಿರುತ್ತದೆ. ಬೆಕ್ಕಿನಂತೆ ದುರ್ಬಲವಾಗಿ ಇರುತ್ತದೆ.  ಆನೆ ಹುಟ್ಟಿದಾಗ ಪಳಗಿಸುವ ಮಾವುತ ಅದನ್ನು ಸರಪಳಿಗಳ...