Posts

Showing posts from September, 2020

*ಎನ್ನ ಗುರುಗಳ ಅಡೆದಾವರೆಗಳಿಗೆ ಎನ್ನ ನಮನಗಳು*

*ಎನ್ನ ಗುರುಗಳ ಅಡೆದಾವರೆಗಳಿಗೆ ಎನ್ನ ನಮನಗಳು* ಎನ್ನದು ಅಜ್ಙಾನಾಂಧಕಾರವಾದರೆ, ಜ್ಙಾನ ಪ್ರಕಾಶರು ಎನ್ನ ಗುರುಗಳು.  ಬೆಳಕು ಕತ್ತಲನ್ನು ನಾಶಮಾಡುವದರ ಜೊತೆಗೆ ತನ್ನ  ವರ್ತುಲದಲ್ಲಿ  ಬಂದ ಎಲ್ಲ ಪದಾರ್ಥಗಳನ್ನೂ ಬೆಳಗುತ್ತದೆ. ಹಾಗೆಯೇ ಗುರುಗಳೂ ಸಹ. ನಂಬಿದ ಶಿಷ್ಯರನ್ನೂ ತಮ್ಮ ಪ್ರಕಾಶದಿಂದಲೇ, ಪ್ರಕಾಶ ಕೊಟ್ಟು ಬೆಳಗಿಸುತ್ತಾರೆ.  ನಂಬಿದ ತನ್ನ ಶಿಷ್ಯರ ಅಜ್ಙಾನವನ್ನೂ ಕಳೆಯುತ್ತಾರೆ ಜೊತೆಗೆ ನಂಬಿದ ಶಿಷ್ಯನಿಗೆ ಜ್ಙಾನಪ್ರಕಾಶವನ್ನೂ ಒದಗಿಸುತ್ತಾರೆ. ಅವನೂ ಜಗತ್ತಿನಲ್ಲಿ ಬೆಳಗುವಂತೆ ಮಾಡುತ್ತಾರೆ‌.  ಬುದ್ಧಿವಂತರಾದ, ಸ್ವಯಂ ಪ್ರಕಾಶವಂತರನ್ನೇ ಹುಡುಕುತ್ತದೆ ಅಷ್ಟೇ ಅಲ್ಲದೆ ಪ್ರಕಾಶವಂತರನ್ನೇ ಬೆಳಕಿಗೆ ತರುತ್ತದೆ ಇಂದಿನ ಸಮಾಜ.  ಎನ್ನ ಗುರುಗಳು ಹಾಗಲ್ಲ . ಅಜ್ಙ ಬಧಿರ ಧಡ್ಡ ಏನೆ ಆಗಿದ್ದರೂ ಪ್ರಕಾಶವಂತ, ಬುದ್ಧಿವಂತರ ನಡುವಿನಲ್ಲಿ ಇಟ್ಟು , (ನಪಾಸ್ ಮಾಡದೆ, ಕೆಳಗಿಳಿಸದೇ) ಅವನಿಗೂ ತಮ್ಮ ಕರುಣೆ ದಯೆಗಳನ್ನೊಳಗೊಂಡ ತಪಸ್ಸಿನಿಂದ ಒಂದು ಅದ್ಭುತಪ್ರಕಾಶವನ್ನು ಕೊಟ್ಟು ಜಗತ್ತಿನಲ್ಲಿ ಬೆಳುಗುವಂತೆ ಮಾಡುತ್ತಾರೆ. ಇದುವೇ *ಗುರುಗಳ ಕಾರುಣ್ಯ.* ಇಂಥ ಮಹಾತ್ಮರೇ ಎನ್ನ ಗುರುಗಳು. *ಪರಮಪೂಜ್ಯ ಮಾಹುಲೀ ಆಚಾರ್ಯರು.* ದೀಪ ಒಂದು ಪ್ರಕಾಶ ಕೊಟ್ಟೀತು. ಆದರೆ  ಎನಗೆ ಒಂದು ಪ್ರಕಾಶ  ಕೊಡುವವರು ಗುರುಗಳಲ್ಲ.. ಜ್ಜಾನ, ಭಕ್ತಿ, ವಿರಕ್ತಿ, ಸಂತೃಪ್ತಿ, ದೇವರಲ್ಲಿ ನಿಷ್ಠೆ,...