ಶ್ರೀ ಶ್ರೀ ಸತ್ಯಪೂರ್ಣತೀರ್ಥರ ಆರಾಧನಾ ಮಹೋತ್ಸವ @ ಕೋಲ್ಪೂರು.
(ಶ್ರೀ ಶ್ರೀ ಸತ್ಯಪೂರ್ಣತೀರ್ಥರ ಆರಾಧನಾ ಮಹೋತ್ಸವ @ ಕೋಲ್ಪೂರು. ) *ಅಕ್ಷೋಭ್ಯ !! ಎನ್ನ ಒಂದನೆಗಳು* ಕ್ಷೋಭೆ ಇಲ್ಲದ ಭಭಗವಂತನಿಗೆ ಅಕ್ಷೋಭ್ಯ ಎಂದು ಕರಿಯುವದು ಶಾಸ್ತ್ರ. ಕ್ಷೊಭೆಗೆ ತುತ್ತಾದ ಅಂತೆಯೇ ಪ್ರಕ್ಷುಬ್ಧನಾದ ವ್ಯಕ್ತಿಗೆ ಸಾರಾಸಾರ ವಿವಿಕವೇ ಇರದು. ಸರಿಯಾದ ನಿರ್ಣಯ ತೆಗೆದುಕೊಳ್ಳಲೇ ಆಗದು. ಪ್ರಶಾಂತಮನಸ್ಕನ ವಿಚಾರಧಾರೆಗಳು, ನಿರ್ಣಯಗಳು ಸರಿಯಾದ ಮಾರ್ಗದಲ್ಲಿಯೇ ಇರುತ್ತದೆ. ಹೊಸ ಮನೆಯ ವಾಸ್ತುಶಾಂತಿ ಹತ್ತಿರಬಂದಿರತ್ತೆ ಆದರೆ ಮನೆ ಹೇಗಿರಬೇಕು ಎಂಬುವ ಸ್ಪಷ್ಟತೆ ಕೆಲವರಿಗೆ ಇರುವದೇ ಇಲ್ಲ. ಏಕೆಂದರೆ ಅವನ ಮನಸ್ಸು ಪ್ರಶಾಂತವಾಗಿರದೆ ಪ್ರಕ್ಷುಬ್ಧವಾಗಿದೆ ಆದ್ದರಿಂದ. ಪ್ರಕ್ಷುಬ್ಧವಾದ ಅಥವಾ ಕುದಿಯುವ ನೀರಿನಲ್ಲಿ ನಮ್ಮ ಮುಖ ಕಾಣುವದಿಲ್ಲ, ಹಾಗೆಯೇ ಕಲುಶಿತ ಅಥವಾ ಪ್ರಕ್ಷುಬ್ಧವಾದ ಮನಸ್ಸಿದ್ದರೆ ಏನೂ ತೋಚದು. ಪ್ರಕ್ಷುಬ್ಧತೆ ಬರುವದೆಲ್ಲಿ... ?? "ತುಂಬಿದ ಕೊಡ ತುಳಕದು" ಎಂಬುದೊಂದು ಗಾದೆ, ಹಾಗೆಯೇ ಪೂರ್ಣನಾದ ವ್ಯಕ್ತಿ ಎಂದಿಗೂ ಪ್ರಕ್ಷುಬ್ಧನಾಗಲಾರ. ಪರಿಪೂರ್ಣತೆ ಇಲ್ಲದ ವ್ಯಕ್ತಿಯ ಮನಸ್ಸು ಎಂದಿಗೂ ಪ್ರಕ್ಷುಬ್ಧವಾಗಿಯೇ ಇರುವಂತಹದ್ದು.. ಶ್ರೀಹರಿಯ ಮೂಲ ರೂಪವೂ ಪೂರ್ಣ, ನಮ್ಮಲ್ಲಿಯ ರೂಪವೂ ಪೂರ್ಣ, ಪೂರ್ಣವಾದ ಮೂಲ ರೂಪದಿಂದ ಅಭಿವ್ಯಕ್ತವಾದ ರಾಮಕೃಷ್ಣಾದಿ ರೂಪಗಳೂ ಪೂರ್ಣ. ಎಲ್ಲ ಮೂಲರೂಪಗಳನ್ನು ತನ್ನಲ್ಲಿಯೇ ಐಕ್ಯಮಾಡಿಕೊಂಡು ಕೊನೆಗೆ ಉಳಿಯುವ ರೂಪವೂ ಪೂರ್ಣ... ಹೀಗೆ ಶ್ರೀಹರಿ ಪೂರ್ಣ. ಪೂರ್ಣ...