Posts

Showing posts from September, 2024

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*

Image
 * ಚಾತುರ್ಮಾಸ್ಯ ಮಹೋತ್ಸವ -  ಮುಂಬಯಿ* ಶ್ರೀಸತ್ಯಾತ್ಮತೀರ್ಥರ ಇಪ್ಪತ್ತೊಂಭತ್ತನೇಯ ಹಾಗೂ ಶ್ರೀ ವೇದವರ್ಧನತೀರ್ಥರ ನಾಲ್ಕನೇಯ ಚಾತುರ್ಮಾಸ್ಯ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಾ ಸಾಗಿದೆ.  *ಜ್ಙಾನಪ್ರಧಾನ ಚಾತುರ್ಮಾಸ್ಯ* ಮುಂಬಯಿಯ ಈ ಚಾತುರ್ಮಾಸ್ಯದ ಅತ್ಯಂತ ವಿಶೇಷವೇನೆಂದರೆ *ಜ್ಙಾನಪ್ರಧಾನ* ವಾದ ಈ ಚಾತುರ್ಮಾಸ್ಯ. ಇದುವೇ ಅತ್ಯಂತ ವಿಶೇಷ.  "ಸತ್ವ ಸತ್ವ ಮಹಾಸತ್ವ" ಇರುವಲ್ಲಿ ತತ್ವಜ್ಙಾನ ಇರಲೇಬೇಕು. ತತ್ವಜ್ಙಾನವಿದೆ ಎಂದರೆ ಸತ್ವಗುಣದ ವ್ಯಾಪಾರ ಇರಲೇಬೇಕು.  ಬೆಳಿಗಿನ ಝಾವಾ ೫ ಗಂಟೆ ಇಂದ ಎಂಟು ಗಂ ವರೆಗೆ ಪರಮಪೂಜ್ಯ ಶ್ರೀಶ್ರೀಗಳವರಿಂದ ಶ್ರೀಮನ್ಯಾಯಸುಧಾ ಪಾಠ. ಇದೇ ಸಮಯದಲ್ಲಿ ಪೂ ಆಚಾರ್ಯರರಿಂದ ಸುಧಾಪಾಠ. ಎಂಟರಿಂದ ಒಂಭತ್ತರವರೆಗೆ ತತ್ವಪ್ರಕಾಶಿಕಾ ಪಾಠ. ಹತ್ತು ಗಂ ಇಂದ ಹನ್ನೆರಡು ಮೂವತ್ತರ ವರೆಗೆ ಪೂಜೆಯ ಪ್ರಸಂಗದಲ್ಲಿ  ಪಂಡಿತರುಗಳಿಂದ ವಿಶೇಷ ಉಪನ್ಯಾಸ. ನಂತರ ಪೂಜ್ಯ ಆಚಾರ್ಯರಿಂದ ವಿಶೇಷ ತತ್ವ ಉಪನ್ಯಾಸಗಳ ವೈಭವ.  *ಪೂ ಆಚಾರ್ಯರ ತತ್ವೋಪನ್ಯಾಸ* ಆರವತ್ತೈದು ವರ್ಷದ ಹಳೆಯದಾದ ವಿಶೇಷವಾದ ಒಂದು ವೃಕ್ಷ. ಆ ವೃಕ್ಷದಲ್ಲಿ ಒಂದೇ ತೆರನಾದ ಹಣ್ಣುಗಳು ಸಿಗುವಂತಹದ್ದಲ್ಲ ಕಿಂತು ನಾನಾವಿಧ ಪಕ್ವವಾದ ರುಚಿರುಚಿಯಾದ ಮೋಕ್ಷಜ್ಙಾನಕ್ಕೆ ಕಾರಣಾವದ ದಿವ್ಯ  ಹಣ್ಣುಗಳನ್ನು ಕೊಡುವ ಉಣಿಸುವ ವೃಕ್ಷ. ಆ ವೃಕ್ಷ ಮತ್ಯಾವದೂ ಅಲ್ಲ *ಪೂಜ್ಯ ಆಚಾರ್ಯರೆಂಬ ಮಹಾ ವೃಕ್ಷ.* ದತ್ತಸ್ಚಾತಂತ್ರ್ಯ, ...

*ಶ್ರೀಧನ್ವಂತರಿ ಜಯಂತಿ ನಿಮಿತ್ತ ಅನಂತ ನಮಸ್ಕಾರಗಳು*

Image
  *ಶ್ರೀಧನ್ವಂತರಿ ಜಯಂತಿ ನಿಮಿತ್ತ ಅನಂತ ನಮಸ್ಕಾರಗಳು* "ಧನ್ವಂತರಿರ್ಭಗವಾನ್ ಪಾತ್ವಪಥ್ಯಾತ್" ಅಪಥ್ಯವಾದ ಏನೆಲ್ಲ ಗೀಳುಗಳಿವೆಯೋ ಅವೆಲ್ಲವನ್ನು, ಅಪಥ್ಯ  ಸಂಸಾರವೆಂಬ ಮಹರೋಗವನ್ನು, ಅಷ್ಟೇ ಅಲ್ಲದೇ ಅಪಥ್ಯ  ಸಂಸಾರದಲ್ಲಿಯ ದೈಹಿಕ ಮಾನಸಿಕ ಎಲ್ಲ ರೋಗಗಳನ್ನೂ ಅಪಹಿರಿಸಿ ಸಮೂಲವಾಗಿ ಸಂಹರಿಸಿ, ಮೋಕ್ಷಾನಂದವೆಂಬ ಅಮೃತ ಆರೋಗ್ಯವೆಂಬ ಅಮೃತವನ್ನು ಉಣಿಸುವ ಕರುಣಿಸುವ ಮುಖಾಂತರ ನಮ್ಮನ್ನು ರಕ್ಷಿಸುವ ಕೃಪಾಳು  ಹೆದ್ದೊರೆ ನಮ್ಮ ಧನ್ವಂತ್ರಿ ಭಗವಾನ್.  *ತುಂಬ ವಿಚಿತ್ರ ಆಶ್ಚರ್ಯ* ಎಲ್ಲ ಕಡೆಗೂ ಅಂತರ್ನಿಯಾಮಕನಾದ ಭಗವಾನ್ ಕ್ರಮವಾಗಿ ೧)ರೋಗದಲ್ಲಿ. ೨)ರೋಗಿಯಲ್ಲಿ. ೩)ಔಷಧಿಯಲ್ಲಿ. ೪)ವೈದ್ಯನಲ್ಲಿ ಹೀಗೆ ಕ್ರಮವಾಗಿ ಅಂತರ್ಯಾಮಿಯಾಗಿ ಇದ್ದಾನೆ.  *ನಮ್ಮ ದೇವ ಅಪರಾಜಿತ* ನಮ್ಮ ನಾರಾಯಣ ಹರಿ ಭಗವಾನ್ ಸರ್ವಸ್ವಾಮಿ ದೇವ ಎಂದಿಗೂ ಯಾರಿಂದಲೂ ಸೋಲಿಲ್ಲದ ಸರದಾರ ಎಂಬುವದು ಜಗತ್ಪ್ರಸಿದ್ಧ, ಶಾಸ್ತ್ರಸಿದ್ಧ.  ರೋಗದ ನಿಯಾಮಕನಾಗಿ ಇರುವ ಭಗವಂತ ಸೋಲದೇ ಘಟ್ಟಿಯಾಗಿ ನಿಂತರೆ ರೋಗವೂ ದೃಢವಾಯಿತು.‌ಆರೋಗ್ಯಬರುವದೆಂದು ?  ಔಷಧದ ಅಂತರ್ಯಾಮಿಯೂ ಸರ್ವಶಕ್ತ. ವೈದ್ಯನ ಅಂತರ್ಯಾಮಿ "ವೈದ್ಯೋನಾರಾಯಣೋ ಹರಿಃ" ವೈದ್ಯರೇ ದೇವ ಎಂದಿರುವಾಗ ವೈದ್ಯರ ಅಂತರ್ಯಾಮಿ ಮಹಾದೇವನೇ. ಹೀಗೆ ಮೂರೂ ಭಗವದ್ರುಪಗಳು ಸೋಲಿಲ್ಲದೇ ಇದ್ದರೆ, ವೈದ್ಯರ ಔಷಧಿಗಳ ಅಂತರ್ಯಾಮಿ ಸೋತರೆ  ಜಗತ್ತು ಎಷ್ಟು  ಅಸ್ತವ್ಯಸ್ತ ಎಂದು ಊಹಿಸಲು ಯಾರಿಂ...